ರಹಸ್ಯವಾಗಿ ಎರಡನೇ ಮದುವೆಯಾದ ಬಿಗ್‌ಬಾಸ್‌ ವಿನ್ನರ್‌.. ಹುಡ್ಗಿ ಯಾರು ಗೊತ್ತಾ?

Bigg Boss Winner Second Marriage: ಬಿಗ್ ಬಾಸ್ 17 ರ ವಿನ್ನರ್ ಮತ್ತು ಪ್ರಸಿದ್ಧ ಹಾಸ್ಯನಟ ಮುನಾವರ್ ಫರುಕಿ ಅವರು ಕೆಲವು ಕಾರಣಗಳಿಂದಾಗಿ ಆಗಾಗ್ಗೆ ಸುದ್ದಿಯಲ್ಲಿರುತ್ತಾರೆ... ಇತ್ತೀಚೆಗಷ್ಟೇ ತಾವು ಆಸ್ಪತ್ರೆಗೆ ದಾಖಲಾಗಿರುವುದಾಗಿ ಸಾಮಾಜಿಕ ಜಾಲತಾಣಗಳ ಮೂಲಕ ತಿಳಿಸಿದ್ದರು. ಇದೇ ವೇಳೆ ಇದೀಗ ಮುನವ್ವರ್ ಫಾರೂಕಿ ಬಗ್ಗೆ ಶಾಕಿಂಗ್ ನ್ಯೂಸ್‌ವೊಂದು ಹೊರಬಿದ್ದಿದೆ..   

Written by - Savita M B | Last Updated : May 28, 2024, 10:54 AM IST
  • ಒಂದೆಡೆ ಮುನಾವರ್ ಫರೂಕಿ ಆರೋಗ್ಯದ ಬಗ್ಗೆ ಅಭಿಮಾನಿಗಳು ಆತಂಕ ವ್ಯಕ್ತಪಡಿಸುತ್ತಿದ್ದಾರೆ.
  • ಮತ್ತೊಂದೆಡೆ ಅಚ್ಚರಿಯ ಸುದ್ದಿಯೊಂದು ಬೆಳಕಿಗೆ ಬಂದಿದೆ.
ರಹಸ್ಯವಾಗಿ ಎರಡನೇ ಮದುವೆಯಾದ ಬಿಗ್‌ಬಾಸ್‌ ವಿನ್ನರ್‌.. ಹುಡ್ಗಿ ಯಾರು ಗೊತ್ತಾ?  title=

Munawar Faruqui Second Marriage: ಒಂದೆಡೆ ಮುನಾವರ್ ಫರೂಕಿ ಆರೋಗ್ಯದ ಬಗ್ಗೆ ಅಭಿಮಾನಿಗಳು ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಮತ್ತೊಂದೆಡೆ ಅಚ್ಚರಿಯ ಸುದ್ದಿಯೊಂದು ಬೆಳಕಿಗೆ ಬಂದಿದೆ. ವಾಸ್ತವವಾಗಿ, ಮಾಧ್ಯಮ ವರದಿಗಳ ಪ್ರಕಾರ, ಮುನವ್ವರ್ ಎರಡನೇ ಬಾರಿಗೆ ರಹಸ್ಯವಾಗಿ ಮದುವೆಯಾಗಿದ್ದಾರೆ.. ಈ ಸುದ್ದಿ ಹೊರಬಿದ್ದ ನಂತರ ಅವರ ಲಕ್ಷಾಂತರ ಅಭಿಮಾನಿಗಳು ಶಾಕ್ ಆಗಿದ್ದು, ಇದೀಗ ಅವರ ಆಪ್ತರು ಇದನ್ನು ಖಚಿತಪಡಿಸಿದ್ದಾರೆ.

