ಸಲಾರ್‌ ಚಿತ್ರಕ್ಕೆ ನಟಿ ಶೃತಿ ಹಾಸನ್‌ ಪಡೆದ ಸಂಭಾವನೆ ಎಷ್ಟು ಗೊತ್ತೇ?

Salaar: ಪ್ಯಾನ್‌ ಇಂಡಿಯಾ ಸಲಾರ್‌ ಸಿನಿಮಾದಲ್ಲಿ ನಟ ಪ್ರಭಾಸ್‌ ಜೊತೆಯಾಗಿ ಬಹುಭಾಷಾ ನಟಿ ಶೃತಿ ಹಾಸನ್‌ ಮುಖ್ಯ ಪಾತ್ರದಲ್ಲಿ ನಟಿಸಿದ್ದು, ಇದೀಗ ಈ ನಟಿಯು ಚಿತ್ರಕ್ಕೆ ಪಡೆದ ಸಂಭಾವನೆ ಬಗ್ಗೆ ಚರ್ಚೆಯಾಗುತ್ತಿದೆ. ಹಾಗಾದ್ರೆ ಶೃತಿ ಹಾಸನ್‌ಗೆ ಸಿಕ್ಕ ಸಂಭಾವನೆ ಬಗ್ಗೆ ಮಾಹಿತಿ ಇಲ್ಲಿದೆ.  

Written by - Zee Kannada News Desk | Last Updated : Dec 23, 2023, 12:24 PM IST
  • ನಟ ಪ್ರಭಾಸ್ ಮತ್ತು ಪೃಥ್ವಿರಾಜ್ ಸುಕುಮಾರನ್ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಪ್ರಶಾಂತ್ ನೀಲ್ ನಿರ್ದೇಶನದ ಬಹು ನಿರೀಕ್ಷಿತ ಚಿತ್ರ 'ಸಲಾರ್' ಡಿಸೆಂಬರ್ 22 ರಂದು ಬಿಡುಗಡೆಯಾಗಿದೆ.
  • ಸಲಾರ್‌ ಸಿನಿಮಾ ಬಿಡುಗಡೆಯಾದ ವೇಳೆ, ಇದರ ಜೊತೆಗೆ ಚಿತ್ರದ ವಿಮರ್ಶೆಗಳು ಸಹ ಸುದ್ದಿಯಾಗುತ್ತಿದ್ದು, ಹಾಗೇಯೇ ಸಿನಿಮಾದಲ್ಲಿ ನಟಿಸಿರುವವರ ಸಂಭಾವನೆ ವಿಷಯ ಕೂಡ ಚರ್ಚೆಯಲ್ಲಿದೆ.
  • 'ಸಲಾರ್' ಸಿನಿಮಾದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿರುವುದು ಬಹುಭಾಷಾ ನಟಿ ಶೃತಿ ಹಾಸನ್, ಈಗಾಗಲೇ ಹಾಡು ಮತ್ತು ಟ್ರೇಲರ್‌ನಲ್ಲಿ ಕಂಡಿದ್ದ ಅಭಿಮಾನಿಗಳು ಸಿನಿಮಾದಲ್ಲಿ ಕಣ್ತುಂಬಿಕೊಂಡಿದ್ದಾರೆ.
ಸಲಾರ್‌ ಚಿತ್ರಕ್ಕೆ ನಟಿ ಶೃತಿ ಹಾಸನ್‌ ಪಡೆದ ಸಂಭಾವನೆ ಎಷ್ಟು ಗೊತ್ತೇ?  title=

Shruthi Hassan Payment For Salaar: ಟಾಲಿವುಡ್‌ ಸ್ಟಾರ್‌ ನಟ ಪ್ರಭಾಸ್ ಮತ್ತು ಪೃಥ್ವಿರಾಜ್ ಸುಕುಮಾರನ್ ಪ್ರಮುಖ ಪಾತ್ರಗಳಲ್ಲಿ ಡೈನಾಮಿಕ್ ಜೋಡಿಯಾಗಿ ನಟಿಸಿರುವ ಪ್ರಶಾಂತ್ ನೀಲ್ ನಿರ್ದೇಶನದ ಬಹು ನಿರೀಕ್ಷಿತ ಚಿತ್ರ 'ಸಲಾರ್' ಡಿಸೆಂಬರ್ 22 ರಂದು ಬಿಡುಗಡೆಯಾಗಿದೆ. ಸಲಾರ್ 270 ಕೋಟಿ ರೂಪಾಯಿ ಬಜೆಟ್‌ನಲ್ಲಿ ನಿರ್ಮಿಸಲಾಗಿದ್ದು, ಇದರಲ್ಲಿ ನಾಯಕಿಯಾಗಿ ನಟಿ ಶೃತಿ ಹಾಸನ್ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. 

