Jailer : ಬಾಕ್ಸಾಫೀಸ್‌ನಲ್ಲಿ ಜೈಲರ್‌ ಆರ್ಭಟ; ಸೀಕ್ವೆಲ್ ಅಲ್ಲ ಪ್ರೀಕ್ವೆಲ್.. ಹೀರೊ ರಜನಿನಾ? ಶಿವಣ್ಣನಾ?

Jailer Sequel : ಜೈಲರ್‌ ಸಿನಿಮಾ ಭಾಕ್ಸಾಫೀಸ್‌ನಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡಿದೆ. ಚಿತ್ರದಲ್ಲಿ ರಜನಿ ಶಿವಣ್ಣ ಜೋಡಿ ಕಮಾಲ್‌ ಮಾಡಿದೆ. ಬಹಳ ದೊಡ್ಡಮಟ್ಟದಲ್ಲಿ ಸಿನಿಮಾ ಸದ್ದು ಮಾಡುತ್ತಿದ್ದು, ಶಿವಣ್ಣನ ಅಭಿನಯಕ್ಕೆ ಕ್ಲೀನ್ ಬೋಲ್ಡ್ ಆದ ನೆಟ್ಟಿಗರಂತೂ ಸಿನಿಮಾ ಸೀಕ್ವೆಲ್ ಮಾಡಿ ಎಂದು ಕೇಳುತ್ತಿದ್ದಾರೆ. 

Written by - Savita M B | Last Updated : Aug 12, 2023, 02:27 PM IST
  • ಜೈಲರ್‌ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಆರ್ಭಟ ಶುರುಮಾಡಿದೆ.
  • ಚಿತ್ರದಲ್ಲಿ ರಜನಿಕಾಂತ್‌ ಅವರ ಡೈಲಾಗ್‌ ಹಾಗೂ ಸ್ಟೈಲ್‌ಗೆ ಫ್ಯಾನ್ಸ್‌ ಫಿದಾ ಆಗಿದ್ದಾರೆ.
  • ಚಿತ್ರದಲ್ಲಿ ಶಿವಣ್ಣನ ಚಿಕ್ಕ ಪಾತ್ರಕ್ಕೆ ಭರ್ಜರಿ ರೆಸ್ಪಾನ್ಸ್‌ ಸಿಗುತ್ತಿದೆ.
Jailer : ಬಾಕ್ಸಾಫೀಸ್‌ನಲ್ಲಿ ಜೈಲರ್‌ ಆರ್ಭಟ; ಸೀಕ್ವೆಲ್ ಅಲ್ಲ ಪ್ರೀಕ್ವೆಲ್.. ಹೀರೊ ರಜನಿನಾ? ಶಿವಣ್ಣನಾ? title=

Jailer : ನೆಲ್ಸನ್‌ ನಿರ್ದೇಶನದಡಿಯಲ್ಲಿ ಮೂಡಿಬಂದಿರುವ ಜೈಲರ್‌ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಆರ್ಭಟ ಶುರುಮಾಡಿದೆ. ಚಿತ್ರದಲ್ಲಿ ರಜನಿಕಾಂತ್‌ ಅವರ ಡೈಲಾಗ್‌ ಹಾಗೂ ಸ್ಟೈಲ್‌ಗೆ ಫ್ಯಾನ್ಸ್‌ ಫಿದಾ ಆಗಿದ್ದಾರೆ. ಇನ್ನು ಈ ಸಿನಿಮಾದಲ್ಲಿ ಕನ್ನಡದ ಹ್ಯಾಟ್ರಿಕ್‌ ಹಿರೋ ಶಿವಣ್ಣ ಸಹ ನಟಿಸಿದ್ದು, ಅವರ ಪಾತ್ರ ಚಿಕ್ಕದಾದರೂ ಅವರನ್ನು ನೋಡಿದವರೆಲ್ಲಾ ಥ್ರಿಲ್ಲಾಗಿದ್ದಾರೆ.

