ಹಾಂಕಾಂಗ್‌ನಲ್ಲಿ Good Newwz

ಗುಡ್ ನ್ಯೂಜ್' ಭಾರತದಲ್ಲಿ ಅಸಾಧಾರಣ ಪ್ರತಿಕ್ರಿಯೆಯನ್ನು ಪಡೆಯಿತು ಮತ್ತು ಬಿಡುಗಡೆಯಾದ 24 ದಿನಗಳಲ್ಲಿ 200 ಕೋಟಿ ರೂ. ಗಳಿಸಿದೆ. ಇದು ಹಾಸ್ಯ ಪ್ರಧಾನ ಚಿತ್ರವಾಗಿದ್ದು, ಇಬ್ಬರು ವಿವಾಹಿತ ದಂಪತಿಗಳ ಗರ್ಭದಾರಣೆಯ ಸುತ್ತ ಈ ಕಥೆ ಹೆಣೆಯಲಾಗಿದೆ.

Written by - Yashaswini V | Last Updated : Feb 3, 2020, 10:57 AM IST
ಹಾಂಕಾಂಗ್‌ನಲ್ಲಿ Good Newwz title=

ನವದೆಹಲಿ:  ಇದುವರೆಗೂ ದೇಶಾದ್ಯಂತ ಉತ್ತಮ ಪ್ರದರ್ಶನದೊಂದಿಗೆ ಮುನ್ನುಗ್ಗುತ್ತಿರುವ, ರಾಜ್ ಮೆಹ್ತಾ ನಿರ್ದೇಶನದ ಅಕ್ಷಯ ಕುಮಾರ್, ಕರೀನಾ ಕಪೂರ್ ಖಾನ್, ದಿಲ್ಜೀತ್ ದೊಸಾಂಜ್ ಹಾಗೂ ಕಿಯಾರಾ ಅಡ್ವಾಣಿ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿರುವ `ಗುಡ್ ನ್ಯೂಜ್ ' ಫೆಬ್ರವರಿ 13 ರಂದು ಹಾಂಗ್ ಕಾಂಗ್‌ನಲ್ಲಿ ಬಿಡುಗಡೆಯಾಗಲಿದೆ.

52 ವರ್ಷದ ನಟ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಚಿತ್ರದ ವಿಶೇಷ ಪೋಸ್ಟರ್ ಅನ್ನು ಹಂಚಿಕೊಳ್ಳುವ ಮೂಲಕ "ಫೆಬ್ರವರಿ 13 ರಂದು #HongKong! #GoodNewwz ಬಿಡುಗಡೆ"ಯಾಗಲಿದೆ ಎಂದು ತಿಳಿಸಿದ್ದಾರೆ.

ಪೋಸ್ಟರ್ ನಲ್ಲಿ ಚಿತ್ರದ ಎರಡು ಪ್ರಮುಖ ಜೋಡಿಗಳಾದ ಅಕ್ಷಯ್-ಕರೀನಾ ಮತ್ತು ದಿಲ್ಜಿತ್-ಕಿಯಾರಾ - ಐವಿಎಫ್ ಕೇಂದ್ರದ ಹೊರಗೆ ಇಬ್ಬರೂ ನಟಿಯರು ತಮ್ಮ ಬೇಬಿ ಬಂಪ್ ಜೊತೆಗೆ ಇರುವುದನ್ನು ತೋರಿಸಲಾಗಿದೆ.

ಈ ಚಲನಚಿತ್ರವು ಭಾರತದಲ್ಲಿ ಅಸಾಧಾರಣ ಪ್ರತಿಕ್ರಿಯೆಯನ್ನು ಪಡೆದಿದೆ ಮತ್ತು ಬಿಡುಗಡೆಯಾದ 24 ದಿನಗಳಲ್ಲಿ 200 ಕೋಟಿ ರೂ. ಗಳಿಸಿದೆ. `ಗುಡ್ ನ್ಯೂಜ್`ಹಾಸ್ಯ ಪ್ರಧಾನ ಚಿತ್ರವಾಗಿದ್ದು, ಇಬ್ಬರು ವಿವಾಹಿತ ದಂಪತಿಗಳ ಗರ್ಭದಾರಣೆಯ ಸುತ್ತ ಈ ಕಥೆ ಹೆಣೆಯಲಾಗಿದೆ.

ಚಿತ್ರದಲ್ಲಿ ಕರೀನಾ ಕಪೂರ್ ಖಾನ್ ಅಕ್ಷಯ್ ಜೊತೆಗೆ, ದಿಲ್ಜಿತ್ ದೋಸಾಂಜ್ ಮತ್ತು ಕಿಯಾರಾ ಅಡ್ವಾಣಿ ಅವರು happy-go-lucky ಪಂಜಾಬಿ ದಂಪತಿಗಳ ಪಾತ್ರವನ್ನು ನಿರ್ವಹಿಸಿದ್ದಾರೆ. ರಾಜ್ ಮೆಹ್ತಾ ಸಾರಥ್ಯದಲ್ಲಿ ಮತ್ತು ಝೀ ಸ್ಟುಡಿಯೋ ಬ್ಯಾಂಕ್ರೊಲ್ ಮಾಡಿದ ಈ ಚಿತ್ರವು ಡಿಸೆಂಬರ್ 27, 2019 ರಂದು ಬಿಡುಗಡೆಯಾಯಿತು.

Trending News