ಹಣಕ್ಕಾಗಿ ಹಲವರ ಜತೆ ಮಲಗಿದ್ದೆ; ಪ್ರಭಾವಿ ರಾಜಕಾರಣಿ ಪುತ್ರನ ಬಗ್ಗೆ ಸತ್ಯ ಬಾಯ್ಬಿಟ್ಟ ಶೆರ್ಲಿನ್ ಚೋಪ್ರಾ

Sherlyn Chopra Controversial Statement : 2012ರ ಸಮಯದಲ್ಲಿ ಶೆರ್ಲಿನ್ ಚೋಪ್ರಾ ಪ್ರಭಾವಿ ರಾಜಕಾರಣಿಯ ಮಗನೊಬ್ಬನ ಜತೆಗೆ ಶೆರ್ಲಿನ್ ಡೇಟಿಂಗ್‌ನಲ್ಲಿದ್ದರು. ಅಂದು ನಟಿ ಹೇಳಿದ್ದ ಹೇಳಿಕೆಯೊಂದು ಇಡೀ ಬಾಲಿವುಡ್ ಬೆಚ್ಚಿಬೀಳುವಂತೆ ಮಾಡಿತ್ತು. ಇದೀಗ ಶೆರ್ಲಿನ್‌ ಮತ್ತೆ ಸಂದರ್ಶನವೊಂದಲ್ಲಿ ಭಾಗವಹಿಸಿ ಅಂದಿನ ಹೇಳಿಕೆ ಬಗ್ಗೆ ಮಾತನಾಡಿದ್ದಾರೆ.

Written by - Savita M B | Last Updated : Jul 25, 2023, 03:28 PM IST
  • ಕಾಂಟ್ರವರ್ಸಿ ಕ್ವೀನ್‌ ಎಂದಲೇ ಕರೆಸಿಕೊಳ್ಳುವ ಬಾಲಿವುಡ್‌ನ ನಟಿ ಶೆರ್ಲಿನ್ ಚೋಪ್ರಾ
  • ಶೆರ್ಲಿನ್ ಚೋಪ್ರಾ ಪ್ರಭಾವಿ ರಾಜಕಾರಣಿಯ ಮಗನೊಬ್ಬನ ಜತೆಗೆ ಶೆರ್ಲಿನ್ ಡೇಟಿಂಗ್‌ನಲ್ಲಿದ್ದರಂತೆ.
  • ಪ್ರೀತಿಯ ಹೆಸರಿನಲ್ಲಿ ನನ್ನನ್ನು ದೈಹಿಕ ಸಂಬಂಧಕ್ಕೆ ಮಾತ್ರ ಸೀಮಿತ ಮಾಡಿದ್ದರು.
ಹಣಕ್ಕಾಗಿ ಹಲವರ ಜತೆ ಮಲಗಿದ್ದೆ; ಪ್ರಭಾವಿ ರಾಜಕಾರಣಿ ಪುತ್ರನ ಬಗ್ಗೆ ಸತ್ಯ ಬಾಯ್ಬಿಟ್ಟ ಶೆರ್ಲಿನ್ ಚೋಪ್ರಾ title=

Sherlyn Chopra ಕಾಂಟ್ರವರ್ಸಿ ಕ್ವೀನ್‌ ಎಂದಲೇ ಕರೆಸಿಕೊಳ್ಳುವ ಬಾಲಿವುಡ್‌ನ ನಟಿ ಶೆರ್ಲಿನ್ ಚೋಪ್ರಾ. ನಗ್ನ ಪೋಟೋಗಳನ್ನು ಶೇರ್‌ ಮಾಡುವ ಮೂಲಕ ಸದಾ ಸುದ್ದಿಯಲ್ಲಿರುತ್ತಾರೆ. ಕೆಲವು ದಿನಗಳ ಹಿಂದೆ ಪಬ್ಲಿಕ್‌ನಲ್ಲಿಯೇ ತಮ್ಮ ಅಭಿಮಾನಿಯೊಬ್ಬನಿಗೆ ಅಪ್ಪಿ, ಮುತ್ತುಕೊಟ್ಟು ಸೌಂಡ್‌ ಮಾಡಿದ್ದರು. ಇದೀಗ ಮತ್ತೆ ಹಲವು ವರ್ಷಗಳ ಹಿಂದೆ ನೀಡಿದ್ದ ಹೇಳಿಕೆ ಬಗ್ಗೆ ಮಾತನಾಡಿ ಮತ್ತೆ ಸುದ್ದಿಲ್ಲಿದ್ದಾರೆ.

