ರಾಮ್ ಚರಣ್ ಜೊತೆ ಜಾನ್ವಿ ಕಪೂರ್ ಡೂಯೆಟ್‌? ಟಾಲಿವುಡ್‌ ಸಿನಿಮಾದಲ್ಲಿ ಬಾಲಿವುಡ್‌ ಬೆಡಗಿ!

Janhvi Kapoor : ಬಾಲಿವುಡ್‌ನ ಬಹುಬೇಡಿಕೆಯ ನಟಿ ಜಾನ್ವಿ ಕಪೂರ್. 2018 ರಲ್ಲಿ ಶಶಾಂಕ್ ಖೈತಾನ್ ಅವರ ಧಡಕ್‌ ಸಿನಿಮಾ ಮೂಲಕ ಬಾಲಿವುಡ್‌ಗೆ ಪದಾರ್ಪಣೆ ಮಾಡಿದರು. ಇದೀಗ ಜಾನ್ವಿ ಸೌತ್‌ ಸಿನಿಮಾದಲ್ಲಿ ನಟಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. 

Written by - Chetana Devarmani | Last Updated : Dec 1, 2022, 03:54 PM IST
  • ಬಾಲಿವುಡ್‌ನ ಬಹುಬೇಡಿಕೆಯ ನಟಿ ಜಾನ್ವಿ ಕಪೂರ್
  • ರಾಮ್ ಚರಣ್ ಜೊತೆ ಜಾನ್ವಿ ಕಪೂರ್ ಡೂಯೆಟ್‌?
  • ಟಾಲಿವುಡ್‌ ಸಿನಿಮಾದಲ್ಲಿ ಬಾಲಿವುಡ್‌ ಬೆಡಗಿ!
ರಾಮ್ ಚರಣ್ ಜೊತೆ ಜಾನ್ವಿ ಕಪೂರ್ ಡೂಯೆಟ್‌? ಟಾಲಿವುಡ್‌ ಸಿನಿಮಾದಲ್ಲಿ ಬಾಲಿವುಡ್‌ ಬೆಡಗಿ! title=
ಜಾನ್ವಿ ಕಪೂರ್

Janhvi Kapoor : ಬಾಲಿವುಡ್‌ನ ಬಹುಬೇಡಿಕೆಯ ನಟಿ ಜಾನ್ವಿ ಕಪೂರ್. 2018 ರಲ್ಲಿ ಶಶಾಂಕ್ ಖೈತಾನ್ ಅವರ ಧಡಕ್‌ ಸಿನಿಮಾ ಮೂಲಕ ಬಾಲಿವುಡ್‌ಗೆ ಪದಾರ್ಪಣೆ ಮಾಡಿದರು. ಇತ್ತೀಚೆಗೆ ಬಿಡುಗಡೆಯಾದ ಮಿಲಿ ಚಿತ್ರದಲ್ಲಿನ ಅಭಿನಯಕ್ಕಾಗಿ ಪ್ರಶಂಸೆ ಗಳಿಸಿದ್ದಾರೆ. ಇದೀಗ ಜಾನ್ವಿ ಸೌತ್‌ ಸಿನಿಮಾದಲ್ಲಿ ನಟಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ರಾಮ್ ಚರಣ್ ನಾಯಕರಾಗಿರುವ ಸಿನಿಮಾ ಮೂಲಕ ಟಾಲಿವುಡ್‌ಗೆ ಎಂಟ್ರಿ ಕೊಡಲಿದ್ದಾರೆ ಎನ್ನಲಾಗ್ತಿದೆ.

