Kantara : ಇಂದಿನಿಂದ ಎಲ್ಲೆಡೆ ಕಾಂತಾರ ಚಿತ್ರದ 'ವರಾಹ ರೂಪಂ‌' ಹಾಡು ಲಭ್ಯ

Varaha Roopam song : ‘ವರಾಹ ರೂಪಂ’ ಹಾಡನ್ನು ಯೂಟ್ಯೂಬ್ ಸೇರಿದಂತೆ ಯಾವುದೇ ಪ್ಲಾಟ್‌ಫಾರ್ಮ್‌ಗಳಲ್ಲಿ ಒಪ್ಪಿಗೆ ಇಲ್ಲದೆ ಬಳಸಬಾರದು ಎಂದು ಕೇರಳದ ಕೋರ್ಟ್​ ಆದೇಶ ಹೊರಡಿಸಿತ್ತು. ಇದಕ್ಕೆ ತಲೆ ಬಾಗಿದ್ದ ಚಿತ್ರತಂಡವು, 'ವರಾಹ ರೂಪಂ' ಹಾಡನ್ನು ಚಿತ್ರಮಂದಿರ, ಯೂಟ್ಯೂಬ್​ನ ಹೊಂಬಾಳೆ ಫಿಲಂಸ್​ನ ಚಾನಲ್​, ಮ್ಯೂಸಿಕ್ ಆ್ಯಪ್​ಗಳಾದ ಸಾವನ್ ಮುಂತಾದ ಕಡೆಗಳಿಂದ ಹಾಡನ್ನು ಡಿಲೀಟ್​ ಮಾಡಿತ್ತು. 

Written by - YASHODHA POOJARI | Edited by - Chetana Devarmani | Last Updated : Dec 3, 2022, 02:46 PM IST
  • ಕಾಂತಾರ ಚಿತ್ರದ 'ವರಾಹ ರೂಪಂ' ಹಾಡು
  • ಕೇರಳದ ಕೋರ್ಟ್​ ನೀಡಿದ್ದ ತಡೆಯಾಜ್ಞೆ ತೆರವು
  • ಇಂದಿನಿಂದ ಎಲ್ಲೆಡೆ 'ವರಾಹ ರೂಪಂ‌' ಹಾಡು ಲಭ್ಯ
Kantara : ಇಂದಿನಿಂದ ಎಲ್ಲೆಡೆ ಕಾಂತಾರ ಚಿತ್ರದ 'ವರಾಹ ರೂಪಂ‌' ಹಾಡು ಲಭ್ಯ  title=
ಕಾಂತಾರ

Varaha Roopam song : 'ಕಾಂತಾರ' ಚಿತ್ರದ 'ವರಾಹ ರೂಪಂ' ಹಾಡಿನ ಕುರಿತು ಕೇರಳದ ಕೋರ್ಟ್​ ನೀಡಿದ್ದ ತಡೆಯಾಜ್ಞೆ ತೆರವುಗೊಂಡಿರುವ ಹಿನ್ನೆಲೆಯಲ್ಲಿ ಆ ಹಾಡು ಇಂದಿನಿಂದ ಚಿತ್ರಮಂದಿರ, ಯೂಟ್ಯೂಬ್​, ಓಟಿಟಿ ಸೇರಿದಂತೆ ಎಲ್ಲೆಡೆ ಲಭ್ಯವಿದೆ. ಇದಕ್ಕೂ ಮುನ್ನ, ‘ವರಾಹ ರೂಪಂ’ ಹಾಡನ್ನು ಯೂಟ್ಯೂಬ್ ಸೇರಿದಂತೆ ಯಾವುದೇ ಪ್ಲಾಟ್‌ಫಾರ್ಮ್‌ಗಳಲ್ಲಿ ಒಪ್ಪಿಗೆ ಇಲ್ಲದೆ ಬಳಸಬಾರದು ಎಂದು ಕೇರಳದ ಕೋರ್ಟ್​ ಆದೇಶ ಹೊರಡಿಸಿತ್ತು. 