2012ರ ಸಮಯದಲ್ಲಿ ಶೆರ್ಲಿನ್ ಚೋಪ್ರಾ ಪ್ರಭಾವಿ ರಾಜಕಾರಣಿಯ ಮಗನೊಬ್ಬನ ಜತೆಗೆ ಶೆರ್ಲಿನ್ ಡೇಟಿಂಗ್‌ನಲ್ಲಿದ್ದರಂತೆ. ಆ ವೇಳೆ ನಟಿ "ಹೌದು ಹಣಕ್ಕಾಗಿ ನಾನು ಹಲವರ ಜೊತೆ ಮಲಗಿದ್ದೆ..ಕಷ್ಟಪಡದೇ ಹಣ ಸಿಗುತ್ತೆ ಅಂದ್ರೆ ಬಿಡೋರು ಯಾರು" ಎಂದು ಸ್ಪೋಟಕ ಹೇಳಿಕೆಯೊಂದನ್ನು ಹೇಳಿದ್ದರು. 

ಇದನ್ನೂ ಓದಿ-Uorfi Javed: ನಿಮ್ಮಿಂದ ಭಾರತದ ಪ್ರತಿಷ್ಠೆ ಹಾಳು ಎಂದ ಅಪರಿಚಿತ ವ್ಯಕ್ತಿಗೆ ಉರ್ಫಿ ಜಾವೇದ್ ಕ್ಲಾಸ್​..ವಿಡಿಯೋ ವೈರಲ್‌

ಈ ವಿಚಾರವಾಗಿ ಅಂದು ಟ್ವೀಟ್‌ ಮಾಡಿದ ನಟಿ "ನಾನು ಈ ಮೂಲಕ ಒಂದು ವಿಚಾರವನ್ನು ನಿಮಗೆ ತಿಳಿಸಲಿದ್ದೇನೆ..ಹೀಗೆ ಹೇಳಿಕೊಳ್ಳುವ ಮೂಲಕ ನಿಮ್ಮಿಂದ ಸಿಂಪತಿ ಗಿಟ್ಟಿಸಿಕೊಳ್ಳುವುದಾಗಲಿ ನಿಮ್ಮ ಕಣ್ಣಿಗೆ ಒಳ್ಳೆಯವಳಾಗುವುದಕ್ಕಾಗಲಿ ಅಲ್ಲ. ವಿಷಯ ಏನೆಂದರೇ ನನ್ನ ಸೋಷಿಯಲ್‌ ಮಿಡಿಯಾ ಮೂಲಕ ಸ್ವಲ್ಪ ಜನ ನನ್ನನ್ನು ಸಂಪರ್ಕಿಸಿದ್ದರು. ಹಣಕ್ಕಾಗಿ ಮಲಗುವಂತೆ ಕೇಳಿದ್ದರು. ಆಗ ನಾನು ಹಲವರ ಜೊತೆ ಮಲಗಿದ್ದೆ" ಎಂದು ಬರೆದುಕೊಂಡಿದ್ದರು.

ಇದೀಗ ನಟಿ ಅಂದಿನ ಹೇಳಿಕೆಗೆ ಮತ್ತೆ ಸ್ಪಷ್ಟನೆ ನೀಡಿದ್ದಾರೆ. ಇತ್ತೀಚೆಗಷ್ಟೇ ಭಾಗವಹಿಸಿದ ಸಂದರ್ಶನವೊಂದಲ್ಲಿ ಶೆರ್ಲಿನ್‌  ಪ್ರಭಾವಿ ರಾಜಕಾರಣಿಯ ಮಗನೊಬ್ಬನ ಕಾಮದ ಕಥೆಯ ಬಗ್ಗೆ ಬಹಿರಂಗವಾಗಿ ಮಾತನಾಡಿದ್ದಾರೆ.

2012ರಲ್ಲಿ ಪ್ರಭಾವಿ ರಾಜಕಾರಣಿ ಮಗ ಪ್ರೀತಿಯ ಹೆಸರಿನಲ್ಲಿ ನನ್ನನ್ನು ದೈಹಿಕ ಸಂಬಂಧಕ್ಕೆ ಮಾತ್ರ ಸೀಮಿತ ಮಾಡಿದ್ದರು. ಇದನ್ನೇ ಪ್ರೀತಿಯೆಂದು ನಂಬಿದ್ದ ನನಗೆ ಅದು ಬರೀ ಕಾಮ ಎಂದು ತಿಳಿದಾಗ ದೈಹಿಕ ಸುಖದ ಸಲುವಾಗಿ ಮಾತ್ರ ತನಗೆ ಹಣ ಸುರಿದ ಎಂದು ಸಂದರ್ಶನದಲ್ಲಿ ಶೆರ್ಲಿನ್ ವರ್ಷಗಳ ಹಿಂದಿನ ತನ್ನ ಜೀವನದ ಕರಾಳ ದಿನಗಳನ್ನು ನೆನಪು ಮಾಡಿಕೊಂಡಿದ್ದಾರೆ.

ಇದನ್ನೂ ಓದಿ- Aditya Roy : ಮಳೆಯಲ್ಲಿ ರೂಮರ್ಡ್ ಲವ್​ಬರ್ಡ್ಸ್ ಜಾಲಿ ರೈಡ್..ಕ್ಯಾಮೆರಾ ನೋಡಿ ಮುಖ ಮುಚ್ಚಿಕೊಂಡ ಅನನ್ಯಾ ಪಾಂಡೆ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News