Virat Kohli: ಕಿಂಗ್‌ ಕೊಹ್ಲಿ ಫ್ಯಾನ್ಸ್‌ಗೆ ನಿರ್ದೇಶಕ ಸಿಂಪಲ್ ಸುನಿ ಭರ್ಜರಿ ಆಫರ್

ಸದ್ಯ ಎಲ್ಲೆಲ್ಲೂ ಐಪಿಎಲ್‌ ಹವಾ ಜೋರಾಗಿದೆ. ಅದರಲ್ಲೂ ಇಂದು ಕರ್ನಾಟಕದ ಆರ್‌ಸಿಬಿ ತಂಡದ ಮ್ಯಾಚ್‌ ಇದೆ. ಇದೇ ಕಾರಣಕ್ಕಾಗಿ ಕಿಂಗ್‌ ಕೊಹ್ಲಿ ಅಭಿಮಾನಿಗಳಿಗೆ ನಿರ್ದೇಶಕ ಸಿಂಪಲ್ ಸುನಿ ಹೊಸ ಆಫರ್ ಘೋಷಿಸಿದ್ದಾರೆ.

Written by - Chetana Devarmani | Last Updated : May 4, 2022, 06:40 PM IST
  • ಸದ್ಯ ಎಲ್ಲೆಲ್ಲೂ ಐಪಿಎಲ್‌ ಹವಾ ಜೋರಾಗಿದೆ
  • ಅದರಲ್ಲೂ ಇಂದು ಕರ್ನಾಟಕದ ಆರ್‌ಸಿಬಿ ತಂಡದ ಮ್ಯಾಚ್‌ ಇದೆ
  • ಕಿಂಗ್‌ ಕೊಹ್ಲಿ ಅಭಿಮಾನಿಗಳಿಗೆ ನಿರ್ದೇಶಕ ಸಿಂಪಲ್ ಸುನಿ ಹೊಸ ಆಫರ್
Virat Kohli: ಕಿಂಗ್‌ ಕೊಹ್ಲಿ ಫ್ಯಾನ್ಸ್‌ಗೆ ನಿರ್ದೇಶಕ ಸಿಂಪಲ್ ಸುನಿ ಭರ್ಜರಿ ಆಫರ್  title=
ಕಿಂಗ್‌ ಕೊಹ್ಲಿ

ಸದ್ಯ ಎಲ್ಲೆಲ್ಲೂ ಐಪಿಎಲ್‌ ಹವಾ ಜೋರಾಗಿದೆ. ಅದರಲ್ಲೂ ಇಂದು ಕರ್ನಾಟಕದ ಆರ್‌ಸಿಬಿ ತಂಡದ ಮ್ಯಾಚ್‌ ಇದೆ. ಇದೇ ಕಾರಣಕ್ಕಾಗಿ ಕಿಂಗ್‌ ಕೊಹ್ಲಿ ಅಭಿಮಾನಿಗಳಿಗೆ ನಿರ್ದೇಶಕ ಸಿಂಪಲ್ ಸುನಿ ಹೊಸ ಆಫರ್ ಘೋಷಿಸಿದ್ದಾರೆ. ಇಂದು (ಮೇ 4 ರಂದು) ನಡೆಯುವ ಆರ್​ಸಿಬಿ ಮತ್ತು ಸಿಎಸ್​ಕೆ ನಡುವಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಸೆಂಚುರಿ ಬಾರಿಸಿದರೆ ಅಭಿಮಾನಿಗಳಿಗೆ ಉಚಿತ ಟಿಕೇಟ್ ಸಿಗಲಿದೆ. ಅದೂ ಅವರು ಬಯಸಿದ ಚಿತ್ರಮಂದಿರಗಳಲ್ಲಿ. ಆದರೆ ಇದಕ್ಕೊಂದು ಷರತ್ತು ಅನ್ವಯವಾಗುತ್ತೆ.