ಇದನ್ನೂ ಓದಿ :  ShivaRajkumar : ಗೀತಕ್ಕನ ಮುಂದೆ ಶಿವಣ್ಣನಿಗೆ ಕಿಸ್ ಕೊಟ್ಟ ಅಭಿಮಾನಿ!

ಇದಕ್ಕೆ ತಲೆ ಬಾಗಿದ್ದ ಚಿತ್ರತಂಡವು, 'ವರಾಹ ರೂಪಂ' ಹಾಡನ್ನು ಚಿತ್ರಮಂದಿರ, ಯೂಟ್ಯೂಬ್​ನ ಹೊಂಬಾಳೆ ಫಿಲಂಸ್​ನ ಚಾನಲ್​, ಮ್ಯೂಸಿಕ್ ಆ್ಯಪ್​ಗಳಾದ ಸಾವನ್ ಮುಂತಾದ ಕಡೆಗಳಿಂದ ಹಾಡನ್ನು ಡಿಲೀಟ್​ ಮಾಡಿತ್ತು. ಓಟಿಟಿಯಲ್ಲಿ 'ಕಾಂತಾರ' ಚಿತ್ರ ಬಿಡುಗಡೆಯಾದಾಗಲೂ ಬೇರೆ ಟ್ಯೂನ್​ ಬಳಸಲಾಗಿತ್ತು. ಆ ನಂತರ ತಡೆಯಾಜ್ಞೆ ತೆರವಾಗಿ, ಹಾಡನ್ನು ಪುನಃ ಬಳಸಿಕೊಳ್ಳುವುದಕ್ಕೆ ಅನುಮತಿ ಸಿಕ್ಕಿದೆ. ಅದರಂತೆ, ತತಕ್ಷಣಕ್ಕೆ ಬರುವಂತೆ ಇಂದಿನಿಂದ ಚಿತ್ರಮಂದಿರ, ಓಟಿಟಿ, ಸೋಷಿಯಲ್​ ಮೀಡಿಯಾ ಸೇರಿದಂತೆ ಎಲ್ಲ ವೇದಿಕೆಗಳಲ್ಲೂ ಮೂಲ 'ವರಾಹ ರೂಪಂ' ಹಾಡು ಪುನಃ ಸಿಗಲಿದೆ.

'ಕಾಂತಾರ' ಚಿತ್ರವನ್ನು ಹೊಂಬಾಳೆ ಫಿಲಂಸ್​ ಸಂಸ್ಥೆಯಡಿ ವಿಜಯ್​ ಕುಮಾರ್​ ಕಿರಗಂದೂರು ನಿರ್ಮಿಸಿದ್ದು, ರಿಷಭ್​ ಶೆಟ್ಟಿ ಕಥೆ-ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ರಿಷಭ್​ ಶೆಟ್ಟಿ, ಸಪ್ತಮಿ ಗೌಡ, ಅಚ್ಯುತ್​ ಕುಮಾರ್​, ಕಿಶೋರ್ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿರುವ ಈ ಚಿತ್ರಕ್ಕೆ, ಅಜನೀಶ್​ ಲೋಕನಾಥ್​ ಸಂಗೀತ ಮತ್ತು ಅರವಿಂದ್​ ಅವರ ಛಾಯಾಗ್ರಹಣವಿದೆ. 'ಕಾಂತಾರಾ' ಚಿತ್ರವು 50 ದಿನಗಳನ್ನು ಪೂರೈಸಿ, ಯಶಸ್ವಿಯಾಗಿ ಪ್ರದರ್ಶನವಾಗುತ್ತಿದೆ.

ಇದನ್ನೂ ಓದಿ :  Video Viral : ಲಿಫ್ಟ್‌ನಲ್ಲಿ ಸಿಲುಕಿ ಒದ್ದಾಡಿದ ಮಕ್ಕಳು.. ಸಿಸಿಟಿವಿ ದೃಶ್ಯ ವೈರಲ್

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News