ʼಹಾಳ್‌ ಮಾಡೋಕೆ ಹತ್ತು ಜನ ಇದ್ರೆ ಕಾಯೋಕಂತ ಸಾವಿರ ಜನ ಇರ್ತಾರೆʼ : ಫ್ಯಾನ್ಸ್‌ನ ಹೊಗಳಿದ DBoss

ದೇಶಾದ್ಯಂತ ದರ್ಶನ್‌ ʼಕ್ರಾಂತಿʼ ಪ್ರಚಾರ ಅಬ್ಬರದಿಂದ ನಡೆಯುತ್ತಿದೆ. ಸ್ವತಃ ದಚ್ಚು ಅಭಿಮಾನಗಳೇ ಅಖಾಡಕ್ಕೆ ಇಳಿದು ಕ್ರಾಂತಿ ಸಿನಿಮಾದ ಪ್ರಚಾರ ಮಾಡುತ್ತಿದ್ದಾರೆ. ಫ್ಯಾನ್ಸ್‌ಗಳ ಈ ಕಾರ್ಯಕ್ಕೆ ಯಜಮಾನ ಫುಲ್‌ ಖುಷಿಯಾಗಿದ್ದು, ನಾವು ಕ್ರಾಂತಿ ನಿರ್ಮಾಣ ಮಾಡುವರೆಗೂ ಮಾತ್ರ ನಮ್ಮದು ಈಗ ಅವದ್ದು ಎಂದು ಮತ್ತೊಮ್ಮೆ ಅಭಿಮಾನಿಗಳಿಂದಲೇ ನಾವು ಎಂಬ ಮಾತನ್ನಾಡಿದ್ದಾರೆ.

Written by - Krishna N K | Last Updated : Nov 18, 2022, 09:06 AM IST
  • ದೇಶಾದ್ಯಂತ ದರ್ಶನ್‌ ʼಕ್ರಾಂತಿʼ ಪ್ರಚಾರ ಅಬ್ಬರದಿಂದ ನಡೆಯುತ್ತಿದೆ
  • ಸ್ವತಃ ದಚ್ಚು ಅಭಿಮಾನಗಳೇ ಅಖಾಡಕ್ಕೆ ಇಳಿದು ಕ್ರಾಂತಿ ಸಿನಿಮಾದ ಪ್ರಚಾರ ಮಾಡುತ್ತಿದ್ದಾರೆ
  • ಫ್ಯಾನ್ಸ್‌ಗಳ ಈ ಕಾರ್ಯಕ್ಕೆ ಯಜಮಾನ ಫುಲ್‌ ಖುಷಿಯಾಗಿದ್ದಾರೆ
ʼಹಾಳ್‌ ಮಾಡೋಕೆ ಹತ್ತು ಜನ ಇದ್ರೆ ಕಾಯೋಕಂತ ಸಾವಿರ ಜನ ಇರ್ತಾರೆʼ : ಫ್ಯಾನ್ಸ್‌ನ ಹೊಗಳಿದ DBoss title=

ಬೆಂಗಳೂರು : ದೇಶಾದ್ಯಂತ ದರ್ಶನ್‌ ʼಕ್ರಾಂತಿʼ ಪ್ರಚಾರ ಅಬ್ಬರದಿಂದ ನಡೆಯುತ್ತಿದೆ. ಸ್ವತಃ ದಚ್ಚು ಅಭಿಮಾನಗಳೇ ಅಖಾಡಕ್ಕೆ ಇಳಿದು ಕ್ರಾಂತಿ ಸಿನಿಮಾದ ಪ್ರಚಾರ ಮಾಡುತ್ತಿದ್ದಾರೆ. ಫ್ಯಾನ್ಸ್‌ಗಳ ಈ ಕಾರ್ಯಕ್ಕೆ ಯಜಮಾನ ಫುಲ್‌ ಖುಷಿಯಾಗಿದ್ದು, ನಾವು ಕ್ರಾಂತಿ ನಿರ್ಮಾಣ ಮಾಡುವರೆಗೂ ಮಾತ್ರ ನಮ್ಮದು ಈಗ ಅವದ್ದು ಎಂದು ಮತ್ತೊಮ್ಮೆ ಅಭಿಮಾನಿಗಳಿಂದಲೇ ನಾವು ಎಂಬ ಮಾತನ್ನಾಡಿದ್ದಾರೆ.

