ಸಿನಿಮಾ ಮಾಡ್ತೀನಿ ಅಂತ ಕೋಟಿ ಕೋಟಿ ಸಂಭಾವನೆ ಪಡೆದ ʼಡೆವಿಲ್‌ʼ..! ನಟನ ನಂಬಿ ಹಣ ಕೊಟ್ಟವರು ಯಾರ್‍ಯಾರು ಗೊತ್ತೆ..?

ಪವಿತ್ರ ಗೌಡ ಅವರಿಗೆ ಅಶ್ಲೀಲ ಸಂದೇಶ ಕಳುಹಿಸಿದ ಎನ್ನುವ ಕಾರಣಕ್ಕೆ ರೇಣುಕಾಸ್ವಾಮಿ ಎಂಬುವರ ಹತ್ಯೆ ಮಾಡಲಾಗಿದೆ. ಪ್ರಕರಣದಲ್ಲಿ ನಟ ದರ್ಶನ್‌ ಸೇರಿದಂತೆ ಒಟ್ಟು 14 ಜನರ ಬಂಧನವಾಗಿದೆ. ನಟ ಅರೆಸ್ಟ್‌  ಆದ ಬೆನ್ನಲ್ಲೆ, ಡೇವಿಲ್‌ ಸಿನಿಮಾ ನಿರ್ಮಾಪಕರು ಸೇರಿದಂತೆ, ಅವರ ಜೊತೆ ಸಿನಿಮಾ ಮಾಡಬೇಕು ಅಂದುಕೊಂಡು ಕೋಟಿ ಕೋಟಿ ಹಣ ಹಾಕಿರುವ ನಿರ್ಮಾಪಕರು ಕಂಗಾಲಾಗಿದ್ದಾರೆ. ಅದಕ್ಕೆ ಕಾರಣ ಕೊಲೆ ಪ್ರಕರಣದಲ್ಲಿ ಅಂದರ್‌ ಆಗಿರುವ ದರ್ಶನ್‌ಗೆ ಬೆಲ್ ಸಿಗೋದು ಡೌಟ್‌ ಎನ್ನಲಾಗಿದೆ..

Written by - Krishna N K | Last Updated : Jun 13, 2024, 05:18 PM IST
    • ಬಾಕ್ಸ್ ಆಫೀಸ್ ಸುಲ್ತಾನ ಅಂತಾ ಕರೆಯಿಸಿಕೊಂಡಿರುವ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್
    • ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಆರೋಪದಲ್ಲಿ ಸಿಲಿಕಿಕೊಂಡಿರುವ ನಟ
    • ಕೊಲೆ ಪ್ರಕರಣದಲ್ಲಿ ಅಂದರ್‌ ಆಗಿರುವ ದರ್ಶನ್‌ಗೆ ಬೆಲ್ ಸಿಗೋದು ಡೌಟ್‌ ಎನ್ನಲಾಗಿದೆ
ಸಿನಿಮಾ ಮಾಡ್ತೀನಿ ಅಂತ ಕೋಟಿ ಕೋಟಿ ಸಂಭಾವನೆ ಪಡೆದ ʼಡೆವಿಲ್‌ʼ..! ನಟನ ನಂಬಿ ಹಣ ಕೊಟ್ಟವರು ಯಾರ್‍ಯಾರು ಗೊತ್ತೆ..? title=

