ಮುಂಬೈ: ಲತಾ ಮಂಗೇಶ್ಕರ್ (Lata Mangeshkar) ಅವರ ಅಂತ್ಯಕ್ರಿಯೆಗೆ ಆಗಮಿಸಿದ ಶಾರುಖ್ ಖಾನ್ ಅವರ ವಿಡಿಯೋ ವೈರಲ್ ಆಗುತ್ತಿದೆ. ವಾಸ್ತವವಾಗಿ, ಶಾರುಖ್ ಖಾನ್ ಅವರು ಗಾಯಕಿ ಲತಾ ಮಂಗೇಶ್ಕರ್ ಅವರ ಪಾರ್ಥಿವ ಶರೀರದ ಮುಂದೆ ಫತೇಹ್ ಓದಿದರು. ಬಳಿಕ ಮಾಸ್ಕ್ ತೆಗೆದು ಪ್ರಾರ್ಥಿಸಿದರು. ಸಾಮಾಜಿಕ ಜಾಲತಾಣಗಳಲ್ಲಿ ಕೆಲವರು ಪ್ರಾರ್ಥನೆಯನ್ನು 'ಉಗುಳಿದ್ದಾರೆ' ಎಂದು ಕರೆಯುತ್ತಿದ್ದಾರೆ.
ಬಾಲಿವುಡ್ ನಟನ ಈ ವಿಡಿಯೋವನ್ನು ಹಂಚಿಕೊಳ್ಳುವಾಗ, ಬಿಜೆಪಿ ನಾಯಕ ಅರುಣ್ ಯಾದವ್ ಅವರು ಶಾರುಖ್ ಖಾನ್ (Shahrukh Khan) ನಿಜವಾಗಿಯೂ ಉಗುಳಿದ್ದಾರೆಯೇ? ಎಂದು ಪ್ರಶ್ನಿಸಿದ್ದಾರೆ.
क्या इसने थूका है ❓ pic.twitter.com/RZOa2NVM5I
— Arun Yadav (@beingarun28) February 6, 2022
ಫೆಬ್ರವರಿ 6 ರ (ನಿನ್ನೆ) ಮುಂಜಾನೆ 92 ವರ್ಷದ ಗಾನ ಕೋಗಿಲೆ ಲತಾ ಮಂಗೇಶ್ಕರ್ ನಿಧನರಾದರು. ಭಾನುವಾರ ಮುಂಬೈನ ಶಿವಾಜಿ ಪಾರ್ಕ್ ಮೈದಾನದಲ್ಲಿ ಸಕಲ ಸರ್ಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ (Lata Mangeshkar Funeral) ನಡೆಸಲಾಯಿತು. ಈ ಸಂದರ್ಭದಲ್ಲಿ, ಅನೇಕ ಗಣ್ಯರು ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲು ಆಗಮಿಸಿದ್ದರು. ಶಾರುಖ್ ಖಾನ್ ಕೂಡ ಫತೇಹ್ ಪಠಿಸಿದ ನಂತರ ಅವರ ಪಾರ್ಥಿವ ಶರೀರದ ಮುಂದೆ ಪ್ರಾರ್ಥಿಸಿದರು, ಅದರ ಬಗ್ಗೆ ಈಗ ವಿಭಿನ್ನ ವಿವಾದ ಹುಟ್ಟಿಕೊಂಡಿದೆ.
ಇದನ್ನೂ ಓದಿ: ಕಾಶ್ಮೀರದ ಕುರಿತು ಪಾಕಿಸ್ತಾನಿ ಡೀಲರ್‌ನ ವಿವಾದಾತ್ಮಕ ಪೋಸ್ಟ್... 'ಭಾರತ ನಮ್ಮ ಎರಡನೇ ಮನೆ' ಎಂದ Hyundai
ಹರಿಯಾಣ ಬಿಜೆಪಿಯ ಐಟಿ ಮತ್ತು ಸಾಮಾಜಿಕ ಮಾಧ್ಯಮ ಮುಖ್ಯಸ್ಥ ಅರುಣ್ ಯಾದವ್ ಅವರು ಶಾರುಖ್ ಅವರ ಈ ವಿಡಿಯೋ (Viral Video) ಬಗ್ಗೆ ಟ್ವೀಟ್ ಮಾಡಿದ್ದು, ಅದು ಕೆಲವೇ ನಿಮಿಷಗಳಲ್ಲಿ ವೈರಲ್ ಆಗಿದೆ. ಅನೇಕ ಜನರು ಶಾರುಖ್ ಅವರನ್ನು ಟೀಕಿಸಿದ್ದಾರೆ.
ರಾಜಕೀಯವನ್ನು ಯಾವ ಮಟ್ಟಕ್ಕೆ ಕೊಂಡೊಯ್ಯುತ್ತೀರಿ?
