ʼಈʼ ಖ್ಯಾತ ವ್ಯಕ್ತಿಯೊಂದಿಗೆ ಕೀರ್ತಿ ಸುರೇಶ್‌ ಮದುವೆ ಫಿಕ್ಸ್!‌? ಸೌತ್‌ ಚೆಲುವೆಯ ಕೈ ಹಿಡಿಯೋ ವರ ಯಾರು ಗೊತ್ತಾ?

Keerthy Suresh Marriage: ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಕೇಳಿಬರುತ್ತಿರುವ ಹೆಸರುಗಳಲ್ಲಿ ನಾಯಕಿ ಕೀರ್ತಿ ಸುರೇಶ್ ಕೂಡ ಒಬ್ಬರು. ಈಕೆ ತನ್ನ ಸಿನಿಮಾಗಳಿಗಿಂತಲೂ ನಾನಾ ಕಾರಣಗಳಿಂದ ಸುದ್ದಿಯಲ್ಲಿದ್ದಾಳೆ.  

Written by - Savita M B | Last Updated : Jul 27, 2024, 08:07 AM IST
  • ಅತಿ ಕಡಿಮೆ ಅವಧಿಯಲ್ಲಿ ಸ್ಟಾರ್ ಹೀರೋಯಿನ್ ಆಗಿ ಒಳ್ಳೆಯ ಹೆಸರು ಗಳಿಸಿದವರು ಕೀರ್ತಿ ಸುರೇಶ್.
  • ಕೀರ್ತಿ ಸುರೇಶ್ ಅಭಿನಯಕ್ಕೆ ವಿಮರ್ಶಕರಿಂದಲೂ ಮೆಚ್ಚುಗೆ ವ್ಯಕ್ತವಾಗಿತ್ತು.
 ʼಈʼ ಖ್ಯಾತ ವ್ಯಕ್ತಿಯೊಂದಿಗೆ ಕೀರ್ತಿ ಸುರೇಶ್‌ ಮದುವೆ ಫಿಕ್ಸ್!‌? ಸೌತ್‌ ಚೆಲುವೆಯ ಕೈ ಹಿಡಿಯೋ ವರ ಯಾರು ಗೊತ್ತಾ?  title=

Keerthy Suresh: ಅತಿ ಕಡಿಮೆ ಅವಧಿಯಲ್ಲಿ ಸ್ಟಾರ್ ಹೀರೋಯಿನ್ ಆಗಿ ಒಳ್ಳೆಯ ಹೆಸರು ಗಳಿಸಿದವರು ಕೀರ್ತಿ ಸುರೇಶ್. ತೆಲುಗು, ತಮಿಳಿನಲ್ಲಿ ಟಾಪ್ ಹೀರೋಗಳ ಎದುರು ನಟಿಸಿ ಸ್ಟಾರ್ ಹೀರೋಯಿನ್ ಆಗಿ ಮಿಂಚಿದ್ದಾರೆ. ‘ಮಹಾನಟಿ’ ಚಿತ್ರದ ಮೂಲಕ ಕೀರ್ತಿ ಸುರೇಶ್‌ ಕ್ರೇಜ್‌ ಬದಲಾಯಿತು. ಈ ಚಿತ್ರದಲ್ಲಿ ಕೀರ್ತಿ ಸುರೇಶ್ ಅಭಿನಯಕ್ಕೆ ವಿಮರ್ಶಕರಿಂದಲೂ ಮೆಚ್ಚುಗೆ ವ್ಯಕ್ತವಾಗಿತ್ತು.

