ವಿಜಯ್ ದುನಿಯಾದಲ್ಲಿ 'ಸಾಮ್ರಾಟ್' ನ 'ಕುಸ್ತಿ' ಖದರ್!

    

Last Updated : Jun 18, 2018, 06:34 PM IST
 ವಿಜಯ್ ದುನಿಯಾದಲ್ಲಿ 'ಸಾಮ್ರಾಟ್' ನ 'ಕುಸ್ತಿ' ಖದರ್!   title=
screen grab,

ಬೆಂಗಳೂರು: 'ದುನಿಯಾ' ಸಿನಿಮಾ ಮೂಲಕ ಕನ್ನಡದ ಸಿನಿಮಾ ದುನಿಯಾವನ್ನೇ ಅಳುತ್ತಿರುವ ಬ್ಲಾಕ್ ಕೋಬ್ರಾ ಕರಿ ಚಿರತೆ ಎನ್ನುವ ಖ್ಯಾತನಾಮಗಳನ್ನು ಹೊಂದಿರುವ ವಿಜಯ ಸ್ಯಾಂಡಲ್ ವುಡ್ ನಲ್ಲಿ ದುನಿಯಾ ವಿಜಯ ಎಂದೇ ಚಿರಪರಿಚಿತ.ಈಗ ಈ ದುನಿಯಾದಲ್ಲಿ 'ಕುಸ್ತಿ ಮೂಲಕ ಹೊಸ 'ಸಾಮ್ರಾಟ್'ನಾಗಲು ಬರುತ್ತಿದ್ದಾನೆ ದುನಿಯಾ ವಿಜಯ್ ಪುತ್ರ ಸಾಮ್ರಾಟ್.

ಹೌದು,ಸಾಮ್ರಾಟ್ ವಿಜಯ ಮುಖ್ಯಭೂಮಿಕೆಯಲ್ಲಿ ಅಭಿನಯಿಸಿತ್ತಿರುವ ಚಿತ್ರದ ಹೆಸರು ಕುಸ್ತಿ. ಈಗಾಗಲೇ ಈ ಚಿತ್ರಕ್ಕಾಗಿ ಸಾಕಷ್ಟಿ ದೇಹವನ್ನು ದಂಡಿಸಿರುವ ಅವರು ಪಕ್ಕಾ ಕುಸ್ತಿಪಟುವಿನ ಖದರ್ ನಲ್ಲಿ ಕಾಣಿಸಿಕೊಂಡಿದ್ದಾರೆ.ಈಗಾಗಲೇ ಇದೇ ಭಾನುವಾರದಂದು ಬಿಡುಗಡೆಯಾಗಿರುವ ಈ ಟಿಸರ್ ಕೂಡ ಈಗ ಸಾಕಷ್ಟು  ಕೂತುಹಲ ಕೆರಳಿಸಿದೆ.

ರಘು ಶಿವಮೊಗ್ಗ ನಿರ್ದೇಶನದಲ್ಲಿ  ಬರುತ್ತಿರುವ ಈ ಸಿನಿಮಾವನ್ನು ದುನಿಯಾ ಟಾಕೀಜ್ ಬ್ಯಾನರ್ ನಿರ್ಮಿಸಿದೆ.ಈ ಚಿತ್ರಕ್ಕೆ ಕನಕ ಖ್ಯಾತಿಯ ಎಣ್ಣೆ ನಮ್ದು ಹಾಡಿನ ಮೂಲಕ ಮ್ಯೂಸಿಕ್ ಅಮಲು ಹಿಡಿಸಿದ ನವೀನ ಸಜ್ಜು  ಸಂಗೀತ ನಿರ್ದೇಶನ ಮಾಡಿದ್ದಾರೆ. 

Trending News