ವರದಿಯ ಪ್ರಕಾರ, ಮುನಾವರ್ ಫರುಕಿ ಮತ್ತು ಅವರ ಎರಡನೇ ಪತ್ನಿಯ ಕುಟುಂಬ ಮತ್ತು ಆಪ್ತರು ಮದುವೆಯಲ್ಲಿ ಭಾಗವಹಿಸಿದ್ದರು. ಕಾಮೆಡಿನ್ ಸುಮಾರು 10-12 ದಿನಗಳ ಹಿಂದೆ ಮದುವೆಯಾಗಿದ್ದು, ಈ ಬಗ್ಗೆ ಯಾರಿಗೂ ತಿಳಿಯಬಾರದು ಎಂದು ಅವರು ಬಯಸಿದ್ದರು. ಆದರೆ ಅವರ ಮದುವೆ ಮುಂಬೈನ ಐಟಿಸಿ ಮರಾಠಾದಲ್ಲಿ ನಡೆದಿದೆ ಎಂದು ಹಾಸ್ಯನಟನ ಆಪ್ತ ಮೂಲವೊಂದು ಹೇಳಿಕೊಂಡಿದೆ. 

ಇದನ್ನೂ ಓದಿ-Fahadh Faasil: ಈ ಗಂಭೀರ ಕಾಯಿಲೆಯಿಂದ ಬಳಲುತ್ತಿರುವ 'ಆವೇಷಂ' ನಟ ಫಹಾದ್ ಫಾಸಿಲ್ !

ಮುನವ್ವರ್ ತಮ್ಮ ಮದುವೆಯ ಯಾವುದೇ ಫೋಟೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಇನ್ನೂ ಹಂಚಿಕೊಂಡಿಲ್ಲ. ಹಾಸ್ಯನಟನ ಮದುವೆಯಲ್ಲಿ ಕಿರುತೆರೆ ನಟಿ ಹಿನಾ ಖಾನ್ ಕೂಡ ಭಾಗವಹಿಸಿದ್ದರು ಎಂದು ಹೇಳಲಾಗುತ್ತಿದೆ. ಅವರೇ ತಮ್ಮ ಇನ್‌ಸ್ಟಾ ಸ್ಟೋರಿಯಲ್ಲಿ ಈ ಮದುವೆಯ ಚಿತ್ರವನ್ನು ಹಂಚಿಕೊಂಡಿದ್ದಾರೆ. ಮೇ 26 ರಂದು ಮುಂಬೈನ ಐಟಿಸಿ ಗ್ರ್ಯಾಂಡ್ ಮರಾಠಾದಲ್ಲಿ ಮುನವ್ವರ್ ಮತ್ತು ಅವರ ಎರಡನೇ ಪತ್ನಿ ತಮ್ಮ ವಿವಾಹದ ಆರತಕ್ಷತೆಯನ್ನು ಆಯೋಜಿಸಿದ್ದರು.

 ಮುನವ್ವರ್ ಮದುವೆಯ ಸುದ್ದಿ ಹೊರಬಿದ್ದ ನಂತರ, ಅಭಿಮಾನಿಗಳು ಅವರ ಎರಡನೇ ಹೆಂಡತಿ ಯಾರು ಎಂದು ತಿಳಿದುಕೊಳ್ಳಲು ಕುತೂಹಲ ವ್ಯಕ್ತಪಡಿಸುತ್ತಿದ್ದಾರೆ.. ಅವರ ಎರಡನೇ ಪತ್ನಿ ಮೇಕಪ್ ಆರ್ಟಿಸ್ಟ್‌ ಮೆಹಜಬೀನ್ ಕೊತ್ವಾಲಾ.. ಆದರೆ ಇವರ ಪೋಟೋ ಇನ್ನೂ ಹೊರಬಿದ್ದಿಲ್ಲ.. ಪ್ರಸ್ತುತ, ಹಾಸ್ಯನಟ ತನ್ನ ಮದುವೆಯ ಬಗ್ಗೆ ಯಾವಾಗ ಹೇಳಿಕೊಳ್ಳುತ್ತಾರೆ ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ.

ಇದನ್ನೂ ಓದಿ-ಬಾಲಿವುಡ್ ನತ್ತ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ! EXCLUSIVE ಮಾಹಿತಿ ಇದು

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News