Kantara 2 : 'ಕಾಂತಾರ 2' ಮುಹೂರ್ತಕ್ಕೆ ಡೇಟ್‌ ಫಿಕ್ಸ್‌.! ರಿಲೀಸ್‌ ಯಾವಾಗ ಗೊತ್ತಾ?

Kantara 2 Movie Updates : ದಿನ ಕಳೆದಂತೆ ಕಾಂತಾರ 2 ಕ್ರೇಜ್‌ ಹೆಚ್ಚುತ್ತಿದೆ. ರಿಷಬ್ ಶೆಟ್ಟಿ ಕಾಂತಾರ 2 ಚಿತ್ರದ ಸ್ಕ್ರಿಪ್ಟ್ ಅನ್ನು ಪೂರ್ಣಗೊಳಿಸಿದ್ದಾರೆ. ಆಗಸ್ಟ್‌ನಲ್ಲಿ ಶೂಟಿಂಗ್ ಪ್ರಾರಂಭಿಸಲು ಯೋಜಿಸಿದ್ದಾರೆ ಎನ್ನಲಾಗ್ತಿದೆ.   

Written by - Chetana Devarmani | Last Updated : Jun 15, 2023, 02:36 PM IST
  • 'ಕಾಂತಾರ 2' ಮುಹೂರ್ತಕ್ಕೆ ಡೇಟ್‌ ಫಿಕ್ಸ್‌
  • ಕಾಂತಾರ 2 ಚಿತ್ರದ ಸ್ಕ್ರಿಪ್ಟಿಂಗ್‌ ಕಂಪ್ಲೀಟ್‌
  • ಕಾಂತಾರ 2 ರಿಲೀಸ್‌ ಯಾವಾಗ ಗೊತ್ತಾ?
Kantara 2 : 'ಕಾಂತಾರ 2' ಮುಹೂರ್ತಕ್ಕೆ ಡೇಟ್‌ ಫಿಕ್ಸ್‌.! ರಿಲೀಸ್‌ ಯಾವಾಗ ಗೊತ್ತಾ?  title=
Kantara

Kantara 2 Movie: ಡಿವೈನ್‌ ಸ್ಟಾರ್‌ ರಿಷಬ್‌ ಶೆಟ್ಟಿ ಅಭಿನಯದ ಕಾಂತಾರ ಸೂಪರ್‌ ಹಿಟ್‌ ಆಯಿತು. ಇದೀಗ ಕಾಂತಾರ ಸಿನಿಮಾದ  ಪ್ರಿಕ್ವೆಲ್‌ ರೆಡಿಯಾಗಲಿದೆ ಎಂದು ರಿಷಬ್‌ ಶೆಟ್ಟಿ ಹೇಳಿದ್ದರು. ಇದೀಗ ಆ ಸಮಯ ಕೂಡಿಬಂದಂತಿದೆ. ಕಾಂತಾರ 2 ಅಪ್‌ಡೇಟ್‌ಗಾಗಿ ದೇಶಾದ್ಯಂತ ಜನರು ಕಾಯುತ್ತಿದ್ದಾರೆ. ದಿನ ಕಳೆದಂತೆ ಕಾಂತಾರ 2 ಕ್ರೇಜ್‌ ಹೆಚ್ಚುತ್ತಿದೆ. ಚಿತ್ರದ ಬಗ್ಗೆ ಒಂದು ಪ್ರಮುಖ ಅಪ್‌ಡೇಟ್ ಇಲ್ಲಿದೆ. ಕಾಂತಾರ 2 ಆಗಸ್ಟ್ 27 ರಂದು ಕಾಂತಾರ 2 ಮುಹೂರ್ತ ನೆರವೇರಲಿದೆ ಎಂದು ಹೇಳಲಾಗಿದೆ. ವರದಿಗಳ ಪ್ರಕಾರ, ರಿಷಬ್ ಶೆಟ್ಟಿ ಅವರ ಕಾಂತಾರ 2 ಮುಂದಿನ ಎರಡು ತಿಂಗಳಲ್ಲಿ ನಿರ್ಮಾಣವನ್ನು ಪ್ರಾರಂಭಿಸಲಿದೆ.  

