Jailer: ಎಲ್ಲೆಡೆ ಆರ್ಭಟಿಸುತ್ತಿರುವ ಜೈಲರ್ ಅಲ್ಲಿ ಮಾತ್ರ ಗಪ್‌ಚುಪ್...ಕಾರಣ?

Jailer : ಕಳೆದ ವಾರ ರಿಲೀಸ್‌ ಆಗಿ ಅಬ್ಬರ ಶುರು ಮಾಡಿರುವ ಜೈಲರ್‌ ಎಲ್ಲಡೆ ಭರ್ಜರಿಯಾಗಿ ಮುನ್ನುಗ್ಗುತ್ತಿದೆ. ಸಾಮಾಜಿಕ ಜಾಲತಾಣದಲ್ಲಂತೂ ಜೈಲರ್ ಚಿತ್ರದ ವಿಮರ್ಶೆ, ಕಲೆಕ್ಷನ್ ವರದಿ ಹಾಗೂ ಚಿತ್ರದ ಅಂಶಗಳ ಕುರಿತ ಪೋಸ್ಟ್‌ಗಳೇ ಹರಿದಾಡುತ್ತಿವೆ. ಆದರೆ ಇಷ್ಟೆಲ್ಲಾ ಆರ್ಭಟಿಸುತ್ತಿರುವ ಸಿನಿಮಾ ಒಂದು ಕಡೆ ಮಾತ್ರ ಸೈಲೆಂಟ್‌ ಆಗಿದೆ.  

Written by - Savita M B | Last Updated : Aug 17, 2023, 11:57 AM IST
  • ಎಲ್ಲೆಡೆ ಕ್ರೇಜ್‌ ಹೆಚ್ಚಿಸಿರುವ ಜೈಲರ್‌ ಸಿನಿಮಾ ರಿಲೀಸ್‌ ಆಗಿ ಸದ್ಯ ಆರು ದಿನಗಳು ಕಳೆದಿದೆ
  • ವಿಶ್ವ ಬಾಕ್ಸ್ ಆಫೀಸ್‌ನಲ್ಲಿ 402 ಕೋಟಿ ಗ್ರಾಸ್ ಕಲೆಕ್ಷನ್ ಮಾಡಿ ಗೆದ್ದು ಬೀಗುತ್ತಿದೆ.
  • ಜೈಲರ್ ಒಂದು ಭಾಗದಲ್ಲಿ ಮಾತ್ರ ಕಡಿಮೆ ಪ್ರತಿಕ್ರಿಯೆ ಪಡೆದುಕೊಳ್ತಿದೆ‌.
Jailer: ಎಲ್ಲೆಡೆ ಆರ್ಭಟಿಸುತ್ತಿರುವ ಜೈಲರ್ ಅಲ್ಲಿ ಮಾತ್ರ ಗಪ್‌ಚುಪ್...ಕಾರಣ?  title=

Jailer Collection : ಸದ್ಯ ಎಲ್ಲೆಡೆ ಕ್ರೇಜ್‌ ಹೆಚ್ಚಿಸಿರುವ ಜೈಲರ್‌ ಸಿನಿಮಾ ರಿಲೀಸ್‌ ಆಗಿ ಸದ್ಯ ಆರು ದಿನಗಳು ಕಳೆದಿದ್ದರೂ ಸಹ ಅದರ ಸೌಂಡ್‌ ಮಾತ್ರ ಇನ್ನು ಕಡಿಮೆ ಆಗಿಲ್ಲ. ಸದ್ಯ  ವಿಶ್ವ ಬಾಕ್ಸ್ ಆಫೀಸ್‌ನಲ್ಲಿ 402 ಕೋಟಿ ಗ್ರಾಸ್ ಕಲೆಕ್ಷನ್ ಮಾಡಿ ಗೆದ್ದು ಬೀಗುತ್ತಿದೆ. 

ಜೈಲರ್ ತಮಿಳಿನಾಡು, ಕರ್ನಾಟಕ ಅಲ್ಲದೇ ತೆಲುಗು ರಾಜ್ಯಗಳು ಹಾಗೂ ಕೇರಳದಲ್ಲಿಯೂ ಸಹ ಅಬ್ಬರದ ಪ್ರದರ್ಶನವನ್ನು ಕಾಣುತ್ತಿದೆ. ಮೊದಲ ದಿನದಂತೆಯೇ ಆರನೇ ದಿನವೂ ತನ್ನ ಕಲೆಕ್ಷನ್‌ನ್ನು ಹೆಚ್ಚಿಸುತ್ತಲೇ ಇದೆ. 

ಇದನ್ನೂ ಓದಿ-Spandana Vijay : ಕೊನೆಗೂ ಸಿಕ್ತು ಸ್ಪಂದನಾ ಬರೆದಿಟ್ಟ ಡೈರಿ, ಅದರಲ್ಲಿ ಬರೆದದ್ದೇನು ಗೊತ್ತಾ..?

ಹೀಗೆ ಎಲ್ಲ ಕಡೆಗಳಲ್ಲಿಯೂ ಭರ್ಜರಿಯಾಗಿ ಕಲೆಕ್ಷನ್‌ ಮಾಡುತ್ತಿರುವ  ಜೈಲರ್ ಒಂದು ಭಾಗದಲ್ಲಿ ಮಾತ್ರ ಕಡಿಮೆ ಪ್ರತಿಕ್ರಿಯೆ ಪಡೆದುಕೊಳ್ತಿದೆ‌. ಹೌದು ಹಿಂದಿ ಬೆಲ್ಟ್ ನಲ್ಲಿ ಜೈಲರ್ ಸಿನಿಮಾ ಕೇವಲ 2 ಕೋಟಿ ರೂಪಾಯಿ ಮಾತ್ರ ಗಳಿಸಿದೆ. 

ಹೌದು ಜೈಲರ್‌ ಸಿನಿಮಾ ಹಿಂದಿ ಬೆಲ್ಟ್ ನಲ್ಲಿ 6 ದಿನಕ್ಕೆ 1.65 ಕೋಟಿ ರೂಪಾಯಿ ನೆಟ್ ಕಲೆಕ್ಷನ್ ಮಾಡಿದ್ದು, ಅಲ್ಲಿ ಮಾತ್ರ ಜೈಲರ್‌ ಸಿನಿಮಾ ಸೈಲೆಂಟ್‌ ಆಗಿದೆ ಎಂದು ಕೆಲವು ವರದಿಗಳು ತಿಳಿಸಿವೆ. 

ಇದನ್ನೂ ಓದಿ-ಪ್ರೀತಿಯ ತಮ್ಮನ ಜನ್ಮ ದಿನದಂದೇ ಬಿಡುಗಡೆಯಾಗಲಿದೆ ಚಿರು ಕೊನೆಯ ಚಿತ್ರ ರಾಜಮಾರ್ತಾಂಡ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News