Prashanth Neel Birthday : ಭಾರತೀಯ ಸಿನಿ ಇಂಡಸ್ಟ್ರಿಯಲ್ಲಿ ಕೆಜಿಎಫ್ 1 ಮತ್ತು ಕೆಜಿಎಫ್ 2 ಮೂಲಕ ಹೊಸ ಅಧ್ಯಾಯ ಬರೆದ ಡೈರೆಕ್ಟರ್ ಪ್ರಶಾಂತ್ ನೀಲ್ಗೆ ಇಂದು ಜನ್ಮದಿನದ ಸಂಭ್ರಮ. ಪ್ರಶಾಂತ್ ನೀಲ್ಗೆ ಇಂದು 43ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಅನೇಕ ಹಿಟ್ ಸಿನಿಮಾಗಳನ್ನು ನೀಡಿರುವ ಪ್ರಶಾಂತ್ ನೀಲ್, ಕೆಜಿಎಫ್ 1 ಮತ್ತು ಕೆಜಿಎಫ್ 2 ಮೂಲಕ ಇಡೀ ವಿಶ್ವವೇ ಸ್ಯಾಂಡಲ್ವುಡ್ನತ್ತ ತಿರುಗಿ ನೋಡುವಂತೆ ಮಾಡಿದರು. ಈ ಸಿನಿಮಾಗಳು ಗಲ್ಲಾಪೆಟ್ಟಿಗೆಯಲ್ಲಿ ಈ ಎರಡೂ ಸಿನಿಮಾಗಳು ಹೊಸ ದಾಖಲೆಗಳನ್ನೇ ಬರೆದಿವೆ. ಅವರ ಹುಟ್ಟುಹಬ್ಬದ ಸಂದರ್ಭದಲ್ಲಿ ಕೆಜಿಎಫ್ ಸರಣಿ ಮುರಿದ ಬಾಕ್ಸ್ ಆಫೀಸ್ ದಾಖಲೆಗಳು ಯಾವವು ಎಂದು ತಿಳಿಯೋಣ.
ಇದನ್ನೂ ಓದಿ: ‘ಬಾಹುಬಲಿ’ ಮಾಡಲು ಎಸ್ ಎಸ್ ರಾಜಮೌಳಿ ಇಷ್ಟು ದೊಡ್ಡ ಬಡ್ಡಿಗೆ 400 ಕೋಟಿ ಸಾಲ ಮಾಡಿದ್ದರು!
ಕೆಜಿಎಫ್ ಚಾಪ್ಟರ್ 2 ಸಾರ್ವಕಾಲಿಕ ಅತಿ ಹೆಚ್ಚು ಗಳಿಕೆ ಮಾಡಿದ ಎರಡನೇ ಕನ್ನಡ ಚಿತ್ರವಾಗಿದೆ. ಸಾರ್ವಕಾಲಿಕ ಅತಿ ಹೆಚ್ಚು ಗಳಿಕೆಯ ನಾಲ್ಕನೇ ಭಾರತೀಯ ಸಿನಿಮಾ ಎಂಬ ಹೆಗ್ಗಳಿಕೆ ಪಡೆದಿದೆ. ಕನ್ನಡ ಚಿತ್ರರಂಗಕ್ಕೆ ಇದೊಂದು ಹೆಗ್ಗುರುತು. ಇದು ಕನ್ನಡ ಚಿತ್ರರಂಗವನ್ನು ಬೇರೆಯದ್ದೇ ಹಂತಕ್ಕೆ ಕೊಂಡೊಯ್ಯಿತು. ಊಹಿಸಿದ್ದಕ್ಕಿಂತ ಹೆಚ್ಚಿನ ಮಟ್ಟದಲ್ಲಿ ಕೆಜಿಎಫ್ ಚಾಪ್ಟರ್ 2 ಯಶಸ್ಸು ಪಡೆಯಿತು.
