2022ರ ಟಾಪ್​ 10 ಚಿತ್ರಗಳ ಪಟ್ಟಿ ರಿಲೀಸ್‌: ನಂ.01​ ಪಟ್ಟ ಯಾರಿಗೆ? KGF 2 ಸ್ಥಾನ ಎಷ್ಟು?

HIGHEST GROSSING INDIAN FILMS: 2022ರಲ್ಲಿ ಈವರೆಗೆ ಅತಿ ಹೆಚ್ಚು ಕಲೆಕ್ಷನ್​ ಮಾಡಿದ ಟಾಪ್​ 10 ಭಾರತೀಯ ಸಿನಿಮಾಗಳ ಪಟ್ಟಿಯನ್ನು ಐಎಂಬಿಡಿ ವೆಬ್​ಸೈಟ್​ನಲ್ಲಿ ಪ್ರಕಟಿಸಲಾಗಿದೆ. ಈ 10 ಸಿನಿಮಾಗಳಲ್ಲಿ ಬರೋಬ್ಬರಿ 7 ದಕ್ಷಿಣ ಭಾರತದ ಸಿನಿಮಾಗಳಾಗಿವೆ.  

Written by - Chetana Devarmani | Last Updated : Jun 13, 2022, 12:55 PM IST
  • 2022 ರಲ್ಲಿ ಭಾರತೀಯ ಚಿತ್ರರಂಗದ ಅತಿದೊಡ್ಡ ಬಾಕ್ಸ್ ಆಫೀಸ್ ಹಿಟ್‌ಗಳನ್ನು ಒಳಗೊಂಡಿರುವ ಚಿತ್ರಗಳ ಪಟ್ಟಿ ಬಿಡುಗಡೆಯಾಗಿದೆ.
  • ದಕ್ಷಿಣ ಭಾರತದ ಚಲನಚಿತ್ರ ಉದ್ಯಮಗಳಿಂದ ಹೆಚ್ಚು ಗಳಿಕೆ ಮಾಡಿದ ಎಲ್ಲಾ ಚಿತ್ರಗಳ ಬಾಕ್ಸ್ ಆಫೀಸ್ ಸಂಗತಿಗಳು ಇಲ್ಲಿವೆ
  • 2022ರಲ್ಲಿ ಈವರೆಗೆ ಅತಿ ಹೆಚ್ಚು ಕಲೆಕ್ಷನ್​ ಮಾಡಿದ ಟಾಪ್​ 10 ಭಾರತೀಯ ಸಿನಿಮಾಗಳ ಪಟ್ಟಿಯನ್ನು ಐಎಂಬಿಡಿ ವೆಬ್​ಸೈಟ್​ನಲ್ಲಿ ಪ್ರಕಟಿಸಲಾಗಿದೆ
2022ರ ಟಾಪ್​ 10 ಚಿತ್ರಗಳ ಪಟ್ಟಿ ರಿಲೀಸ್‌: ನಂ.01​ ಪಟ್ಟ ಯಾರಿಗೆ? KGF 2 ಸ್ಥಾನ ಎಷ್ಟು? title=
ಕೆಜಿಎಫ್ 2

HIGHEST GROSSING INDIAN FILMS: ಅತ್ಯಂತ ಯಶಸ್ವಿ ಭಾರತೀಯ ಚಲನಚಿತ್ರಗಳು ಮತ್ತು 2022 ರಲ್ಲಿ ಭಾರತೀಯ ಚಿತ್ರರಂಗದ ಅತಿದೊಡ್ಡ ಬಾಕ್ಸ್ ಆಫೀಸ್ ಹಿಟ್‌ಗಳನ್ನು ಒಳಗೊಂಡಿರುವ ಚಿತ್ರಗಳ ಪಟ್ಟಿ ಬಿಡುಗಡೆಯಾಗಿದೆ. ಬಾಲಿವುಡ್ (ಹಿಂದಿ ಸಿನಿಮಾ), ಕಾಲಿವುಡ್ (ತಮಿಳು ಸಿನಿಮಾ), ಟಾಲಿವುಡ್ (ತೆಲುಗು ಸಿನಿಮಾ), ಮಾಲಿವುಡ್ (ಮಲಯಾಳಂ ಸಿನಿಮಾ) ಅಥವಾ ಸ್ಯಾಂಡಲ್‌ವುಡ್ (ಕನ್ನಡ ಸಿನಿಮಾ) ನಂತಹ ದೊಡ್ಡ ದಕ್ಷಿಣ ಭಾರತದ ಚಲನಚಿತ್ರ ಉದ್ಯಮಗಳಿಂದ ಹೆಚ್ಚು ಗಳಿಕೆ ಮಾಡಿದ ಎಲ್ಲಾ ಚಿತ್ರಗಳ ಬಾಕ್ಸ್ ಆಫೀಸ್ ಸಂಗತಿಗಳು ಇಲ್ಲಿವೆ. 

ಇದನ್ನೂ ಓದಿ: Drugs Case: ಬೆಂಗಳೂರಿನಲ್ಲಿ ಬಾಲಿವುಡ್​ ಸ್ಟಾರ್ ನಟನ ಪುತ್ರ ಅರೆಸ್ಟ್‌!

