ಇಲ್ಲಿದೆ ನೋಡಿ ಕಬ್ಜ ಚಿತ್ರದಲ್ಲಿ ನಟಿಸಿರುವ ಕಲಾವಿದರ ಲಿಸ್ಟ್‌

ಕಬ್ಜ ರಿಯಲ್ ಸ್ಟಾರ್ ಉಪೇಂದ್ರ ಹಾಗೂ ಆರ್ ಚಂದ್ರು ಕಾಂಬಿನೇಶನ್‌ನಲ್ಲಿ ಮೂಡಿ ಬರುತ್ತಿರುವ ಮೂರನೇ ಚಿತ್ರ. ಈ ಹಿಂದೆ ಕೇವಲ ಕನ್ನಡದಲ್ಲಿ ಮಾತ್ರ ಚಿತ್ರಗಳನ್ನು ಮಾಡಿದ್ದ ಈ ಜೋಡಿ ಈ ಬಾರಿ ದೊಡ್ಡ ಮಟ್ಟದ ಯೋಜನೆಯೊಂದಿಗೆ ಅಖಾಡಕ್ಕೆ ಇಳಿದಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಚಿತ್ರವನ್ನು ತಯಾರಿಸಲಾಗಿದ್ದು, ರಿಚ್ ಆಗಿಯೇ ಚಿತ್ರವನ್ನು ನಿರ್ಮಿಸಲಾಗಿದೆ.  

Written by - Zee Kannada News Desk | Last Updated : Mar 6, 2023, 02:33 PM IST
  • ಸಿನಿ ರಸಿಕರಿಗೆ ಗೂಸ್‌ಬಂಪ್ಸ್ ನೀಡುವುದರಲ್ಲಿ ಯಶಸ್ವಿಯಾಗಿದೆ.
  • ಸಿನಿ ರಸಿಕರು ಟ್ರೈಲರ್ ಇನ್ನೆಷ್ಟು ಚೆನ್ನಾಗಿರಬಹುದು ಎಂಬುದನ್ನು ಕಾಯುತ್ತಿದ್ದರು.
  • ಚಿತ್ರತಂಡ ಚಿತ್ರದಲ್ಲಿ ಅಭಿನಯಿಸಿರುವ ಕಲಾವಿದರ ಸಂಪೂರ್ಣ ಪಟ್ಟಿಯನ್ನು ಅಧಿಕೃತವಾಗಿ ಬಿಚ್ಚಿಟ್ಟಿಲ್ಲ.
ಇಲ್ಲಿದೆ ನೋಡಿ ಕಬ್ಜ ಚಿತ್ರದಲ್ಲಿ ನಟಿಸಿರುವ ಕಲಾವಿದರ ಲಿಸ್ಟ್‌  title=

ಕಳೆದ ವರ್ಷ ಟೀಸರ್ ಬಿಡುಗಡೆ ಮಾಡುವ ಮೂಲಕ ಹೈಪ್ ಹುಟ್ಟುಹಾಕಿದ್ದ ನಿರ್ದೇಶಕ ಆರ್ ಚಂದ್ರು ಕಳೆದ ಕೆಲ ದಿನಗಳಿಂದ ಚಿತ್ರದ ಹಾಡುಗಳನ್ನು ಒಂದೊಂದಾಗಿ ಬಿಡುಗಡೆ ಮಾಡಿ ನಿರೀಕ್ಷೆಯನ್ನು ಡಬಲ್ ಮಾಡಿದ್ದರು. ಹಾಡುಗಳೂ ಸಹ ನಿರೀಕ್ಷೆಗೂ ಮೀರಿ ರಿಚ್ ಆಗಿ ಮೂಡಿ ಬಂದಿರುವುದನ್ನು ಕಂಡ ಸಿನಿ ರಸಿಕರು ಟ್ರೈಲರ್ ಇನ್ನೆಷ್ಟು ಚೆನ್ನಾಗಿರಬಹುದು ಎಂಬುದನ್ನು ಕಾಯುತ್ತಿದ್ದರು.

ಮಾರ್ಚ್ 4 ರಂದು ಚಿತ್ರದ ಟ್ರೈಲರ್ ಬಿಡುಗಡೆ ಮಾಡುವುದಾಗಿ ಘೋಷಿಸಿದ್ದ ಚಿತ್ರತಂಡ ತುಸು ತಡವಾಗಿ ಟ್ರೈಲರ್ ಅನ್ನು ಬಿಡುಗಡೆಗೊಳಿಸಿತು. ಇನ್ನು ತಡವಾಗಿ ಬಂದರೂ ಟ್ರೈಲರ್ ತನ್ನ ಕೆಲಸವನ್ನು ಮಾಡಿ ಮುಗಿಸಿದೆ. ಸಿನಿ ರಸಿಕರಿಗೆ ಗೂಸ್‌ಬಂಪ್ಸ್ ನೀಡುವುದರಲ್ಲಿ ಯಶಸ್ವಿಯಾಗಿದೆ. ಇನ್ನು ಈ ಟ್ರೈಲರ್‌ನಲ್ಲಿ ವಿವಿಧ ಭಾಷೆಯ ಹಲವಾರು ಕಲಾವಿದರ ದಂಡೇ ಇರುವುದನ್ನು ಕಂಡು ಚಿತ್ರ ದೊಡ್ಡ ಮಟ್ಟದ ಕಥೆಯನ್ನೇ ಹೊಂದಿರಲಿದೆ ಎಂಬುದನ್ನು ಸಿನಿ ರಸಿಕರು ಊಹಿಸಿದ್ದಾರೆ.

