ʼವರ್ಮನ್ʼ ಈ ಮಟ್ಟಕ್ಕೆ ಬರಲು ʼಜೈಲರ್‌ʼ ರಜನಿಕಾಂತ್ ಕಾರಣ...! "ಮನಸ್ಸಿಲಾಯೋ"

Jailer Varman Vinayakan : ಜೈಲರ್‌ ಸಿನಿಮಾದಲ್ಲಿ ವಿಲನ್‌ ಪಾತ್ರದಲ್ಲಿ ಮಿಂಚಿದ ನಟ ವಿನಾಯಕನ್‌ ʼಮನಸ್ಸಿಲಾಯೋʼ ಎಂಬ ಡೈಲಾಗ್‌ ಮೂಲಕ ಪ್ರೇಕ್ಷಕರ ಮನಸ್ಸಿನಲ್ಲಿ ಹಚ್ಚಳಿಯದೆ ಉಳಿದಿದ್ದಾರೆ. ಇದೀಗ ಸನ್‌ ಪಿಕ್ಚರ್ಸ್‌ ಚಿತ್ರದ ಯಶಸ್ಸಿನ ಬಗ್ಗೆ ವಿನಾಯಕ್ ಅವರ ಪ್ರತಿಕ್ರಿಯೆ ನೀಡಿರುವ ವಿಡಿಯೋ ಬಿಡುಗಡೆ ಮಾಡುವ ಮೂಲಕ ಗಮನಸೆಳೆದಿದೆ.

Written by - Krishna N K | Last Updated : Sep 6, 2023, 08:01 PM IST
  • ಜೈಲರ್‌ ಸಿನಿಮಾದಲ್ಲಿ ವಿಲನ್‌ ಪಾತ್ರದಲ್ಲಿ ಮಿಂಚಿದ ನಟ ವಿನಾಯಕನ್‌.
  • ನಟ ವಿನಾಯಕನ್‌ ʼಮನಸ್ಸಿಲಾಯೋʼ ಎಂಬ ಡೈಲಾಗ್‌ ಮೂಲಕ ಪ್ರೇಕ್ಷಕರ ಮನಸ್ಸಿನಲ್ಲಿ ಹಚ್ಚಳಿಯದೆ ಉಳಿದಿದ್ದಾರೆ.
  • ಚಿತ್ರದ ಯಶಸ್ಸಿನ ಬಗ್ಗೆ ವಿನಾಯಕ್ ಅವರ ಪ್ರತಿಕ್ರಿಯೆ ನೀಡಿರುವ ವಿಡಿಯೋ ಬಿಡುಗಡೆಯಾಗಿದೆ.
ʼವರ್ಮನ್ʼ ಈ ಮಟ್ಟಕ್ಕೆ ಬರಲು ʼಜೈಲರ್‌ʼ ರಜನಿಕಾಂತ್ ಕಾರಣ...! "ಮನಸ್ಸಿಲಾಯೋ" title=

Jailer Vinayakan : ಜೈಲರ್ ಸಿನಿಮಾ ದೇಶದಾದ್ಯಂತ ಕಮಾಲ್‌ ಮಾಡಿದೆ. ತೆರೆ ಮೇಲೆ ಸೂಪರ್‌ ಸ್ಟಾರ್‌ ರಜನಿಕಾಂತ್‌ ಅಬ್ಬರಕ್ಕೆ ಫ್ಯಾನ್ಸ್‌ ಫಿದಾ ಆಗಿದ್ದಾರೆ. ಅಲ್ಲದೆ, ಮಾಲಿವುಡ್‌ ಸ್ಟಾರ್‌ ಮೋಹನ್ ಲಾಲ್ ಮತ್ತು ಸ್ಯಾಂಡಲ್‌ವುಡ್‌ ಸ್ಟಾರ್ ಶಿವರಾಜ್ ಕುಮಾರ್ ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡು ಚಿತ್ರಕ್ಕೆ ಬಲ ತುಂಬಿದ್ದರು. ಈ ಪೈಕಿ ವಿಲನ್‌ ಪಾತ್ರದಲ್ಲಿ ಮಿಂಚಿದ ನಟ ವಿನಾಯಕನ್‌ ʼಮನಸ್ಸಿಲಾಯೋʼ ಎಂಬ ಡೈಲಾಗ್‌ ಮೂಲಕ ಪ್ರೇಕ್ಷಕರ ಮನಸ್ಸಿನಲ್ಲಿ ಹಚ್ಚಳಿಯದೆ ಉಳಿದಿದ್ದಾರೆ.

ಹೌದು.. ಜೈಲರ್‌ ಚಿತ್ರದ ಯಶಸ್ಸಿನ ನಂತರ, ಚಿತ್ರದ ನಿರ್ಮಾಪಕರು ರಜನಿಕಾಂತ್, ನಿರ್ದೇಶಕ ನೆಲ್ಸನ್ ದಿಲೀಪ್ ಕುಮಾರ್ ಮತ್ತು ಸಂಗೀತ ಸಂಯೋಜಕ ಅನಿರುದ್ಧ್ ಅವರಿಗೆ ಐಷಾರಾಮಿ ಕಾರುಗಳನ್ನು ಉಡುಗೊರೆಯಾಗಿ ನೀಡಿದ್ದು ಎಲ್ಲರಿಗೂ ಗೊತ್ತಿದೆ. ಆದ್ರೆ, ಸಿನಿಮಾವನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ದ ವರ್ಮನ್ ಪಾತ್ರದಲ್ಲಿ ನಟಿಸಿರುವ ವಿನಾಯಕನ್‌ಗೆ ಸನ್‌ ಪಿಕ್ಚರ್ಸ್‌ಗೆ ಏನು ಕೊಟ್ಟಿತು ಅಂತ ಅವರ ಅಭಿಮಾನಿಗಳು ಪ್ರಶ್ನೆ ಮಾಡಿದ್ದರು. ಆದರೆ ಇದೀಗ ಸನ್‌ ಪಿಕ್ಚರ್ಸ್‌ ಚಿತ್ರದ ಯಶಸ್ಸಿನ ಬಗ್ಗೆ ವಿನಾಯಕ್ ಅವರ ಪ್ರತಿಕ್ರಿಯೆ ನೀಡಿರುವ ವಿಡಿಯೋ ಬಿಡುಗಡೆ ಮಾಡುವ ಮೂಲಕ ಗಮನಸೆಳೆದಿದೆ.

