ಕಬ್ಜ ಸಿನಿಮಾದ ಟೈಟಲ್ ಟ್ರ್ಯಾಕ್ ಸಪ್ತಸಾಗರದಾಚೆ ಸೌಂಡ್ ಮಾಡೋದು ಪಕ್ಕಾ..!

ಹಾಲಿವುಡ್ ರೇಂಜ್ ಗೆ ಕನ್ನಡ ಸಿನಿಮಾ ಬೆಳೆಯುತ್ತಿದೆ. ಮಾರ್ಚ್ 17ರಂದು ರಿಲೀಸ್ ಆಗೋ 'ಕಬ್ಜ' ಸಿನಿಮಾ ಕೂಡ ಯಾಕೋ ಹಿಸ್ಟರಿ ಸೃಷ್ಟಿಸೋ ಎಲ್ಲಾ ಲಕ್ಷಣ ಕಂಡುಬರುತ್ತಿದೆ. ಯೆಸ್ ರಿಲೀಸ್ ಆಗಿದ್ದ ಟೀಸರ್ ಬೇರೆಯದ್ದೇ ಲೋಕ ತೋರಿಸಿತ್ತು. ಇದೀಗ ಕಬ್ಜ ಸಿನಿಮಾದ ಟೈಟಲ್ ಸಾಂಗ್ ಹೈದ್ರಾಬಾದ್ನಲ್ಲಿ ದೊಡ್ಡ ಇವೆಂಟ್ ಮಾಡೋ ಮೂಲಕ ರಿಲೀಸ್ ಮಾಡಲಾಯಿತು.

Written by - YASHODHA POOJARI | Edited by - Manjunath N | Last Updated : Feb 4, 2023, 09:23 PM IST
  • ಕಬ್ಜದಲ್ಲಿ ಉಪೇಂದ್ರಗೆ ನಾಯಕಿಯಾಗಿ ಶ್ರೀಯಾ ಶರಣ್ ಕಾಣಿಸಿಕೊಂಡಿದ್ದು,
  • ನವಾಬ್ ಷಾ, ಕಬೀರ್ ಸಿಂಗ್ ದುಹಾನ್, ಪ್ರಮೋದ್ ಶೆಟ್ಟಿ, ಮುರಳಿ ಶರ್ಮ ಮುಂತಾದವರು ಅಭಿನಯಿಸಿದ್ದಾರೆ.
  • 'ಕೆಜಿಎಫ್' ಖ್ಯಾತಿಯ ಸಂಗೀತ ನಿರ್ದೇಶಕ ರವಿ ಬಸ್ರೂರು ಈ ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದಾರೆ. ಎಜೆ ಶೆಟ್ಟಿ ಅವರು ಛಾಯಾಗ್ರಹಣ ಮಾಡಿದ್ದು,
  • 'ಕೆಜಿಎಫ್' ಖ್ಯಾತಿಯ ಶಿವಕುಮಾರ್ ಕಲಾ ನಿರ್ದೇಶನ ಮಾಡಿದ್ದಾರೆ.ಇದು ಸ್ವಾತಂತ್ರ್ಯಪೂರ್ವದ ಭೂಗತ ಲೋಕದ ಕಥೆಯಾಗಿದೆ.
ಕಬ್ಜ ಸಿನಿಮಾದ ಟೈಟಲ್ ಟ್ರ್ಯಾಕ್ ಸಪ್ತಸಾಗರದಾಚೆ ಸೌಂಡ್ ಮಾಡೋದು ಪಕ್ಕಾ..! title=
Photo Courtsey: Twitter

