ತಾಯಾಗಲಿದ್ದಾರೆ ನಟಿ ʼಇಲಿಯಾನಾʼ..! ಬೇಬಿ ಬಂಪ್‌ನೊಂದಿಗೆ ಪೋಸ್‌ ನೀಡಿದ ಬೆಡಗಿ

Ileana D'Cruz : ನಟಿ ಇಲಿಯಾನಾ ತಾವು ತಾಯಿಯಾಗುತ್ತಿರುವ ವಿಚಾರವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ. ನಟಿಯ ಪೋಸ್ಟ್‌ಗೆ ತಾಯಿ ಸಮಿರಾ ಡಿಕ್ರೂಜ್ ಅವರು ʼನನ್ನ ಮೊಮ್ಮಗನಿಗೆ ಜಗತ್ತಿಗೆ ಸ್ವಾಗತ, ಕಾಯಲು ಸಾಧ್ಯವಿಲ್ಲʼ ಎಂದು ಕಾಮೆಂಟ್‌ ಮಾಡುವ ಮೂಲಕ ಸಂತೋಷ ವ್ಯಕ್ತಪಡಿಸಿದ್ದಾರೆ. ಸದ್ಯ ಇಲಿಯಾನಾ ಬೇಬಿ ಬಂಪ್‌ ಫೋಟೋಗಳು ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗುತ್ತಿವೆ.

Written by - Krishna N K | Last Updated : May 4, 2023, 04:22 PM IST
  • ನಟಿ ಇಲಿಯಾನಾ ಪ್ಯಾನ್ಸ್‌ಗೆ ಸಿಹಿ ಸುದ್ದಿ.
  • ತಾಯಿಯಾಗಲಿದ್ದಾರೆ ಇಲಿಯಾನಾ.
  • ಇನ್‌ಸ್ಟಾದಲ್ಲಿ ಬೇಬಿ ಬಂಪ್‌ ಫೋಟೋ ಶೇರ್‌ ಮಾಡಿದ ನಟಿ.
ತಾಯಾಗಲಿದ್ದಾರೆ ನಟಿ ʼಇಲಿಯಾನಾʼ..! ಬೇಬಿ ಬಂಪ್‌ನೊಂದಿಗೆ ಪೋಸ್‌ ನೀಡಿದ ಬೆಡಗಿ title=

Ileana baby bump : ಬಹುಭಾಷಾ ನಟಿ ಇಲಿಯಾನಾ ಡಿಕ್ರೂಜ್ ಅವರ ಅಭಿಮಾನಿಗಳ ಜೊತೆ ಖುಷಿ ವಿಚಾರವೊಂದನ್ನು ಹಂಚಿಕೊಂಡಿದ್ದಾರೆ. ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ತಾವು ತಾಯಾಗುತ್ತಿರುವ ವಿಚಾರವನ್ನು ಫೋಟೋಗಳ ಶೇರ್‌ ಮಾಡುವ ಮೂಲಕ ತಿಳಿಸಿದ್ದಾರೆ. ಪ್ಯಾನ್ಸ್‌ ಸೇರಿದಂತೆ ಸಿನಿ ರಂಗದ ನಟ ನಟಿಯರು ಇಲಿಯಾನಾಗೆ ಶುಭ ಕೋರಿದ್ದಾರೆ.

ಹೌದು.. ಈ ವರ್ಷದ ಏಪ್ರಿಲ್‌ನಲ್ಲಿ ಇಲಿಯಾನಾ ಡಿಕ್ರೂಜ್ ಅವರ ಸಾಮಾಜಿಕ ಮಾಧ್ಯಮ ಗರ್ಭಿಣಿಯಾಗಿದ್ದಾರೆ ಎನ್ನುವ ಸುದ್ದಿಯೊಂದು ಹರಿದಾಡುತ್ತಿತ್ತು. ಇದೀಗ ಸ್ವತಃ ಈ ಸಿಹಿ ಸುದ್ದಿಯನ್ನು ಬೇಬಿ ಬಂಪ್‌ನೊಂದಿಗೆ ಪೋಸ್‌ ನೀಡಿರುವ ಚಿತ್ರವನ್ನು ಹಂಚಿಕೊಂಡಿರುವ ಮೂಲಕ ತಮ್ಮ ಅಭಿಮಾನಿಗಳಿಗೆ ತಿಳಿಸಿದ್ದಾರೆ. ʼಮಾಮಾʼ ಎಂದು ಶೀರ್ಷಿಕೆ ಬರೆದುಕೊಂಡು ತಾವು ಪ್ರಗ್ನೆಂಟ್‌ ಆಗಿರುವ ವಿಚಾರವನ್ನು ಬಹಿರಂಗ ಪಡಿಸಿದ್ದಾರೆ.

ಇದನ್ನೂ ಓದಿ: Pushpa 2: ಬಿಡುಗಡೆಗೂ ಮುನ್ನವೇ 'ಪುಷ್ಪ 2' ಭರ್ಜರಿ ಕಲೆಕ್ಷನ್‌, RRR - ಬಾಹುಬಲಿ 2 ರೆಕಾರ್ಡ್‌ ಪುಡಿಪುಡಿ!

