23 ನೇ ವಯಸ್ಸಿಗೆ ಮದುವೆಯಾಗಲು ಬಯಸಿದ್ದ ಸಾಯಿಪಲ್ಲವಿ.. ಇನ್ನೂ ಸಿಂಗಲ್‌ ಆಗಿರೋದ್ಯಾಕೆ ಗೊತ್ತಾ?

Sai Pallavi Marriage: ಸಾಯಿ ಪಲ್ಲವಿ ಮದುವೆಯಾಗದೆ ತಂಗಿಯ ಮದುವೆಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದು ಗೊತ್ತೇ ಇದೆ. ಆಕೆ ಮದುವೆಯಿಂದ ದೂರ ಉಳಿಯಲು ಕಾರಣವೇನು? ಈ ಹಿಂದೆ ತಮ್ಮ ಮದುವೆಯ ಬಗ್ಗೆ ಅವರು ಹೇಳಿದ್ದ ಮಾತು ಇದೀಗ ಹಾಟ್ ಟಾಪಿಕ್ ಆಗಿದೆ...  

Written by - Savita M B | Last Updated : Jan 29, 2024, 10:30 AM IST
  • ಲೇಡಿ ಪವರ್ ಸ್ಟಾರ್ ಸಾಯಿ ಪಲ್ಲವಿ ಬಗ್ಗೆ ಪ್ರೇಕ್ಷಕರಿಗೆ ವಿಶೇಷ ಪರಿಚಯ ಅಗತ್ಯವಿಲ್ಲ
  • ತಮಿಳು, ಮಲಯಾಳಂ ಚಿತ್ರಗಳ ಮೂಲಕ ಸದ್ದು ಮಾಡಿರುವ ನ್ಯಾಚುರಲ್ ಬ್ಯೂಟಿ ಅಭಿಮಾನಿಗಳ ಆಲ್‌ಟೈಮ್‌ ಫೇವರೆಟ್‌ ಆಗಿದ್ದಾರೆ.
  • ಸಹೋದರಿ ಪೂಜಾ ಕಣ್ಣನ್ ಮದುವೆಗೆ ಭಾರೀ ಸದ್ದು ಮಾಡಿರುವುದು ಕುತೂಹಲಕ್ಕೆ ಕಾರಣವಾಗಿದೆ
23 ನೇ ವಯಸ್ಸಿಗೆ ಮದುವೆಯಾಗಲು ಬಯಸಿದ್ದ ಸಾಯಿಪಲ್ಲವಿ.. ಇನ್ನೂ ಸಿಂಗಲ್‌ ಆಗಿರೋದ್ಯಾಕೆ ಗೊತ್ತಾ? title=

Sai Pallavi: ಲೇಡಿ ಪವರ್ ಸ್ಟಾರ್ ಸಾಯಿ ಪಲ್ಲವಿ ಬಗ್ಗೆ ಪ್ರೇಕ್ಷಕರಿಗೆ ವಿಶೇಷ ಪರಿಚಯ ಅಗತ್ಯವಿಲ್ಲ. ತಮಿಳು, ಮಲಯಾಳಂ ಚಿತ್ರಗಳ ಮೂಲಕ ಸದ್ದು ಮಾಡಿರುವ ನ್ಯಾಚುರಲ್ ಬ್ಯೂಟಿ ಅಭಿಮಾನಿಗಳ ಆಲ್‌ಟೈಮ್‌ ಫೇವರೆಟ್‌ ಆಗಿದ್ದಾರೆ.. ಇದೆಲ್ಲದರ ಮಧ್ಯೆ ಇದೀಗ ಇತ್ತೀಚೆಗೆ ಅವರ ಮನೆಯಲ್ಲಿ ಅವರ ಸಹೋದರಿಯ ಮದುವೆ ಸಾಕಷ್ಟು ಸದ್ದು ಮಾಡಿದೆ.. 

ಆದರೆ, ಸಾಯಿ ಪಲ್ಲವಿ ಮದುವೆ ಮುಂದೂಡಿಕೆಯಾಗಿ.. ಸಹೋದರಿ ಪೂಜಾ ಕಣ್ಣನ್ ಮದುವೆಗೆ ಭಾರೀ ಸದ್ದು ಮಾಡಿರುವುದು ಕುತೂಹಲಕ್ಕೆ ಕಾರಣವಾಗಿದೆ. ಇತ್ತೀಚೆಗಷ್ಟೇ ನಿಶ್ಚಿತಾರ್ಥವನ್ನೂ ಅವರೇ ಮುಂದೆ ನಿಂತು ನಡೆಸಿಕೊಟ್ಟಿದ್ದಾರೆ.. ಇದಕ್ಕೆ ಸಂಬಂಧಿಸಿದ ಫೋಟೋಗಳು ಮತ್ತು ವಿಡಿಯೋಗಳು ವೈರಲ್ ಆಗಿವೆ. 