Darshan upcoming movies : ಪವಿತ್ರ ಗೌಡ ಅವರಿಗೆ ಅಶ್ಲೀಲ ಸಂದೇಶ ಕಳುಹಿಸಿದ ಎನ್ನುವ ಕಾರಣಕ್ಕೆ ರೇಣುಕಾಸ್ವಾಮಿ ಎಂಬುವರ ಹತ್ಯೆ ಮಾಡಲಾಗಿದೆ. ಪ್ರಕರಣದಲ್ಲಿ ನಟ ದರ್ಶನ್‌ ಸೇರಿದಂತೆ ಒಟ್ಟು 14 ಜನರ ಬಂಧನವಾಗಿದೆ. ನಟ ಅರೆಸ್ಟ್‌  ಆದ ಬೆನ್ನಲ್ಲೆ, ಡೇವಿಲ್‌ ಸಿನಿಮಾ ನಿರ್ಮಾಪಕರು ಸೇರಿದಂತೆ, ಅವರ ಜೊತೆ ಸಿನಿಮಾ ಮಾಡಬೇಕು ಅಂದುಕೊಂಡು ಕೋಟಿ ಕೋಟಿ ಹಣ ಹಾಕಿರುವ ನಿರ್ಮಾಪಕರು ಕಂಗಾಲಾಗಿದ್ದಾರೆ. ಅದಕ್ಕೆ ಕಾರಣ ಕೊಲೆ ಪ್ರಕರಣದಲ್ಲಿ ಅಂದರ್‌ ಆಗಿರುವ ದರ್ಶನ್‌ಗೆ ಬೆಲ್ ಸಿಗೋದು ಡೌಟ್‌ ಎನ್ನಲಾಗಿದೆ..

ಹಾಗದ್ರೆ ದರ್ಶನ್ ಅಭಿನಯಿಸಬೇಕಿರುವ ಸಿನಿಮಾಗಳು ಯಾವುವು? ಯಾವ ಯಾವ ನಿರ್ಮಾಪಕರಿಂದ ಸಿನಿಮಾ ಮಾತುಕಥೆ ಆಗಿದೆ..? ಯಾವ ಯಾವ ಪ್ರಾಡ್ಯೂಜರ್ ಹತ್ತಿರ ಅಡ್ವಾನ್ಸ್ ಹಣ ಪಡೆದಿದ್ದಾರೆ ಗೊತ್ತಾ..? ಎಂಬ ಸಂಪೂರ್ಣವಾದ ಮಾಹಿತಿ ಇಲ್ಲಿದೆ ನೋಡಿ..

ಇದನ್ನೂ ಓದಿ:ನಟ ದುನಿಯಾ ವಿಜಯ್ ಮತ್ತು ಪತ್ನಿ ನಾಗರತ್ನ ಡಿವೋರ್ಸ್ ಕೇಸ್; ಇಂದು ಬರಲಿದೆ ತೀರ್ಪು

ಕಾಟೇರ ಸಿನಿಮಾ ಸಕ್ಸಸ್ ಬಳಿಕ ದರ್ಶನ್ ಅಭಿನಯಿಸುತ್ತಿರುವ ನಿರೀಕ್ಷಿತ ಚಿತ್ರ ಡೆವಿಲ್ ದ ಹೀರೋ. ಮಿಲನ ಸಿನಿಮಾ ಖ್ಯಾತಿಯ ಪ್ರಕಾಶ್ ಈ ಸಿನಿಮಾವನ್ನು ನಿರ್ಮಾಣದ ಜೊತೆ ನಿರ್ದೇಶನ ಮಾಡುತ್ತಿದ್ದರು. ಇತ್ತೀಚಿಗೆ ಈ ಚಿತ್ರ ಟೀಸರ್ ನಿಂದಲೇ ಕೌತುಕ ಹುಟ್ಟಿಸಿತ್ತು. ಡೆವಿಲ್ ಸಿನಿಮಾ ಕೇವಲ 25 ದಿನ ಶೂಟಿಂಗ್ ಮುಗಿಸಿದೆ. 

