ಸಂಗೀತಾ ಮಾಂತ್ರಿಕನ ಬಯೋಪಿಕ್‌: ಇಳಿಯರಾಜನ ಪಾತ್ರದಲ್ಲಿ ನಟ ಧನುಷ್‌...

Illiyaraja Biopic: ಸಂಗೀತ ಮಾಂತ್ರಿಕ ಇಳಯರಾಜರವರ ಬಯೋಪಿಕ್ ಸಿನಿಮಾ ಮಾಡುವ ಬಗ್ಗೆ ಕಳೆದ ಕೆಲವು ತಿಂಗಳುಗಳಿಂದ ಸುದ್ದಿಯಲಿದ್ದು, ಇತ್ತೀಚಿನ ವರದಿಗಳ ಪ್ರಕಾರ, ಇಳಯರಾಜ  ಪಾತ್ರಕ್ಕೆ ನಟ ಧನುಷ್‌ನನ್ನು ಆಯ್ಕೆ ಮಾಡಲಾಗಿದೆ. 

Written by - Zee Kannada News Desk | Last Updated : Nov 2, 2023, 11:52 AM IST
  • ಸಂಗೀತ ಸಂಯೋಜಕ ಇಳಯರಾಜ ಬಯೋಪಿಕ್‌ನಲ್ಲಿ ನಟ ಧನುಷ್ ಆಯ್ಕೆ.
  • ಇಳಯರಾಜರವರ ಬಯೋಪಿಕ್‌ನ್ನು 2024 ರಲ್ಲಿ ಚಿತ್ರೀಕರಣ ಆರಂಭವಾಗುವ ಲಕ್ಷಣಗಳಿದ್ದು, 2025 ರಲ್ಲಿ ಬಿಡುಗಡೆಯಾಗುವ ಗುರಿ ಹೊಂದಿದೆ.
  • ಇಳಯರಾಜರವರ ಬಯೋಪಿಕ್‌ನ್ನು ಕನೆಕ್ಟ್ ಮೀಡಿಯಾʼ ನಿರ್ಮಾಣ ಮಾಡಲಿದೆ.
ಸಂಗೀತಾ ಮಾಂತ್ರಿಕನ ಬಯೋಪಿಕ್‌: ಇಳಿಯರಾಜನ ಪಾತ್ರದಲ್ಲಿ ನಟ ಧನುಷ್‌... title=

Dhanush Plays Role Of Illiyaraja: ಹಲವು ತಿಂಗಳುಗಳಿಂದ ಸಂಗೀತ ಮಾಂತ್ರಿಕ ಇಳಯರಾಜರವರ ಬಯೋಪಿಕ್ ಬಗ್ಗೆ ಸುದ್ದಿಗಳು ಹರಿದಾಡುತ್ತಿದ್ದು, ಈ ಹಿಂದೆ, ನಿರ್ದೇಶಕ ಆರ್ ಬಾಲ್ಕಿ ಇಳಯರಾಜ ಅವರ ಬಯೋಪಿಕ್‌ನಲ್ಲಿ ಧನುಷ್ ಅವರನ್ನು ನಾಯಕನಾಗಿ ಮಾಡಲು ಇಷ್ಟಪಡುತ್ತೇನೆ ಎಂದು ಬಹಿರಂಗಪಡಿಸಿದ್ದರು. 

ಸಂಗೀತ ಸಂಯೋಜಕ ಇಳಯರಾಜರವರ  ಮುಂಬರುವ ಬಯೋಪಿಕ್‌ನಲ್ಲಿ, ಇಳಯರಾಜ ಪಾತ್ರದಲ್ಲಿ ರಾಷ್ಟ್ರ ಪ್ರಶಸ್ತಿ ವಿಜೇತ ನಟ ಧನುಷ್ ನಟಿಸುವುದು ಖಚಿತವಾಗಿದೆ ಎಂದು ಮೂಲಗಳನ್ನು ಮಾಧ್ಯಮಗಳು ವರದಿ ಮಾಡಿದ್ದು, ಚಿತ್ರವು 2024 ರಲ್ಲಿ ಆರಂಭವಾಗುವ ಲಕ್ಷಣಗಳಿದ್ದು, 2025 ರಲ್ಲಿ ಬಿಡುಗಡೆಯಾಗುವ ಗುರಿ ಹೊಂದಿದೆ.

ಇದನ್ನು ಓದಿ: ಪ್ರಭಾಸ್ ಅನುಷ್ಕಾ ಮದುವೆಗೆ ಕುಟುಂಬದವರ ಸಮ್ಮತಿ!! ಡೇಟ್‌ ಕೂಡ ಫಿಕ್ಸ್? ‌

ಇಳಿಯರಾಜರವರ ಬಯೋಪಿಕ್‌ನ್ನು, ಮೋಹನ್ ಲಾಲ್ ಮತ್ತು ಶನಯಾ ಕಪೂರ್ ಅಭಿನಯದ 'ವೃಷಭ' ಚಿತ್ರ ನಿರ್ಮಾಣ ಮಾಡುತ್ತಿರುವ ಪ್ರೊಡಕ್ಷನ್ ಹೌಸ್ ʼಕನೆಕ್ಟ್ ಮೀಡಿಯಾʼ ನಿರ್ಮಾಣ ಮಾಡಲಿದೆಯೆಂದು ಎಂದು ಹೇಳಲಾಗುತ್ತದೆ. ಆದರೆ ಈ ಮಹತ್ವಾಕಾಂಕ್ಷೆಯ ಸಿನಿಮಾವನ್ನು ಯಾರು ನಿರ್ದೇಶಿಸುತ್ತಾರೆ ಎಂಬ ಬಗ್ಗೆ ಇನ್ನೂ ಯಾವುದೇ ಮಾಹಿತಿ ದೊರಕಲ್ಲ.

2023ರ ಆರಂಭದಲ್ಲಿ, ನಿರ್ದೇಶಕ ಆರ್ ಬಾಲ್ಕಿ ಇಳಯರಾಜರವರ ಜೀವನಚರಿತ್ರೆಯಲ್ಲಿ ಧನುಷ್ ಅವರನ್ನು ನೋಡಲು ಇಷ್ಟಪಡುತ್ತೇನೆ ಎಂದು ಒಂದು ಸಂದರ್ಶನದಲ್ಲಿ ತಿಳಿಸಿದ್ದು, ಹಾಗೇ ಇಳಯರಾಜ ಅವರ ಬಯೋಪಿಕ್ ಸಿನಿಮಾವನ್ನು ಧನುಷ್ ಜೊತೆ ಮಾಡಬೇಕೆಂಬುದು ನನ್ನ ಕನಸು. ನಾನು ಧನುಷ್‌ರಲ್ಲಿ ರಾಜಾ ಸರ್  ನೋಡುತ್ತೇನೆ ಎಂದು ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದರು.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News