ಹೊಂಬಾಳೆ ಫಿಲಂಸ್ ಸಂಸ್ಥಾಪಕ ವಿಜಯ್ ಕಿರಗಂದೂರ್ ಪ್ರಕಾರ, ರಿಷಬ್ ಆಗಸ್ಟ್‌ನಲ್ಲಿ ಶೂಟಿಂಗ್ ಪ್ರಾರಂಭಿಸಲು ಯೋಜಿಸಿದ್ದಾರೆ. ಏಕೆಂದರೆ ಯೋಜನೆಯ ಒಂದು ಭಾಗದ ಚಿತ್ರೀಕರಣಕ್ಕೆ ಮಳೆಗಾಲದ ಅಗತ್ಯವಿದೆ. ಸೀಕ್ವೆಲ್‌ನ ಬಜೆಟ್ ಮೂಲ ಚಿತ್ರಕ್ಕಿಂತ ದೊಡ್ಡದಾಗಿದೆ ಎಂದಿದ್ದಾರೆ. 

ಇದನ್ನೂ ಓದಿ: Namratha Gowda: ಕಿರುತೆರೆ ನಟಿ ನಮ್ರತಾ ಗೌಡ ಬೆಡ್‌ರೂಮ್‌ ವಿಡಿಯೋ ವೈರಲ್‌.!

ವರದಿಗಳ ಪ್ರಕಾರ ರಿಷಬ್ ಶೆಟ್ಟಿ ಕಾಂತಾರ 2 ಚಿತ್ರದ ಸ್ಕ್ರಿಪ್ಟ್ ಅನ್ನು ಪೂರ್ಣಗೊಳಿಸಿದ್ದಾರೆ. ಈ ಚಿತ್ರವು ಕಾಂತಾರಕ್ಕೆ ಮುನ್ನುಡಿಯಾಗಿದೆ. ನೀವು ನೋಡಿರುವುದು ವಾಸ್ತವವಾಗಿ ಕಾಂತಾರ ಭಾಗ 2, ಈಗ ರೆಡಿಯಾಗುತ್ತಿರುವುದು ಕಾಂತಾರ ಭಾಗ 1 ಎಂದು ನಟ ಮತ್ತು ನಿರ್ದೇಶಕ ರಿಷಬ್‌ ಶೆಟ್ಟಿ ಈ ಹಿಂದೆ ಹೇಳಿದ್ದರು. ಕಾಂತಾರ ಸಿನಿಮಾ ಮಾಡುವಾಗ ಈ ವಿಚಾರ ನನ್ನಲ್ಲಿ ಮೂಡಿತು ಎನ್ನಲಾಗಿದೆ. 

ರಿಷಬ್ ಯುಗಾದಿಯ ಶುಭ ಸಂದರ್ಭದಲ್ಲಿ ಮಾರ್ಚ್‌ನಲ್ಲಿ ಚಿತ್ರದ ಸ್ಕ್ರಿಪ್ಟ್‌ನಲ್ಲಿ ಕೆಲಸ ಮಾಡಲು ಪ್ರಾರಂಭಿಸಿದರು. ರಿಷಬ್ ಶೆಟ್ಟಿ ಸ್ಕ್ರಿಪ್ಟ್ ಕೆಲಸವನ್ನು ಮುಗಿಸಿದ್ದಾರೆ ಎನ್ನಲಾಗಿದೆ. ಕಾಂತಾರ 2 ಮುಹೂರ್ತಕ್ಕೆ ಡೇಟ್‌ ಫಿಕ್ಸ್ ಮಾಡಿದ್ದಾರೆ ಎಂದು ಹೇಳಲಾಗಿದೆ. ವರದಿಗಳ ಪ್ರಕಾರ, ಕಾಂತಾರ ಪ್ರಿಕ್ವೆಲ್ ಮುಹೂರ್ತವನ್ನು ಆಗಸ್ಟ್ 27ಕ್ಕೆ ನೆರವೇರಿಸಲು ನಿರ್ಧರಿಸಲಾಗಿದೆ ಎನ್ನಲಾಗಿದೆ. ಈ ಕಾಂತಾರ 2 ಮೂಲಕ ಚಿತ್ರೀಕರಣ ಆರಂಭಿಸಲಿದೆ ಎಂದು ಹೇಳಲಾಗಿದೆ. ಕಾಂತಾರ 2 ಸಿನಿಮಾ 2024 ರಲ್ಲಿ ರಿಲೀಸ್‌ ಆಗಲಿದೆ ಎಂದು ಹೇಳಲಾಗ್ತಿದೆ. 

ಇದನ್ನೂ ಓದಿ: 'ಸಪ್ತ ಸಾಗರದಾಚೆ ಎಲ್ಲೋ' ಎರಡೂ ಪಾರ್ಟ್‌ಗಳ ಬಿಡುಗಡೆ ದಿನಾಂಕ ಅನೌನ್ಸ್‌

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News