ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟ ಗೋಲ್ಡನ್ ಸ್ಟಾರ್ ಗಣೇಶ್ ಪುತ್ರ..!

‘ಸಖತ್’ ಚಿತ್ರದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಗೆ ನಿಶ್ವಿಕಾ ನಾಯ್ಡು ನಾಯಕಿಯಾಗಿ ನಟಿಸುತ್ತಿದ್ದಾರೆ.

Written by - Puttaraj K Alur | Last Updated : Aug 29, 2021, 11:43 AM IST
  • ಗೋಲ್ಡನ್ ಸ್ಟಾರ್ ಗಣೇಶ್ ಅವರ ‘ಸಖತ್’ನಲ್ಲಿ ವಿಹಾನ್ ಅವರು ಕಾಣಿಸಿಕೊಳ್ಳಲಿದ್ದಾರೆ
  • ವಿಹಾನ್ ಹುಟ್ಟುಹಬ್ಬದ ಸಂದರ್ಭದಲ್ಲಿ ಚಿತ್ರತಂಡವು ವಿಶೇಷ ಪೋಸ್ಟರ್ ಬಿಡುಗಡೆ ಮಾಡಿತ್ತು
  • ಗಣೇಶ್ ಗೆ ನಾಯಕಿಯರಾಗಿ ನಿಶ್ವಿಕಾ ನಾಯ್ಡು ಮತ್ತು ಸುರಭಿ ನಟಿಸುತ್ತಿದ್ದಾರೆ
ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟ ಗೋಲ್ಡನ್ ಸ್ಟಾರ್ ಗಣೇಶ್ ಪುತ್ರ..!   title=
‘ಸಖತ್’ ಸಿನಿಮಾದಲ್ಲಿ ನಟಿಸಲಿರುವ ಗಣೇಶ್ ಪುತ್ರ (Photo Courtesy: Twitter/@SimpleSuni)

ಬೆಂಗಳೂರು: ಸಿನಿಮಾ ಸ್ಟಾರ್ ಮಕ್ಕಳು ತಮ್ಮ ಜೀವನದಲ್ಲಿ ಸಾಕಷ್ಟು ಮುಂಚಿತವಾಗಿಯೇ ಲೈಮ್‌ಲೈಟ್ ಗೆ ಬರುವಂತೆ ತೋರುತ್ತಿದೆ. ನಟ ಗೋಲ್ಡನ್ ಸ್ಟಾರ್ ಗಣೇಶ್(Golden Star Ganesh)ಅವರ ಪುತ್ರ ವಿಹಾನ್ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಡುತ್ತಿದ್ದಾರೆ. ಹೌದು ಗಣೇಶ್ ಅವರ ಮುಂದಿನ ಸಿನಿಮಾ ‘ಸಖತ್’ನಲ್ಲಿ ವಿಹಾನ್ ಅವರು ಕಾಣಿಸಿಕೊಳ್ಳಲಿದ್ದಾರೆ.

‘ಸಖತ್’ ಚಿತ್ರದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಗೆ ನಿಶ್ವಿಕಾ ನಾಯ್ಡು ನಾಯಕಿಯಾಗಿ ನಟಿಸುತ್ತಿದ್ದಾರೆ. ಇದೇ ಮೊದಲ ಬಾರಿಗೆ ನಿಶ್ಚಿಕಾ ನಾಯ್ಡು ಹಾಗೂ ಗಣೇಶ್ ಒಂದಾಗುತ್ತಿದ್ದಾರೆ. ಅಲ್ಲದೆ ‘ಸಖತ್’ ಸಿನಿಮಾ ಮೂಲಕ ನಟಿ ಸುರಭಿ ಕೂಡ ಕನ್ನಡ ಚಿತ್ರರಂಗ(Sandalwood)ಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ಇತ್ತೀಚೆಗಷ್ಟೇ ಚಿತ್ರತಂಡ ಚಿತ್ರದ ಶೂಟಿಂಗ್ ಮುಕ್ತಾಯಗೊಳಿಸಿದ್ದು, ಮುಂದಿನ ಕೆಲಸದಲ್ಲಿ ಬ್ಯುಸಿಯಾಗಿದೆ.

ಇದನ್ನೂ ಓದಿ: ಮದುವೆಗೆ ಎಲ್ಲಾ ಸಿದ್ದತೆಗಳು ನಡೆದಿತ್ತು, ಆದರೆ ಕೊನೆ ಕ್ಷಣದಲ್ಲಿ ಮನಸ್ಸು ಬದಲಿಸಿ ಎಲ್ಲರಿಗೂ ಶಾಕ್ ನೀಡಿದ Salman khan  