ಅಲ್ಲದೆ, ಇಲಿಯಾನಾ ಪೋಸ್ಟ್‌ಗೆ ಅವರ ತಾಯಿ ಸಮಿರಾ ಡಿಕ್ರೂಜ್ ಅವರು ʼನನ್ನ ಮೊಮ್ಮಗನಿಗೆ ಜಗತ್ತಿಗೆ ಸ್ವಾಗತ, ಕಾಯಲು ಸಾಧ್ಯವಿಲ್ಲʼ ಎಂದು ಕಾಮೆಂಟ್‌ ಮಾಡುವ ಮೂಲಕ ಸಂತೋಷ ವ್ಯಕ್ತಪಡಿಸಿದ್ದಾರೆ. ಸದ್ಯ ಇಲಿಯಾನಾ ಬೇಬಿ ಬಂಪ್‌ ಫೋಟೋಗಳು ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗುತ್ತಿದ್ದು, ನೆಟ್ಟಿಗರು ಸೇರಿದಂತೆ ಎಲ್ಲರೂ ವಿಶ್‌ ಮಾಡುತ್ತಿದ್ದಾರೆ.

ಕಳೆದ ಕೆಲವು ದಿನಗಳ ಹಿಂದೆ ಇಲಿಯಾನಾ ಫೋಟೋ ನೋಡಿ ಗರ್ಭಿಣಿಯಾಗಿದ್ದಾಗಿ ನೆಟ್ಟಿಗರು ಸುದ್ದಿ ಮಾಡಿದ್ದರು. ಇದೇ ಮೊದಲ ಬಾರಿಗೆ ಸಾಮಾಜಿಕ ಮಾಧ್ಯಮದಲ್ಲಿ ಈ ಸುದ್ದಿಯನ್ನು ಬಹಿರಂಗಪಡಿಸಿದ್ದಾರೆ. ಇಲಿಯಾನಾ ಡಿಕ್ರೂಜ್ ತನ್ನ ಇನ್‌ಸ್ಟಾ ಸ್ಟೋರಿಯಲ್ಲಿ ಮೊಣಕಾಲು ಉದ್ದದ ಗೌನ್ ಧರಿಸಿ ಹಾಸಿಗೆಯ ಮೇಲೆ ಮಲಗಿರುವ ಚಿತ್ರವನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ನಟಿ ಪ್ರಗ್ನಂಟ್‌ ಆಗಿರುವುದು ಸ್ಪಷ್ಟವಾಗಿ ಕಾಣಿಸುತ್ತಿದೆ. ಇಲಿಯಾನಾ ಅದಕ್ಕೆ ʼಇತ್ತೀಚಿನ ಜೀವನʼ ಎಂದು ಶೀರ್ಷಿಕೆ ನೀಡಿದ್ದಾರೆ.

ಇದನ್ನೂ ಓದಿ:  ಖ್ಯಾತ ನಟ ಶರತ್ ಬಾಬು ಆರೋಗ್ಯವಾಗಿದ್ದಾರೆ.. ಸುಳ್ಳು ಸುದ್ದಿ ಹಬ್ಬಿಸಬೇಡಿ..!

ಇಲಿಯಾನಾ ಹಲವು ವರ್ಷಗಳ ಹಿಂದೆ ಆಸ್ಟ್ರೇಲಿಯಾದ ಛಾಯಾಗ್ರಾಹಕ ಆಂಡ್ರ್ಯೂ ನೀಬೋನ್ ಜೊತೆ ಡೇಟಿಂಗ್ ಮಾಡುತ್ತಿದ್ದರು ಎಂಬ ವದಂತಿ ಹರಡಿತ್ತು. ಆದಾಗ್ಯೂ, ಇಬ್ಬರೂ 2019 ರಲ್ಲಿ ಬೇರ್ಪಟ್ಟರು. ನಂತರ ಅವರು ಕತ್ರಿನಾ ಕೈಫ್ ಅವರ ಸಹೋದರ ಸೆಬಾಸ್ಟಿಯನ್ ಕೈಫ್ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಎಂದು ಹೇಳಲಾಗಿದೆ. ಅಲ್ಲದೆ, ಇಬ್ಬರು ಕತ್ರಿನಾ, ವಿಕ್ಕಿ ಮತ್ತು ಇತರರೊಂದಿಗೆ ಮಾಲ್ಡೀವ್ಸ್‌ಗೆ ಪ್ರಯಾಣ ಬೆಳೆಸಿದರು. ಈ ಕುರಿತು ಫೋಟೋಗಳು ವೈರಲ್‌ ಆಗಿದ್ದವು. ಆದರೂ ಇಲಿಯಾನಾ ತನ್ನ ಪ್ರೇಮ ಜೀವನದ ಬಗ್ಗೆ ಇದೂವರೆಗು ಎಲ್ಲೂ ಮಾತನಾಡಿಲ್ಲ.

ಇಲಿಯಾನಾ ಇತ್ತೀಚೆಗೆ 2021 ರಲ್ಲಿ ಅಭಿಷೇಕ್ ಬಚ್ಚನ್ ಅಭಿನಯದ 'ದಿ ಬಿಗ್ ಬುಲ್' ಚಿತ್ರದಲ್ಲಿ ನಟಿಸಿದ್ದರು. ಅವರು ಮುಂದಿನ ರಣದೀಪ್ ಹೂಡಾ ಅವರ 'ಅನ್‌ಫೇರ್ & ಲವ್ಲಿ' ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಆಧ್ಯಾತ್ಮ, ಜೀವನಶೈಲಿ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News