 ಕೀರ್ತಿ ಸುರೇಶ್ ಯಾವುದೇ ಪಾತ್ರವನ್ನು ಲವಲವಿಕೆಯಿಂದ ನಿರ್ವಹಿಸಬಲ್ಲರು ಎಂಬ ಖ್ಯಾತಿಯನ್ನು ಗಳಿಸಿದ್ದಾರೆ. ಕೀರ್ತಿ ಸುರೇಶ್ ಇತ್ತೀಚಿನ ದಿನಗಳಲ್ಲಿ ಹೆಚ್ಚು ಹಿಟ್‌ಗಳನ್ನು ಹೊಂದಿಲ್ಲ, ಆದರೆ ಅವರು ತಮ್ಮ ವೃತ್ತಿಜೀವನದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕೀರ್ತಿ ಸುರೇಶ್ ಇಲ್ಲಿಯವರೆಗೆ ಯಾವುದೇ ಎಕ್ಸ್‌ಪೋಸಿಂಗ್ ಅಥವಾ ರೊಮ್ಯಾಂಟಿಕ್ ದೃಶ್ಯಗಳನ್ನು ಮಾಡಿಲ್ಲ. ಸ್ಟಾರ್ ಹೀರೋಯಿನ್ ಆಗಲು ಟ್ಯಾಲೆಂಟ್ ಮತ್ತು ಲಕ್ ಸಾಕು ಎಂದು ಹೇಳುವ ಮೂಲಕ ಕೀರ್ತಿ ಸುರೇಶ್ ತನಗೊಂದು ಒಳ್ಳೆಯ ಸ್ಥಾನವನ್ನು ಸೃಷ್ಟಿಸಿಕೊಂಡಿದ್ದಾರೆ. ಸದ್ಯ ಕೀರ್ತಿ ಸುರೇಶ್ ಕೈಯಲ್ಲಿ ಅರ್ಧ ಡಜನ್‌ಗೂ ಹೆಚ್ಚು ಸಿನಿಮಾಗಳಿವೆ.

ಇದನ್ನೂ ಓದಿ-ಒಂಟಿ ಹೆಣ್ಣು ಕಂಡ್ರೆ ಹುಚ್ಚನಂತೆ ವರ್ತಿಸುತ್ತಾನೆ..! ಖ್ಯಾತ ನಟನ ಮೇಲೆ ಗಾಯಕಿಯ ಶಾಕಿಂಗ್‌ ಹೇಳಿಕೆ

 ನಟಿ ಈ ವರ್ಷ ಬಾಲಿವುಡ್‌ಗೂ ಎಂಟ್ರಿ ಕೊಡಲು ಸಿದ್ಧವಾಗಗಿದ್ದಾರೆ.. ಕೀರ್ತಿ ಸುರೇಶ್ ಸದ್ಯ ಬಾಲಿವುಡ್ ಹೀರೋ ವರುಣ್ ಧವನ್ ಜೊತೆ 'ಬೇಬಿ ಜಾನ್' ಹಿಂದಿ ಸಿನಿಮಾದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಆದರೆ ಬಾಲಿವುಡ್ ಪ್ರವೇಶದೊಂದಿಗೆ ಗ್ಲಾಮರ್ ಮಿತಿ ಮೀರಿದೆಯಂತೆ. 

ಇದನ್ನೂ ಓದಿ-100ಕ್ಕೂ ಹೆಚ್ಚು ಸಿನಿಮಾದಲ್ಲಿ ನಟನೆ.. ಅಪರೂಪದ ಸೌಂದರ್ಯ, ಕೊನೆಗೆ ಅನಾಥೆಯಾಗಿ ಸಾವನ್ನಪ್ಪಿದ ಸ್ಟಾರ್ ನಟಿ..!

ರೊಮ್ಯಾಂಟಿಕ್ ದೃಶ್ಯಗಳನ್ನು ಮಾಡಲು ಕೀರ್ತಿ ಸುರೇಶ್ ಗ್ರೀನ್‌ ಸಿಗ್ನಲ್ ಕೊಟ್ಟಿದ್ದಾರೆ ಎನ್ನಲಾಗಿದೆ.. ಕೀರ್ತಿ ಸುರೇಶ್ ಮತ್ತು ವರುಣ್ ಧವನ್ ನಡುವೆ ಕೆಲವು ಲಿಪ್ ಲಾಕ್ ದೃಶ್ಯಗಳಿವೆ ಎಂಬ ಸುದ್ದಿಯೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. 

ಈ ಮಧ್ಯೆ ಕೀರ್ತಿ ಸುರೇಶ್ ಅವರ ಮದುವೆಯ ಸುದ್ದಿಯೊಂದು ಇದೀಗ ವೈರಲ್ ಆಗಿದೆ. ಆಕೆ ತನ್ನ ಬಾಲ್ಯದ ಗೆಳಯನನ್ನು ಮದುವೆಯಾಗಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಸದ್ಯ ಇವರಿಬ್ಬರು ಸಂಬಂಧದಲ್ಲಿದ್ದು, ಸದ್ಯದಲ್ಲೇ ಮದುವೆಯಾಗಲಿದ್ದಾರೆ ಎನ್ನಲಾಗುತ್ತಿದೆ.. ಆದರೆ ಇದರಲ್ಲಿ ಎಷ್ಟು ಸತ್ಯಾಂಶವಿದೆ ಎನ್ನುವುದು ಮುಂದೆ ತಿಳಿಯಲಿದೆ.. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News