Jailer : ʼಜೈಲರ್‌ʼಗೆ ಸೆನ್ಸಾರ್‌ ಶಾಕ್...ರಜನಿ-ಶಿವಣ್ಣ ಸೀನ್‌ಗೆ ಕತ್ತರಿ..?

Censor Board on Jailer Film : ಸೂಪರ್ ಸ್ಟಾರ್ ರಜನಿಕಾಂತ್ ನಟನೆಯ ಬಹುನಿರೀಕ್ಷಿತ ಜೈಲರ್‌ ಸಿನಿಮಾ ತೆರೆ ಮೇಲೆ ಅಪ್ಪಳಿಸೋಕೆ ಸಜ್ಜಾಗಿದೆ. ಈ ನಡುವೆ ಸೆನ್ಸಾರ್‌ ಮಂಡಳಿ ರಜನಿ-ಶಿವಣ್ಣ ಅವರ ಒಂದು ಸೀನ್‌ಗೆ ಕತ್ತರಿ ಹಾಕಿ ಶಾಕ್‌ ನೀಡಿದೆ.

Written by - Savita M B | Last Updated : Jul 31, 2023, 10:26 AM IST
  • ಜೈಲರ್ ಸಿನಿಮಾ ಇತ್ತೀಚೆಗೆ ಸಿಕ್ಕಾಪಟ್ಟೆ ಸೌಂಡ್ ಮಾಡ್ತಿದೆ‌
  • ಚಿತ್ರದಲ್ಲಿ ಸೆಂಚುರಿ ಸ್ಟಾರ್‌ ನಟಿಸಿದ್ದು ಕುತೂಹಲ ಹೆಚ್ಚಿಸಿದೆ.
  • ಈ ನಡುವೆ ಸೆನ್ಸಾರ್‌ ಮಂಡಳಿ ಚಿತ್ರತಂಡಕ್ಕೆ ಬಿಗ್‌ ಶಾಕ್‌ ನೀಡಿದೆ
Jailer : ʼಜೈಲರ್‌ʼಗೆ ಸೆನ್ಸಾರ್‌ ಶಾಕ್...ರಜನಿ-ಶಿವಣ್ಣ ಸೀನ್‌ಗೆ ಕತ್ತರಿ..?  title=

Jailer : ನೆಲ್ಸನ್ ದಿಲೀಪ್ ಕುಮಾರ್ ಆಕ್ಷನ್ ಕಟ್ ಹೇಳಿರುವ ಜೈಲರ್ ಸಿನಿಮಾ ಇತ್ತೀಚೆಗೆ ಸಿಕ್ಕಾಪಟ್ಟೆ ಸೌಂಡ್ ಮಾಡ್ತಿದೆ. ಈ ಚಿತ್ರದ ಆಡಿಯೋ ಲಾಂಚ್ ಕಾರ್ಯಕ್ರಮ ಚೆನ್ನೈನಲ್ಲಿ ಅದ್ದೂರಿಯಾಗಿ ನೆರವೇರಿದೆ. ಚಿತ್ರದಲ್ಲಿ ಸೆಂಚುರಿ ಸ್ಟಾರ್‌ ನಟಿಸಿದ್ದು, ಸಹಜವಾಗಿಯೇ ಸಿನಿಮಾ ಕುತೂಹಲ ಹೆಚ್ಚಿಸಿದೆ. 

ಬಹುಕೋಟಿ ವೆಚ್ಚದಲ್ಲಿ ನಿರ್ಮಾಣವಾದ ಈ ಸಿನಿಮಾದಲ್ಲಿ ತಮನ್ನಾ, ರಮ್ಯಾಕೃಷ್ಣನ್, ಜಾಕಿಶ್ರಾಫ್, ಯೋಗಿ ಬಾಬು ಚಿತ್ರ ಸೇರಿದಂತೆ ದೊಡ್ಡ ತಾರಾಬಳಗವೇ ಇದೆ. ಆಗಸ್ಟ್ 10ಕ್ಕೆ 'ಜೈಲರ್' ಸಿನಿಮಾವನ್ನು ಬಿಡುಗಡೆ ಮಾಡಲು ಪ್ರಯತ್ನ ನಡೆಯುತ್ತಿದೆ. ಕಥೆಯ ಬಗ್ಗೆ ಯಾವುದೇ ಯಾವುದೇ ಸುಳಿವು ನೀಡದೇ ಸಿಕ್ಕಾಪಟ್ಟೆ ನಿರೀಕ್ಷೆ ಹುಟ್ಟು ಹಾಕಿದೆ.

