Dawood Ibrahim: ಭೂಗತ ಪಾತಕಿ ದಾವೂದ್ ಇಬ್ರಾಹಿಂ ಜೀವನಾಧಾರಿತ ಬಾಲಿವುಡ್ ಸಿನಿಮಾಗಳಿವು!

Dawood Ibrahim Biopics: ಭಾರತದ ಮೋಸ್ಟ್ ವಾಂಟೆಡ್ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಬಗ್ಗೆ ಹೊಸ ಪರಿಚಯದ ಅಗತ್ಯವಿಲ್ಲ. 1993ರ ಮುಂಬೈ ಸ್ಫೋಟದ ಮಾಸ್ಟರ್ ಮೈಂಡ್.. ಈ ಸ್ಫೋಟಗಳ ನಂತರ ಅವರಿಗೆ ಪಾಕಿಸ್ತಾನ ಆಶ್ರಯ ನೀಡಿತ್ತು ಎಂದು ಭಾರತೀಯ ಗುಪ್ತಚರ ಮೂಲಗಳು ತಿಳಿಸಿವೆ. ಇತ್ತೀಚೆಗಷ್ಟೇ ಅವರು ಪಾಕಿಸ್ತಾನದಲ್ಲಿ ವಿಷ ಪ್ರಯೋಗದಿಂದ ಸಾವನ್ನಪ್ಪಿದ್ದಾರೆ ಎಂಬ ವದಂತಿ ಹಬ್ಬಿದೆ. ಇದೀಗ ಬಾಲಿವುಡ್‌ನಲ್ಲಿ ಇವರ ಜೀವನಾಧಾರಿತ ಚಿತ್ರಗಳತ್ತ ಒಮ್ಮೆ ಕಣ್ಣು ಹಾಯಿಸೋಣ... 

Written by - Savita M B | Last Updated : Dec 19, 2023, 12:26 PM IST
  • ದಾವೂದ್ ಇಬ್ರಾಹಿಂ ನಮ್ಮ ದೇಶದಲ್ಲಿ ನಡೆದ ಹಲವು ಭಯೋತ್ಪಾದಕ ದಾಳಿಗಳ ಮಾಸ್ಟರ್ ಮೈಂಡ್
  • ಅವರು ಸ್ವತಃ ಬಾಲಿವುಡ್‌ನಲ್ಲಿ ಅನೇಕ ಚಿತ್ರಗಳಿಗೆ ಹೂಡಿಕೆ ಮಾಡಿದ್ದಾರೆ
  • ಇದೀಗ ಬಾಲಿವುಡ್‌ನ ಇವರ ಜೀವನಾಧಾರಿತ ಚಿತ್ರಗಳ ಬಗ್ಗೆ ತಿಳಿಯೋಣ..
Dawood Ibrahim: ಭೂಗತ ಪಾತಕಿ ದಾವೂದ್ ಇಬ್ರಾಹಿಂ ಜೀವನಾಧಾರಿತ ಬಾಲಿವುಡ್ ಸಿನಿಮಾಗಳಿವು!  title=

Dawood Ibrahim: ದಾವೂದ್ ಇಬ್ರಾಹಿಂ ನಮ್ಮ ದೇಶದಲ್ಲಿ ನಡೆದ ಹಲವು ಭಯೋತ್ಪಾದಕ ದಾಳಿಗಳ ಮಾಸ್ಟರ್ ಮೈಂಡ್...  ಪಾಕಿಸ್ತಾನದ ಜೊತೆಗೆ ದುಬೈನಲ್ಲಿಯೇ ಇದ್ದು ಬೇರೆಡೆ ತಮ್ಮ ಕಾರ್ಯಗಳನ್ನು ನಡೆಸುತ್ತಿದ್ದರು. ಇದಲ್ಲದೆ, ಅವರು ಸ್ವತಃ ಬಾಲಿವುಡ್‌ನಲ್ಲಿ ಅನೇಕ ಚಿತ್ರಗಳಿಗೆ ಹಣಕಾಸು ನೀಡಿದ್ದಾರೆ... ಅಲ್ಲದೇ ತಮ್ಮ ಮಾತು ಕೇಳಿದ ಗುಲ್ಶನ್ ಕುಮಾರ್, ನದೀಂ ಅವರಂತಹ ಹಿಂದಿ ಚಿತ್ರರಂಗದ ಗಣ್ಯರನ್ನು ಬೆಳೆಸಿದ ಇತಿಹಾಸ ದಾವೂದ್‌ಗಿದೆ. ಹಾಗಾದರೆ ಇದೀಗ ಬಾಲಿವುಡ್‌ನ ಇವರ ಜೀವನಾಧಾರಿತ ಚಿತ್ರಗಳ ಬಗ್ಗೆ ತಿಳಿಯೋಣ..

