ತಲೈವಾ ʼಜೈಲರ್‌ʼ ಸಿನಿಮಾ ನೋಡಲು ಚೆನ್ನೈಗೆ ಬಂದ ʼಜಪಾನ್‌ ಜೋಡಿʼ..! ಇದಪ್ಪಾ ಅಭಿಮಾನ ಅಂದ್ರೆ

Jailer Movie : ಸೂಪರ್‌ ಸ್ಟಾರ್‌ ರಜನಿಕಾಂತ್‌ ಅವರಿಗೆ ವಿಶ್ವದಾದ್ಯಂತ ಸಾಕಷ್ಟು ಅಭಿಮಾನಿಗಳಿದ್ದಾರೆ ಎಂಬುವುದು ಎಲ್ಲರಿಗೂ ತಿಳಿದಿದೆ. ವಿದೇಶದಲ್ಲಿಯೂ ಸಹ ತಲೈವಾ ಸಿನಿಮಾಗಳು ಪ್ರದರ್ಶನವಾಗುತ್ತವೆ. ಸಧ್ಯ 'ಜೈಲರ್' ಸಿನಿಮಾ ನೋಡಲು ಜಪಾನ್ ದಂಪತಿಗಳು ಒಸಾಕಾದಿಂದ ಚೆನ್ನೈಗೆ ಬಂದಿದ್ದಾರೆ.

Written by - Krishna N K | Last Updated : Aug 10, 2023, 01:25 PM IST
  • ಸೂಪರ್‌ ಸ್ಟಾರ್‌ ರಜನಿಕಾಂತ್‌ ಅವರಿಗೆ ವಿಶ್ವದಾದ್ಯಂತ ಸಾಕಷ್ಟು ಅಭಿಮಾನಿಗಳಿದ್ದಾರೆ.
  • ವಿದೇಶದಲ್ಲಿಯೂ ಸಹ ತಲೈವಾ ಸಿನಿಮಾಗಳು ಪ್ರದರ್ಶನವಾಗುತ್ತವೆ.
  • 'ಜೈಲರ್' ಸಿನಿಮಾ ನೋಡಲು ಜಪಾನ್ ದಂಪತಿಗಳು ಒಸಾಕಾದಿಂದ ಚೆನ್ನೈಗೆ ಬಂದಿದ್ದಾರೆ.
ತಲೈವಾ ʼಜೈಲರ್‌ʼ ಸಿನಿಮಾ ನೋಡಲು ಚೆನ್ನೈಗೆ ಬಂದ ʼಜಪಾನ್‌ ಜೋಡಿʼ..! ಇದಪ್ಪಾ ಅಭಿಮಾನ ಅಂದ್ರೆ title=

Rajinikanth fans : ಭಾರೀ ನಿರೀಕ್ಷೆಯ ನಡುವೆ ಜೈಲರ್‌ ಚಿತ್ರ ಇಂದು (ಆಗಸ್ಟ್ 10) ಬಿಡುಗಡೆಯಾಗಿದೆ. ಜನರು ಪಟಾಕಿಗಳನ್ನು ಸಿಡಿಸಿ, ಸೂಪರ್‌ಸ್ಟಾರ್ ಕಟೌಟ್‌ ಹಾಕಿ ಸಂಭ್ರಮಿಸುತ್ತಿದ್ದಾರೆ. ಇದೀಗ ಜಪಾನಿನ ದಂಪತಿಗಳು ರಜನಿಕಾಂತ್ ಅವರ 'ಜೈಲರ್' ಚಿತ್ರವನ್ನು ಮೊದಲ ದಿನವೇ ನೋಡಲು ಚೆನ್ನೈಗೆ ಬಂದಿದ್ದು, ಈ ಕುರಿತು ವಿಡಿಯೋ ವೈರಲ್‌ ಆಗಿದೆ.

