Disha Patani : ಹೊಸ ಬಾಯ್‌ಫ್ರೆಂಡ್ ಜೊತೆ ದಿಶಾ ಡೇಟಿಂಗ್‌..ವಿಡಿಯೋ ವೈರಲ್‌..!

Disha Patani New  Boyfriend : ಇತ್ತೀಚೆಗೆ ಬಾಲಿವುಡ್‌ನಲ್ಲಿ ನಟ-ನಟಿಯರ ಡೇಟಿಂಗ್‌, ಬ್ರೇಕಪ್‌ ಕಾಮನ್‌ ಎನ್ನುವಂತಾಗಿದೆ. ಸದ್ಯ ನಟಿ ದಿಶಾ ಪಟಾನಿ ಪಾರ್ಟಿಯಲ್ಲಿ ತಮ್ಮ ಸ್ನೇಹಿತರಿಗೆ ಈತ ನನ್ನ 'ಬಾಯ್‌ಫ್ರೆಂಡ್' ಎಂದು ಪರಿಚಯ ಮಾಡಿಕೊಟ್ಟಿರುವುದು ಕ್ಯಾಮರಾದಲ್ಲಿ ಸೆರೆಯಾಗಿದ್ದು, ವಿಡಿಯೋ ಸೋಷಿಯಲ್‌ ಮಿಡಿಯಾದಲ್ಲಿ ಸಖತ್‌ ವೈರಲ್‌ ಆಗುತ್ತಿದೆ.   

Written by - Savita M B | Last Updated : Aug 7, 2023, 11:33 AM IST
  • ಇದೀಗ ದಿಶಾ ಪಟಾನಿ ತನ್ನ ಹೊಸ ಬಾಯ್‌ಫ್ರೆಂಡ್‌ ಪರಿಚಯ ಮಾಡಿಕೊಟ್ಟಿದ್ದಾಳೆ.
  • ಸದ್ಯ ಈ ವಿಡಿಯೋ ವೈರಲ್‌ ಆಗುತ್ತಿದೆ
  • ದಿಶಾ ಟೈಗರ್‌ ಅವರ ಜೊತೆ ಬ್ರೇಕಪ್‌ ಮಾಡಿಕೊಂಡಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿವೆ.
Disha Patani : ಹೊಸ ಬಾಯ್‌ಫ್ರೆಂಡ್ ಜೊತೆ ದಿಶಾ ಡೇಟಿಂಗ್‌..ವಿಡಿಯೋ ವೈರಲ್‌..!  title=

Disha Patani : ಬಾಲಿವುಡ್‌ನಲ್ಲಿ ಯಾರು ಯಾರೊಟ್ಟಿಗೆ ಯಾವಾಗ ಡೇಟ್‌ ಮಾಡುತ್ತಾರೆ? ಯಾವಾಗ ಮದುವೆ ಆಗ್ತಾರೆ? ಯಾವಾಗ ಡಿವೋರ್ಸ್‌ ಮಾಡಿಕೊಳ್ಳತ್ತಾರೆ? ಕೊನೆಗೆ ಯಾರ ಕೈ ಹಿಡಿಯುತ್ತಾರೆ? ಹೊಸ ಅಫೇರ್? ಎಲ್ಲವೂ ನಡೆಯುತ್ತಲೇ ಇರುತ್ತದೆ. ಇದೀಗ ದಿಶಾ ಪಟಾನಿ ತನ್ನ ಹೊಸ ಬಾಯ್‌ಫ್ರೆಂಡ್‌ ಪರಿಚಯ ಮಾಡಿಕೊಟ್ಟಿದ್ದಾಳೆ. 

