Dhoomam Movie : ಹೊಂಬಾಳೆ ನಿರ್ಮಾಣದ ಫಹಾದ್ ನಟನೆಯ ʼಧೂಮಂʼ ಪೋಸ್ಟರ್‌ ರಿಲೀಸ್‌..!

Fahadh Faasil Dhoomam : ಫಹಾದ್ ಮತ್ತು ಅಪರ್ಣಾ 'ಧೂಮಂ' ಚಿತ್ರದ ಮೂಲಕ ಮತ್ತೆ ತೆರೆ ಮೇಲೆ ಮೋಡಿ ಮಾಡಲು ರೆಡಿಯಾಗಿದ್ದಾರೆ. ಥ್ರಿಲ್ಲರ್ ಕಥಾಹೊಂದಿರುವ 'ಧೂಮಂ' ಚಿತ್ರವನ್ನು ಯು-ಟರ್ನ್ ಮತ್ತು ಲೂಸಿಯಾ ಖ್ಯಾತಿ ಡೈರೆಕ್ಟರ್‌ ಪವನ್ ಕುಮಾರ್ ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾ ಮಲಯಾಳಂ, ತಮಿಳು, ತೆಲುಗು ಮತ್ತು ಕನ್ನಡ ಸೇರಿದಂತೆ ನಾಲ್ಕು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.

Written by - Krishna N K | Last Updated : Apr 17, 2023, 02:45 PM IST
  • ಹೊಂಬಾಳೆ ನಿರ್ಮಾಣದ ʼಧೂಮಂʼ ಸಿನಿಮಾದ ಪೋಸ್ಟರ್‌ ರಿಲೀಸ್‌.
  • ಪವನ್‌ ಕುಮಾರ್‌ ನಿರ್ದೇಶನಕ ಥ್ರಿಲ್ಲರ್‌ ಸಿನಿಮಾ.
  • ಚಿತ್ರದಲ್ಲಿ ಫಹಾದ್‌ ಜೊತೆಗಾಗಿ ಅಪರ್ಣಾ ಬಾಲಮುರಳಿ ನಟನೆ.
Dhoomam Movie : ಹೊಂಬಾಳೆ ನಿರ್ಮಾಣದ ಫಹಾದ್ ನಟನೆಯ ʼಧೂಮಂʼ ಪೋಸ್ಟರ್‌ ರಿಲೀಸ್‌..! title=

Dhoomam Movie poster : ಮಲಯಾಳಂ ಸ್ಟಾರ್‌ ನಟ ಫಹಾದ್ ಫಾಸಿಲ್ ಮತ್ತು ರಾಷ್ಟ್ರ ಪ್ರಶಸ್ತಿ ವಿಜೇತ ನಟಿ ಅಪರ್ಣಾ ಬಾಲಮುರಳಿ ಅಭಿನಯದ ಹೊಂಬಾಳೆ ಫಿಲಂಸ್ ನಿರ್ಮಾಣದ ಹೊಸ ಚಿತ್ರ ʼಧೂಮಂ' ಫಸ್ಟ್ ಲುಕ್ ಪೋಸ್ಟರ್ ಹೊರಬಿದ್ದಿದೆ. ಹೊಂಬಾಳೆ ಫಿಲಂಸ್‌ನ ಅಧಿಕೃತ ಫೇಸ್‌ಬುಕ್ ಖಾತೆಯಲ್ಲಿ ಧೂಮಂ ಪೋಸ್ಟರ್ ಬಿಡುಗಡೆಯಾಗಿದ್ದು, ಕುತೂಹಲ ಮೂಡಿಸುತ್ತಿದೆ.

