Watch: ವಿಶ್ವ ಆರ್ಥಿಕ ವೇದಿಕೆಯಲ್ಲಿ ದೀಪಿಕಾ ಪಡುಕೋಣೆಯ ಹೃದಯಸ್ಪರ್ಶಿ ಭಾಷಣ!

ದೀಪಿಕಾ ಪಡುಕೋಣೆ ವಿಶ್ವ ವೇದಿಕೆಯಲ್ಲಿ ಆತಂಕ ಮತ್ತು ಖಿನ್ನತೆಯ ಬಗ್ಗೆ ಹೃದಯಸ್ಪರ್ಶಿ ಭಾಷಣ ಮಾಡಿದರು.  

Last Updated : Jan 21, 2020, 10:58 AM IST
Watch: ವಿಶ್ವ ಆರ್ಥಿಕ ವೇದಿಕೆಯಲ್ಲಿ ದೀಪಿಕಾ ಪಡುಕೋಣೆಯ ಹೃದಯಸ್ಪರ್ಶಿ ಭಾಷಣ! title=
Photo Courtesy: Instagram

ನವದೆಹಲಿ: ಭಾರತೀಯ ಚಿತ್ರರಂಗದ ಅತ್ಯಂತ ಜನಪ್ರಿಯ ನಟಿಯರಲ್ಲಿ ಒಬ್ಬರಾದ ದೀಪಿಕಾ ಪಡುಕೋಣೆ(Deepika Padukone) ಅವರಿಗೆ ದಾವೋಸ್‌ನ ವಿಶ್ವ ಆರ್ಥಿಕ ವೇದಿಕೆಯಲ್ಲಿ  ಕ್ರಿಸ್ಟಲ್ ಅವಾರ್ಡ್ 2020(Crystal Award 2020) ಅನ್ನು ನೀಡಿ ಗೌರವಿಸಲಾಯಿತು. ಟಾಪ್ ಸ್ಟಾರ್ ಒಬ್ಬರು ಮಾನಸಿಕ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸಿದ್ದಕ್ಕಾಗಿ ದೀಪಿಕಾ ಪಡುಕೋಣೆ ಈ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.

ಪ್ರತಿಷ್ಠಿತ ಟ್ರೋಫಿಯನ್ನು ಪಡೆದ ನಂತರ, ದೀಪಿಕಾ ಪಡುಕೋಣೆ ವಿಶ್ವ ವೇದಿಕೆಯಲ್ಲಿ ಆತಂಕ ಮತ್ತು ಖಿನ್ನತೆಯ ಬಗ್ಗೆ ಹೃದಯಸ್ಪರ್ಶಿ ಭಾಷಣ ಮಾಡಿದರು. ಈವೆಂಟ್‌ನಲ್ಲಿನ ಅವರ ಭಾಷಣವನ್ನು ಹಲವಾರು ಬಳಕೆದಾರರು ಮತ್ತು ಅಭಿಮಾನಿ ಕ್ಲಬ್‌ಗಳು ಹಂಚಿಕೊಂಡಿದ್ದು, ಇದೀಗ ಸಾಮಾಜಿಕ ಮಾಧ್ಯಮದಲ್ಲಿ ದೀಪಿಕಾ ಭಾಷಣದ ವಿಡಿಯೋ ವೀಕ್ಷಣೆ ವೈರಲ್ ಆಗುತ್ತಿದೆ.

 
 
 
 

 
 
 
 
 
 
 
 
 

@deepikapadukone @worldeconomicforum #deepikapadukone #crystalaward #worldeconomicforum #wef20 #davos2020 #davos #gorgeous #flawlessbeauty #beyondbeauty #beautyqueen #queenofhearts #queenofbollywood #beautiful #bollywood #hollywood #actress #piku #bajiraomastani #mastani #bollywoodactress #hollywoodactress #bollywoodnews #gainlikes #gainfollowers

A post shared by Deepika Padukone The Princess (@deepika.padukone.princess) on

ಮೊದಲಿಗೆ ಅವರ ತಾಯಿ 2014 ರಲ್ಲಿ ರೋಗಲಕ್ಷಣಗಳನ್ನು ಗಮನಿಸಿದರು. ಬಳಿಕ ಅವರು ಖಿನ್ನತೆಯೊಂದಿಗೆ ಹೇಗೆ ಹೋರಾಡಿದರು ಎಂಬ ಬಗ್ಗೆ ವಿವರಿಸಿದ ದೀಪಿಕಾ, ಲವ್ ಲಾಫ್ ಫೌಂಡೇಶನ್ ((TLL)) ಅನ್ನು ಪ್ರಾರಂಭಿಸಿದರು ಎಂಬುದನ್ನು ಹಂಚಿಕೊಂಡಿದ್ದಾರೆ. 2015 ರಲ್ಲಿ ರೂಪುಗೊಂಡ ಈ ಫೌಂಡೇಶನ್ ಮಾನಸಿಕ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುತ್ತದೆ. ಇದು ಯಾವುದೇ ರೀತಿಯ ಮಾನಸಿಕ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ ಜನರನ್ನು ತಲುಪಲು ಸಹಾಯ ಮಾಡುತ್ತದೆ ಮತ್ತು ಖಿನ್ನತೆಯ ಸುತ್ತಲಿನ ಕಳಂಕವನ್ನು ಕಡಿಮೆ ಮಾಡಲು ಯತ್ನಿಸುತ್ತದೆ. 

ದೀಪಿಕಾ ಪಡುಕೋಣೆಯವರ ವೃತ್ತಿ ಜೀವನದ ಬಗ್ಗೆ ಮಾತನಾಡುವುದಾದರೆ ಇತ್ತೀಚೆಗಷ್ಟೇ ಬಿಡುಗಡೆಗೊಂಡ 'ಛಾಪಾಕ್' ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇದು ಆಸಿಡ್ ದಾಳಿಯಿಂದ ಬದುಕುಳಿದ ಲಕ್ಷ್ಮಿ ಅಗರ್ವಾಲ್ ಅವರ ನಿಜ ಜೀವನದ ಘಟನೆಯನ್ನು ಆಧರಿಸಿದೆ. 

Trending News