ಇದನ್ನೂ ಓದಿ: ಪರಿಣಿತಿ- ರಾಘವ್ ಚಡ್ಡಾ ಮದುವೆ ಡೇಟ್‌ ಫಿಕ್ಸ್‌ : ಉದಯಪುರದಲ್ಲಿ ಅದ್ಧೂರಿ ವಿವಾಹ

ವಿಡಿಯೋದಲ್ಲಿ ವಿನಾಯಕನ್‌ ಜೈಲರ್‌ ಸಿನಿಮಾದ ಅನುಭವ ಹಂಚಿಕೊಂಡಿದ್ದು, ಚಿತ್ರವೊಂದರ ಚಿತ್ರೀಕರಣಕ್ಕಾಗಿ ಕಾಡಿನಲ್ಲಿ ಇದ್ದೆ, ಆಗ ಜೈಲರ್ ಚಿತ್ರತಂಡದಿಂದ ಕರೆ ಬಂತು. ಕಾಡಿನೊಳಗೆ ಇದ್ದುದರಿಂದ ಫೋನ್ ಸ್ವಿಚ್ ಆಫ್ ಆಗಿತ್ತು. ನಂತರ, ನಾನು ನನ್ನ ಫೋನ್ ಪರಿಶೀಲಿಸಿದಾಗ, ಅದೇ ಸಂಖ್ಯೆಯಿಂದ ನನಗೆ ಹಲವಾರು ಮಿಸ್ಡ್ ಕಾಲ್ಗಳು ಬಂದಿದ್ದವು. ಆ ನಂಬರ್ ಗೆ ವಾಪಸ್ ಕರೆ ಮಾಡಿದಾಗ ಡೈರೆಕ್ಟರ್ ನೆಲ್ಸನ್ ಜೈಲರ್‌ ಸಿನಿಮಾದ ಪ್ರೊಡಕ್ಷನ್ ಹೌಸ್‌ ನಿಂದ ಕರೆ ಮಾಡಿದ್ದಾಗಿ ಹೇಳಿದ್ರು. ನಂತರ ನೆಲ್ಸನ್ ಚಿತ್ರದ ಕಥೆ ಹೇಳಿ ನಾನೇ ಮುಖ್ಯ ಖಳನಾಯಕ ಅಂತ ತಿಳಿಸಿದ್ರು.

 

ಇದುವರೆಗೂ ನೋಡಿರದ ರಜನಿಕಾಂತ್ ಅವರ ಜೊತೆ ನಟಿಸಿದ್ದು ವರ್ಣನಾತೀತ, ಅವರು ನನಗೆ ಶಕ್ತಿ ತುಂಬಿದವರು. ವರ್ಮನ್ ಈ ಮಟ್ಟಕ್ಕೆ ಬರಲು ಅವರೇ ಕಾರಣ. ನನ್ನ ಪಾತ್ರ ಎಷ್ಟು ಹಿಟ್ ಆಯಿತು ಅಂದ್ರೆ ಮನೆಯಿಂದ ಹೊರಗೆ ಕಾಲಿಡಲೂ ಆಗಲಿಲ್ಲ. ಈ ರೀತಿ ಆಗುತ್ತೆ ಅಂತ ‘ಕನಸಿನಲ್ಲೂ ಯೋಚಿಸಲಿರಲಿಲ್ಲ ಸಾರ್’ ಅಂತ ತಮ್ಮ ಪಾತ್ರಕ್ಕೆ ಸಿಕ್ಕ ಸ್ಪಂದನೆ ಕುರಿತು ಬಹಳ ಖುಷಿಯಾಗಿ ವಿನಾಯಕನ್ ತಿಳಿಸಿದರು.

ಇದನ್ನೂ ಓದಿ: ʼಶ್ರೀಕೃಷ್ಣ ಜನ್ಮಾಷ್ಟಮಿʼ ಪ್ರಯುಕ್ತ ಪ್ರೇಕ್ಷಕರಿಗೆ ʼಜೀ ಕನ್ನಡʼ ಬಿಗ್‌ ಗಿಫ್ಟ್‌ : 1 ಗಂಟೆ, 5 ಧಾರಾವಾಹಿಗಳ ಮಹಾಸಂಚಿಕೆ ನೋಡಿ

ಚಿತ್ರದ ಪ್ರತಿ ದೃಶ್ಯವೂ ಬಹಳ ಮುಖ್ಯ. ಎಲ್ಲವನ್ನೂ ಬಹಳ ಸಂತೋಷದಿಂದ ಮಾಡಲಾಗಿದೆ. ನಿರ್ದೇಶಕ ನೆಲ್ಸನ್ ಅವರಿಗೆ ಅನೇಕ ಧನ್ಯವಾದಗಳು. ರಜನಿ ಸರ್ ಅವರನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ. ಕಲಾನಿಧಿ ಮಾರನ್ ಸರ್ ಅವರಿಗೆ ತುಂಬಾ ಧನ್ಯವಾದಗಳು ಎಂದು ವಿನಾಯಕನ್ ಹೇಳಿದ್ದಾರೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News