ಚಿತ್ರೀಕರಣದ ಮುಕ್ತಾಯ ಹಂತಕ್ಕೆ ತಲುಪಿದ ಗನ್ಸ್ ಅಂಡ್ ರೋಸಸ್ ಚಿತ್ರ

Written by - YASHODHA POOJARI | Edited by - Manjunath N | Last Updated : Oct 19, 2023, 11:20 PM IST
  • ವಿಜಯ್ ಪ್ರಕಾಶ್ ಅವರು ಹಾಡಿರುವ "108 ಗೇ ಫೋನ್ ಮಾಡೋ ಶಿಷ್ಯ" ಎಂಬ ಹಾಡು ಇತ್ತೀಚೆಗೆ ಬಾರ್ ಸೆಟ್ ನಲ್ಲಿ ಅದ್ದೂರಿಯಾಗಿ ಚಿತ್ರೀಕರಣಗೊಂಡಿದೆ.
  • "ಗನ್ಸ್ ಅಂಡ್" ರೋಸಸ್ ಚಿತ್ರದ ಚಿತ್ರೀಕರಣ ಮುಕ್ತಾಯ ಹಂತ ತಲುಪಿದೆ.
  • ಕೆಲವೇ ದಿನಗಳ ಚಿತ್ರೀಕರಣ ಮಾತ್ರ ಬಾಕಿಯಿದೆ. ಈವರೆಗೂ ನಲವತ್ತು ದಿನಗಳ ಚಿತ್ರೀಕರಣ ಬೆಂಗಳೂರಿನಲ್ಲಿ ನಡೆದಿದೆ.
ಚಿತ್ರೀಕರಣದ ಮುಕ್ತಾಯ ಹಂತಕ್ಕೆ ತಲುಪಿದ ಗನ್ಸ್ ಅಂಡ್ ರೋಸಸ್ ಚಿತ್ರ title=

ಹೆಚ್ ಆರ್ ನಟರಾಜ್ ನಿರ್ಮಾಣದ, ಹೆಚ್ ಎಸ್ ಶ್ರೀನಿವಾಸಕುಮಾರ್ ನಿರ್ದೇಶನದಲ್ಲಿ ಅರ್ಜುನ್ ನಾಯಕರಾಗಿ ನಟಿಸಿರುವ "ಗನ್ಸ್ ಅಂಡ್" ರೋಸಸ್ ಚಿತ್ರದ ಚಿತ್ರೀಕರಣ ಮುಕ್ತಾಯ ಹಂತ ತಲುಪಿದೆ. ಕೆಲವೇ ದಿನಗಳ ಚಿತ್ರೀಕರಣ ಮಾತ್ರ ಬಾಕಿಯಿದೆ. ಈವರೆಗೂ ನಲವತ್ತು ದಿನಗಳ ಚಿತ್ರೀಕರಣ ಬೆಂಗಳೂರಿನಲ್ಲಿ ನಡೆದಿದೆ.

ಇದನ್ನೂ ಓದಿ: ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ನೋಡಿ ಬರಡು ಭೂಮಿಯಲ್ಲಿ ಬಂಗಾರದಂತ ಬೆಳೆ ಬೇಳೆದ ದಂಪತಿ..!

ವಿಜಯ್ ಪ್ರಕಾಶ್ ಅವರು ಹಾಡಿರುವ "108 ಗೇ ಫೋನ್ ಮಾಡೋ ಶಿಷ್ಯ" ಎಂಬ ಹಾಡು ಇತ್ತೀಚೆಗೆ ಬಾರ್ ಸೆಟ್ ನಲ್ಲಿ ಅದ್ದೂರಿಯಾಗಿ ಚಿತ್ರೀಕರಣಗೊಂಡಿದೆ. ಧನಂಜಯ ನೃತ್ಯ ಸಂಯೋಜನೆಯಲ್ಲಿ ಮೂಡಿಬಂದಿರುವ ಈ ಹಾಡಿಗೆ ನಾಯಕ ಅರ್ಜುನ್, ಡ್ಯಾನ್ಸರ್ಸ್ ಜೊತೆ ಹೆಜ್ಜೆ ಹಾಕಿದ್ದಾರೆ.ಶರತ್ ಅವರು ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿರುವ ಈ ಚಿತ್ರಕ್ಕೆ ಶಶಿಕುಮಾರ್ ಸಂಗೀತ ನಿರ್ದೇಶನ, ಆರ್ ಜನಾರ್ದನ್ ಛಾಯಾಗ್ರಹಣ, ಸಂಜೀವ ರೆಡ್ಡಿ ಸಂಕಲನ, ಥ್ರಿಲ್ಲರ್ ಮಂಜು ಸಾಹಸ ನಿರ್ದೇಶನ, ಮಲ್ಲೇನಹಳ್ಳಿ ರಾಜು ನಿರ್ಮಾಣ ನಿರ್ವಹಣೆ ಮತ್ತು ಮುನಿರಾಜ್ (ಕಬ್ಜ) ಅವರ ಸಹ ನಿರ್ದೇಶನವಿದೆ.

ಇದನ್ನೂ ಓದಿ: ಪ್ರವಾಹ, ಕೋಮು ಗಲಭೆ ಸಂತ್ರಸ್ತ ಕುಟುಂಬಗಳಿಗೆ ನೆರವು ನೀಡುವ 'ಸಾಂತ್ವನ ' ಯೋಜನೆಗೆ ಜಮೀರ್ ಅಹಮದ್ ಖಾನ್ ಚಾಲನೆ 

ಕಥೆಗಾರರಾದ ಅಜಯ್ ಕುಮಾರ್ ಅವರ ಪುತ್ರ ಅರ್ಜುನ್ ನಾಯಕನಾಗಿ ನಟಿಸುತ್ತಿರುವ ಈ ಚಿತ್ರದ ನಾಯಕಿ ಯಶ್ಚಿಕ ನಿಷ್ಕಲ. ಶೋಭ್ ರಾಜ್, ಅವಿನಾಶ್, ಸುಚೇಂದ್ರ ಪ್ರಸಾದ್, ಅಶ್ವಥ್ ನೀನಾಸಂ, ಹರೀಶ್, ಜೀವನ್ ರಿಚಿ, ಅರುಣಾ ಬಾಲರಾಜ್, ಡೈಮಂಡ್‌ ರಾಜಣ್ಣ ಮುಂತಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ‌.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News