ನಾನು ಸಿಂಧಿ, ಮನೆ ಖರೀದಿಗೆ ದುಪ್ಪಟ್ಟು ಹಣ ಕೊಡಲು ಹೇಗೆ ಸಾಧ್ಯ -ತಮನ್ನಾ ಭಾಟಿಯಾ

'ಬಾಹುಬಲಿ' ನಟಿ ತಮನ್ನಾ ಭಾಟಿಯಾ ಮುಂಬೈನ ವರ್ಸೊವಾದಲ್ಲಿ ಅರಬ್ಬೀ ಸಮುದ್ರಕ್ಕೆ ಮುಖಮಾಡಿ ಇರುವ ಅಪಾರ್ಟ್ಮೆಂಟ್ ಗೆ ದುಪ್ಪಟ್ಟು ಬೆಲೆ ನೀಡಿ ಖರೀದಿಸಿದ್ದಾರೆ ಎಂದು ಈಗ ಸಾಮಾಜಿಕ ಮಾಧ್ಯಮಗಳಲ್ಲಿ ಸುದ್ದಿಗಳು ಹರಡಿವೆ.ಈ ಬೆನ್ನಲ್ಲೇ ಈ ಸುದ್ದಿಯನ್ನು ತಮನ್ನಾ ನಿರಾಕರಿಸಿದ್ದಾರೆ.

Last Updated : Jul 9, 2019, 03:29 PM IST
  ನಾನು ಸಿಂಧಿ, ಮನೆ ಖರೀದಿಗೆ ದುಪ್ಪಟ್ಟು ಹಣ ಕೊಡಲು ಹೇಗೆ ಸಾಧ್ಯ -ತಮನ್ನಾ ಭಾಟಿಯಾ title=
file photo

ನವದೆಹಲಿ: 'ಬಾಹುಬಲಿ' ನಟಿ ತಮನ್ನಾ ಭಾಟಿಯಾ ಮುಂಬೈನ ವರ್ಸೊವಾದಲ್ಲಿ ಅರಬ್ಬೀ ಸಮುದ್ರಕ್ಕೆ ಮುಖಮಾಡಿ ಇರುವ ಅಪಾರ್ಟ್ಮೆಂಟ್ ಗೆ ದುಪ್ಪಟ್ಟು ಬೆಲೆ ನೀಡಿ ಖರೀದಿಸಿದ್ದಾರೆ ಎಂದು ಈಗ ಸಾಮಾಜಿಕ ಮಾಧ್ಯಮಗಳಲ್ಲಿ ಸುದ್ದಿಗಳು ಹರಡಿವೆ.ಈ ಬೆನ್ನಲ್ಲೇ ಈ ಸುದ್ದಿಯನ್ನು ತಮನ್ನಾ ನಿರಾಕರಿಸಿದ್ದಾರೆ.

ಈಗ ಈ ವಿಚಾರವಾಗಿ ಪ್ರತಿಕ್ರಿಯಿಸಿರುವ ಬಾಹುಬಲಿ ನಟಿ ತಮನ್ನಾ ಭಾಟಿಯಾ ' ನಾನು ಸಿಂಧಿ, ಎರಡು ಪಟ್ಟು ಹಣವನ್ನು ಅಪಾರ್ಟ್‌ಮೆಂಟ್‌ಗೆ ನಾನೇಗೆ ನೀಡಬಲ್ಲೆ ?, ಜನರು ಅದರ ಬಗ್ಗೆ ಕೇಳುತ್ತಲೇ ಇರುವುದರಿಂದ ನನಗೆ ಮುಜುಗರವಾಗಿದೆ. ನಾನು ಮನೆ ಖರೀದಿಸಿದ್ದೇನೆ, ಆದರೆ ಅದಕ್ಕಾಗಿ ದುಪ್ಪಟ್ಟು ಹಣ ಪಾವತಿಸಿಲ್ಲ. ಮನೆ ಸಿದ್ಧವಾದ ನಂತರ ನನ್ನ ಪೋಷಕರು ಮತ್ತು ನಾನು ಅಲ್ಲಿಗೆ ಹೋಗುತ್ತೇವೆ. ಇದು ಸರಳವಾದ, ಕಲಾತ್ಮಕ ಮನೆಯಾಗಿರಬೇಕು ಎಂದು ನಾನು ಬಯಸುತ್ತೇನೆ. " ಎಂದು ತಮನ್ನಾ ಸ್ಪಷ್ಟಪಡಿಸಿದ್ದಾರೆ.

ನವಾಜುದ್ದೀನ್ ಸಿದ್ದಿಕಿ ಅವರೊಂದಿಗಿನ ಸಹಯೋಗದ ಕುರಿತು ಮಾತನಾಡಿದ ತಮನ್ನಾ, "ನಾನು ಸವಾಲಿನ ಪಾತ್ರವನ್ನು ಹುಡುಕುತ್ತಿದ್ದೆ ಮತ್ತು ಈ ಕಥೆಯನ್ನು ಕೇಳಿದ ತಕ್ಷಣ, ನಾನು ಅದರ ಭಾಗವಾಗಬೇಕೆಂದು ನನಗೆ ಅನಿಸಿತು' ಎಂದು ಹೇಳಿದರು.ಇದೇ ವೇಳೆ ತಮ್ಮ ಸಾಮಾಜಿಕವಾಗಿ ಪ್ರಸ್ತುತವಾದ ಚಿತ್ರ ಎಂದು ತಿಳಿಸಿದರು.ತಮನ್ನಾ ಈಗ ನವಾಜುದ್ದೀನ್ ಎದುರು ಬೋಲೆ ಚುಡಿಯಾನ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.

Trending News