ಕೆಲವು ದಿನಗಳ ಹಿಂದೇ ಬಿಡುಗಡೆಯಾದ ಚಿತ್ರದ ಮೊದಲ ಸಾಂಗ್‌ಗೆ ತಮನ್ನಾ ಹೆಜ್ಜೆ ಹಾಕಿ ಕಮಾಲ್‌ ಮಾಡಿದ್ದರು. ಇನ್ನು ಈ ಆಕ್ಷನ್ ಎಂಟರ್‌ಟೈನರ್ ಸಿನಿಮಾಗೆ ಈಗಾಗಲೇ ಸೆನ್ಸಾರ್ ಮಂಡಳಿಯಿಂದ ಯು/ಎ ಸರ್ಟಿಫಿಕೇಟ್ ಸಿಕ್ಕಿದೆ. ಚಿತ್ರದಲ್ಲಿನ ಹಿಂಸಾತ್ಮಕ ದೃಶ್ಯಗಳನ್ನು ಕಡಿಮೆ ಮಾಡುವಂತೆ ಸೆನ್ಸಾರ್ ಮಂಡಳಿ ಚಿತ್ರತಂಡಕ್ಕೆ ಸೂಚಿಸಿದೆಯಂತೆ. 

ಇದನ್ನೂ ಓದಿ-ಬಿಡುಗಡೆಯಾಯಿತು ನವೀನ್ ಶಂಕರ್ ಅಭಿನಯದ "ಕ್ಷೇತ್ರಪತಿ" ಚಿತ್ರದ ಹೊಸ ಪೋಸ್ಟರ್ 

ಒಟ್ಟು 11 ಕಟ್‌ಚಿತ್ರದಲ್ಲಿ ಮೋಹನ್‌ ಲಾಲ್ ಮಲಯಾಳಿ ಮ್ಯಾಥೂ ಆಗಿ ಕಾಣಿಸಿಕೊಂಡಿದ್ದು, ಆದರೆ ಒಂದು ಮಲಯಾಳಿ ಪದವನ್ನು ಮ್ಯೂಟ್ ಮಾಡಲು  ಸೆನ್ಸಾರ್ ಮಂಡಳಿ ತಿಳಿಸಿದೆಯಂತೆ.  

ಇನ್ನು ಈ ಜೈಲರ್‌ ಸಿನಿಮಾದಲ್ಲಿ ಮುತ್ತುವೇಲ್ ಪಾಂಡಿಯನ್ ಆಗಿ ರಜನಿಕಾಂತ್, ನರಸಿಂಹ ಆಗಿ ಶಿವಣ್ಣ ಕಾಣಿಸಿಕೊಂಡಿದ್ದಾರೆ. ಕ್ಲೈಮ್ಯಾಕ್ಸ್‌ನಲ್ಲಿ ಮುತ್ತುವೇಲ್, ನರಸಿಂಹ ಹಾಗೂ ಮ್ಯಾಥ್ಯೂ ಮೂವರು ಸಿಗರೇಟ್ ಸೇದುವ ದೃಶ್ಯವಿದೆಯೆಂತೆ. ಈ ಸೀನ್‌ ಗೆ ಕತ್ತರಿ ಹಾಕಲು ಸೆನ್ಸಾರಿ ಮಂಡಳಿ ಸೂಚಿಸಿದೆ ಎನ್ನಲಾಗಿದೆ. ಕನ್ನಡಕ್ಕೂ ಸಿನಿಮಾ ಡಬ್ ಆಗಿ ಬರಲಿದ್ದು, ಒಟ್ಟಾರೆಯಾಗಿ ಮೂರು ಭಾಷೆಯಲ್ಲಿ ತೆರೆಮೇಲೆ ಅಬ್ಬರಿಸಲು ರೆಡಿಯಾಗಿದೆ ಜೈಲರ್.‌ 

ಇದನ್ನೂ ಓದಿ-ಇನ್ಮುಂದೆ ಥಿಯೇಟರ್‌ನಲ್ಲಿ ಸಿನಿಮಾ ಪೈರಸಿ ಮಾಡಿದ್ರೆ ಜೈಲು...ಕೋಟ್ಯಾಂತರ ರೂಪಾಯಿ ದಂಡ..!

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News