ದಿಶಾ ಪಟಾನಿ ಹಾಗೂ ನಟ ಟೈಗರ್ ಶ್ರಾಫ್ ಡೇಟಿಂಗ್ ಮಾಡುತ್ತಿದ್ದಾರೆ ಎನ್ನುವ ಸುದ್ದಿ ಸಖತ್‌ ಸೌಂಡ್‌ ಮಾಡಿತ್ತು. ಪಾರ್ಕ್‌, ಪಬ್ಬು, ಈವೆಂಟ್‌ಗಳಲ್ಲಿ ಇವರಿಬ್ಬರು ಒಟ್ಟಾಗಿ ಕಾಣಿಸಿಕೊಳ್ಳುತ್ತಿದ್ದರು. ಇವರನ್ನು ನೋಡಿದವರು ರಿಲೇಷನ್‌ಶಿಪ್‌ನಲ್ಲಿದ್ದಾರೆ ಎನ್ನುತ್ತಿದ್ದರು. ಈ ಜೋಡಿ ಮದುವೆ ಆಗುತ್ತೆ ನಿರೀಕ್ಷೆ ಇತ್ತು. ಆದರೆ ಇದೀಗ ದಿಶಾ ಪಟಾನಿ ದಿಢೀರನೇ ಅಲೆಕ್ಸಾಂಡರ್ ಅಲೆಕ್ಸಿಕ್ ನನ್ನ ಬಾಯ್‌ಫ್ರೆಂಡ್ ಎಂದು ಹೇಳಿರುವ ವಿಡಿಯೋ ವೈರಲ್ ಆಗ್ತಿದೆ.

ಇದನ್ನೂ ಓದಿ-ಸ್ವಿಮ್ ಸೂಟ್‌ನಲ್ಲಿ ಮಾಳವಿಕಾ ಶೈನಿಂಗ್‌ : ಹಾಟ್‌ ಫೋಟೋಸ್‌ ನೋಡಿ

ದಿಶಾ ಪಟಾನಿ ಹಾಗೂ ಅಲೆಕ್ಸಾಂಡರ್ ಅಲೆಕ್ಸಿಕ್ ಕೆಲದಿನಗಳಿಂದ ಜೋಡಿಯಾಗಿ ಕಾಣಿಸಿಕೊಳ್ಳುತ್ತಿದ್ದರು. ಬೆಸ್ಟ್‌ ಫ್ರೆಂಡ್ಸ್‌ ಎಂದು ಹೇಳುತ್ತಿದ್ದರು. ದಿಶಾ ಟೈಗರ್‌ ಅವರ ಜೊತೆ ಬ್ರೇಕಪ್‌ ಮಾಡಿಕೊಂಡಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿವೆ. ಸದ್ಯ ದಿಶಾ ಪಟಾನಿ ಅಲೆಕ್ಸಾಂಡರ್ ಅಲೆಕ್ಸಿಕ್ ನನ್ನ ಬಾಯ್‌ಫ್ರೆಂಡ್‌ ಎಂದು ಹೇಳಿರುವುದರಿಂದ ಈ ಬ್ರೇಕಪ್‌ ವದಂತಿ ನಿಜ ಎನ್ನುವಂತಾಗಿದೆ. 

ಪಾರ್ಟಿಯೊಂದರಲ್ಲಿ ದಿಶಾ ಅಲೆಕ್ಸಾಂಡರ್‌ ಅಲೆಕ್ಸಿಕ್‌ ಜೊತೆ ಕಾಣಿಸಿಕೊಂಡಿದ್ದು, ತಮ್ಮ ಸ್ನೇಹಿತರಿಗೆ ಈತ ನನ್ನ 'ಬಾಯ್‌ಫ್ರೆಂಡ್' ಎಂದು ಪರಿಚಯ ಮಾಡಿಕೊಟ್ಟಿರುವುದು ಕ್ಯಾಮರಾದಲ್ಲಿ ರೆಕಾರ್ಡ್‌ ಆಗಿದೆ. ಸದ್ಯ ಈ ವಿಡಿಯೋ ಸೋಷಿಯಲ್‌ ಮಿಡಿಯಾದಲ್ಲಿ ಸಖತ್‌ ವೈರಲ್‌ ಆಗಿದೆ. ಜೊತೆಗೆ ಇವರಿಬ್ಬರು ಮದುವೆಯಾಗುತ್ತಾರೆ ಎನ್ನುವ ಸುದ್ದಿಗಳೂ ಹರಿದಾಡುತ್ತಿವೆ. 

ಇದನ್ನೂ ಓದಿ-Harshika Poonacha : ಹಸೆಮಣೆ ಏರಲು ಸಜ್ಜಾದ ನಟಿ..ವಿಶೇಷವಾಗಿ ಲಗ್ನ ಪತ್ರಿಕೆ ಹಂಚಿಕೊಂಡ ಹರ್ಷಿಕಾ-ಭುವನ್..!

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News