ಕಂಪನಿ: ನಿರ್ದೇಶಕ ರಾಮ್‌ಗೋಪಾಲ್ ವರ್ಮ್ ದಾವೂದ್ ಇಬ್ರಾಹಿಂ ಜೀವನದ ಮೇಲೆ ಹಲವಾರು ಚಿತ್ರಗಳನ್ನು ನಿರ್ಮಿಸಿದ್ದಾರೆ. ಅದರಲ್ಲಿ ‘ಕಂಪನಿ’ ಸಿನಿಮಾವನ್ನು ಪ್ರಮುಖವಾಗಿ ಹೇಳಬೇಕು. ಈ ಸಿನಿಮಾದಲ್ಲಿ ದಾವೂದ್ ಇಬ್ರಾಹಿಂ ಶಿಷ್ಯ ಛೋಟಾ ರಾಜನ್ ಜೀವನ ಕಥೆಯನ್ನು ಮಾಡಲಾಗಿತ್ತು. ಈ ಚಿತ್ರ ಉತ್ತಮ ಯಶಸ್ಸನ್ನು ದಾಖಲಿಸಿದ್ದು.. ದಾವೂದ್ ಪಾತ್ರದಲ್ಲಿ ಅಜಯ್ ದೇವಗನ್ ನಟಿಸಿದ್ದಾರೆ..

ಇದನ್ನೂ ಓದಿ-Dawood Ibrahim: ಬಾಲಿವುಡ್‌ ಖ್ಯಾತ ನಟಿಯ ಜೊತೆ ದಾವೂದ್ ಇಬ್ರಾಹಿಂ ಪ್ರೇಮ ಸಂಬಂಧ..!

ಬ್ಲ್ಯಾಕ್ ಫ್ರೈಡೇ: ಅನುರಾಗ್ ಕಶ್ಯಪ್ ನಿರ್ದೇಶನದ ಈ ಚಿತ್ರ ಮುಂಬೈ ಬಾಂಬ್ ಸ್ಫೋಟದ ಹಿನ್ನೆಲೆಯನ್ನು ಹೊಂದಿದೆ. ದಾವೂದ್ ಪಾತ್ರದಲ್ಲಿ ನಟ ವಿಜಯ್ ಮೌರ್ಯ ನಟಿಸಿದ್ದಾರೆ.

ಡಿ: 2005 ರಲ್ಲಿ, 'ಡಿ' ಚಿತ್ರವನ್ನು ರಾಮಗೋಪಾಲ್ ವರ್ಮಾ ನಿರ್ಮಿಸಿದರು ಮತ್ತು ವಿಶ್ರಮ್ ಸಾವಂತ್ ನಿರ್ದೇಶಿಸಿದರು. ಡಿ ಎಂದರೆ ದಾವೂದ್ ಕಂಪನಿ. ಈ ಸಿನಿಮಾದಲ್ಲಿ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಭೂಗತ ಲೋಕದ ಕಂಪನಿಗಳ ಬಗ್ಗೆ ಪ್ರಸ್ತಾಪಿಸಲಾಗಿದೆ. ಈ ಚಿತ್ರದಲ್ಲಿ ದಾವೂದ್ ಪಾತ್ರವನ್ನು ರಣದೀಪ್ ಹೂಡಾ ನಿರ್ವಹಿಸಿದ್ದಾರೆ. 

ಒನ್ಸ್ ಅಪಾನ್ ಎ ಟೈಮ್ ಇನ್ ಮುಂಬೈ: ಅಜಯ್ ದೇವಗನ್ ಮತ್ತು ಇಮ್ರಾನ್ ಹಶ್ಮಿ ಅಭಿನಯದ ಚಿತ್ರ 'ಒನ್ಸ್ ಅಪಾನ್ ಎ ಟೈಮ್ ಇನ್ ಮುಂಬೈ'. ಮಿಲನ್ ಲುಥ್ರಿಯಾ ನಿರ್ದೇಶನದ ಈ ಚಿತ್ರದಲ್ಲಿ ಅಜಯ್ ದೇವಗನ್ ಮತ್ತು ಸುಲ್ತಾನ್ ಮಿರ್ಜಾ ಅವರ ಪಾತ್ರವು ಮುಂಬೈನ ಮಾಜಿ ಡಾನ್ ಹಾಜಿ ಮಸ್ತಾನ್ ಅವರಂತೆಯೇ ಮತ್ತು ಇಮ್ರಾನ್ ಹಶ್ಮಿ ಪಾತ್ರವು ದಾವೂದ್ ಇಬ್ರಾಹಿಂನಂತೆಯೇ ಇದೆ.. 

