Hijab Controversy: Priyanka Gandhi ಟ್ವೀಟ್ ಪ್ರಶ್ನಿಸಿದ Sherlyn Chopra, ಬಿಕಿನಿ ಡೊನೇಟ್ ಮಾಡಬೇಕಂತೆ!

Karnataka Hijab Controversy ಗೆ ಸಂಬಂಧಿಸಿದಂತೆ Priyanka Gandhi ಮಾಡಿರುವ ಟ್ವೀಟ್ ಗೆ Sherlyn Chopra ಪೋಸ್ಟ್ ವೊಂದನ್ನು ಹಾಕಿ ಹಲವು ಪ್ರಶ್ನೆಗಳನ್ನು ಕೇಳಿದ್ದಾಳೆ.

Written by - Nitin Tabib | Last Updated : Feb 10, 2022, 10:26 PM IST
  • Priyanka Vadra ವಿವಾದಾತ್ಮಕ ಟ್ವೀಟ್ ಗೆ ಶೆರ್ಲಿನ್ ರೀಟ್ವೀಟ್.
  • ಪ್ರಿಯಾಂಕಾ ಹೇಳಿಕೆಯನ್ನು ಪ್ರಶ್ನಿಸಿದ ಶೆರ್ಲಿನ್ ಶೋಪ್ರಾ,
  • ವೈರಲ್ ಆಗುತ್ತಿರುವ ಈ ಪೋಸ್ಟ್ ನಲ್ಲಿ ಶೆರ್ಲಿನ್ ಹೇಳಿದ್ದೇನು?
Hijab Controversy: Priyanka Gandhi ಟ್ವೀಟ್ ಪ್ರಶ್ನಿಸಿದ Sherlyn Chopra, ಬಿಕಿನಿ ಡೊನೇಟ್ ಮಾಡಬೇಕಂತೆ! title=
Karnataka Hijab Controversy (File Photo)

Karnataka Hijab Controversy - ಕರ್ನಾಟಕದಲ್ಲಿ ನಡೆಯುತ್ತಿರುವ ಹಿಜಾಬ್ ವಿವಾದದ (Hijab Controversy) ವಿಚಾರ ಕಾವೇರತೊಡಗುತ್ತಿದೆ. ವಿವಾದಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಈ ಹಿಂದೆ ಟ್ವೀಟ್ ಮೂಲಕ ಪ್ರತಿಕ್ರಿಯೆ ನೀಡಿದ್ದರು. ಸಂವಿಧಾನದತ್ತವಾಗಿ ಮಹಿಳೆಯರು ತಮ್ಮ ಮನದ ಇಚ್ಛೆಯಂತೆ ಬಟ್ಟೆ ಧರಿಸುವ ಹಕ್ಕು ಹೊಂದಿದ್ದಾರೆ ಎಂದಿದ್ದರು. ಅದು ಬಿಕಿನಿಯಾಗಿರಲಿ, ಘುಂಗಟ್ (ಮುಸುಕು) ಆಗಿರಲಿ, ಜೀನ್ಸ್ ಅಥವಾ ಹಿಜಾಬ್ ಆಗಿರಲಿ ಎಂದಿದ್ದರು. ಅದು ಹೆಣ್ಣಿನ ಹಕ್ಕು, ಅವಳು ಏನು ಬೇಕಾದರೂ ಧರಿಸಬಹುದು ಎಂದು ಪ್ರಿಯಾಂಕಾ ಹೇಳಿದ್ದರು. ಆದರೆ ಪ್ರಿಯಾಂಕಾ ಮಾಡಿರುವ ಟ್ವೀಟ್ ಅನ್ನು ಖ್ಯಾತ ಬಾಲಿವುಡ್ ನಟಿ ಶೆರ್ಲಿನ್ ಚೋಪ್ರಾ ಪ್ರಶ್ನಿಸಿದ್ದಾಳೆ.