ವಿಹಾನ್(Vihan) ಹುಟ್ಟುಹಬ್ಬದ ಸಂದರ್ಭದಲ್ಲಿ ಚಿತ್ರತಂಡವು ವಿಶೇಷ ಪೋಸ್ಟರ್ ಬಿಡುಗಡೆ ಮಾಡಿತ್ತು. ಈ ಮೂಲಕ ಚಿತ್ರದಲ್ಲಿ ಗಣೇಶ್ ಅವರ ಚಿಕ್ಕ ವಯಸ್ಸಿನ ಪಾತ್ರಕ್ಕೆ ವಿಹಾನ್ ಜೀವ ತುಂಬಲಿದ್ದಾರೆನ್ನುವ ವಿಷಯನ್ನು ಬಹಿರಂಗಪಡಿಸಿತ್ತು. ವಿಹಾನ್ ಕ್ಯಾಮೆರಾ ಎದುರಿಸುತ್ತಿರುವುದು ಇದು 2ನೇ ಬಾರಿ. ಗಣೇಶ್ ಮುಖ್ಯ ಪಾತ್ರದಲ್ಲಿ ನಟಿಸಿದ್ದ ‘ಗೀತಾ’ ಚಿತ್ರದಲ್ಲೂ ಅವರು ನಟಿಸಿದ್ದರು. ಆದರೆ ‘ಗೀತಾ’ ಸಿನಿಮಾದಲ್ಲಿ ಅವರು ಹೆಚ್ಚುಹೊತ್ತು ತೆರೆಮೇಲೆ ಕಾಣಿಸಿಕೊಂಡಿರಲಿಲ್ಲ. ‘ಸಖತ್’ ಸಿನಿಮಾದಲ್ಲಿ ಗಣೇಶ್ ಅವರ ಚಿಕ್ಕವಯಸ್ಸಿನ ಪಾತ್ರವನ್ನು ನಿಭಾಯಿಸಲಿದ್ದಾರೆ.

ಗಣೇಶ್ ಅವರ ಪುತ್ರಿ ಚಾರಿತ್ರ್ಯ ಕೂಡ ನಟನೆಯಲ್ಲಿ ಪಾದಾರ್ಪಣೆ ಮಾಡಿದ್ದಾರೆ. ಗಣೇಶ್ ಮತ್ತು ಸುನಿ(Simple Suni) ಕಾಂಬಿನೇಷನ್ ನಲ್ಲಿ ಮೂಡಿಬಂದಿದ್ದ ‘ಚಮಕ್’ ಚಿತ್ರದಲ್ಲಿ ಚಾರಿತ್ರ್ಯ ಕಾಣಿಸಿಕೊಂಡಿದ್ದರು. ಸ್ಯಾಂಡಲ್‌ವುಡ್‌ನ ಗೋಲ್ಡನ್ ಸ್ಟಾರ್ ಗಣೇಶ್ ಕುಟುಂಬದೊಂದಿಗೆ ಸುನಿ ಕೆಲಸ ಮಾಡುವ ತಮ್ಮ ಉತ್ಸುಕತೆ ಮುಂದುವರೆಸಿದ್ದಾರೆ. ಗಣೇಶ್ ಪತ್ನಿ ಶಿಲ್ಪಾ ಕೂಡ ತಮ್ಮ ಪತಿಯ ಕೆಲವು ಚಿತ್ರಗಳನ್ನು ನಿರ್ಮಿಸಿದ್ದಾರೆ.

ಇದನ್ನೂ ಓದಿ: Jitendra Shinde Viral Posts: ಬಿಗ್ ಬಿ ಪೊಲೀಸ್ ಅಂಗರಕ್ಷಕ ಜಿತೇಂದ್ರ ಸಿಂಧೆ ವರ್ಗಾವಣೆ, ವಾರ್ಷಿಕ 1.5ಕೋಟಿ ವೇತನ ಸುದ್ದಿಗಳ ಹಿನ್ನೆಲೆ ತನಿಖೆ ಆರಂಭ     

ಹೊಸ ಪೋಸ್ಟರ್ ನಲ್ಲಿ ಕಾಣಿಸಿಕೊಂಡಿರುವ ಬರ್ತ್ ಡೇ ಬಾಯ್ ವಿಹಾನ್ ಗೆ ಗೋಲ್ಡನ್ ಸ್ಟಾರ್ ಗಣೇಶ್(Golden Star Ganesh) ಸ್ನೇಹಿತರು, ಆಪ್ತರು ಮತ್ತು ಸ್ಯಾಂಡಲ್‌ವುಡ್‌ ನಟ-ನಟಿಯರು ಪ್ರಶಂಸೆ ವ್ಯಕ್ತಪಡಿಸಿ ಶುಭಹಾರೈಸಿದ್ದಾರೆ. ಈ ಚಿತ್ರದಲ್ಲಿ ನಾಯಕ ಗಣೇಶ್‌ರದ್ದು ರಿಯಾಲಿಟಿ ಶೋವೊಂದರಲ್ಲಿ ಸ್ಪರ್ಧಿಸುವ ಹುಡುಗನ ಪಾತ್ರವಾಗಿದೆ.

ಸದ್ಯಕ್ಕೆ ಗಣೇಶ್ ಅವರ ‘ಗಾಳಿಪಟ 2’ ಶೂಟಿಂಗ್ ಮುಕ್ತಾಯವಾಗಿದ್ದು, ಬಿಡುಗಡೆಗೆ ಸಿದ್ಧವಾಗಿದೆ. ‘ಸಖತ್’ ಚಿತ್ರೀಕರಣವೂ ಮುಕ್ತಾಯವಾಗಿದ್ದು, ಚಿತ್ರತಂಡ ಮುಂದಿನ ಕೆಲಸಗಳಲ್ಲಿ ತೊಡಗಿಸಿಕೊಂಡಿದೆ. ಈ ಚಿತ್ರಕ್ಕೆ ಜುಡಾ ಸ್ಯಾಂಡಿ ಸಂಗೀತವಿದ್ದು, ಸಂತೋಷ್ ರೈ ಪಾತಾಜೆ ಛಾಯಾಗ್ರಹಣವಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News