ಇದನ್ನೂ ಓದಿ: ರವಿಚಂದ್ರನ್‌ ಪುತ್ರನ ʻವಿವಾಹ ಆಹ್ವಾನʼ ಪತ್ರಿಕೆ! ಇಲ್ಲಿದೆ ವೈರಲ್ ಫೋಟೋದ ಅಸಲಿಯತ್ತು

ನಿರ್ದೇಶಕ ಸಿಂಪಲ್ ಸುನಿ ಸದ್ಯ ಅವತಾರ ಪುರುಷ ಚಿತ್ರದ ಬಿಡುಗಡೆಗೆ ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ. ಈಗಾಗಲೇ ಟ್ರೇಲರ್ ಮೂಲಕ ಚಿತ್ರ ಅಪಾರ ನಿರೀಕ್ಷೆ ಮೂಡಿಸಿದೆ. ಇದೀಗ ಅಭಿಮಾನಿಗಳಿಗೆ ಹೊಸ ಆಫರ್ ಘೋಷಿಸಿದ್ದಾರೆ, ಅದು ಕೂಡ ಆರ್‌ಚಿಸಿ ಮ್ಯಾಚ್‌ ದಿನದಂದು. 

ಇಂದು ನಡೆಯುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಸೆಂಚುರಿ ಬಾರಿಸಿದರೆ ಅವರ ಫ್ಯಾನ್ಸ್‌ಗೆ ಉಚಿತ ಟಿಕೇಟ್ ಸಿಗಲಿದೆ. ಅದೂ ಅವರು ಬಯಸಿದ ಚಿತ್ರಮಂದಿರಗಳಲ್ಲಿ. ಆದರೆ ಇದಕ್ಕೆ ನಿರ್ದೇಶಕ ಸಿಂಪಲ್‌ ಸುನಿ ಒಂದು ಷರತ್ತನ್ನು ಸಹ ವಿಧಿಸಿದ್ದಾರೆ. 

 

 

ಕೊಹ್ಲಿ ಸೆಂಚುರಿ ಹೊಡೆದರೆ ಉಚಿತ ಟಿಕೆಟ್ ನೀಡುವುದಾಗಿ ಸಿಂಪಲ್ ಸುನಿ ಘೋಷಿಸಿದ ಟ್ವೀಟ್​ಅನ್ನು ರಿಟ್ವೀಟ್ ಮಾಡಬೇಕು. ಒಂದು ವೇಳೆ ಕೊಹ್ಲಿ 100 ರನ್ ಬಾರಿಸಿದರೆ ರಿಟ್ವೀಟ್ ಮಾಡಿದವರಿಗೆ ಟಿಕೆಟ್ ಬುಕ್​ಅನ್ನು ಉಚಿತವಾಗಿ ಬುಕ್ ಮಾಡಿ ಕೊಡಲಾಗುವುದು ಎಂದು ಹೇಳಿದ್ದಾರೆ.

ಇದನ್ನೂ ಓದಿ: Sonu Nigam: "ಅವರು ಹಿಂದಿಯಲ್ಲಿ ಏಕೆ ಮಾತನಾಡಬೇಕು?": ಗಾಯಕ ಸೋನು ನಿಗಮ್

ಸಿಂಪಲ್ ಸುನಿ ವಿಭಿನ್ನ ರೀತಿಯ ಪ್ರಚಾರಗಳಿಗೆ ಹೆಸರುವಾಸಿಯಾದವರು. ಈ ಹಿಂದೆಯೂ ಕೂಡ ಅವರು ಹಲವು ವಿಭಿನ್ನ ಪ್ರಚಾರದ ಮಾರ್ಗಗಳ ಮೂಲಕ ಜನರ ಮನಗೆದ್ದಿದ್ದರು. ಇದೀಗ ಅವರ ಈ ಹೊಸ ಟ್ವೀಟ್ ಕೂಡ ಸಖತ್ ಸದ್ದು ಮಾಡುತ್ತಿದ್ದು, ಈಗಾಗಲೇ ಸುಮಾರು 3000ಕ್ಕೂ ಹೆಚ್ಚು ಜನರು ರಿಟ್ವೀಟ್ ಮಾಡಿದ್ದಾರೆ. ಈ ಸಂಖ್ಯೆ ಮತ್ತಷ್ಟು ಏರುತ್ತಲೇ ಇದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News