ಇದನ್ನೂ ಓದಿ-High Court : 'ತೀರ್ಪು ಬರುವವರೆಗೂ ಧಾರ್ಮಿಕ ಉಡುಗೆ ತೊಡಬಾರದು' : ಹೈಕೋರ್ಟ್‌ ಖಡಕ್ ಸೂಚನೆ

ಶೆರ್ಲಿನ್ ಕೇಳಿದ್ದೇನು? (Sherlyn Chopra Viral Post)
ಇದೀಗ ಪ್ರಿಯಾಂಕಾ ಗಾಂಧಿಯವರ ಈ ಹೇಳಿಕೆಯನ್ನು ನಟಿ ಶೆರ್ಲಿನ್ ಚೋಪ್ರಾ ಪ್ರಶ್ನೀಸಿದ್ದಾಳೆ. ಪ್ರಿಯಾಂಕಾ ಗಾಂಧಿಯವರ ಟ್ವೀಟ್ ಗೆ ಮರುಟ್ವೀಟ್ ಮಾಡಿರುವ ಶೆರ್ಲಿನ್, 'ಶ್ರೀಮತಿ ವಾದ್ರಾ, ಭಾರತೀಯ ಸಂವಿಧಾನದ ಬಗ್ಗೆ ನಿಮ್ಮ ತಿಳುವಳಿಕೆಯ ಪ್ರಕಾರ, ಶಿಕ್ಷಣ ಸಂಸ್ಥೆಗಳಲ್ಲಿ ಹುಡುಗಿಯರು ಬಿಕಿನಿಯನ್ನು ಧರಿಸಲು ಅನುಮತಿಸಲಾಗಿದೆಯೇ? ಹೌದಾದರೆ, ಯಾವ ರೀತಿಯ? ಮೈಕ್ರೋ-ಬಿಕಿನಿ ಅಥವಾ ಪಾರದರ್ಶಕ ಬಿಕಿನಿ? ನನ್ನ ಬಳಿ ಬಹಳಷ್ಟು ಬಿಕಿನಿಗಳಿವೆ ಮತ್ತು ಅವುಗಳನ್ನು ದಾನ ಮಾಡುವುದು ನನಗೆ ಸಂತೋಷದ ವಿಷಯ. ವೈರಲ್ ಆಗುತ್ತಿರುವ ಶೆರ್ಲಿನ್ ಮಾಡಿರುವ ರೀಟ್ವೀಟ್ ಇಲ್ಲಿದೆ-

ಇದನ್ನೂ ಓದಿ-ಹೆಣ್ಣುಮಕ್ಕಳ ಶಿಕ್ಷಣದ ಬಗ್ಗೆ ನಮ್ಮ ದೇಶಕ್ಕೆ ಪಾಠ ಮಾಡಬೇಡಿ: ಪಾಕ್​ಗೆ ಓವೈಸಿ ತಿರುಗೇಟು

ಇದನ್ನೂ ಓದಿ-ಹಿಜಾಬ್, ಕೇಸರಿ ಶಾಲು ವಿವಾದದ ಬಗ್ಗೆ ಹೆಚ್ ಡಿ ಕುಮಾರಸ್ವಾಮಿ ಕಿಡಿ

ಸಂಪೂರ್ಣ ಪ್ರಕರಣ ಏನು?
ಧಾರ್ಮಿಕ ಉಡುಗೆ ನಿಷೇಧದ ಬಗ್ಗೆ ಕರ್ನಾಟಕದ ಶಾಲಾ-ಕಾಲೇಜುಗಳಲ್ಲಿ ಭಾರಿ ಕೋಲಾಹಲ ಸೃಷ್ಟಿಯಾಗಿದೆ. ಅಂದಿನಿಂದ, ಹಲವಾರು ಜಿಲ್ಲೆಗಳಲ್ಲಿ ಶಾಲಾ-ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಗುಂಪುಗಳಿಂದ ಪ್ರತಿಭಟನೆಗಳು ವರದಿಯಾಗುತ್ತಿವೆ. ಈ ವೇಳೆ ಕಲ್ಲು ತೂರಾಟದಿಂದಾಗಿ ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿದೆ. ಇನ್ನೊಂದೆಡೆ ಈ ಎಲ್ಲಾ ಘಟನೆಗಳು ಮತ್ತು ಸಂದರ್ಭಗಳನ್ನು ಗಮನದಲ್ಲಿಟ್ಟುಕೊಂಡು, ಕರ್ನಾಟಕ ಸರ್ಕಾರವು 3 ದಿನಗಳ ಕಾಲ ಶಾಲಾ-ಕಾಲೇಜುಗಳನ್ನು ಮುಚ್ಚುವಂತೆ ಆದೇಶ ಹೊರಡಿಸಿದೆ.ಈ ವಿಷಯದ ಬಗ್ಗೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿಯೂ ಕೂಡ ಭಾರಿ ಚರ್ಚೆ ನಡೆಯುತ್ತಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News