ಇಂಡಿಯನ್​ ಫಿಲ್ಮ್​ ಇಂಡಸ್ಟ್ರಿ ಎಂದರೆ ಅದರಲ್ಲಿ ಎಲ್ಲ ಭಾಷೆಯ ಸಿನಿಮಾಗಳೂ ಇರುತ್ತವೆ. ಅದರಲ್ಲೂ ಸೌತ್​ ಇಂಡಿಯನ್​ ಸಿನಿಮಾಗಳು ಇತ್ತೀಚೆಗೆ ಮಾಡುತ್ತಿರುವ ಸದ್ದಿಗೆ ಬಾಲಿವುಡ್‌ ಜನ ಬೆಚ್ಚಿಬಿದ್ದಿದ್ದಾರೆ. ಕೆಜಿಎಫ್ 2, ಆರ್​ಆರ್​ಆರ್ ಮುಂತಾದ ಸಿನಿಮಾಗಳು ಗಲ್ಲಾಪೆಟ್ಟಿಗೆಯಲ್ಲಿ ಭರ್ಜರಿ ಯಶಸ್ಸು ಕಂಡಿವೆ. 2022ರಲ್ಲಿ ಈವರೆಗೆ ಅತಿ ಹೆಚ್ಚು ಕಲೆಕ್ಷನ್​ ಮಾಡಿದ ಟಾಪ್​ 10 ಭಾರತೀಯ ಸಿನಿಮಾಗಳ ಪಟ್ಟಿಯನ್ನು ಐಎಂಬಿಡಿ ವೆಬ್​ಸೈಟ್​ನಲ್ಲಿ ಪ್ರಕಟಿಸಲಾಗಿದೆ. ಈ 10 ಸಿನಿಮಾಗಳಲ್ಲಿ ಬರೋಬ್ಬರಿ 7 ದಕ್ಷಿಣ ಭಾರತದ ಸಿನಿಮಾಗಳಾಗಿವೆ.   

ಯಶ್ ಅಭಿನಯದ, ಪ್ರಶಾಂತ್​ ನೀಲ್ ನಿರ್ದೇಶನದ ಕೆಜಿಎಫ್ 2 ಸಿನಿಮಾ ವಿಶ್ವಾದ್ಯಂತ ಅಬ್ಬರಿಸಿದೆ. ಜಾಗತಿಕ ಬಾಕ್ಸ್​ ಆಫೀಸ್​ನಲ್ಲಿ 1228.3 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಈ ಸಿನಿಮಾವನ್ನು ನಿರ್ಮಾಣ ಹೊಂಬಾಳೆ ಫಿಲ್ಮ್ಸ್ ಮಾಡಿದೆ. ರಾಜಮೌಳಿ ನಿರ್ದೇಶನದ ಆರ್​ಆರ್​ಆರ್​ ಸಿನಿಮಾ 2ನೇ ಸ್ಥಾನದಲ್ಲಿದೆ. ವಿಶ್ವಾದ್ಯಂತ ಬಾಕ್ಸ್​ ಆಫೀಸ್​ನಲ್ಲಿ 1131.1 ಕೋಟಿ ರೂಪಾಯಿ ಗಳಿಸಿದೆ. ವಿವೇಕ್​ ಅಗ್ನಿಹೋತ್ರಿ ನಿರ್ದೇಶನದ ದಿ ಕಾಶ್ಮೀರ್​ ಫೈಲ್ಸ್ ಸಿನಿಮಾ ವಿಶ್ವಾದ್ಯಂತ 337.6 ಕೋಟಿ ರೂಪಾಯಿ ಗಳಿಕೆ ಮಾಡಿದ್ದು, 3ನೇ ಸ್ಥಾನದಲ್ಲಿದೆ. ಕಮಲ್​ ಹಾಸನ್​ ನಟನೆಯ ವಿಕ್ರಮ್​, ಸದ್ಯ 4ನೇ ಸ್ಥಾನದಲ್ಲಿದ್ದು, ಈ ಚಿತ್ರ 290.2 ಕೋಟಿ ರೂಪಾಯಿ ಕಲೆಕ್ಷನ್​ ಮಾಡಿದೆ. 

ಇದನ್ನೂ ಓದಿ: Watch video: ಕಣ್ಣೀರಿಡುತ್ತಾ ಮಾಜಿ ಪತಿ ವಿರುದ್ಧ ಪೋಲಿಸ್ ದೂರು ನೀಡಿದ ರಾಖಿ ಸಾವಂತ್..!

ಭೂಲ್​ ಭುಲಯ್ಯ 2 ಚಿತ್ರದಲ್ಲಿ ಕಾರ್ತಿಕ್‌ ಆರ್ಯನ್‌ ನಟಿಸಿದ್ದು, 230.8 ಕೋಟಿ ಗಳಿಸಿದೆ. ಬೀಸ್ಟ್​ 227.3 ಕೋಟಿ, ಗಂಗೂಬಾಯಿ ಕಾಠಿಯಾವಾಡಿ 194.8 ಕೋಟಿ, ಸರ್ಕಾರು ವಾರಿ ಪಾಟ 191.8 ಕೋಟಿ, ವಲಿಮೈ 163.2 ಕೋಟಿ, ಭೀಮ್ಲಾ ನಾಯಕ್​ 161.3 ಕೋಟಿ ಗಳಿಸಿದ್ದು, ಕ್ರಮವಾಗಿ 5 ರಿಂದ 10ನೇ ಸ್ಥಾನ ಪಡೆದುಕೊಂಡಿವೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News