ಡಿ-ಡೇ: ‘ಡೀ ಡೇ’ ಸಿನಿಮಾದಲ್ಲಿ ದಾವೂದ್ ಪಾತ್ರದಲ್ಲಿ ರಿಷಿ ಕಪೂರ್ ನಟಿಸಿದ್ದರು. ಈ ಚಿತ್ರವನ್ನು ನಿಖಿಲ್ ಅಡ್ವಾಣಿ ನಿರ್ದೇಶಿಸಿದ್ದಾರೆ.

ಒನ್ಸ್ ಅಪಾನ್ ಎ ಟೈಮ್ ಇನ್ ಮುಂಬೈ ಡೊಬಾರಾ: ಒನ್ಸ್ ಅಪಾನ್ ಎ ಟೈಮ್ ಇನ್ ಮುಂಬೈ ಚಿತ್ರದ ಮುಂದುವರಿದ ಭಾಗವಾಗಿರುವ ಈ ಚಿತ್ರದಲ್ಲಿ ಅಕ್ಷಯ್ ಕುಮಾರ್ ಪಾತ್ರವು ದಾವೂದ್ ಇಬ್ರಾಹಿಂನನ್ನು ಪ್ರತಿನಿಧಿಸುತ್ತದೆ..

ಜನ್ನತ್: ಇಮ್ರಾನ್ ಹಶ್ಮಿ ಮುಖ್ಯ ಭೂಮಿಕೆಯಲ್ಲಿರುವ ಮತ್ತೊಂದು ಚಿತ್ರ 'ಜನ್ನತ್'. ಈ ಸಿನಿಮಾದಲ್ಲಿ ಬಾಲಿವುಡ್ ನಾಯಕಿಯರ ಜೊತೆ ದಾವೂದ್ ನಡುವಳಿಕೆಯನ್ನು ಈ ಸಿನಿಮಾ ತೋರಿಸಿದೆ.. 

ಇದನ್ನೂ ಓದಿ-ʻಕಾಟೇರʼ ಡೈಲಾಗ್‌ಗೆ ತಕರಾರು:ʻKGFʼಗೆ ಯಾಕೆ ಪ್ರಶ್ನಿಸಿಲ್ಲವೆಂದ ಫ್ಯಾನ್ಸ್!

ಸತ್ಯ: ರಾಮ್‌ಗೋಪಾಲ್ ವರ್ಮಾ ನಿರ್ದೇಶನದ ಈ ಸಿನಿಮಾ ದಾವೂದ್ ಇಬ್ರಾಹಿಂನ ಜೀವನವನ್ನು ಹೋಲುತ್ತದೆ. 

ಒಟ್ಟಿನಲ್ಲಿ ದಾವೂದ್ ಇಬ್ರಾಹಿಂ ಬಾಲಿವುಡ್ ನಲ್ಲಿ ಎಲ್ಲೋ ಬಂಡವಾಳ ಹೂಡಿ ಹೀರೋ, ಡೈರೆಕ್ಟರ್ ಗಳಿಗೆ ಧಮ್ಕಿ ಹಾಕಿ ತನ್ನನ್ನು ತಾನು ಅದ್ಧೂರಿಯಾಗಿ ಪ್ರೊಜೆಕ್ಟ್ ಮಾಡುವ ಸಿನಿಮಾಗಳನ್ನು ಮಾಡಿದ್ದಾನೆ.. ಸದ್ಯ ಭಾರತದಿಂದ ಕಣ್ಮರೆಯಾಗಿರುವ ಈತ.. ಮೂಲಗಳ ಪ್ರಕಾರ ಪಾಕಿಸ್ತಾನದಲ್ಲಿದ್ದಾನೆ ಎನ್ನಲಾಗಿದೆ.. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

 

Trending News