ಬೆಂಗಳೂರು: ಹಾಲಿವುಡ್ ರೇಂಜ್ ಗೆ ಕನ್ನಡ ಸಿನಿಮಾ ಬೆಳೆಯುತ್ತಿದೆ. ಮಾರ್ಚ್ 17ರಂದು ರಿಲೀಸ್ ಆಗೋ 'ಕಬ್ಜ' ಸಿನಿಮಾ ಕೂಡ ಯಾಕೋ ಹಿಸ್ಟರಿ ಸೃಷ್ಟಿಸೋ ಎಲ್ಲಾ ಲಕ್ಷಣ ಕಂಡುಬರುತ್ತಿದೆ. ಯೆಸ್ ರಿಲೀಸ್ ಆಗಿದ್ದ ಟೀಸರ್ ಬೇರೆಯದ್ದೇ ಲೋಕ ತೋರಿಸಿತ್ತು. ಇದೀಗ ಕಬ್ಜ ಸಿನಿಮಾದ ಟೈಟಲ್ ಸಾಂಗ್ ಹೈದ್ರಾಬಾದ್ನಲ್ಲಿ ದೊಡ್ಡ ಇವೆಂಟ್ ಮಾಡೋ ಮೂಲಕ ರಿಲೀಸ್ ಮಾಡಲಾಯಿತು.

ಕಬ್ಜ ಸಿನಿಮಾ ಟೈಟಲ್ ಟ್ರ್ಯಾಕ್ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ.ರಿಲೀಸ್ ಆದ ಕೆಲ ಗಂಟೆಗಳಲ್ಲೇ ಲಕ್ಷಲಕ್ಷ ಜನ ನೋಡಿದ್ದಾರೆ ಅಂದ್ರೆ ಲೆಕ್ಕಾ ಹಾಕಿ. ಹಾಡು ನೋಡಿದ ಅಷ್ಟೂ ಸಿನಿ ಪ್ರಿಯರು ರವಿ ಬಸ್ರುರ್ ಅವರ ಸಂಗೀತವನ್ನ ಹಾಡಿಹೊಗಳುತ್ತಿದ್ದಾರೆ. ಕಬ್ಜ ಸಿನಿಮಾ ಕೂಡ ಸಪ್ತ ಸಾಗರದಾಚೆ ಸೌಂಡ್ ಮಾಡೋ ಸುಳಿವು ಕೊಟ್ಟಿದೆ.ಡೈರೆಕ್ಟರ್ ಆರ್.ಚಂದ್ರು ಟ್ಯಾಲೆಂಟ್ ಬಗ್ಗೆ ಪ್ರತಿಯೊಬ್ಬರೂ ಕಾಮೆಂಟ್ ಮಾಡೋ ಮೂಲಕ ಹೊಗಳುತ್ತಿದ್ದಾರೆ.ಹಾಡಿನ ಪ್ರತಿ ಸಾಲುಕೂಡ ಉಪ್ಪಿ ಲುಕ್ ಮತ್ತು ಸ್ಟೈಲ್ ಗೆ ಪಕ್ಕಾ ಸೂಟ್ ಆಗುತ್ತಿದೆ.

ಕಬ್ಜದಲ್ಲಿ ಉಪೇಂದ್ರಗೆ ನಾಯಕಿಯಾಗಿ ಶ್ರೀಯಾ ಶರಣ್ ಕಾಣಿಸಿಕೊಂಡಿದ್ದು, ನವಾಬ್ ಷಾ, ಕಬೀರ್ ಸಿಂಗ್ ದುಹಾನ್, ಪ್ರಮೋದ್ ಶೆಟ್ಟಿ, ಮುರಳಿ ಶರ್ಮ ಮುಂತಾದವರು ಅಭಿನಯಿಸಿದ್ದಾರೆ. 'ಕೆಜಿಎಫ್' ಖ್ಯಾತಿಯ ಸಂಗೀತ ನಿರ್ದೇಶಕ ರವಿ ಬಸ್ರೂರು ಈ ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದಾರೆ. ಎಜೆ ಶೆಟ್ಟಿ ಅವರು ಛಾಯಾಗ್ರಹಣ ಮಾಡಿದ್ದು, 'ಕೆಜಿಎಫ್' ಖ್ಯಾತಿಯ ಶಿವಕುಮಾರ್ ಕಲಾ ನಿರ್ದೇಶನ ಮಾಡಿದ್ದಾರೆ.ಇದು ಸ್ವಾತಂತ್ರ್ಯಪೂರ್ವದ ಭೂಗತ ಲೋಕದ ಕಥೆಯಾಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News