ಮೊದಲ ಶೆಡ್ಯೂಲ್ ಚಿತ್ರೀಕರಣದ ವೇಳೆ ದರ್ಶನ್ ಆಕ್ಷನ್ ಸಿಕ್ವೇನ್ಸ್ ಮಾಡೋದಿಕ್ಕೆ ಹೋಗಿ ಎಡಗೈಯಿ ಮುರಿದುಕೊಂಡ ಕಾರಣ, ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದರು. ಇದರಿಂದ ಸಿನಿಮಾ ಶೂಟಿಂಗ್ ಮುಂದಕ್ಕೆ ಹಾಕಲಾಗಿತ್ತು. ಈ ಘಟನೆ ನಡೆಯುವ ಎರಡು ದಿನ ಡೆವಿಲ್ ಚಿತ್ರದ ಎರಡನೇ ಹಂತದ ಶೂಟಿಂಗ್ ಆರಂಭವಾಗಿತ್ತು. ನಿನ್ನೆ ದರ್ಶನ್‌ ಚಿತ್ರೀಕರಣದಲ್ಲಿ ಭಾಗಿಯಾಗಬೇಕಿತ್ತು, ಆದರೆ ಅಷ್ಟರಲ್ಲಿ ಅವರು ಪೊಲೀಸರ ಅತಿಥಿಯಾಗಿದ್ದಾರೆ.

ಇದನ್ನೂ ಓದಿ:ಬಿಡುಗಡೆಗು ಮುನ್ನವೇ RRR ದಾಖಲೆ ಮುರಿದ Kalki 2898 AD..!

ಈ ಕಡೆ ದರ್ಶನ್ ಅರೆಸ್ಟ್ ಆಗಿದ್ದಾರೆ ಎಂಬ ಸುದ್ದಿ ಕೇಳಿದ ತಕ್ಷಣ ನಿರ್ದೇಶಕ ಪ್ರಕಾಶ್ ಶಾಕ್‌ಗೆ ಒಳಗಾಗಿ ನಿನ್ನೆ ಶೂಟಿಂಗ್ ಸ್ಟಾಪ್ ಮಾಡಿದ್ದಾರೆ ಎನ್ನಲಾಗಿದೆ. ಡೆವಿಲ್ ಚಿತ್ರವನ್ನ ಡಿಸೆಂಬರ್ 25ಕ್ಕೆ ಬಿಡುಗಡೆ ಮಾಡ್ತಿವಿ ಅಂತಾ ಹೇಳಿದ್ದ ನಿರ್ದೇಶಕ ಪ್ರಕಾಶ್ ಕಂಗಾಲು ಆಗಿದ್ದಾರೆ. ಕಾರಣ ದರ್ಶನ್ ಹೊರಗಡೆ ಬರೋವರೆಗೂ ಡೆವಿಲ್ ಸಿನಿಮಾ ಶೂಟಿಂಗ್ ಶುರುವಾಗೋದಿಲ್ಲ. ಹಾಗೇ ಡಿಸೆಂಬರ್ ನಲ್ಲಿ ಡೆವಿಲ್ ಚಿತ್ರ ಬಿಡುಗಡೆ ಇಲ್ಲದೆ ಮುಂದಿನ ವರ್ಷಕ್ಕೆ ಹೋಗುತ್ತೆ. ಡೆವಿಲ್‌ ಸಿನಿಮಾಗೆ ದರ್ಶನ್ ಬರೋಬ್ಬರಿ 22 ಕೋಟಿ ರೂ. ಸಂಭಾವನೆ ಪಡೆದಿದ್ದಾರೆ.  