ಇದನ್ನೂ ಓದಿ : 'ಕಬ್ಜ' ಚಿತ್ರದ ಹಿಂದಿ ಅವತರಣಿಕೆ ಹಕ್ಕುಗಳು ಆನಂದ್ ಪಂಡಿತ್ ಮೋಷನ್ ಪಿಕ್ಚರ್ಸ್ ತೆಕ್ಕೆಗೆ

ಇತ್ತೀಚೆಗಷ್ಟೇ ರಾಮ್ ಚರಣ್ ತಮ್ಮ ಮುಂದಿನ ಪ್ರಾಜೆಕ್ಟ್ ಬಗ್ಗೆ ಅಧಿಕೃತ ಘೋಷಣೆ ಮಾಡಿದ್ದಾರೆ. ಬುಚ್ಚಿ ಬಾಬು ಸನಾ ಅವರೊಂದಿಗೆ ಕೆಲಸ ಮಾಡಲಿದ್ದಾರೆ. ಈ ಚಿತ್ರದ ಟೈಟಲ್‌ ಇನ್ನೂ ಅನೌನ್ಸ್‌ ಆಗಿಲ್ಲ. ಆದರೆ ಈ ಚಿತ್ರವು ಪ್ಯಾನ್-ಇಂಡಿಯಾದಲ್ಲಿ ಬಿಡುಗಡೆಯಾಗಲಿದೆ. ಈ ಚಿತ್ರದ ಆಫರ್‌ ಮೊದಲು ಜೂನಿಯರ್ ಎನ್‌ಟಿಆರ್‌ ಅವರಿಗೆ ನೀಡಲಾಯಿತು ಎಂದು ವರದಿಯಾಗಿದೆ. ಸ್ಕ್ರಿಪ್ಟ್‌ ನೋಡಿ ಜೂ. ಎನ್‌ಟಿಆರ್‌ ಒಪ್ಪಿಗೆ ಸಹ ನೀಡಿದ್ದರಂತೆ. ಆದರೆ ಅವರು ಸದ್ಯ ಕೊರಟಾಲ ಶಿವ ಮತ್ತು ಪ್ರಶಾಂತ್ ನೀಲ್ ಅವರ ಪ್ರಾಜೆಕ್ಟ್‌ಗಳಲ್ಲಿ ಬ್ಯುಸಿ ಇರುವ ಕಾರಣ ಅವರು ಈ ಪ್ರಾಜೆಕ್ಟ್‌ಗೆ ಸಹಿ ಹಾಕಲಿಲ್ಲ.

ಈ ಹಿಂದೆ ಜಾನ್ವಿ ಕಪೂರ್, ಜೂನಿಯರ್ ಎನ್‌ಟಿಆರ್ ಅವರೊಂದಿಗೆ ಪದಾರ್ಪಣೆ ಮಾಡಲಿದ್ದಾರೆ ಎಂಬ ಊಹಾಪೋಹಗಳು ಇದ್ದವು. ಇದೀಗ ರಾಮ್ ಚರಣ್ ಜೊತೆ ಜಾನ್ವಿ ಟಾಲಿವುಡ್ ಗೆ ಪದಾರ್ಪಣೆ ಮಾಡಲಿದ್ದಾರೆ ಎನ್ನಲಾಗಿದೆ. ಆದರೆ, ತಯಾರಕರಿಂದ ಈ ಬಗ್ಗೆ ಯಾವುದೇ ಅಧಿಕೃತ ಪ್ರಕಟಣೆ ಹೊರಬಿದ್ದಿಲ್ಲ. ಫೆಬ್ರವರಿಯಲ್ಲಿ, ಜಾನ್ವಿಯ ತಂದೆ ಬೋನಿ ಕಪೂರ್, ಜೂನಿಯರ್ ಎನ್‌ಟಿಆರ್‌ ಜೊತೆ ಜಾನ್ವಿ ನಟಿಸುವ ವರದಿಗಳಿಗೆ ಪ್ರತಿಕ್ರಿಯಿಸಿದ್ದರು. ಇದು ಸಾಮಾಜಿಕ ಜಾಲತಾಣಗಳ ವದಂತಿಯೇ ಹೊರತು ಬೇರೇನೂ ಅಲ್ಲ ಎಂದು ಹೇಳಿದ್ದರು. 

ಇದನ್ನೂ ಓದಿ : Kabzaa teaser : ಕಬ್ಜ ಹಿಂದಿ ಟೀಸರ್ ರಿಲೀಸ್, ಬಾಲಿವುಡ್‌ನಲ್ಲಿ ಮತ್ತೆ ಕನ್ನಡ ಸಿನಿಮಾ ಹವಾ!

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News