ಕೆಜಿಎಫ್ 2 ರ ಯಶಸ್ಸಿಗೆ ಹಲವಾರು ಅಂಶಗಳ ಕಾರಣವೆಂದು ಹೇಳಬಹುದು. ಪ್ರಶಾಂತ್ ನೀಲ್ ಅವರ ಬಲವಾದ ಕಥೆ ಮತ್ತು ಚಿತ್ರಕಥೆ ಈ ಚಿತ್ರಕ್ಕೆ ಭದ್ರ ಬುನಾದಿಯಂತಿವೆ. ಯಶ್, ಸಂಜಯ್ ದತ್, ರವೀನಾ ಟಂಡನ್ ಮತ್ತು ಶ್ರೀನಿಧಿ ಶೆಟ್ಟಿ ಸೇರಿದಂತೆ ಅತ್ಯುತ್ತಮ ತಾರಾಗಣ ಈ ಸಿನಿಮಾದಲ್ಲಿದ್ದು, ಇದು ಕೂಡ ಜನರನ್ನು ಚಿತ್ರಮಂದಿರಕ್ಕೆ ಕರೆತರುವಲ್ಲಿ ಯಶಸ್ವಿಯಾಯಿತು. ಇನ್ನೂ ಭುವನ್ ಗೌಡ ಅವರ ಕ್ಯಾಮರಾ ಕಣ್ಣಲ್ಲಿ ಸೆರೆಯಾದ ಅದ್ಭುತ ದೃಶ್ಯಗಳು ನೋಡುಗರನ್ನು ಮೋಡಿ ಮಾಡುತ್ತವೆ. ಭಾರತದಾದ್ಯಂತದ ಪ್ರೇಕ್ಷಕರನ್ನು ಚಿತ್ರದ ಮಾಸ್ ಲುಕ್, ಡೈಲಾಗ್ಗಳು ಆಕರ್ಷಿಸಿವೆ.
ಇದನ್ನೂ ಓದಿ: ಗರ್ಭಿಣಿ ಇಲಿಯಾನಾ ಎಂಗೇಜ್ಮೆಂಟ್ ಆಗಿದ್ದು ಯಾರ ಜೊತೆ!? ಫೋಟೋದಲ್ಲಿರೋದು ಮಗುವಿನ ತಂದೆನಾ?
ಶ್ರೀಮುರಳಿ ಅಭಿನಯದ ಉಗ್ರಂ ಸಿನಿಮಾ ಮೂಲಕ ಪ್ರಶಾಂತ್ ನೀಲ್ ಡೈರೆಕ್ಟರ್ ಜರ್ನಿಯನ್ನು ಆರಂಭಿಸಿದರು. ಆ ಚಿತ್ರದ ಮೂಲಕ ದೊಡ್ಡ ಯಶಸ್ಸು ಕಂಡರು. ಆ ಬಳಿಕ ಕೆಜಿಎಫ್ ಸರಣಿಯಿಂದಾಗಿ ಇಡೀ ದೇಶವೇ ಪ್ರಶಾಂತ್ ನೀಲ್ ಅವರನ್ನು ಕೊಂಡಾಡಿತು. ಸದ್ಯ ಪ್ರಶಾಂತ್ ನೀಲ್ ತೆಲುಗು ಸ್ಟಾರ್ ನಟ ಪ್ರಭಾಸ್ ಅವರೊಂದಿಗೆ ಸಲಾರ್ ಚಿತ್ರದ ಶೂಟಿಂಗ್ನಲ್ಲಿ ಬ್ಯುಸಿಯಾಗಿದ್ದಾರೆ. ಅಲ್ಲದೇ ಶ್ರೀಮುರಳಿ ಜೊತೆ ಮತ್ತೊಂದು ಸಿನಿಮಾ ಮಾಡಲು ನೀಲ್ ಕಥೆ ಸಿದ್ಧಪಡಿಸಿದ್ದು, ಬಘೀರ ಎಂದು ಸಿನಿಮಾಗೆ ಹೆಸರಿಟ್ಟಿದ್ದಾರೆ. ಈ ಚಿತ್ರಕ್ಕೆ ನೀಲ್ ಕೇವಲ ಕಥೆ ಬರೆದಿದ್ದು, ಡಾ. ಸೂರಿ ನಿರ್ದೇಶಿಸಲಿದ್ದಾರೆ.
ಇದನ್ನೂ ಓದಿ: ತಮಿಳಿನ ‘ಜಂಟಲ್ ಮ್ಯಾನ್ 2’ ಚಿತ್ರಕ್ಕೆ ಆಸ್ಕರ್ ಪ್ರಶಸ್ತಿ ವಿಜೇತ ಕೀರವಾಣಿ ಸಂಗೀತ ನಿರ್ದೇಶನ
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.