ಇದನ್ನು ಕುಡಿದು ಆರಾಮಾಗಿರಿ ಎಂದ ಕಿರಿಕ್​ ಬೆಡಗಿ.. ಮದ್ವೆ ಟ್ರೋಲ್ಸ್​ಗೆ ರಶ್ಮಿಕಾ ಕೊಟ್ರಾ ರಿಯಾಕ್ಷನ್!?

Rashmika Mandanna: ಟ್ರೋಲ್ ಪೇಜ್​ಗಳಿಗೆ ಸದಾ ಹಾಟ್ ಟಾಪಿಕ್ ಆಗಿರುವ ನಟಿ ರಶ್ಮಿಕಾ ಮಂದಣ್ಣ ರೀಲ್ಸ್​ವೊಂದನ್ನು ಮಾಡಿದ್ದಾರೆ. ಇದು ಮದ್ವೆ ಟ್ರೋಲ್ಸ್​ಗೆ ರಶ್ಮಿಕಾ ರಿಯಾಕ್ಷನ್ ಕೊಟ್ರಾ? ಎಂಬ ಪ್ರಶ್ನೆಯನ್ನು ಹುಟ್ಟು ಹಾಕಿದೆ. 

Written by - Chetana Devarmani | Last Updated : Mar 1, 2022, 12:27 PM IST
  • ಇದನ್ನು ಕುಡಿದು ಆರಾಮಾಗಿರಿ ಎಂದ ಕಿರಿಕ್​ ಬೆಡಗಿ
  • ಮದ್ವೆ ಟ್ರೋಲ್ಸ್​ಗೆ ರಶ್ಮಿಕಾ ಕೊಟ್ರಾ ರಿಯಾಕ್ಷನ್!?
  • ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ
ಇದನ್ನು ಕುಡಿದು ಆರಾಮಾಗಿರಿ ಎಂದ ಕಿರಿಕ್​ ಬೆಡಗಿ.. ಮದ್ವೆ ಟ್ರೋಲ್ಸ್​ಗೆ ರಶ್ಮಿಕಾ ಕೊಟ್ರಾ ರಿಯಾಕ್ಷನ್!? title=
ರಶ್ಮಿಕಾ ಮಂದಣ್ಣ

ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ (Rashmika Mandanna) 2016 ಕಿರಿಕ್ ಪಾರ್ಟಿ (Kirik Party) ಸಿನಿಮಾದ ಮೂಲಕ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದರು. ನಂತರ ರಶ್ಮಿಕಾ ಮುಟ್ಟಿದ್ದೆಲ್ಲಾ ಚಿನ್ನ ಎಂಬಂತಾಯಿತು. ದೇಶದ ಮೂಲೆ ಮೂಲೆಯಲ್ಲೂ ಅಭಿಮಾನಿಗಳನ್ನು ಹೊಂದಿರುವ ಕಿರಿಕ್ ಬೆಡಗಿ ಟ್ರೋಲ್ ಪೇಜ್​ಗಳಿಗೆ ಸದಾ ಹಾಟ್ ಟಾಪಿಕ್.

ಇದನ್ನೂ ಓದಿ: James Trademark Song: ಪವರ್ ಸ್ಟಾರ್ ಸಾಂಗ್, ಪವರ್ ಫುಲ್ ರಿಲೀಸ್..! ಹೇಗಿದೆ 'ಜೇಮ್ಸ್' ಹಾಡು..?

ಸದ್ಯ ಟಾಕ್​ ಆಫ್​ ದಿ ಟೌನ್ ಆಗಿರುವ ರಶ್ಮಿಕಾ ಅವರ ಮದುವೆ ವಿಚಾರ ಕೆಲ ದಿನಗಳಿಂದ ಸಖತ್ ಸುದ್ದಿಯಲ್ಲಿದೆ. ರಶ್ಮಿಕಾ ಮಂದಣ್ಣ ಹಾಗೂ ಟಾಲಿವುಡ್ ನಟ ವಿಜಯ್ ದೇವರಕೊಂಡ (Vijay Deverakond) ಮದುವೆ ವಿಚಾರ ಕೆಲವು ದಿನಗಳಿಂದ ಹರಿದಾಡುತ್ತಿದೆ.

ಇಬ್ಬರೂ ಬಾಲಿವುಡ್​ನಲ್ಲಿ ಸಕ್ರಿಯರಾಗಿ ಈಗ ಮುಂಬೈಗೆ ಶಿಫ್ಟ್ ಆಗಿದ್ದಾರೆ. ಜೊತೆಯಾಗಿ ಜಿಮ್ ಮಾಡುವುದು, ಡಿನ್ನರ್ ಮಾಡುವುದನ್ನು ಕಂಡ ಫ್ಯಾನ್ಸ್, ಈ ಜೋಡಿ ಶೀಘ್ರದಲ್ಲೇ ದಾಂಪತ್ಯ ಜೀವನಕ್ಕೆ ಕಾಲಿಡಬಹುದೇನೋ ಎಂಬ ಅನುಮಾನ್ದಲ್ಲಿದ್ದಾರೆ. ಇವರಿಬ್ಬರ ಡೇಟಿಂಗ್ (Dating) ವದಂತಿಗಳು ಸದಾ ಕೇಳಿಬರುತ್ತಿರುತ್ತವೆ. 

ವಿವಾಹ ವಿಚಾರ ವೈರಲ್ ಆಗಿರುವ ಈ ಹೊತ್ತಲ್ಲೇ ರಶ್ಮಿಕಾ ರೀಲ್ಸ್​ವೊಂದನ್ನು (Instagram Reels) ಮಾಡಿದ್ದಾರೆ. "ನನ್ನ ಖುಷಿಯ ಸೀಕ್ರೆಟ್​ ಇಲ್ಲಿದೆ ನೋಡಿ.." ಅಂತ ಬರೆದುಕೊಂಡು ಪೋಸ್ಟ್​ ಮಾಡಿದ್ದಾರೆ. 

ಇದನ್ನೂ ಓದಿ: ಕಾರು ಅಪಘಾತ: 'ಕಚ್ಚಾ ಬಾದಮ್' ಗಾಯಕ ಭುವನ್ ಬಡ್ಯಾಕರ್ ಆಸ್ಪತ್ರೆಗೆ ದಾಖಲು

"ನೀರು ಕುಡಿದು ನನ್ನ ಕೆಲಸ ಮಾತ್ರ ನೋಡಿಕೋ.." ಎಂದು ಸಾಹಿತ್ಯವಿರುವ ಹಾಡಿಗೆ ರೀಲ್ಸ್ ಮಾಡಿದ್ದು, ಈ ವಿಡಿಯೋ ಅವರ ವೈಯಕ್ತಿಕ ಜೀವನ ಬಗ್ಗೆ ಚರ್ಚೆ ಮಾಡುತ್ತಿರುವವರಿಗೆ ಪರೋಕ್ಷವಾಗಿ ಪ್ರತಿಕ್ರಿಯಿಸಿದಂತಿದೆ. 

ಆದರೆ ರಶ್ಮಿಕಾ ಅವರ ಈ ವಿಡಿಯೋ ಕೂಡ ಸಾಮಾಜಿಕ ಮಾಧ್ಯಮದಲ್ಲಿ ಸಖತ್ ಟ್ರೋಲ್​ (Troll) ಆಗುತ್ತಿದೆ.

ಆ ರೀಲ್ಸ್ ಇಲ್ಲಿದೆ ನೋಡಿ: 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News