ಹೌದು.. ಸಾರಥಿಯ ʼಕ್ರಾಂತಿʼ ರಥ ಯಾತ್ರೆ ರಾಜ್ಯಾದ್ಯಂತ ಸಾಗಿದೆ. ಊರು ಊರಿಗೆ ಹಳ್ಳಿ ಹಳ್ಳಿಗಳಲ್ಲೂ ಸಿನಿಮಾದ ಪ್ರಚಾರ ನಡೆಯುತ್ತಿದೆ. ಸುಂಟರಗಾಳಿಯ ವೇಗದಂತೆ ದಾಸನ ಅಭಿಮಾನಿಗಳೂ ಸಹ ಕ್ರಾಂತಿ ಸಿನಿಮಾದ ಪ್ರಚಾರ ಮಾಡುತ್ತಿದ್ದಾರೆ. ಇನ್ನು ಜೀ ವಾಹಿನಿ ನಡೆಸಿದ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ʼಗಜʼ, ಅಭಿಮಾನಿಗಳನ್ನು ಹಾಡಿ ಹೊಗಳಿದ್ದಾರೆ. ಹಾಳ್‌ ಮಾಡೋಕೆ ನೂರ್‌ ಜನ ಇದ್ರೆ ಕಾಯೋಕಂತ ಒಬ್ಬ ಇರ್ತಾನೆ ನನ್ನ ಸೆಲೆಬ್ರೇಟಿಗಳು ನನ್ನ ದೇವರುಗಳು, ಅವರಿಂದಲೇ ನಾನು, ಕ್ರಾಂತಿ ಅವರ ಸಿನಿಮಾ, ಹಾಗಾಗಿ ಅವರು ಪ್ರಚಾರ ಮಾಡುತ್ತಿದ್ದಾರೆ.

ಇದನ್ನೂ ಓದಿ: ರಜನಿಕಾಂತ್ ಅಭಿನಯದ ಜೈಲರ್ ಚಿತ್ರದಲ್ಲಿ ಶಿವರಾಜ್ ಕುಮಾರ್...!

ಕನ್ನಡಿಗರು ಎಲ್ಲಾ ಕಡೆ ಇದ್ದಾರೆ. ಅವರಿಂದಲೇ ನಾವು ನಮ್ಮಿಂದ ಅವರಲ್ಲ. ಮೊನ್ನೆ ನಮ್ಮ ನಿರ್ಮಾಪಕರು ಹೇಳಿದ್ರು ಸೈ ಡೈವಿಂಗ್‌ ಮಾಡಿ ಕ್ರಾಂತಿ ಪ್ರಚಾರ ಮಾಡಿದ್ರು ಅಂತ ಸೋ ಅವರಿಗೆ ಎಲ್ಲೇಲ್ಲಿ ಸಾಧ್ಯವೋ ಅಲ್ಲಲ್ಲಿ ಪ್ರಚಾರ ಮಾಡುತ್ತಿದ್ದಾರೆ. ಒಮ್ಮೆ ಯಾವಾಗ ಅವರ ಕೈಗೆ ಸಿನಿಮಾ ಹೋಯಿತು ಆವಾಗಿಂದ ಅದು ಅವರ ಸಿನಿಮಾ. ಆದ್ರೆ ಅವರು ಈಗ ಎಷ್ಟು ಮೆರೆಸುತ್ತಿದ್ದಾರೋ ಅವರಿಗೆ ಹತ್ತು ಪೈಸೆಯಷ್ಟು ಚ್ಯುತಿ ಬರಲ್ಲ. ಆ ಗ್ಯಾರಂಟಿ ನಾನ್‌ ಕೋಡ್ತೀನಿ ಎಂದು ಫ್ಯಾನ್ಸ್‌ಗೆ ಕಾಂತ್ರಿ ಕುರಿತು ಚಾಲೆಂಜಿಂಗ್ ಸ್ಟಾರ್ ಭರವಸೆ ನೀಡಿದರು.

ಇನ್ನು ಜ26 ರ ಗಣರಾಜ್ಯೋತ್ಸವ ದಿನದಂದು ವಿಶ್ವದಾದ್ಯಂತ ಕ್ರಾಂತಿ ಸಿನಿಮಾ ತೆರೆಗೆ ಅಪ್ಪಳಿಸಲಿದೆ. ಮೀಡಿಯಾ ಹೌಸ್ ಸ್ಟೂಡಿಯೋ ಬ್ಯಾನರ್ ನಡಿಯಲ್ಲಿ ಶೈಲಜಾ ನಾಗ್ ಕ್ರಾಂತಿ ಸಿನಿಮಾದ ನಿರ್ಮಾಪಕಿಯಾಗಿದ್ದು, ಬಿ ಸುರೇಶ ಸಹ ನಿರ್ಮಾಪಕರಾಗಿದ್ದಾರೆ. ಸ್ಯಾಂಡಲ್‌ವುಡ್‌ ಬ್ಯೂಟಿ ಕ್ವೀನ್‌ ರಚಿತಾ ರಾಮ್ ಕ್ರಾಂತಿ ಸಿನಿಮಾದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ಜೊತೆಯಾಗಿದ್ದಾರೆ. ವಿ ಹರಿಕೃಷ್ಣ ನಿರ್ದೇಶನ ʼಕ್ರಾಂತಿʼಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News