ಇದನ್ನೂ ಓದಿ-ಬಾಲಿವುಡ್‌ ಚಿತ್ರದಲ್ಲಿ ಸ್ಯಾಂಡಲ್‌ವುಡ್‌ SRK...! 'ಜವಾನ್' ಚಿತ್ರದಲ್ಲಿ ಶಿವಣ್ಣ? 

ಟ್ರೈಲರ್ ಬಿಡುಗಡೆಯಾದ ಬಳಿಕ ಚಿತ್ರದಲ್ಲಿ ಯಾವೆಲ್ಲಾ ಕಲಾವಿದರು ಬಣ್ಣ ಹಚ್ಚಿದ್ದಾರೆ ಎಂಬ ಪಟ್ಟಿಯನ್ನು ಸಿನಿ ರಸಿಕರು ಕಲೆ ಹಾಕುತ್ತಿದ್ದು, ಪಟ್ಟಿ ದೊಡ್ಡ ಮಟ್ಟದಲ್ಲಿಯೇ ಬೆಳೆದಿದೆ. ಚಿತ್ರತಂಡ ಚಿತ್ರದಲ್ಲಿ ಅಭಿನಯಿಸಿರುವ ಕಲಾವಿದರ ಸಂಪೂರ್ಣ ಪಟ್ಟಿಯನ್ನು ಅಧಿಕೃತವಾಗಿ ಬಿಚ್ಚಿಟ್ಟಿಲ್ಲ. ಟ್ರೈಲರ್ ಬಿಡುಗಡೆಯಾಗಲು ಕೆಲವು ಗಂಟೆಗಳು ಬಾಕಿ ಇರುವಾಗ ಚಿತ್ರದಲ್ಲಿ ಸ್ಯಾಂಡಲ್‌ವುಡ್ ಕಿಂಗ್ ಶಿವ ರಾಜ್‌ಕುಮಾರ್ ಸಹ ಇದ್ದಾರೆ ಎಂಬ ಮಾಹಿತಿಯನ್ನು ನೀಡಿದ ಆರ್ ಚಂದ್ರು ಸರ್‌ಪ್ರೈಸ್ ನೀಡಿದ್ದರು. ಅಲ್ಲದೇ ಈ ಹಿಂದೆ ಸಂದರ್ಶವೊಂದರಲ್ಲಿ ಚಿತ್ರದಲ್ಲಿ ಇನ್ನೂ ಹಲವು ಸರ್‌ಪ್ರೈಸ್‌ಗಳಿವೆ, ಇವರೆಲ್ಲಾ ಸಿನಿಮಾದಲ್ಲಿದ್ದರಾ ಎನಿಸುತ್ತದೆ ಎಂದು ಚಂದ್ರು ಹೇಳಿಕೆ ನೀಡಿದ್ದರು. ಸದ್ಯ ಚಿತ್ರದ ಟ್ರೈಲರ್‌ನಲ್ಲಿರುವ ಕಲಾವಿದರ ಪಟ್ಟಿ ಈ ಕೆಳಕಂಡಂತಿದ್ದು, ಸ್ಟಾರ್ ಕಾಸ್ಟ್ ದೊಡ್ಡ ಮಟ್ಟದ್ಲಲೇ ಇದೆ.

ನಾಯಕನಾಗಿ ಉಪೇಂದ್ರ, ನಾಯಕಿಯಾಗಿ ಶ್ರೇಯಾ ಶರಣ್ ತಾರಾಗಣದಲ್ಲಿದ್ದರೆ, ಜತೆಗೆ ಕಿಚ್ಚ ಸುದೀಪ್ ಹಾಗೂ ಶಿವ ರಾಜ್‌ಕುಮಾರ್ ಸಹ ಪ್ರಮುಖ ಪಾತ್ರಗಳನ್ನು ನಿರ್ವಹಿಸಲಿದ್ದಾರೆ. ಇನ್ನುಳಿದಂತೆ ಮುರಳಿ ಶರ್ಮಾ, ನವಾಬ್ ಶಾ, ಕೋಟ ಶ್ರೀನಿವಾಸ್ ರಾವ್, ಪೊಸಾನಿ ಕೃಷ್ಣ ಮುರಳಿ, ಸುಧಾ, ಕಬೀರ್ ದುಹಾನ್ ಸಿಂಗ್, ಜಾನ್ ಕೊಕ್ಕೆನ್, ದೇವ್ ಗಿಲ್, ಕಾಮರಾಜನ್, ದನೀಶ್ ಅಖ್ತರ್, ಲಕ್ಕಿ ಲಕ್ಷ್ಮಣ್, ಪ್ರಮೋದ್ ಶೆಟ್ಟಿ, ತಾಹಾ ಶಾ, ಅವಿನಾಶ್, ಸುನಿಲ್ ಪಟ್ನಾಯಕ್, ಅನೂಪ್, ಬಿ ಸುರೇಶ್, ಅಶ್ವತ್ಥ್ ನೀನಾಸಂ, ಸಂದೀಪ್ ಮಲಾನಿ, ಮಾಸ್ಟರ್ ಚಿರು ಹಾಗೂ ಮಾಸ್ಟರ್ ಜ್ಞಾನ್ ಕಬ್ಜ ಚಿತ್ರದ ಭಾಗವಾಗಿದ್ದಾರೆ.

ಇದನ್ನೂ ಓದಿ-Jr NTR:ಈ ನಟಿಯ ಹುಟ್ಟು ಹಬ್ಬಕ್ಕೆ ಜೂನಿಯರ್ ಎನ್‌ಟಿಆರ್ ಕಡೆಯಿಂದ ಗೀಫ್ಟ್! 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News