Hanuman OTT release: ಹನುಮಾನ್ ಒಟಿಟಿ ರಿಲೀಸ್.. ಎಲ್ಲಿ.. ಯಾವಾಗ ಗೊತ್ತಾ?

Hanuman movie OTT: ಹನುಮಾನ್ ಬಾಕ್ಸ್ ಆಫೀಸ್ ನಲ್ಲಿ ಸಂಚಲನ ಮೂಡಿಸಿದ ಸಿನಿಮಾ. ಬಾಕ್ಸಾಫೀಸ್‌ನಲ್ಲಿ ಈ ಸಿನಿಮಾ ಸ್ಟಾರ್ ಹೀರೋಗಳ ಚಿತ್ರವನ್ನೇ ಹಿಂದಿಕ್ಕಿದೆ. 

Written by - Chetana Devarmani | Last Updated : Jan 29, 2024, 04:03 PM IST
  • ಹನುಮಾನ್ ಬಾಕ್ಸ್ ಆಫೀಸ್ ಕಲೆಕ್ಷನ್‌
  • ಹನುಮಾನ್ ಒಟಿಟಿ ದಿನಾಂಕ
  • ಹನುಮಾನ್ ಸಿನಿಮಾ ಒಟಿಟಿ ರಿಲೀಸ್‌
Hanuman OTT release: ಹನುಮಾನ್ ಒಟಿಟಿ ರಿಲೀಸ್.. ಎಲ್ಲಿ.. ಯಾವಾಗ ಗೊತ್ತಾ? title=

Hanuman movie OTT Release: ಪ್ರಶಾಂತ್ ವರ್ಮಾ ನಿರ್ದೇಶನದ ಮತ್ತು ತೇಜ ಸಜ್ಜ ಅಭಿನಯದ ಚಿತ್ರ ಹನುಮಾನ್. ಸಂಕ್ರಾಂತಿಯ ವೇಳೆ ಜನವರಿ 12 ರಂದು ಬಿಡುಗಡೆಯಾದ ಈ ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ಸಂಚಲನವನ್ನು ಸೃಷ್ಟಿಸಿತು. ಈಗಾಗಲೇ 250 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿದ್ದು, 300 ಕೋಟಿ ಕ್ಲಬ್‌ನತ್ತ ಮುನ್ನುಗ್ಗುತ್ತಿದೆ.

ಇದನ್ನೂ ಓದಿ:  ಸಾಂಪ್ರದಾಯಕ ಉಡುಗೆಯಲ್ಲಿ ಮಿಂಚಿದ ಲಕ್ಷ್ಮಿ ಬಾರಮ್ಮ ಸೀರಿಯಲ್‌ನ ಕೀರ್ತಿ! 

ಇತ್ತೀಚೆಗೆ ಹನುಮಾನ್ ಚಿತ್ರದ ಒಟಿಟಿಪಿ ವಿವರಗಳನ್ನು ಅಧಿಕೃತವಾಗಿ ಬಿಡುಗಡೆ ಮಾಡಲಾಗಿದೆ. ಈ ಸಿನಿಮಾದ ಬಿಡುಗಡೆಗೂ ಮುನ್ನವೇ ZEE5 ಡಿಜಿಟಲ್ ಸ್ಟ್ರೀಮಿಂಗ್ ಹಕ್ಕುಗಳನ್ನು ಪಡೆದುಕೊಂಡಿದೆ ಎಂಬ ಮಾತುಗಳು ಕೇಳಿ ಬಂದಿದ್ದವು. ಹನುಮಾನ್ ಚಿತ್ರವನ್ನು ZEE5 ಒಟ್ಟು 16 ಕೋಟಿಗೆ ಖರೀದಿಸಲಾಗಿದೆ ಎಂದು ವರದಿಯಾಗಿದೆ. ಅದರಲ್ಲಿ ಹನುಮಾನ್ ತೆಲುಗು ಆವೃತ್ತಿ 12 ಕೋಟಿ, ಹಿಂದಿ ಆವೃತ್ತಿ 5 ಕೋಟಿಗೆ ಸೇಲ್‌ ಆಗಿವೆ ಎನ್ನಲಾಗಿತ್ತು. ಆದರೆ ಈಗ OTT ಸ್ಟ್ರೀಮಿಂಗ್ ದಿನಾಂಕದ ಬಗ್ಗೆಯೂ ಅಪ್‌ಡೇಟ್‌ ನೀಡಲಾಗಿದೆ.

ಮಾರ್ಚ್ ಮೊದಲ ವಾರದಲ್ಲಿ ZEE5 ಪ್ಲಾಟ್‌ ಫಾರ್ಮ್‌ ನಲ್ಲಿ ಹನುಮಾನ್ ಚಿತ್ರ ಬಿಡುಗಡೆಯಾಗಿದೆಯಂತೆ. ಹಿಂದಿನ ಒಪ್ಪಂದದ ಪ್ರಕಾರ, ಚಿತ್ರವು ಬಿಡುಗಡೆಯಾದ ಮೂರು ವಾರಗಳಲ್ಲಿ OTT ಗೆ ಬರಬೇಕಿತ್ತು. ಆದರೆ ಚಿತ್ರದ ಕಲೆಕ್ಷನ್‌ ಹೆಚ್ಚಾಗುತ್ತಿದ್ದ ಕಾರಣ, 55 ದಿನಗಳ ನಂತರ ಈ ಸಿನಿಮಾವನ್ನು ಒಟಿಟಿಯಲ್ಲಿ ತರಲು ರೆಡಿಯಾಗಿದ್ದಾರೆ. ಹನುಮಾನ್‌ ಚಿತ್ರವು ಮಾರ್ಚ್ ಮೊದಲ ವಾರದಲ್ಲಿ ZEE ನಲ್ಲಿ ಸ್ಟ್ರೀಮಿಂಗ್‌ ಆಗಲು ಸಿದ್ಧವಾಗುತ್ತಿದೆ. 

ಇದನ್ನೂ ಓದಿ: ಗಂಗೂಲಿ ಯನ್ನು ಪ್ರೀತಿಸಿದ್ದ ಕನ್ನಡದ ಸ್ಟಾರ್ ನಟಿ.. ಮೂವರು ಖ್ಯಾತ ನಟರೊಂದಿಗೆ‌ ಅಫೇರ್, ಆದರೂ ಒಂಟಿ ಜೀವನ..! 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News