ಸದ್ಯ ಸಲಾರ್‌ ಸಿನಿಮಾ ಬಿಡುಗಡೆಯಾದ ವೇಳೆ, ಇದರ ಜೊತೆಗೆ ಚಿತ್ರದ ವಿಮರ್ಶೆಗಳು ಸಹ ಸುದ್ದಿಯಾಗುತ್ತಿದ್ದು, ಹಾಗೆಯೇ ಸಿನಿಮಾದಲ್ಲಿ ನಟಿಸಿರುವವರ ಸಂಭಾವನೆ ವಿಷಯ ಕೂಡ ಚರ್ಚೆಯಲ್ಲಿದೆ. 270 ಕೋಟಿ ರೂಪಾಯಿ ಬಜೆಟ್‌ನಲ್ಲಿ ನಟ, ನಟಿಯರಿಗೆ ಎಷ್ಟು ಸಿಕ್ಕಿರಬಹುದು ಎಂಬ ಅಂದಾಜು ನಡೆಯುತ್ತಿದ್ದು, ಪ್ರತಿಭಾವಂತ ಪಾತ್ರವರ್ಗ ಮತ್ತು ಸಿಬ್ಬಂದಿ ಸಂಭಾವನೆಯ ಬಗ್ಗೆ ವರದಿಗಳು ಬರುತ್ತಿವೆ. 

ಇದನ್ನೂ ಓದಿ: ಸಲಾರ್ ಸಿನಿಮಾಗೆ ಪ್ರಭಾಸ್ ಪಡೆದ ಸಂಭಾವನೆ ಎಷ್ಟು ಕೋಟಿ ಗೊತ್ತೇ!

'ಸಲಾರ್' ಸಿನಿಮಾದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿರುವುದು ಬಹುಭಾಷಾ ನಟಿ ಶೃತಿ ಹಾಸನ್, ಈಗಾಗಲೇ ಹಾಡು ಮತ್ತು ಟ್ರೇಲರ್‌ನಲ್ಲಿ ಕಂಡಿದ್ದ ಅಭಿಮಾನಿಗಳು ಸಿನಿಮಾದಲ್ಲಿ ಕಣ್ತುಂಬಿಕೊಂಡಿದ್ದಾರೆ. ಇವರ ಪಾತ್ರಕ್ಕೂ ಮಿಶ್ರ ಪ್ರತಿಕ್ರಿಯೆ ಲಭ್ಯವಾಗಿದ್ದು, ಚಿತ್ರದಲ್ಲಿ ನಿರ್ಣಾಯಕ ಪಾತ್ರದಲ್ಲಿ ನಟಿಸಿದ್ದಾರೆ. ಸಲಾರ್ ಚಿತ್ರಕ್ಕಾಗಿ ನಟಿ ಶೃತಿ ಹಾಸನ್ 8 ಕೋಟಿ ರೂಪಾಯಿಗಳನ್ನು ಪಡೆದುಕೊಂಡಿದ್ದಾರೆ ಎಂದು ವರದಿಯಾಗಿದೆ. 

ಹೀಗಾಗಿ ನಟಿ ಶೃತಿ ಹಾಸನ್ ಪಾತ್ರವನ್ನು ಗಂಭೀರವಾಗಿ ಪರಿಗಣಿಸಲಾಗಿದ್ದು, ಈ ನಟಿ ಶೂಟಿಂಗ್ ಸಮಯದಲ್ಲಿ ಸೆಟ್‌ನಲ್ಲಿ ಇದ್ದಿದ್ದು, ಹತ್ತಿರದ ಸ್ನೇಹಿತರು ಮತ್ತು ಕುಟುಂಬದವರ ಜೊತೆಗೆ ಇದ್ದಂತೆ ಆಗಿದೆ ಎಂದು ಹೇಳಿದ್ದಾರೆ. ಜೊತೆಗೆ ಈ ಚಿತ್ರ ನನ್ನದಲ್ಲ, ಪ್ರಭಾಸ್ ಮತ್ತು ಪೃಥ್ವಿರಾಜ್ ಸುಕುಮಾರನ್ ನಿರ್ವಹಿಸಿರುವ ಪಾತ್ರಗಳ ಸುತ್ತ ಸುತ್ತುತ್ತದೆ ಎಂಬುದನ್ನು ಕೂಡ ಶೃತಿ ಒಪ್ಪಿಕೊಂಡಿದ್ದಾರೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News