ಈ ಬಗ್ಗೆ ಪ್ರತಿಕ್ರಿಯಿಸಿದ ಕಾಂಗ್ರೆಸ್ (Congress) ನಾಯಕ ಶ್ರೀನಿವಾಸ್, "ಬಿಜೆಪಿಯಲ್ಲಿರುವ ಎಲ್ಲಾ ನಾಯಕರೇ, ನಿಮ್ಮಲ್ಲಿ ಆತ್ಮಸಾಕ್ಷಿಯ ಧ್ವನಿ ಜೀವಂತವಾಗಿದೆಯೇ ಅಥವಾ ಅಡಮಾನವಿಟ್ಟು ಬಂದಿದ್ದೀರಾ? ಅಂತ್ಯಕ್ರಿಯೆಯಲ್ಲಿ ತೆಗೆದ ಮಾನವೀಯತೆಯ ಈ ಅತ್ಯಂತ ಸುಂದರವಾದ ಚಿತ್ರದ ಕುರಿತು ವಿಷಪೂರಿತ ವ್ಯಂಗ್ಯವನ್ನು ಬೆಂಬಲಿಸುವ ಮೂಲಕ ನೀವು ರಾಜಕೀಯವನ್ನು ಯಾವ ಮಟ್ಟಕ್ಕೆ ಕೊಂಡೊಯ್ಯುತ್ತೀರಿ?" ಎಂದಿದ್ದಾರೆ.
प्रिय @ShahnawazBJP जी
एवं BJP में मौजूद सभी नेतागण,क्या आप लोगों के अंदर अंतरात्मा की आवाज़ जीवित है या वो भी शाखा में गिरवी रखकर आये है?
किसी के अंतिम संस्कार में इंसानियत की इस सबसे खूबसूरत तस्वीर पर इस जहरीले व्यंग्य का समर्थन कर आप राजनीति को किस स्तर तक लेकर जाएंगे? https://t.co/StIksxQbog
— Srinivas BV (@srinivasiyc) February 6, 2022
'ಇಂತಹ ಕೋಮು ಕೊಳಕಿಗೆ ಜಾಗವಿಲ್ಲ':
ಅದೇ ಸಮಯದಲ್ಲಿ, ಚಲನಚಿತ್ರ ನಿರ್ಮಾಪಕ ಆಕಾಶ್ ಪಂಡಿತ್ ಅವರು ಲತಾ ಮಂಗೇಶ್ಕರ್ ಜಿ ಅವರ ಅಂತ್ಯಕ್ರಿಯೆಯಲ್ಲಿ ಉಗುಳಿದರು ಎಂದು ಸುಳ್ಳು ಆರೋಪ ಮಾಡುವ ಮೂಲಕ ಶಾರುಖ್ ಖಾನ್ ಅವರನ್ನು ಗುರಿಯಾಗಿಸುವ ಜನರು ನಾಚಿಕೆಪಡಬೇಕು ಎಂದು ಬರೆದಿದ್ದಾರೆ. ನಮ್ಮ ದೇಶದಲ್ಲಿ ಇಂತಹ ಕೋಮು ಕೊಳಕುಗಳಿಗೆ ಜಾಗವಿಲ್ಲ.
ಕೆಟ್ಟದ್ದನ್ನು ಗೆಲ್ಲಲು ಬಿಡೋಣವೇ?:
ಅದೇ ರೀತಿ ಕಾಂಗ್ರೆಸ್ ನ ಸುಪ್ರಿಯಾ ಶ್ರೀನೆಟ್, "ಪ್ರಾರ್ಥನೆಯನ್ನು ಬೇರೆಡೆಗೆ ತಿರುಗಿಸಲು ಬಯಸುತ್ತಿದ್ದೀರಲ್ಲಾ.. ಅಗಲಿದ ಆತ್ಮಕ್ಕೆ ಗೌರವ ಸಲ್ಲಿಸುವ ವಿಚಾರದ ಮೇಲೆ ದ್ವೇಷವನ್ನು ಹರಡುವ ಕೆಲಸವನ್ನು ಮಾಡುತ್ತಿದ್ದೀರಿ. ಯೋಚಿಸಿ ಗೆಳೆಯರೇ, ಕೆಟ್ಟದ್ದನ್ನು ಗೆಲ್ಲಲು ಬಿಡೋಣವೇ?" ಎಂದು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: 7th Pay Commission: ಸರ್ಕಾರಿ ನೌಕರರ ತುಟ್ಟಿಭತ್ಯೆ ಶೇ.34ಕ್ಕೆ ಏರಿಕೆಯಾಗುವುದು ಖಚಿತ! ಘೋಷಣೆ ಯಾವಾಗ?
ವಿಡಿಯೋವನ್ನು ಹೊರತುಪಡಿಸಿ, ಶಾರುಖ್ ಖಾನ್ ಮತ್ತು ಅವರ ಮ್ಯಾನೇಜರ್ ಪೂಜಾ ದದ್ಲಾನಿ (Pooja Dadlani) ಅವರ ಚಿತ್ರವು ಸಹ ಸಾಕಷ್ಟು ವೈರಲ್ ಆಗುತ್ತಿದೆ. ಚಿತ್ರದಲ್ಲಿ, ಶಾರುಖ್ ಖಾನ್ ಪ್ರಾರ್ಥನೆ ಮಾಡುತ್ತಿರುವಾಗ ಪೂಜಾ ಕೈಮುಗಿದು ಪ್ರಾರ್ಥಿಸುತ್ತಿರುವುದನ್ನು ಕಾಣಬಹುದು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.