Kantara: ‘ಕಾಂತಾರ’ ಸ್ಟೋರಿ ಹುಟ್ಟಿದ್ದು ಹೇಗೆ, ಯಾವಾಗ ಗೊತ್ತಾ..?

ಪ್ರಾದೇಶಿಕ ಕಥೆಗಳು ಹೆಚ್ಚು ಜನರಿಗೆ ತಲುಪುತ್ತವೆ ಎಂಬುದು ನನ್ನ ಅಭಿಪ್ರಾಯ. ಕಾಂತಾರ ಸಿನಿಮಾದ ಕಥೆ ಬರೆಯಲು ಆರಂಭಿಸಿದ್ದು ಕೋವಿಡ್‌ ಸಮಯದಲ್ಲಿ ಅಂತಾ ನಿರ್ದೇಶಕ ರಿಷಬ್ ಶೆಟ್ಟಿ ಹೇಳಿದ್ದಾರೆ.

Written by - YASHODHA POOJARI | Edited by - Puttaraj K Alur | Last Updated : Nov 29, 2022, 12:10 PM IST
  • ಬಾಕ್ಸಾ ಆಫೀಸ್ ಧೂಳಿಪಟ ಮಾಡಿದ ಕನ್ನಡದ ಹೆಮ್ಮೆಯ ‘ಕಾಂತಾರ’ ಸಿನಿಮಾ
  • ‘ಕಾಂತಾರ’ ಸಿನಿಮಾದ ಕಥೆ ಹುಟ್ಟಿದ್ದು ಹೇಗೆ ಮತ್ತು ಯಾವಾಗ ಗೊತ್ತಾ..?
  • ನಿರ್ದೇಶಕ ರಿಷಬ್ ಶೆಟ್ಟಿ ಹೇಳಿದ ‘ಕಾಂತಾರ’ ಸಿನಿಮಾದ ಕಥೆ ಏನು ಗೊತ್ತಾ?
Kantara: ‘ಕಾಂತಾರ’ ಸ್ಟೋರಿ ಹುಟ್ಟಿದ್ದು ಹೇಗೆ, ಯಾವಾಗ ಗೊತ್ತಾ..?  title=
‘ಕಾಂತಾರ’ ಸ್ಟೋರಿ ಹುಟ್ಟಿದ್ದು ಹೇಗೆ?

ಬೆಂಗಳೂರು: ಕಾಂತಾರ.. ಕಾಂತಾರ ಎಲ್ಲಾ ಕಡೆ ಇದರದ್ದೇ ಮಾತು. ಎಲ್ಲೋದ್ರೂ, ಯಾರತ್ರ ಮಾತಾಡಿಸಿದ್ರು ಬರೀ ಈ ಟೈಟಲ್ ಮಾತ್ರ ಪ್ರತಿಯೊಬ್ಬರ ನಾಲಿಗೆಯಲ್ಲಿ ಪ್ರತಿನಿತ್ಯ ಹರಿದಾಡುತ್ತಿದೆ. ಪುಟ್ಟಮಕ್ಕಳು ಕೂಡ ಈ ಸಿನಿಮಾ ಬಗ್ಗೆ ಮಾತನಾಡುತ್ತಾರೆ ಅಂದ್ರೆ ನೀವು ಲೆಕ್ಕಹಾಕಿ ಈ ಸಿನಿಮಾ ಜನಮನಕ್ಕೆ ಎಷ್ಟು ಹತ್ತಿರವಾಗಿದೆ ಅಂತ.

ಬ್ಲಾಕ್‌ಬಸ್ಟರ್‌ ‘ಕಾಂತಾರ’ ಸಿನಿಮಾದ ನಂತರ ನಟ, ನಿರ್ದೇಶಕ ರಿಷಬ್ ಶೆಟ್ಟಿ ದೇಶದಾದ್ಯಂತ ಜನಪ್ರಿಯರಾಗಿದ್ದಾರೆ. ದೇಶದೆಲ್ಲೆಡೆ ‘ಕಾಂತಾರ’ ಮ್ಯಾಜಿಕ್‌ ಮುಂದುವರೆದಿದೆ. ಈ ಸಿನಿಮಾ ನೋಡಿದ ಕಾಲಿವುಡ್‌, ಬಾಲಿವುಡ್‌ ಗಣ್ಯರು ಮತ್ತು ಪ್ರಮುಖ ರಾಜಕಾರಣಿಗಳು ರಿಷಬ್‍ರನ್ನು ಭೇಟಿಯಾಗಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಶ್ರೀ ಬಂಡಿ ಮಂಕಾಳಮ್ಮ ದೇವಸ್ಥಾನದಲ್ಲಿ ನಡೀತು 'ಕಾಳಿ' ಚಿತ್ರದ ಮುಹೂರ್ತ