ʼಪ್ರತಿಯೊಂದು ಹೊಗೆಯಲ್ಲೂ ರಹಸ್ಯ ಅಡಗಿದೆ.. ಮುಚ್ಚಿಡಬಾರದ ರಹಸ್ಯಗಳು. ಈ ಸಸ್ಪೆನ್ಸ್‌ಫುಲ್ ಥ್ರಿಲ್ಲಿಂಗ್ ಡ್ರಾಮಾದೊಂದಿಗೆ ಹೃದಯ ಬಡಿತದ ರೈಡ್‌ಗೆ ಸಿದ್ಧರಾಗಿ.' ಎಂದು ಬರೆದುಕೊಂಡಿರುವ ನಟ ಫಹಾದ್ ಫಾಸಿಲ್ ಪೋಸ್ಟರ್‌ ಸಮೇತ ತಮ್ಮ ಫೇಸ್‌ಬುಕ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಪವನ್ ಕುಮಾರ್ ನಿರ್ದೇಶನದ ಈ ಚಿತ್ರದಲ್ಲಿ ಅಪರ್ಣಾ ಬಾಲಮುರಳಿ ನಾಯಕಿಯಾಗಿ ನಟಿಸಿದ್ದಾರೆ.

ಇದನ್ನೂ ಓದಿ: Soundarya:‌ ಸಾಯುವ ಸಮಯದಲ್ಲಿ ಗರ್ಭಿಣಿಯಾಗಿದ್ರಾ ನಟಿ ಸೌಂದರ್ಯ!?

ʼಮಹೇಶ್ ರಿವೆಂಜ್ʼ ಚಿತ್ರದ ನಂತರ ಫಹಾದ್ ಮತ್ತು ಅಪರ್ಣಾ 'ಧೂಮಂ' ಚಿತ್ರದ ಮೂಲಕ ಮತ್ತೆ ತೆರೆ ಮೇಲೆ ಮೋಡಿ ಮಾಡಲು ರೆಡಿಯಾಗಿದ್ದಾರೆ. ಥ್ರಿಲ್ಲರ್ ಕಥಾಹೊಂದಿರುವ 'ಧೂಮಂ' ಚಿತ್ರವನ್ನು ಯು-ಟರ್ನ್ ಮತ್ತು ಲೂಸಿಯಾ ಖ್ಯಾತಿ ಡೈರೆಕ್ಟರ್‌ ಪವನ್ ಕುಮಾರ್ ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾ ಮಲಯಾಳಂ, ತಮಿಳು, ತೆಲುಗು ಮತ್ತು ಕನ್ನಡ ಸೇರಿದಂತೆ ನಾಲ್ಕು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.

ಸಿನಿಮಾದಲ್ಲಿ ರೋಷನ್ ಮ್ಯಾಥ್ಯೂ, ಅಚ್ಯುತ್ ಕುಮಾರ್, ಜಾಯ್ ಮ್ಯಾಥ್ಯೂ, ದೇವ್ ಮೋಹನ್ ಮತ್ತು ನಂದು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರಕ್ಕೆ ಪ್ರೀತಾ ಜಯರಾಮನ್ ಛಾಯಾಗ್ರಹಣವಿದೆ. ಪೂರ್ಣಚಂದ್ರ ತೇಜಸ್ವಿ ಚಿತ್ರದ ಸಂಗೀತ ನಿರ್ದೇಶಕರು. ಕ್ರಿಯೇಟಿವ್ ನಿರ್ಮಾಪಕ ಕಾರ್ತಿಕ್ ವಿಜಯ್ ಸುಬ್ರಮಣ್ಯಂ. ಧ್ವನಿ ವಿನ್ಯಾಸ ರಂಗನಾಥ್ ರವಿ, ಕಲೆ ಅನೀಸ್ ನಾಟೋಡಿ, ವಸ್ತ್ರ ವಿನ್ಯಾಸ ಪೂರ್ಣಿಮಾ ರಾಮಸ್ವಾಮಿ, ಪ್ರೊಡಕ್ಷನ್ ಕಂಟ್ರೋಲರ್ ಶಿಬು ಸುಶೀಲನ್, ಪ್ರಜಾವಾಣಿ ಮಂಜು ಗೋಪಿನಾಥ್.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News