Upendra Birthday ‘ಕಬ್ಜ’ ಟೀಸರ್ ಜೊತೆ ರಿಯಲ್ ಸ್ಟಾರ್ ಉಪೇಂದ್ರಗೆ ಹುಟ್ಟುಹಬ್ಬದ ಸಂಭ್ರಮ

ಶನಿವಾರವಷ್ಟೇ ಉಪ್ಪಿ ಮತ್ತು ಕಿಚ್ಚ ಸುದೀಪ್ ನಟನೆಯ, ಆರ್.ಚಂದ್ರು ನಿರ್ದೇಶನದ ಪ್ಯಾನ್ ಇಂಡಿಯಾ ಸಿನಿಮಾ ‘ಕಬ್ಜ’ದ ಟೀಸರ್ ಬಿಡುಗಡೆಯಾಗಿ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ.

Written by - YASHODHA POOJARI | Edited by - Puttaraj K Alur | Last Updated : Sep 18, 2022, 01:05 PM IST
  • 54ನೇ ವಸಂತಕ್ಕೆ ಕಾಲಿಟ್ಟ ಸ್ಯಾಂಡಲ್‍ವುಡ್‍ನ ರಿಯಲ್ ಸ್ಟಾರ್ ಉಪೇಂದ್ರ
  • ಹುಟ್ಟುಹಬ್ಬದ ಸಂಭ್ರಮದಲ್ಲಿರುವ ‘ಬುದ್ಧಿವಂತ’ನಿಗೆ ಶುಭಾಶಯಗಳ ಮಹಾಫುರ
  • ಸಖತ್ ಹವಾ ಸೃಷ್ಟಿಸಿರುವ ಪ್ಯಾನ್ ಇಂಡಿಯಾ ಸಿನಿಮಾ ‘ಕಬ್ಜ’ದ ಟೀಸರ್
Upendra Birthday ‘ಕಬ್ಜ’ ಟೀಸರ್ ಜೊತೆ ರಿಯಲ್ ಸ್ಟಾರ್ ಉಪೇಂದ್ರಗೆ ಹುಟ್ಟುಹಬ್ಬದ ಸಂಭ್ರಮ title=
Happy birthday Upendra

ಬೆಂಗಳೂರು: ಉಪ್ಪಿ.. ಉಪೇಂದ್ರ ಇವ್ರು ಡಿಫರೆಂಟ್‍ನಲ್ಲಿ ಡಿಫರೆಂಟ್ ಹುಡುಕೋ ಡೈರೆಕ್ಟರ್.. ನಟನೆಯಲ್ಲೂ, ಡೈಲಾಗ್ ಹೊಡೆಯೋದ್ರಲ್ಲೂ, ವಿಭಿನ್ನ ಶೈಲಿಯ ಉಡುಗೆ-ತೊಡುಗೆ ಹಾಕೋದ್ರಲ್ಲಿ ಯಾವತ್ತಿಗೂ ಎಲ್ಲರಿಗಿಂತಲೂ ವಿಭಿನ್ನವೇ. ಉಪ್ಪಿ ಸಿನಿಮಾ ಬರುತ್ತಿದೆ ಅಂದ್ರೆ ಸಾಕು ನಿದ್ದೆ ಬಿಟ್ಟು ಕಾಯೋ ಅಭಿಮಾನಿಗಳಿದ್ದಾರೆ.

ಉಪೇಂದ್ರ ಅವರು ಸ್ಯಾಂಡಲ್‍ವುಡ್‍ನ ಸೂಪರ್ ಸ್ಟಾರ್, ರಿಯಲ್ ಸ್ಟಾರ್, ಬುದ್ದಿವಂತ, ಅಭಿಮಾನಿಗಳ ಚಕ್ರವರ್ತಿ, ಬಾಕ್ಸ್‍ ಆಫೀಸ್‍ ಬ್ರಹ್ಮ, ಸ್ಯಾಂಡಲ್‍ವುಡ್ ಮಾಸ್ಟರ್. ‘ಉಪ್ಪಿ’ ಮಧ್ಯಮ ವರ್ಗದ ಬ್ರಾಹ್ಮಣ ಕುಟುಂಬದಲ್ಲಿ 1968ರ ಸೆಪ್ಟೆಂಬರ್ 18ರಂದು ಕುಂದಾಪುರದ ಸಮೀಪದಲ್ಲಿರುವ ಕೋಟೇಶ್ವರದಲ್ಲಿ ಜನಿಸಿದರು. ಇವರು ತಮ್ಮ ಮತ್ತು ಇತರರ ಅನೇಕ ಚಿತ್ರಗಳಿಗೆ ಹಾಡುಗಳನ್ನು ರಚಿಸಿದ್ದಾರೆ.