ಡೆವಿಲ್ ಚಿತ್ರದ ಬಳಿಕ ದರ್ಶನ್ ನಟಿಸಲು ಒಪ್ಪಿಕೊಂಡ ಚಿತ್ರ ಸಿಂಧೂರ ಲಕ್ಷ್ಮಣ. ಕ್ರಾಂತಿ ಸಿನಿಮಾ ಮಾಡಿದ್ದ ನಿರ್ಮಾಪಕ ಬಿ ಸುರೇಶ್ ನಿರ್ಮಾಣದ ಹಾಗು ತರುಣ್ ಸುಧೀರ್ ನಿರ್ದೇಶನದ ಸಿಂಧೂರು ಲಕ್ಷ್ನಣ ಸಿನಿಮಾ ಶುರುವಾಗಬೇಕಿತ್ತು. ಆದರೆ ದರ್ಶನ್ ಯಡವಟ್ಟಿನಿಂದ ಸಿಂಧೂರ ಲಕ್ಷ್ಮಣ ಸಿನಿಮಾ ಶೂಟಿಂಗ್ ಕೂಡ ಮುಂದಿನ ವರ್ಷಕ್ಕೆ ಹೋಗಲಿದೆ. ಈ ಸಿನಿಮಾಗೆ ದರ್ಶನ್ 3 ಕೋಟಿ ರೂ. ಅಡ್ವಾನ್ಸ್ ಹಣ ಪಡೆದಿದ್ದಾರೆ. 

ಈ ಚಿತ್ರದ ಮಧ್ಯೆ ದರ್ಶನ್ ಮತ್ತೊಂದು ಬಿಗ್ ಬಜೆಟ್ ಸಿನಿಮಾಗೆ ಗ್ರೀನ್ ಸಿಗ್ನಲ್ ಕೊಟ್ಟಿದರು. ಜೋಗಿ ಪ್ರೇಮ್ ನಿರ್ದೇಶನದ ಕನ್ನಡದ ಪ್ರತಿಷ್ಠಿತ ಸಿನಿಮಾ ನಿರ್ಮಾಣ ಸಂಸ್ಥೆ ಕೆವಿಎನ್ ಪ್ರೋಡಕ್ಷನ್ ಜೊತೆ ದರ್ಶನ್ ಬಹುಕೋಟೆ ವೆಚ್ಚದ ಸಿನಿಮಾ ಮಾಡುವುದಾಗಿ ಒಪ್ಪಿಕೊಂಡಿದ್ದಾರೆ. ಈ ಚಿತ್ರಕ್ಕೆ ಅಡ್ವಾನ್ಸ್ ಹಣ ಅಂತಾ ದರ್ಶನ್ 3 ರಿಂದ 5 ಕೋಟಿ ಪಡೆದಿದ್ದಾರೆ ಅನ್ನೋದು ಗಾಂಧಿನಗರದ ಮಾತು.

ಇದನ್ನೂ ಓದಿ:ದರ್ಶನ್‌ ಪ್ರಕರಣದ ತನಿಖೆಯಲ್ಲಿ ಚುರುಕುತನ, ನಿಯತ್ತು ಇರಬೇಕು : ಬೊಮ್ಮಾಯಿ

ಈ ಪ್ರಾಜೆಕ್ಟ್ ಮುಗಿದ ಮೇಲೆ ದರ್ಶನ್ ಮತ್ತೆ ಜಗ್ಗುದಾದ ಸಿನಿಮಾ ನಿರ್ದೇಶಕರಾದ ರಾಘವೇಂದ್ರ ಹೆಗ್ಡೆ ಜೊತೆ ಸಿನಿಮಾ ಮಾಡ್ತಾ ಇದ್ದಾರೆ.‌ ಸಿಂಧೂರ ಲಕ್ಷ್ಮಣ ಚಿತ್ರ ಶೂಟಿಂಗ್ ಮುಗಿದ ಬಳಿಕ ಈ ಚಿತ್ರದ ಸ್ಟಾರ್ ಆಗೋದು, ಬಹುಶಃ 2025ನೇ ವರ್ಷದ ಅಂತ್ಯದಲ್ಲಿ. ಈ ಚಿತ್ರಕ್ಕೆ ದರ್ಶನ್ ಮುಂಗಡ ಹಣ ಅಂತಾ 5 ಕೋಟಿ ಪಡೆದಿದ್ದಾರೆ ಎನ್ನಲಾಗಿದೆ.

