ನನ್ನ ತಂದೆ ಬಗ್ಗೆ ಕೆಟ್ಟ ಕಾಮೆಂಟ್ಸ್, ಅಸಭ್ಯವಾಗಿ ನಿಂದಿಸ್ತಿರೋರಿಗೆ ಧನ್ಯವಾದಗಳು..! ವಿನೀಶ್‌ ದರ್ಶನ್ ಭಾವುಕ ಪೋಸ್ಟ್

Vineesh Darshan post : ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಪವಿತ್ರ ಗೌಡ, ದರ್ಶನ್‌ ಸೇರಿದಂತೆ ಡೆವಿಲ್‌ ತಂಡದ ಬಂಧನವಾಗಿದೆ. ಇನ್ನು ನಟನ ಬಂಧನವನ್ನು ಅವರ ಅಭಿಮಾನಿಗಳು ವಿರೋಧಿಸುತ್ತಿದ್ದಾರೆ. ಈ ಮಧ್ಯ ತಂದೆಯ ಕುರಿತು ವಿನೀಶ್‌ ಭಾವುಕ ಪೋಸ್ಟ್‌ ಹಾಕಿದ್ದಾರೆ..

Written by - Krishna N K | Last Updated : Jun 13, 2024, 07:25 PM IST
    • ರೇಣುಕಾಸ್ವಾಮಿ ಹತ್ತೆ ಪ್ರಕರಣ ದಿನದಿಂದ ದಿನಕ್ಕೆ ಹೊಸ ಟ್ವಿಸ್ಟ್‌ ಪಡೆಯುತ್ತಿದೆ.
    • ದಾಸ ಯಾವುದೇ ತಪ್ಪು ಮಾಡಿಲ್ಲ ಅಂತ ವಾದಿಸುತ್ತಿದ್ದಾರೆ ಅವರ ಫ್ಯಾನ್ಸ್‌
    • ಈ ಮಧ್ಯ ತಂದೆಯ ಕುರಿತು ವಿನೀಶ್‌ ದರ್ಶನ್‌ ಭಾವುಕ ಪೋಸ್ಟ್‌ ಹಾಕಿದ್ದಾರೆ..
ನನ್ನ ತಂದೆ ಬಗ್ಗೆ ಕೆಟ್ಟ ಕಾಮೆಂಟ್ಸ್, ಅಸಭ್ಯವಾಗಿ ನಿಂದಿಸ್ತಿರೋರಿಗೆ ಧನ್ಯವಾದಗಳು..! ವಿನೀಶ್‌ ದರ್ಶನ್ ಭಾವುಕ ಪೋಸ್ಟ್ title=

Darshan son Vineesh post : ರೇಣುಕಾಸ್ವಾಮಿ ಹತ್ತೆ ಪ್ರಕರಣ ದಿನದಿಂದ ದಿನಕ್ಕೆ ಹೊಸ ಟ್ವಿಸ್ಟ್‌ ಪಡೆಯುತ್ತಿದೆ. ಸಧ್ಯ ಪವಿತ್ರ ಗೌಡ್‌ ಮತ್ತು ದರ್ಶನ್‌ ಸೇರಿದಂತೆ 14 ಜನರನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ. ಘಟನೆಗೆ ಸಂಬಂಧಿಸಿ ಮಹತ್ವದ ವಿಚಾರಗಳನ್ನು ಪೊಲೀಸರು ಕಲೆ ಹಾಕುತ್ತಿದ್ದಾರೆ. ಇದರ ಬೆನ್ನಲ್ಲೆ ತಂದೆಯ ಕುರಿತು ವಿನೀಶ್‌ ದರ್ಶನ್‌ ಭಾವುಕ ಪೋಸ್ಟ್‌ ಮಾಡಿದ್ದಾರೆ..

ಹೌದು.. ಪವಿತ್ರ ಗೌಡಗೆ ಅಶ್ಲೀಲ ಸಂದೇಶ ಕಳುಹಿಸಿದ ಎನ್ನವ ವಿಚಾರಕ್ಕೆ ಡಿ ಗ್ಯಾಂಗ್‌ ರೇಣುಕಾಸ್ವಾಮಿ ಹತ್ಯೆಗೈದಿದೆ. ಈ ಪ್ರಕರಣದಲ್ಲಿ ಪವಿತ್ರಗೌಡ, ದರ್ಶನ್‌ ಸೇರಿದಂತೆ ಡೆವಿಲ್‌ ತಂಡದ ಬಂಧನವಾಗಿದೆ. ಇನ್ನು ನಟನ ಬಂಧನವನ್ನು ಅವರ ಅಭಿಮಾನಿಗಳು ವಿರೋಧಿಸುತ್ತಿದ್ದಾರೆ. ದಾಸ ಯಾವುದೇ ತಪ್ಪು ಮಾಡಿಲ್ಲ ಅಂತ ವಾದಿಸುತ್ತಿದ್ದಾರೆ.. ಈ ಮಧ್ಯ ತಂದೆಯ ಕುರಿತು ವಿನೀಶ್‌ ಭಾವುಕ ಪೋಸ್ಟ್‌ ಹಾಕಿದ್ದಾರೆ..

ಇದನ್ನೂ ಓದಿ:ಎಣ್ಣೆ ಹೊಡೆದ್ರೆ ದರ್ಶನ್ ಆಗ್ತಾರಂತೆ ʼಡೆವಿಲ್‌ʼ..! ಸಿಕ್ಕಸಿಕ್ಕವರಿಗೆ ಬಾರಿಸುತ್ತಾನಂತೆ ʼದಾಸʼ 

ಪೋಸ್ಟ್‌ನಲ್ಲಿ ʼನನ್ನ ತಂದೆ ಬಗ್ಗೆ ಕೆಟ್ಟ ಕಾಮೆಂಟ್ಸ್ ಮತ್ತು ಅಸಭ್ಯ ಭಾಷೆಯಲ್ಲಿ ನಿಂದಿಸ್ತಿರೋರಿಗೆ ಧನ್ಯವಾದಗಳು.. ನನಗೆ 15 ವರ್ಷ, ನನಗೂ ಮನಸಿದೆ, ಈ ಕಷ್ಟದ ಸಮಯದಲ್ಲಿ ನನ್ನ ತಾಯಿ ಮತ್ತು ತಂದೆಗೆ ನಿಮ್ಮ ಬೆಂಬಲದ ಅಗತ್ಯವಿದೆ..ʼ ಎಂದು ವಿನೀಶ್ ಬರೆದುಕೊಂಡು ಪೋಸ್ಟ್ ಮಾಡಿದ್ದಾರೆ.

No description available.

ವಿನೀಶ್‌ ದರ್ಶನ್‌ ಮತ್ತು ವಿಜಯಲಕ್ಷ್ಮಿ ಪುತ್ರ, ಸದಾ ತಂದೆಯೊಂದಿಗೆ ಕಾಣಿಸಿಕೊಳ್ಳುತ್ತಿದ್ದ.. ಇದೀಗ ಅಪ್ಪನ ಬಂಧನ ವಿನೀಶ್‌ಗೆ ಆಘಾತವನ್ನುಂಟು ಮಾಡಿದೆ. ತನ್ನ ನೋವನ್ನು ಪೋಸ್ಟ್‌ನ ಮೂಲಕ ಹೊರ ಹಾಕಿದ್ದಾನೆ ದಚ್ಚು ಪುತ್ರ. ಈ ಪೋಸ್ಟ್‌ಗೆ ಸಾಮಾಜಿಕ ಜಾಲತಾಣದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ..

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News