Darshana Rajendran: ಟಾಲಿವುಡ್‌ಗೆ ಎಂಟ್ರಿ ಕೊಟ್ಟ ʼಹೃದಯಂ’ ಚಿತ್ರದ ಬೆಡಗಿ ದರ್ಶನಾ; ಸಿನಿಮಾ ಯಾವುದು ಗೊತ್ತಾ..?

Actress Darshana Rajendran: ಮಳಿಯಾಳಂನ ʼಹೃದಯಂʼ ಚಿತ್ರದ ಮೂಲಕ ಮನೆ ಮಾತಾಗಿರುವ ನಟಿ ದರ್ಶನಾ ರಾಜೇಂದ್ರನ್​ ಅವರು ಮಾಲಿವುಡ್ ಮಾತ್ರವಲ್ಲದೇ ಭಾಷೆಗಡಿ ಮೀರಿ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಇದೀಗ ಟಾಲಿವುಡ್‌ಗೆ ಎಂಟ್ರಿ ಕೊಟ್ಟಿದ್ದಾರೆ. 

Written by - Zee Kannada News Desk | Last Updated : Jun 11, 2023, 12:54 PM IST
  • ʼಹೃದಯಂ’ ಚಿತ್ರದ ಸುಂದರಿ ದರ್ಶನಾ ಮುಂದಿನ ಸಿನಿಮಾ ರೀವಿಲ್
  • ಟಾಲಿವುಡ್‌ಗೆ ಎಂಟ್ರಿ ಕೊಟ್ಟ ಮಾಲಿವುಡ್‌ ಬೆಡಗಿ
  • ʼಹೃದಯಂ’ ಚಿತ್ರದ ಮೂಲಕ ಪಡ್ಡೆಹೈಕ್ಳ ಮನ ಕದ್ದಿರುವ ನಟಿ ದರ್ಶನಾ ರಾಜೇಂದ್ರನ್
Darshana Rajendran: ಟಾಲಿವುಡ್‌ಗೆ ಎಂಟ್ರಿ ಕೊಟ್ಟ ʼಹೃದಯಂ’ ಚಿತ್ರದ ಬೆಡಗಿ ದರ್ಶನಾ; ಸಿನಿಮಾ ಯಾವುದು ಗೊತ್ತಾ..? title=

Entertainment: ಮಳಿಯಾಳಂನ ʼಹೃದಯಂʼ ಚಿತ್ರದ ಮೂಲಕ ಮನೆ ಮಾತಾಗಿರುವ ನಟಿ ದರ್ಶನಾ ರಾಜೇಂದ್ರನ್​ ಅವರು ಮಾಲಿವುಡ್ ಮಾತ್ರವಲ್ಲದೇ ಭಾಷೆಗಡಿ ಮೀರಿ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಈ ಚಿತ್ರದಲ್ಲಿ ದರ್ಶನಾ ಎಂಬ ನಟನೆ ಮೂಲಕ ಗಮನ ಸೆಳೆದಿದ್ದಾರೆ. ಈ ನಟಿ ಕರ್ಲಿ ಹೇರ್‌, ತೆಳ್ಳಗೆ ಬೆಳ್ಳಗೆ ಇರುವ ದರ್ಶನಾ ಬ್ಯೂಟಿಗೆ ಮಾರು ಹೋಗದವರಿಲ್ಲ. 

ಇದನ್ನೂ ಓದಿ: Prabhu Deva: ರಾಗಿಣಿ ಮನೆಯಲ್ಲಿ ಇಂಡಿಯನ್ ಮೈಕಲ್ ಜಾಕ್ಸನ್ ಪ್ರಭುದೇವ; ಇಲ್ಲಿವೆ ನೋಡಿ ಫೋಟೊಸ್..!‌

ಇದೀಗ ಮಲ್ಲು ಬೆಡಗಿಗೆ ಮಾಲಿವುಡ್‌ ಮಾತ್ರವಲ್ಲದೇ ಬೇರೆ ಭಾಷೆಗಳಿಂದ ಆಫರ್​ ಕೇಳಿ ಬರುತ್ತಿದೆ. ʼಹೃದಯಂ’ ಚಿತ್ರದ ಸರಳ ನಟನೆಯು ಅಭಿಮಾನಿಗಳಲ್ಲದೇ ಹಲವು ನಿರ್ದೇಶಕರ ಮನೆ ಗೆದ್ದಿರುವುದರಿಂದ ನಟಿಗೆ ಅನೇಕ ಸಿನಿಮಾಗಳಲ್ಲಿ ಸಾಲು ಸಾಲು ಅವಕಾಶಗಳು ದೊರಕುತ್ತಿದೆ. 

ಇದನ್ನೂ ಓದಿ: ಅಪರೂಪದ ಕ್ಷಣಕ್ಕೆ ಸಾಕ್ಷಿಯಾದ ಪ್ರಭಾಕರ್ ಮಕ್ಕಳು; ವಿನೋದ್ ಪ್ರಭಾಕರ್ & ಸೌಂದರ್ಯ ಜಯಮಾಲಾ

ಈ ನಟಿಯನ್ನು ಸ್ಯಾಂಡಲ್ವುಡ್‌ ಸಿನಿಮಾಗಳಲ್ಲಿ ಕರೆಸಬೇಕೆಂಬ ಮಾತುಗಳು ಕೇಳಿ ಬರುತ್ತಿದೆ. ನಟಿಯ ಮುಂದೆ ಅನೇಕ ಅವಕಾಶ ಇರುವುದರಿಂದ ಸದ್ಯ ಈಗ ಟಾಲಿವುಡ್ ಚಿತ್ರರಂಗಕ್ಕೆ ಪಾದರ್ಪಣೆ ಮಾಡಲಿದ್ದಾರೆ.

ಈ ಚಿತ್ರವನ್ನು ಸಿನಿಮಾ ಬಂಡಿ’ ಖ್ಯಾತಿಯ ಪ್ರವೀಣ್​ ಅವರು ನಿರ್ದೇಶನ ಮಾಡಲಿದ್ದಾರೆ. ನಟಿ ದರ್ಶನಾ ವೈರಸ್​’, ‘ಸೀ ಯೂ ಸೂನ್​’, ‘ಜಯ ಜಯ ಜಯ ಜಯ ಹೇ’, ‘ಹೃದಯಂ’ ಮುಂತಾದ ಸಿನಿಮಾಗಳಲ್ಲಿ ನಟಿಸಿ ಪ್ರೇಕ್ಷರಕ ಮನ ಗೆದ್ದಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News