ರಜನಿಕಾಂತ್ ಅಭಿಮಾನಿಗಳು ಮೆಚ್ಚುವಂತಹ ಸಿನಿಮಾಗಳನ್ನು ಮಾಡುವಲ್ಲಿ ನೆಲ್ಸನ್ ಯಶಸ್ಸು ಗಳಿಸಿದ್ದಾರೆ. ಚಿತ್ರದಲ್ಲಿ ರಜನಿಕಾಂತ್‌ ಹಿರೋ ಆದರೂ ಶಿವಣ್ಣನ ಚಿಕ್ಕ ಪಾತ್ರಕ್ಕೆ ಭರ್ಜರಿ ರೆಸ್ಪಾನ್ಸ್‌ ಸಿಗುತ್ತಿದೆ. ಬರೀ ಏಳೆಂಟು ನಿಮಿಷ ತೆರೆಮೇಲೆ ಕಾಣಿಸಿಕೊಳ್ಳುವ ಶಿವಣ್ಣ ಅಭಿಮಾನಿಗಳಿಂದ ಫುಲ್ ಮಾರ್ಕ್ಸ್ ಪಡೆದುಕೊಂಡಿದ್ದಾರೆ. ತಮಿಳಿಗರು ಸಹ ಶಿವಣ್ಣನ ಅಭಿನಯಕ್ಕೆ ಮೆಚ್ಚಿ ಬಹುಪರಾಕ್‌ ಹೇಳಿದ್ದಾರೆ. 

ಇದನ್ನೂ ಓದಿ- Kshetrapati Trailer : ಟ್ರೈಲರ್ ನಿಂದಲೇ ಗಮನ ಸೆಳೆದ 'ಕ್ಷೇತ್ರಪತಿ'; ಉತ್ತರ ಕರ್ನಾಟಕದ ಸಿನಿಮಾ ಅಂದ್ರ ಸುಮ್ನ ಏನ್ರಿ..!

ಸದ್ಯ ಶಿವಣ್ಣ ಅವರ ನಟನಗೆ ನಿಬ್ಬೆರಗಾದ ಅಭಿಮಾನಿಗಳು ಜೈಲರ್‌ ಸಿನಿಮಾದಲ್ಲಿನ ಶಿವಣ್ಣನ ನರಸಿಂಹ ಪಾತ್ರವನ್ನು ಕೇಂದ್ರವಾಗಿಟ್ಟುಕೊಂಡು ಸೀಕ್ವೆಲ್ ಮಾಡಿ ಎಂದು ಕೇಳುತ್ತಿದ್ದಾರೆ.  

ಈ ಚಿತ್ರದಲ್ಲಿ ಮಂಡ್ಯದ ಹಳೇ ಪಂಟರ್ ಆಗಿ ಮಾತ್ರ ಶಿವಣ್ಣ ಕಾಣಿಸಿಕೊಂಡಿದ್ದು, ಒಂದು ಸಣ್ಣ ಸನ್ನಿವೇಶ ಬಿಟ್ಟರೆ ಶಿವಣ್ಣ ಮತ್ತು ರಜನಿಕಾಂತ್‌ ಕ್ಲೈಮ್ಯಾಕ್ಸ್‌ನಲ್ಲೂ ಒಂದೇ ಫ್ರೇಮ್‌ನಲ್ಲಿ ಕಾಣಿಸಿಲ್ಲ. ಹಾಗಾಗಿ ಇಬ್ಬರನ್ನು ಒಟ್ಟಿಗೆ ಸೇರಿಸಿ ಸಿನಿಮಾ ಮಾಡಿ 'ಜೈಲರ್‌' ಪ್ರೀಕ್ವೆಲ್‌ ಮಾಡಿದರೂ ಸರಿಯೇ ಎಂದು ಕಾಮೆಂಟ್ ಮಾಡುತ್ತಿದ್ದಾರೆ.

ಇದನ್ನೂ ಓದಿ- South Actress: ಈ ಫೋಟೋದಲ್ಲಿರುವ ಹುಡುಗಿ ಈಗ ಸ್ಟಾರ್ ನಾಯಕಿ, ಯಾರೆಂದು ಗುರುತಿಸಬಲ್ಲಿರಾ?

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News