ಈ ಚಿತ್ರಗಳ ಬಳಿಕ ದರ್ಶನ್ ತೆಲುಗಿನ ಅತ್ತಾರಿಂಟಿಕಿ ದಾರೇದಿ ಚಿತ್ರದ ನಿರ್ಮಾಪಕರಾದ ಬಿ.ವಿ.ಎಸ್. ಎನ್ ಪ್ರಸಾದ್ ಜೊತೆ ಸಿನಿಮಾ ಮಾತಕಥೆ ಆಗಿ 25 ಲಕ್ಷ ಅಡ್ವಾನ್ಸ್ ಹಣ ಪಡೆದಿದ್ದಾರಂತೆ‌. ಈ ಸಿನಿಮಾ ಶುರುವಾಗೋದಿಕ್ಕೆ ಇನ್ನು ಒಂದು ವರ್ಷ ಆಗುತ್ತೆ. ಇದರ ಜೊತೆಗೆ ತಮಿಳು ನಿರ್ಮಾಪಕ ರಮೇಶ್ ಪಿಳ್ಳೈ ಜೊತೆ ಚಿತ್ರ ಮಾಡುವುದಾಗಿ ದರ್ಶನ್ ಮಾತುಕತೆ ಆಗಿತ್ತು. 

ಇದನ್ನೂ ಓದಿ:ನಿಮ್ಮನ್ನ ಈ ತರ ನೋಡೋಕೆ ಆಗ್ತೀಲ್ಲ ಬಾಸ್‌, ನಿಮ್ಗೆ ಏನೂ ಆಗ್ಬಾರ್ದು..! ಬಿಕ್ಕಿ ಬಿಕ್ಕಿ ಅತ್ತ ಅಭಿಮಾನಿ

ಈ ಸಿನಿಮಾ ಮಾಡುವುದಾಗಿ ಅಡ್ವಾನ್ಸ್ ಹಣ ಅಂತಾ 25 ಲಕ್ಷ ಪಡೆದಿದ್ದರಂತೆ‌. ಹಾಗೇ ಮತ್ತೊಬ್ಬ ಹೈದರಾಬಾದ್ ನಿರ್ಮಾಪಕ ರಘುನಾಥ್ ಎಂಬುವರ ಜೊತೆ ಸಿನಿಮಾ ಮಾತುಕತೆ ಆಗಿದೆ‌. ಈ ಚಿತ್ರಕ್ಕೂ ದರ್ಶನ್ 25 ಲಕ್ಷ ಅಡ್ವಾನ್ಸ್ ಹಣ ಪಡೆದಿದ್ದಾರಂತೆ‌. ಹೀಗೆ ದರ್ಶನ್ ಜೊತೆಗೆ ಸಿನಿಮಾ ಮಾಡುತ್ತೆನೆ ಅಂತಾ ಕೋಟಿ ಕೋಟಿ ಹಣ ಹಾಕಿರುವ ನಿರ್ಮಾಪಕರಿಗೆ ದೊಡ್ಡ ತಲೆನೋವು ಆಗಿದೆ.

ಅಷ್ಟೇ ಅಲ್ಲ, ರೇಣುಕಾಸ್ವಾಮಿ ಕೊಲೆ ಆರೋಪ ಸಾಬೀತು ಆದರೆ ದರ್ಶನ್‌ಗೆ 14 ವರ್ಷ ಜೈಲು ಶಿಕ್ಷೆ ಆಗಲಿದೆ. ಹೀಗಾಗಿ ದರ್ಶನ್ ಯಡವಟ್ಟುನಿಂದಾಗಿ ನಿರ್ಮಾಪಕರು ಕಂಗಾಲು ಆಗಿದ್ದಾರೆ. ಸಧ್ಯ ಪ್ರಕರಣದ ತನಿಖೆ ನಡೆಯುತ್ತಿದ್ದು, ಮುಂದೆ ಏನಾಗುತ್ತೆ ಅಂತ ಕಾಯ್ದು ನೋಡಬೇಕಿದೆ..

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News