ನಾನು ಎಲ್ಲೇ ಹೋದರೂ ಕನ್ನಡ ಸಿನಿಮಾನೇ ನನ್ನ ಮೊದಲ ಆದ್ಯತೆ ಅನ್ನೋ ಮಾತನ್ನು ಇತ್ತೀಚೆಗೆ ನಡೆದ ಗೋವಾ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿಅತಿಥಿಯಾಗಿ ಭಾಗವಹಿಸಿದ್ದ ರಿಷಬ್ ಶೆಟ್ಟಿ ಹೇಳಿದ್ರು. ಈ ಮಾತನ್ನು ಕೇಳಿದ ಕನ್ನಡ ಅಭಿಮಾನಿಗಳು ರಿಷಬ್ ಸಿಕ್ರೆ ಎತ್ತಿ ಮುದ್ದಾಡಬೇಕು ಅಂತಾ ಹೇಳುತ್ತಿದ್ದಾರೆ. ಅಷ್ಟೇ ಅಲ್ಲದೇ ಕಾಂತಾರ ಸಿನಿಮಾವನ್ನು ಈ ಮಟ್ಟಕ್ಕೆ ಯಶಸ್ಸು ತಂದುಕೊಡುವಲ್ಲಿ ಅಭಿಮಾನಿಗಳು ತೋರಿಸಿದ ಪ್ರೀತಿಗೆ ಧನ್ಯವಾದ ತಿಳಿಸಿ ಕಾಂತಾರ ಕಥೆ ಹುಟ್ಟಿಕೊಂಡ ಬಗ್ಗೆ ಕೂಡ ಹಂಚಿಕೊಂಡಿದ್ದಾರೆ.

ಪ್ರಾದೇಶಿಕ ಕಥೆಗಳು ಹೆಚ್ಚು ಜನರಿಗೆ ತಲುಪುತ್ತವೆ ಎಂಬುದು ನನ್ನ ಅಭಿಪ್ರಾಯ. ಕಾಂತಾರ ಸಿನಿಮಾದ ಕಥೆ ಬರೆಯಲು ಆರಂಭಿಸಿದ್ದು ಕೋವಿಡ್‌ ಸಮಯದಲ್ಲಿ. ಕಥೆಯ ಮೊದಲ ಡ್ರಾಫ್ಟ್‌ನಲ್ಲಿದ್ದದ್ದು ಕೃಷಿ ಭೂಮಿಯ ಕಥೆ. ನಂತರ ಅದು ಮುರಳಿ ಮತ್ತು ಶಿವನ ನಡುವಿನ ಜಿದ್ದಾಜಿದ್ದಿಯಾಯಿತು. ನಂತರ ಮನುಷ್ಯ ಮತ್ತು ಪ್ರಕೃತಿ ನಡುವಿನ ಕಥೆಯಾಗಿ ಮಾರ್ಪಾಟಾಯಿತು. ನಾನು ಸಣ್ಣ ವಯಸ್ಸಿನಿಂದಲೂ ಕಂಬಳ, ದೈವಾರಾಧನೆ ನೋಡಿಕೊಂಡು ಬೆಳೆದವನು. ಯಕ್ಷಗಾನವನ್ನೂ ಕಲಿತಿದ್ದೇನೆ. ಇವೆಲ್ಲವನ್ನು ಈ ಸಿನಿಮಾ ಕಥೆಯಲ್ಲಿ ಸೇರಿಸಬೇಕು ಎಂಬುದು ನನ್ನ ಆಸೆಯಾಗಿತ್ತು. ಹೀಗಾಗಿ ಅವೆಲ್ಲವನ್ನು ಸೇರಿಸಿದೆ. ಅದು ಜನರ ಭಾವನೆಗೆ ಹತ್ತಿರವಾಗಿ ಗೆಲುವು ಸಿಕ್ಕಿತು ಅನ್ನೋ ವಿಷಯವನ್ನು ರಿಷಬ್ ರಿವಿಲ್ ಮಾಡಿದ್ದಾರೆ.  

ಇದನ್ನೂ ಓದಿ: ಹಿಂಗಾ ಶಾಕ್ ಕೊಡೋದು ವಸಿಷ್ಠ ಸಿಂಹ ಮತ್ತು ಹರಿಪ್ರಿಯಾ...?

ಅದೇನೇ ಇರಲಿ ಇವತ್ತಿಗೂ ಕಾಂತಾರ ಕ್ರೇಜ್ ಮಾತ್ರ ಇನ್ನೂ ಕಮ್ಮಿಯಾಗಿಲ್ಲ. ಪಟ್ಟ ಕಷ್ಟಕ್ಕೆ ತಕ್ಕ ಯಶಸ್ಸು ಸಿಕ್ಕಿದೆ. ಹೀಗೆ ಕನ್ನಡ ಸಿನಿಮಾಗಳು ಪ್ರಪಂಚದಾದ್ಯಂತ ರಾರಾಜಿಸಲಿ ಅನ್ನೋದೇ ನಮ್ಮ ಆಶಯ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News