ಬೆಂಗಳೂರು : ನಟ, ಹೋರಾಟಗಾರ ಚೇತನ್ ಸದಾ ಒಂದಲ್ಲ ಒಂದು ವಿವಾದಗಳಿಗೆ ಗುರಿಯಾಗುತ್ತಲೇ ಇದ್ದಾರೆ. ಇತ್ತೀಚಿಗಷ್ಟೇ ಕಾಂತಾರ ಸಿನಿಮಾದ ಬಗ್ಗೆ ಮಾತನಾಡಿ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಗೆ ಕಾರಣರಾಗಿದ್ದರು. ಇದೀಗ ಗಾಂಧಿ ಮತ್ತು ನೆಹರೂ ಅವರನ್ನು ವಿರೋಧಿಸಬೇಕು ಎನ್ನುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.
ಈ ಕುರಿತು ತಮ್ಮ ಟ್ವಿಟರ್ ಖಾತೆಯಲ್ಲಿ ಬರಹ ಒಂದನ್ನು ಪೋಸ್ಟ್ ಮಾಡಿರುವ ಅವರು, ಒಂದು ಶತಮಾನದವರೆಗೆ, ಉದಾರವಾದಿ ಮಾಧ್ಯಮಗಳು/ರಾಜಕೀಯ ಪಕ್ಷಗಳು/ಬುದ್ದಿವಂತರಂತೆ ತಮ್ಮನ್ನು ತಾವು ಪ್ರದರ್ಶಿಕೊಳ್ಳುವವರು, ಗಾಂಧಿ-ನೆಹರು ಅವರೇ ಭಾರತೀಯ ರಾಷ್ಟ್ರೀಯತೆಯ ಆಧಾರವೆಂದು ಬಿಂಬಿಸಿದ್ದಾರೆ. ಗಾಂಧಿ ಮತ್ತು ನೆಹರು ಜಾರಿ ಮತ್ತು ಬ್ರಾಹ್ಮಣ್ಯವನ್ನು ʼಭಾರತೀಯ ಸಂಸ್ಕೃತಿʼಯ ಸಾರವೆಂದು ಬಿಂಬಿಸಿದ್ದರು. ಸಾವರ್ಕರ್ ಮತ್ತು ಉಪಾಧ್ಯಾಯರನ್ನು ನಾವು ಸಮಾನತಾವಾದಿಗಳು ವಿರೋಧಿಸವಂತೆ, ಗಾಂಧಿ ಮತ್ತು ನೆಹರೂ ಅವರನ್ನು ಕೂಡ ವಿರೋಧಿಸಬೇಕು ಎಂದು ಹೇಳಿದ್ದಾರೆ.
ಇದನ್ನೂ ಓದಿ: Kantara 100 days : ಹೋ... ಇದು ಬೆಳಕಲ್ಲ ʼ100 ದಿನʼದ ದರ್ಶನ..!
#equalitarianism #Savarkar #Upadhyaya #Gandhi #Nehru pic.twitter.com/JnNxvwlph7
— Chetan Kumar Ahimsa / ಚೇತನ್ ಅಹಿಂಸಾ (@ChetanAhimsa) January 7, 2023
ಸದಾ ತಮ್ಮ ಹೇಳಿಕೆಯ ಮೂಲಕ ವಿವಾದಗಳನ್ನು ಮೈಮೇಲೆ ಹಾಕಿಕೊಳ್ಳುವ ನಟ ಚೇತನ್ ಹಿಂದುತ್ವ, ಬ್ರಾಹ್ಮಣ್ಯ, ಸಂಸ್ಕೃತಿಯ ಆಚಾರ ವಿಚಾರಗಳನ್ನು ವಿರೋಧಿಸುತ್ತಾ ಬಂದಿದ್ದಾರೆ. ಇತ್ತೀಚಿಗೆ ಕಾಂತಾರ ಸಿನಿಮಾದ ಕುರಿತು ಹೇಳಿಕೆ ನೀಡಿದ್ದ ಚೇತನ್ ಮೂಲ ವಾಸಿಗಳ ಸಂಪ್ರದಾಯದಕ ಕುರಿತು ಮಾತನಾಡಿ ರಿಷಬ್ ಶೇಟ್ಟಿ ಅಭಿಮಾನಿಗಳನ್ನು ಎದಿರು ಹಾಕಿಕೊಂಡಿದ್ದರು. ಇದೀಗಿ ರಾಷ್ಟ್ರಪಿತ ಗಾಂಧಿಜೀ ಹಾಗೂ ನೆಹರೂ ಅವರನ್ನು ವಿರೋಧಿಸಬೇಕು ಎಂದು ಹೇಳುವ ಮೂಲಕ ಚರ್ಚೆಗೆ ಕಾರಣರಾಗಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.