ರಜನಿಕಾಂತ್ ನಟನೆಯ 'ಜೈಲರ್' ಸಿನಿಮಾ ಉತ್ತಮ ವಿಮರ್ಶೆ ಪಡೆದುಕೊಂಡಿದೆ. ಸೂಪರ್‌ ಸ್ಟಾರ್‌ ಅಭಿಮಾನಿಗಳು ಚಿತ್ರವನ್ನು ನೋಡಿ ಖುಷಿ ವ್ಯಕ್ತಪಡಿಸುತ್ತಿದ್ದಾರೆ. 2 ವರ್ಷಗಳ ಬಳಿಕ ತಲೈವಾರನ್ನು ಸ್ಕ್ರೀನ್‌ ಮೇಲೆ ನೋಡಿ ಕುಣಿದು ಕುಪ್ಪಳಿಸುತ್ತಿದ್ದಾರೆ. ಇದರ ನಡುವೆ ಸ್ಥಳೀಯ ಚಿತ್ರಮಂದಿರದಲ್ಲಿ ಜೈಲರ್‌ ಚಲನಚಿತ್ರವನ್ನು ನೋಡಲು ಒಸಾಕಾದಿಂದ ಚೆನ್ನೈಗೆ ಜಪಾನಿನ ದಂಪತಿಗಳು ಬಂದಿದ್ದು, ವಿಶೇಷವಾಗಿತ್ತು. 

ಇದನ್ನೂ ಓದಿ: ಪಡ್ಡೆ ಹುಡುಗರ ಹಾರ್ಟ್‌ಬೀಟ್‌ ಹೆಚ್ಚಸಿದ ಜೈ ಜಗದೀಶ್‌ ಪುತ್ರಿ..ಪೋಟೋಸ್‌ ನೋಡಿ

ಸುದ್ದಿ ಸಂಸ್ಥೆ ಪಿಟಿಐ ಚಿತ್ರೀಕರಿಸಿದ ಮತ್ತು ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿದ ವೀಡಿಯೊದಲ್ಲಿ, ರಜನಿಕಾಂತ್ ಅವರ ಜೈಲರ್‌ ಚಿತ್ರ ವೀಕ್ಷಣೆಗಾಗಿ ಬಂದ ಜಪಾನ್‌ ಜೋಡಿಯನ್ನು ಕಾಣಬಹುದು. ರಜನಿಕಾಂತ್ ಅವರ ದೊಡ್ಡ ಫ್ಯಾನ್‌ ಯಸುದಾ ಹಿಡೆತೋಶಿ ತಮಿಳಿನಲ್ಲಿ ಮಾತನಾಡಿ, ಸೂಪರ್‌ಸ್ಟಾರ್ ಯಶಸ್ಸಿನ ಬಗ್ಗೆ ತಮ್ಮ ಸಂತೋಷವನ್ನು ವ್ಯಕ್ತಪಡಿಸಿದರು. ಈ ಕುರಿತು ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ. 

ಅಲ್ಲದೆ, ಯಸುದಾ ಹಿಡೆತೋಶಿ, ಜೈಲರ್ ಚಲನಚಿತ್ರವನ್ನು ನೋಡಲು, ನಾವು ಜಪಾನ್‌ನಿಂದ ಚೆನ್ನೈಗೆ ಬಂದಿದ್ದೇವೆ ಎಂದು ಹೇಳಿದರು. ಜೊತೆಗೆ, ರಜನಿಕಾಂತ್ ಹಳೆಯ ಸಿನಿಮಾದ ಡೈಲಾಗ್‌ ಹೇಳಿ ಅಭಿಮಾನ ಮೆರೆದರು. ಸುಮಾರು ಎರಡು ದಶಕಗಳಿಂದ ರಜನಿ ಅವರ ನಟನೆ ಮತ್ತು ವ್ಯಕ್ತಿತ್ವವನ್ನು ಮೆಚ್ಚಿಕೊಂಡಿದ್ದೆ ಎಂದು ಯಸುದಾ ತಿಳಿಸಿದ್ದಾರೆ. ಈ ಜೋಡಿ ರಜನಿಕಾಂತ್ ಅಭಿನಯದ ಚಿತ್ರ ನೋಡಲು ಚೆನ್ನೈಗೆ ಪ್ರಯಾಣ ಬೆಳೆಸಿದ್ದು ಇದೇ ಮೊದಲಲ್ಲ. ಈ ಹಿಂದೆ ‘ದರ್ಬಾರ್’ ಮತ್ತು ‘ಕಬಾಲಿ’ ನೋಡಲು ಬಂದಿದ್ದರಂತೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News