'ದಿ ವಿಲನ್' ಆಡಿಯೋ ಮಾರಾಟವಾದ ಮೊತ್ತ ಎಷ್ಟು ಗೊತ್ತಾ!

ಶಿವರಾಜಕುಮಾರ್ ಅವರ 100 ನೇ ಚಿತ್ರ "ಜೋಗಯ್ಯ" ತೆರೆಗೆ ಬಂದ ಆರು ವರ್ಷಗಳ ನಂತರ ಪ್ರೇಮ್ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ.

Last Updated : Feb 22, 2018, 02:10 PM IST
'ದಿ ವಿಲನ್' ಆಡಿಯೋ ಮಾರಾಟವಾದ ಮೊತ್ತ ಎಷ್ಟು ಗೊತ್ತಾ! title=

ಹ್ಯಾಟ್ರಿಕ್ ಹಿರೋ ಶಿವರಾಜ್ ಕುಮಾರ್ ಮತ್ತು ಕಿಚ್ಚ ಸುದೀಪ್ ಅಭಿನಯದ 'ದಿ ವಿಲನ್' ಚಿತ್ರದ ಆಡಿಯೊ ಹಕ್ಕು ದಾಖಲೆಯ ಮೊತ್ತಕ್ಕೆ ಮಾರಾಟವಾಗಿದೆ. 'ದಿ ವಿಲನ್' ಚಿತ್ರದ ಆಡಿಯೊ ಹಕ್ಕುಗಳನ್ನು 1.08 ಕೋಟಿ ರೂಪಾಯಿಗಳಿಗೆ ಮಾರಾಟ ಮಾಡಲಾಗಿದೆ. 

ಆನಂದ್ ಆಡಿಯೋ ಚಲನಚಿತ್ರದ ಆಡಿಯೊ ಹಕ್ಕುಗಳನ್ನು ಪಡೆದುಕೊಂಡಿದ್ದು, ಇದಕ್ಕಾಗಿ 1.08 ಕೋಟಿ ರೂಪಾಯಿಗಳನ್ನು ಪಾವತಿಸಿದ್ದಾರೆ. ಇದನ್ನು ಕನ್ನಡ ಚಲನಚಿತ್ರೋದ್ಯಮದಲ್ಲಿ ಅತಿ ಹೆಚ್ಚು ಎಂದು ಹೇಳಲಾಗಿದೆ.

ಸಿ. ಆರ್. ಮನೋಹರ್ ನಿರ್ಮಾಣದ ಈ ಚಿತ್ರದ ವಿಶೇಷವೆಂದರೆ ಶಿವರಾಜಕುಮಾರ್ ಅವರ 100 ನೇ ಚಿತ್ರ "ಜೋಗಯ್ಯ" ತೆರೆಗೆ ಬಂದ ಆರು ವರ್ಷಗಳ ನಂತರ ಪ್ರೇಮ್ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ.   ಈ ಚಿತ್ರಕ್ಕೆ ಅರ್ಜುನ್ ಜನ್ಯ ಉತ್ತಮ ಸಂಗೀತ ಸಂಯೋಜನೆಯನ್ನು ನೀಡಿದ್ದಾರೆ.

ಈ ಚಿತ್ರದಲ್ಲಿ ಶಿವರಾಜಕುಮಾರ್, ಸುದೀಪ್, ಆಮಿ ಜಾಕ್ಸನ್, ಶ್ರೀಕಾಂತ್, ಮಿಥುನ್ ಚಕ್ರವರ್ತಿ ಮತ್ತು ಇತರರು ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. 

Trending News