1992ರಲ್ಲಿ ಬಿಡುಗಡೆಯಾದ ‘ತರ್ಲೆ ನನ್ಮಗ’ ಚಿತ್ರದ ನಿರ್ದೇಶಕರಾಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಇದಕ್ಕೂ ಮುಂಚೆ ಕನ್ನಡ ಚಿತ್ರರಂಗದ ಖ್ಯಾತ ನಟ, ನಿರ್ದೇಶಕ ದಿವಗಂತ ಕಾಶೀನಾಥ್ ಜೊತೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದರು. 1998ರಲ್ಲಿ ಬಿಡುಗಡೆಯಾದ 'A' ಉಪ್ಪಿ ನಾಯಕ ನಟರಾದ ಮೊದಲ ಚಿತ್ರ. ನಂತರ ಸಾಲು ಸಾಲು ಸಿನಿಮಾಗಳಲ್ಲಿ ನಟನೆ ಮಾಡೋ ಮೂಲಕ ಅಭಿಮಾನಿಗಳ ಮನಸ್ಸಲ್ಲಿ ಶಾಶ್ವತವಾಗಿ ಉಳಿದುಬಿಟ್ಟಿದ್ದಾರೆ.

ಇದನ್ನೂ ಓದಿ: Vishnuvardhan Birthday: ಸಾಹಸ ಸಿಂಹ ಡಾ.ವಿಷ್ಣುವರ್ಧನ್ 72ನೇ ಹುಟ್ಟುಹಬ್ಬ

ಸೆಪ್ಟೆಂಬರ್ 18 ಅಂದರೆ ಇಂದು ಉಪೇಂದ್ರ 54ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಶನಿವಾರವಷ್ಟೇ ಉಪ್ಪಿ ಮತ್ತು ಕಿಚ್ಚ ಸುದೀಪ್ ನಟನೆಯ, ಆರ್.ಚಂದ್ರು ನಿರ್ದೇಶನದ ಪ್ಯಾನ್ ಇಂಡಿಯಾ ಸಿನಿಮಾ ‘ಕಬ್ಜ’ದ ಟೀಸರ್ ಬಿಡುಗಡೆಯಾಗಿ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ.

ಹುಟ್ಟುಹಬ್ಬದ ಸಂಭ್ರಮದಲ್ಲಿರವು ಉಪ್ಪಿ ತಮ್ಮ ಜನ್ಮದಿನವನ್ನು ಸರಳವಾಗಿ ಆಚರಿಸಿಕೊಂಡಿದ್ದಾರೆ. ‘ಬುದ್ಧಿವಂತ’ನ ಹುಟ್ಟುಹಬ್ಬದ ಪ್ರಯುಕ್ತ ಅಭಿಮಾನಿಗಳು ವಿಶೇಷ ಕಾರ್ಯಕ್ರಮ ಹಮ್ಮಿಕೊಂಡು ಹಬ್ಬದಂತೆ ಆಚರಿಸಿದ್ದಾರೆ. ‘ಕಬ್ಜ’ ಸಿನಿಮಾದ ಟೀಸರ್ ನೋಡಿದ ಅಭಿಮಾನಿಗಳು ಖುಷಿಯಲ್ಲಿ ತೇಲಾಡಿದ್ದಾರೆ. 

ಅಭಿಮಾನಿಗಳಿಗೆ ಉಪ್ಪಿ ಹುಟ್ಟುಹಬ್ಬದ ಪ್ರಯುಕ್ತ ವಿಶೇಷ ಮನವಿ ಮಾಡಿಕೊಂಡಿದ್ದರು. ತಮ್ಮ ಜನ್ಮದಿನಕ್ಕೆ ಅಭಿಮಾನಿಗಳು ಕೇಕ್ ಕಟಿಂಗ್, ಹಾರ, ಬೊಕ್ಕೆ ಮತ್ತು ಗಿಫ್ಟ್ ಇತ್ಯಾದಿಗಳಿಗೆ ಖರ್ಚು ಮಾಡಬೇಡಿ. ತಮ್ಮ ಜೊತೆಗೆ ಬೇಕಾದರೆ ಫೋಟೋ ತೆಗೆಸಿಕೊಳ್ಳಲು ಅವಕಾಶವಿರುತ್ತದೆ. ದಯವಿಟ್ಟು ಸಹಕರಿಸಿ’ ಎಂದು ಮನವಿ ಮಾಡಿಕೊಂಡಿದ್ದರು. ರಿಯಲ್ ಸ್ಟಾರ್ ಉಪ್ಪಿಗೆ ನೀವೂ ಸಹ ಹ್ಯಾಪಿ ಬರ್ತ್‍ ಡೇ ಹೇಳಿ ವಿಶ್ ಮಾಡಿ…

ಇದನ್ನೂ ಓದಿ: Bigg Boss Kannada Season 9 : ಬಿಗ್ ಬಾಸ್ ಸೀಸನ್‌ 9 ನಲ್ಲಿ ಯಾರೆಲ್ಲ ಇರಲಿದ್ದಾರೆ?

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News