ʼದಿ ಕೇರಳ ಸ್ಟೋರಿʼ ನಿರ್ಮಾಪಕರ ಮುಂದಿನ ಸಿನಿಮಾ ಯಾವುದು ಗೊತ್ತಾ..ಇಲ್ಲಿದೆ ಕಂಪ್ಲೀಟ್‌ ಡಿಟೇಲ್ಸ್‌ ..!

Sudipto Sen Upcoming Movie : ಸಾಕಷ್ಟು ಅಡೆ ತಡೆಗಳನ್ನು ಮೀರಿ ತೆರೆ ಕಂಡ ಸಿನಿಮಾ ʼದಿ ಕೇರಳ ಸ್ಟೋರಿʼ. ಇದೀಗ ಈ ಸಿನಿಮಾದ ನಿರ್ದೇಶಕ ಸುದೀಪ್ತೋ ಸೇನ್‌ ಮತ್ತೊಂದು ಸಿನಿಮಾವನ್ನು ಘೋಷಿಸಿದ್ದು, ಅದೇ ʼಬಸ್ತರ್‌ʼ.   

Written by - Savita M B | Last Updated : Jun 26, 2023, 01:22 PM IST
  • ʼದಿ ಕೇರಳ ಸ್ಟೋರಿʼ ಸಿನಿಮಾ ರಿಲೀಸ್‌ಗೂ ಮುನ್ನವೆ ವಿವಾದಗಳನ್ನು ಸೃಷ್ಟಿಸಿತ್ತು.
  • ʼದಿ ಕೇರಳ ಸ್ಟೋರಿʼ ಸಿನಿಮಾದ ನಿರ್ದೇಶಕ ಮತ್ತೊಂದು ಸಿನಿಮಾದಲ್ಲಿ ಬ್ಯೂಸಿಯಾಗಿದ್ದಾರೆ.
  • ಹೌದು ನಿರ್ದೇಶಕ ಸುದೀಪ್ತೋ ಸೇನ್‌ ತಮ್ಮ ಮುಂದಿನ ಸಿನಿಮಾದ ಬಗ್ಗೆ ಮಾಹಿತಿ ನೀಡಿದ್ದಾರೆ.
ʼದಿ ಕೇರಳ ಸ್ಟೋರಿʼ ನಿರ್ಮಾಪಕರ ಮುಂದಿನ ಸಿನಿಮಾ ಯಾವುದು ಗೊತ್ತಾ..ಇಲ್ಲಿದೆ ಕಂಪ್ಲೀಟ್‌ ಡಿಟೇಲ್ಸ್‌ ..!  title=

The Kerala Story : ʼದಿ ಕೇರಳ ಸ್ಟೋರಿʼ ಸಿನಿಮಾ ರಿಲೀಸ್‌ಗೂ ಮುನ್ನವೆ ವಿವಾದಗಳನ್ನು ಸೃಷ್ಟಿಸಿತ್ತು. ರಾಜಕೀಯ ಮುಖಂಡರು ಸೇರಿದಂತೆ ಹಲವಾರು ಸಂಘಟನೆಗಳು ಈ ಸಿನಿಮಾ ವಿರುದ್ಧ ಸಿಡಿದೆದಿದ್ದರು. ಇಷ್ಟೆಲ್ಲಾ ಆದರೂ ಸಿನಿಮಾ ಮಾತ್ರ ಭರ್ಜರಿ ಪ್ರದರ್ಶನ ಕಂಡಿದ್ದು ಅಚ್ಚರಿಯ ವಿಷಯ. ಹೌದು ʼದಿ ಕೇರಳ ಸ್ಟೋರಿʼ ಕಡಿಮೆ ಬಜೆಟ್‌ ಸಿನಿಮಾ ಆದರು ಕೂಡ ಬಾಕ್ಸಾ ಆಫೀಸ್‌ನಲ್ಲಿ ಭರ್ಜರಿ ಕಲೆಕ್ಷನ್‌ ಮಾಡಿತ್ತು.