ಇದನ್ನೂ ಓದಿ-Kiccha Sudeep: ಮಾತಿನಲ್ಲೇ ಗುಮ್ಮಿದ ʻಗೂಳಿʼ.. ಕಿಚ್ಚನಿಗೆ ʻSORRYʼ ಕೇಳಿದ ರಕ್ಷಕ್‌ ಬುಲೆಟ್!

ಸಾಯಿ ಪಲ್ಲವಿ ನಿಜವಾಗಿಯೂ 23 ನೇ ವಯಸ್ಸಿನಲ್ಲಿ ಮದುವೆಯಾಗಿ 30 ವರ್ಷಕ್ಕೆ ಇಬ್ಬರು ಮಕ್ಕಳ ತಾಯಿಯಾಗಲು ಬಯಸಿದ್ದರಂತೆ.... ಈ ವಿಷಯವನ್ನು ಅವರೇ ಹೇಳಿದ್ದಾರೆ. ಆದರೆ ಇದೀಗ ತಮ್ಮ ಮದುವೆಯನ್ನು ಮುಂದೂಡಿ ತಂಗಿಯ ಆರಕ್ಷತೆಗೆ ಸಿದ್ಧರಾಗಿದ್ದಾರೆ. ಇದಕ್ಕೆ ಕಾರಣ ಏನು ಅಂತೀರಾ ಇಲ್ಲಿದೆ ಉತ್ತರ.. 

ಇದನ್ನೂ ಓದಿ-ಫೆಬ್ರವರಿ 23ಕ್ಕೆ ‘ಫಾರ್​ ರಿಜಿಸ್ಟ್ರೇಷನ್​’ ರಿಲೀಸ್, ಅದೃಷ್ಟದ ತಿಂಗಳಲ್ಲೇ ಅಖಾಡಕ್ಕಿಳಿದ‌ ಮಿಲನಾ-ಪೃಥ್ವಿ

ತೆಲುಗು ಪ್ರೇಕ್ಷಕರಿಗೆ ಪರಿಚಯವಾದಾಗ ಸಾಯಿ ಪಲ್ಲವಿ ಹಲವು ವಾಹಿನಿಗಳಿಗೆ ಸಂದರ್ಶನ ನೀಡಿದರು. ಆ ಸಮಯದಲ್ಲಿ, ಅವರು ತಮ್ಮ ಮದುವೆಯ ಪ್ರಸ್ತಾಪಕ್ಕೆ ನಿರ್ಭಯವಾಗಿ ಪ್ರತಿಕ್ರಿಯಿಸಿದ್ದಾರೆ.. ಇದೀಗ ಆ ಕಾಮೆಂಟ್‌ಗಳು ವೈರಲ್ ಆಗಿವೆ.. 

"ನಾನು 18 ವರ್ಷದವಳಿದ್ದಾಗ 23 ವರ್ಷಕ್ಕೆ ಮದುವೆಯಾಗಬೇಕು.. 30 ವರ್ಷಕ್ಕಿಂತ ಮುಂಚೆಯೇ ಎರಡು ಮಕ್ಕಳಿಗೆ ಜನ್ಮ ನೀಡಬೇಕು ಎಂದುಕೊಂಡಿದ್ದೆ.. ಎಂಬಿಬಿಎಸ್ ಮಾಡುವ ಆರಂಭದಲ್ಲಿ ನಾನು ಹಾಗೆ ಯೋಚಿಸಿದೆ. ಆದರೆ ನಂತರ ನಾನು ಆ ನಿರ್ಧಾರಗಳನ್ನು ಬದಲಾಯಿಸಿದೆ.. ನಮ್ಮ ಮನೆಯ ಕೆಲವು ಪ್ರಮುಖ ಜವಾಬ್ದಾರಿಗಳನ್ನು ನಾನು ತೆಗೆದುಕೊಳ್ಳಬೇಕಾಗಿರುವುದರಿಂದ ನಾನು ಮದುವೆಯನ್ನು ಮುಂದೂಡಿದೆ. ಆದರೆ ನಟಿಯಾಗಿ ಒಳ್ಳೆ ಹೆಸರು ಬಂದಿದ್ದರಿಂದ ಮದುವೆಗೆ ಇನ್ನು ಕಾಲಾವಕಾಶ ಇದೆ.. ಮತ್ತೊಂದೆಡೆ ನಾನು ಮದುವೆಯಾಗಲಿರುವ ಪುರುಷ ಮುಗ್ದನಾಗಿರಬೇಕು, ಹೆಣ್ಣನ್ನು ಗೌರವಿಸುವಂತವನಾಗಿರಬೇಕು" ಎಂದು ಹೇಳಿದ್ದರು..  

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

 

Trending News