ಖ್ಯಾತ ಸಿರಿಯಲ್‌ ನಟನಿಗೆ ಸೆಟ್‌ನಲ್ಲೇ ನಿರ್ಮಾಪಕರಿಂದ ಥಳಿತ..! ವಿಡಿಯೋ ವೈರಲ್‌.. ಅಷ್ಟಕ್ಕೂ ಆಗಿದ್ದೇನು..?

Jai Maa Lakshmi serial actor : ಶೂಟಿಂಗ್ ವೇಳೆ ಹಲವು ಅವಘಡಗಳು ಸಂಭವಿಸುತ್ತವೆ. ಇದಲ್ಲದೇ ಆಗಾಗ ಸೆಟ್‌ಗಳಲ್ಲಿ ಜಗಳಗಳೂ ನಡೆಯುತ್ತವೆ. ಇದೀಗ ಇಂತಹದೊಂದು ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಧಾರಾವಾಹಿ ಒಂದರ ಸೆಟ್‌ನಲ್ಲಿ ನಿರ್ಮಾಪಕರು ನಟನನ್ನು ಅಮಾನುಷವಾಗಿ ಥಳಿಸಿದ್ದಾರೆ. ಈ ಪ್ರಕರಣ ಸದ್ಯ ಸಂಚಲನ ಮೂಡಿಸಿದೆ.

Written by - Krishna N K | Last Updated : Jan 24, 2025, 03:31 PM IST
    • ಶೂಟಿಂಗ್ ವೇಳೆ ಹಲವು ಅವಘಡಗಳು ಸಂಭವಿಸುತ್ತವೆ.
    • ಇದಲ್ಲದೇ ಆಗಾಗ ಸೆಟ್‌ಗಳಲ್ಲಿ ಜಗಳಗಳೂ ನಡೆಯುತ್ತವೆ.
    • ಸದ್ಯ ನಿರ್ಮಾಪಕರು ನಟನನ್ನು ಅಮಾನುಷವಾಗಿ ಥಳಿಸಿದ್ದಾರೆ.
ಖ್ಯಾತ ಸಿರಿಯಲ್‌ ನಟನಿಗೆ ಸೆಟ್‌ನಲ್ಲೇ ನಿರ್ಮಾಪಕರಿಂದ ಥಳಿತ..! ವಿಡಿಯೋ ವೈರಲ್‌.. ಅಷ್ಟಕ್ಕೂ ಆಗಿದ್ದೇನು..? title=

Actor Shaan Mishra : ಪ್ರಸಿದ್ಧ ಧಾರಾವಾಹಿ 'ಜೈ ಮಾ ಲಕ್ಷ್ಮಿ' ಸದಾ ಸುದ್ದಿಯಲ್ಲಿರುತ್ತದೆ. ಈ ಧಾರಾವಾಹಿಯಲ್ಲಿ ಕೆಲಸ ಮಾಡುತ್ತಿರುವ ನಟ ಶಾನ್ ಮಿಶ್ರಾಗೆ ಆಘಾತಕಾರಿ ಘಟನೆ ನಡೆದಿದೆ ಎಂದು ತಿಳಿದುಬಂದಿದೆ. ಕಾರ್ಯಕ್ರಮದ ನಿರ್ಮಾಪಕರೊಂದಿಗೆ ನಟ ಜಗಳವಾಡಿದ್ದರು ಎನ್ನಲಾಗಿದೆ... ಈ ವಾದವು ಗಲಾಟೆಗೆ ತಿರುಗಿ, ನಟನನ್ನು ನಿರ್ಮಾಪಕರು ಕೆಟ್ಟದಾಗಿ ಥಳಿಸಿದ್ದಾರೆ... ಇದೀಗ ನಿರ್ಮಾಪಕರ ವಿರುದ್ಧ ನಟ ಪೊಲೀಸ್ ದೂರು ದಾಖಲಿಸಿದ್ದಾರೆ.

ವರದಿಯ ಪ್ರಕಾರ, ನಟ ಶಾನ್ ಮಿಶ್ರಾ 'ಜೈ ಮಾಮ್ ಲಕ್ಷ್ಮಿ' ಧಾರಾವಾಹಿಯ ನಿರ್ಮಾಪಕರಿಗೆ ತನ್ನ ಕೈಗೆ ಹಾನಿಯಾಗಿದ್ದು, ಸಾಧ್ಯವಾದಷ್ಟು ಬೇಗ ಚಿತ್ರೀಕರಣ ಮಾಡಿ ತಮ್ಮನ್ನು ಬಿಡುವಂತೆ ಒತ್ತಾಯಿಸಿದ್ದರಂತೆ. ಅಲ್ಲದೆ, ಶೂಟ್ ಮಾಡದಂತೆ ವೈದ್ಯರು ಸಲಹೆ ನೀಡಿದ್ದರೂ ಧಾರಾವಾಹಿಗೆ ಯಾವುದೇ ಸಮಸ್ಯೆ ಎದುರಾಗಬಾರದು ಎಂದು ಶೂಟ್ ಮಾಡುತ್ತಿದ್ದರು.

ಇದ್ನನೂ ಓದಿ:ವಯಸ್ಸು ಕೇವಲ 23, ಸೌಂದರ್ಯದಲ್ಲಿ ಅಪ್ಸರೆ.. ಎಸ್‌ಆರ್‌ಕೆಗಿಂತಲೂ ಹೆಚ್ಚಿನ ಫ್ಯಾನ್ ಫಾಲೋಯಿಂಗ್... 250 ಕೋಟಿ ಆಸ್ತಿಯ ಒಡತಿ....ಯಾರೀಕೆ...!

 
 
 
 

 
 
 
 
 
 
 
 
 
 
 

A post shared by Telly Talk (@tellytalkindia)

ಶಾನ್ ಅವರ ಬೇಡಿಕೆಯನ್ನು ನಿರ್ಮಾಪಕರು ತಿರಸ್ಕರಿಸಿದ್ದಾರೆ. ಇದು ನಟ ಮತ್ತು ನಿರ್ಮಾಪಕರ ನಡುವೆ ವಾಗ್ವಾದಕ್ಕೆ ಕಾರಣವಾಗಿದೆ. ಈ ವಿವಾದದಲ್ಲಿ ನಿರ್ಮಾಪಕರ ಪತ್ನಿಯೂ ಎಂಟ್ರಿ ಆಗಿದ್ದಾರೆ.. ಮಾತಿನಲ್ಲಿದ್ದ ಜಗಳ ಕೈ ಕೈ ಮಿಲಾಯಿಸುವ ಹಂತ ತಲುಪಿದೆ.. ಘಟನೆಯ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.. ದೂರು ದಾಖಲಾಗಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ..

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News