ಇನ್ನು ʼದಿ ಕೇರಳ ಸ್ಟೋರಿʼ ಸಿನಿಮಾದ ನಿರ್ದೇಶಕ ಮತ್ತೊಂದು ಸಿನಿಮಾದಲ್ಲಿ ಬ್ಯೂಸಿಯಾಗಿದ್ದಾರೆ. ಹೌದು ನಿರ್ದೇಶಕ ಸುದೀಪ್ತೋ ಸೇನ್‌ ತಮ್ಮ ಮುಂದಿನ ಸಿನಿಮಾದ ಬಗ್ಗೆ ಮಾಹಿತಿ ನೀಡಿದ್ದಾರೆ. ಈ ಕುರಿತು ಸನ್‌ ಶೈನ್‌ ಪಿಕ್ಚರ್ಸ್‌ ಟ್ವಿಟ್‌ ಮಾಡಿದ್ದು, "ನಮ್ಮ ಮುಂದಿನ ಸಿನಿಮಾ ʼಬಸ್ತರ್ʼ. ನಿಮ್ಮನ್ನು ಮೂಕವಿಸ್ಮಿತರನ್ನಾಗಿಸುವ ಮತ್ತೊಂದು ನೈಜ ಘಟನೆಗೆ ಸಾಕ್ಷಿಯಾಗಲು ಸಿದ್ಧರಾಗಿ. ಏಪ್ರಿಲ್ 5, 2024 ಕ್ಕೆ ನಿಮ್ಮ ಕ್ಯಾಲೆಂಡರ್‌ಗಳಲ್ಲಿ ಗುರುತಿಸಿ" ಎಂದು ಬರೆದುಕೊಂಡಿದೆ. 

ಇದನ್ನೂ ಓದಿ-ತಮಿಳು ಯುವನಟನ ಜೊತೆ ಐಶ್ವರ್ಯಾ ʻಪ್ರೇಮಬರಹʼ, ಅರ್ಜುನ್ ಸರ್ಜಾ ಅಳಿಯ ಇವರೇ !

ಶಾ ನಿರ್ದೇಶನದಲ್ಲಿ ಮೂಡಿಬಂದ ಸುದೀಪ್ತೋ ಸೇನ್‌ ನಿರ್ಮಾಣದ ʼದಿ ಕೇರಳ ಸ್ಟೋರಿʼ ಸಿನಿಮಾ ಮೇ 5 ರಂದು ಬಿಡುಗಡೆಯಾಗಿ 200 ಗಳಿಸಿರುವ ಸಿನಿಮಾಗಳ ಪಟ್ಟಿಗೆ ಸೇರಿಕೊಂಡು ಯಶಸ್ವಿ ಚಿತ್ರವಾಗಿ ಹೊರಹೊಮ್ಮಿದ ಈ ಸಿನಿಮಾವನ್ನು ಪಶ್ಚಿಮ ಬಂಗಾಳ ಸರ್ಕಾರ ನಿಷೇಧಿಸಿತು. ಇನ್ನು ತಮಿಳುನಾಡಿನಲ್ಲಿ ಕಾನೂನು-ಸುವ್ಯವಸ್ಥೆ ಪರಿಸ್ಥಿತಿ ಹಾಗೂ ಪ್ರೇಕ್ಷಕರ ಸಂಖ್ಯೆ ಕಡಿಮೆಯಾಗಿದೆ ಎಂಬ ಕಾರಣಕ್ಕೆ ಚಿತ್ರಮಂದಿರಗಳು ಪ್ರದರ್ಶನ ನಿಲ್ಲಿಸಲು ನಿರ್ಧರಿಸಿದ್ದವು.

ಇದೇ ʼದಿ ಕೇರಳ ಸ್ಟೋರಿʼ ಸಿನಿಮಾ ಮದ್ಯ ಪ್ರದೇಶ, ಉತ್ತರ ಪ್ರದೇಶ, ಉತ್ತರಾಖಾಂಡ, ಹರಿಯಾಣದಂತಹ ಬಿಜೆಪಿ ಆಡಳಿತದ ರಾಜ್ಯಗಳಲ್ಲಿ ತೆರಿಗೆ ಮುಕ್ತ ಸ್ಥಾನಮಾನವನ್ನು ಪಡೆಯಿತು. ಇನ್ನು ಈ ಚಿತ್ರದಲ್ಲಿ ನಾಯಕಿಯಾಗಿ ಅದಾ ಶರ್ಮಾ ನಟಿಸಿದ್ದು, ಯೋಗಿತಾ ಬಿಹಾನಿ, ಸೋನಿಯಾ ಬಲಾನಿ ಮತ್ತು ಸಿದ್ಧಿ ಇದ್ನಾನಿ ಸಹ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಇದನ್ನೂ ಓದಿ- Actress Ramya: ಅಭಿಮಾನಿ ಜೊತೆ ಸರಳತೆ ಮೆರೆದ ಮೋಹಕ ತಾರೆ ರಮ್ಯಾ; ಪದ್ಮಾವತಿ ಸಿಂಪ್ಲಿಸಿಟಿಗೆ ಫ್ಯಾನ್ಸ್‌ ಫಿದಾ!

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News