ಕರಣ್ ಜೋಹರ್ ಮದುವೆಯಾಗಲು ಬಯಸಿದ್ದ ನಿರ್ಮಾಪಕಿ ಫರಾಹ್ ಖಾನ್...!

ಬಾಲಿವುಡ್ ನಿರ್ಮಾಪಕಿ ಫರಾಹ್ ಖಾನ್ ಮತ್ತು ಕರಣ್ ಜೋಹರ್ ಅವರ ಸ್ನೇಹವೂ ಸಾಕಷ್ಟು ಹಳೆಯದು, ಅವರು ಎರಡೂವರೆ ದಶಕಗಳಿಗಿಂತಲೂ ಹೆಚ್ಚು ಕಾಲ ಸ್ನೇಹಿತರಾಗಿದ್ದರು ಮತ್ತು ಚೊಚ್ಚಲ ಚಿತ್ರ ಕುಚ್ ಕುಚ್ ಹೋತಾ ಹೈ ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.

Last Updated : Jan 9, 2021, 07:42 PM IST
  • ಒಮ್ಮೆ ಫರಾಹ್ ಖಾನ್ (FARAH KHAN) ಕರಣ್ ಗೆ ಮದುವೆಯಾಗುವ ಪ್ರಸ್ತಾಪವನ್ನು ಇಟ್ಟಿದ್ದಳು ಎನ್ನಲಾಗಿದೆ.
  • ಅವನು ತಾಂತ್ರಿಕ ಸಮಸ್ಯೆಯಿಂದಾಗಿ ಅವಳನ್ನು ತಿರಸ್ಕರಿಸಿದನು ಎನ್ನಲಾಗಿದೆ.
  • ಈಗ ಆಕೆ ತನಗಿಂತಲೂ ವಯಸ್ಸಿನಲ್ಲಿ ಕಿರಿಯನಾಗಿರುವ ಶಿರೀಶ್ ಕುಂದರ್ ಅವರನ್ನು ಮದುವೆಯಾಗಿದ್ದಾಳೆ ಮತ್ತು ಅವನೊಂದಿಗೆ ದಿವಾ, ಅನ್ಯಾ ಮತ್ತು ಜಾರ್ ಎಂಬ ಮೂವರು ಮಕ್ಕಳಿದ್ದಾರೆ.
ಕರಣ್ ಜೋಹರ್ ಮದುವೆಯಾಗಲು ಬಯಸಿದ್ದ ನಿರ್ಮಾಪಕಿ ಫರಾಹ್ ಖಾನ್...! title=
file photo

ನವದೆಹಲಿ: ಬಾಲಿವುಡ್ ನಿರ್ಮಾಪಕಿ ಫರಾಹ್ ಖಾನ್ ಈಗ 56 ವರ್ಷಕ್ಕೆ ಕಾಲಿಟ್ಟಿದ್ದಾರೆ, ಈ ಸಂದರ್ಭದಲ್ಲಿ ಒಂದು ಕೂತೂಹಲಕರ ವಿಷಯ ಬೆಳಕಿಗೆ ಬಂದಿದೆ, ಅದೇನಪ್ಪಾ ಅಂದರೆ ಕರಣ್ ಜೋಹರ್ ಮತ್ತು ಫರಾಹ್ ಖಾನ್ ಅವರ ಮದುವೆಯ ಪ್ರಸ್ತಾಪದ ವಿಷಯ ಎನ್ನಬಹುದು.

ಹೌದು ಫರಾಹ್ ಖಾನ್ ಮತ್ತು ಕರಣ್ ಜೋಹರ್ ಅವರ ಸ್ನೇಹ ಸಾಕಷ್ಟು ಹಳೆಯದು, ಅವರು ಎರಡೂವರೆ ದಶಕಗಳಿಗಿಂತಲೂ ಹೆಚ್ಚು ಕಾಲ ಸ್ನೇಹಿತರಾಗಿದ್ದರು ಮತ್ತು ಚೊಚ್ಚಲ ಚಿತ್ರ ಕುಚ್ ಕುಚ್ ಹೋತಾ ಹೈ ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.

ಇದನ್ನೂ ಓದಿ: ಈ ಕೆಲಸ ಮಾಡಿ ಪೇಚಿಗೆ ಸಿಲುಕಿದ ರವೀನಾ, ಫರಾಹ್ ಮತ್ತು ಭಾರತಿ ಸಿಂಗ್

ಒಂದು ಸಮಯದಲ್ಲಿ ಅವರಿಬ್ಬರೂ ಮದುವೆಯಾಗಲು ಬಯಸಿದ್ದರು ಎನ್ನುವ ಸಂಗತಿ ನಿಮಗೆ ಬಹುತೇಕರಿಗೆ ತಿಳಿದಿಲ್ಲವೆಂದು ಕಾಣಿಸುತ್ತೆ. ಒಮ್ಮೆ ಫರಾಹ್ ಖಾನ್ (FARAH KHANಕರಣ್ ಗೆ ಮದುವೆಯಾಗುವ ಪ್ರಸ್ತಾಪವನ್ನು ಇಟ್ಟಿದ್ದಳು ಎನ್ನಲಾಗಿದೆ, ಆದರೆ ಅವನು ತಾಂತ್ರಿಕ ಸಮಸ್ಯೆಯಿಂದಾಗಿ ಅವಳನ್ನು ತಿರಸ್ಕರಿಸಿದನು ಎನ್ನಲಾಗಿದೆ.ಈಗ ಆಕೆ ತನಗಿಂತಲೂ ವಯಸ್ಸಿನಲ್ಲಿ ಕಿರಿಯನಾಗಿರುವ ಶಿರೀಶ್ ಕುಂದರ್ ಅವರನ್ನು ಮದುವೆಯಾಗಿದ್ದಾಳೆ ಮತ್ತು ಅವನೊಂದಿಗೆ ದಿವಾ, ಅನ್ಯಾ ಮತ್ತು ಜಾರ್ ಎಂಬ ಮೂವರು ಮಕ್ಕಳಿದ್ದಾರೆ.

ಇದನ್ನೂ ಓದಿ: ನೆಟ್ಟಿಗರ ಗಮನ ಸೆಳೆದ ಸಾನಿಯಾ ಮಿರ್ಜಾ ಡಾನ್ಸ್ ವೀಡಿಯೊ

ಸಾಜಿದ್ ಖಾನ್ ಮತ್ತು ರಿತೀಶ್ ದೇಶ್ಮುಖ್ ಆಯೋಜಿಸಿದ್ದ ಯಾರೋನ್ ಕಿ ಬರಾತ್ ಎಂಬ ಚಾಟ್ ಶೋನಲ್ಲಿ ಈ ಹಿಂದೆ ಕಾಣಿಸಿಕೊಂಡಾಗ ಆಗ ಕರಣ್ ಫಾರಹ ಒಂದು ಹಂತದಲ್ಲಿ ಅವರ ಬಗ್ಗೆ ಒಲವನ್ನು ಹೊಂದಿದ್ದರು ಎನ್ನುವ ವಿಷಯವನ್ನು ತಿಳಿಸಿದ್ದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News