Siddaramaiah : ರಾಜಕೀಯ ಜಂಜಾಟದ ಮಧ್ಯ 'ಏಕ್ ಲವ್ ಯಾ' ಫಿಲ್ಮ್ ನೋಡಿದ ಮಾಜಿ ಸಿಎಂ!

ಜೋಗಿ ಪ್ರೇಮ್ ನಿರ್ದೇಶನದ 'ಏಕ್ ಲವ್ ಯಾ' ಸಿನಿಮಾ ನೋಡಿ ರಿಲ್ಯಾಕ್ಸ್‌  ಆಗಿದ್ದಾರೆ. ಸೆಲಬ್ರಿಟಿಗಳಿಗಾಗಿ ಆಯೋಜಿಸಿದ್ದ 'ಏಕ್ ಲವ್ ಯಾ' ಚಿತ್ರದ ವಿಶೇಷ ಷೋನಲ್ಲಿ ಸಿದ್ದರಾಮಯ್ಯ ಸಿನಿಮಾ ವೀಕ್ಷಿಸಿದರು.

Written by - Malathesha M | Last Updated : Feb 24, 2022, 04:12 PM IST
  • ಸದಾ ರಾಜಕೀಯ ಜಂಜಾಟದಲ್ಲಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ
  • ಪ್ರೇಮ್ ನಿರ್ದೇಶನದ 'ಏಕ್ ಲವ್ ಯಾ' ಸಿನಿಮಾ ನೋಡಿ ರಿಲ್ಯಾಕ್ಸ್‌ ಆದ ಸಿದ್ದರಾಮಯ್ಯ
  • ಪ್ರೇಮ್‌ ಹಾಗೂ ರಕ್ಷಿತಾ ಮತ್ತು 'ಏಕ್ ಲವ್ ಯಾ' ಚಿತ್ರತಂಡ ಸಿದ್ದರಾಮಯ್ಯ
Siddaramaiah : ರಾಜಕೀಯ ಜಂಜಾಟದ ಮಧ್ಯ 'ಏಕ್ ಲವ್ ಯಾ' ಫಿಲ್ಮ್ ನೋಡಿದ ಮಾಜಿ ಸಿಎಂ! title=

ಬೆಂಗಳೂರು : ಸದಾ ರಾಜಕೀಯ ಜಂಜಾಟದಲ್ಲಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು, ಜೋಗಿ ಪ್ರೇಮ್ ನಿರ್ದೇಶನದ 'ಏಕ್ ಲವ್ ಯಾ' ಸಿನಿಮಾ ನೋಡಿ ರಿಲ್ಯಾಕ್ಸ್‌  ಆಗಿದ್ದಾರೆ. ಸೆಲಬ್ರಿಟಿಗಳಿಗಾಗಿ ಆಯೋಜಿಸಿದ್ದ 'ಏಕ್ ಲವ್ ಯಾ' ಚಿತ್ರದ ವಿಶೇಷ ಷೋನಲ್ಲಿ ಸಿದ್ದರಾಮಯ್ಯ ಸಿನಿಮಾ ವೀಕ್ಷಿಸಿದರು.

ಇನ್ನು ಸಿನಿಮಾ ವೀಕ್ಷಣೆ ನಂತರ ಚಿತ್ರತಂಡದ ಜೊತೆ ಮಾತನಾಡಿದ ಅವರು(Siddaramaiah), ಕೆಲಹೊತ್ತು ಕಾಲ ಕಳೆದರು. ಪ್ರೇಮ್‌ ಹಾಗೂ ರಕ್ಷಿತಾ ಮತ್ತು 'ಏಕ್ ಲವ್ ಯಾ' ಚಿತ್ರತಂಡ ಸಿದ್ದರಾಮಯ್ಯ ಅವರ ಆಗಮನದಿಂದ ಫುಲ್‌ ಖುಷ್‌ ಆಗಿತ್ತು.

No description available.

ಇದನ್ನೂ ಓದಿ : ನಟಿ ರಾಧಿಕಾ ಕುಮಾರಸ್ವಾಮಿ ಅಭಿಮಾನಿಗಳಲ್ಲಿ ಮಾಡಿದ ಮನವಿ ಏನು ಗೊತ್ತಾ..?

ಹೊಸ ಹುರುಪು

ಕೊರೊನಾ ಕಂಟಕಕ್ಕೆ ಬ್ರೇಕ್‌ ಬಿದ್ದಿದ್ದೇ ಬಿದ್ದಿದ್ದು, ಚಂದನವನಕ್ಕೆ ಹೊಸ ಹುರುಪು ಬಂದಿದೆ. ಸಾಲು ಸಾಲು ಚಿತ್ರಗಳು ರಿಲೀಸ್‌ಗೆ ರೆಡಿಯಾಗಿವೆ.‌ ಇದೀಗ ಸ್ಟಾರ್‌ ನಿರ್ದೇಶಕ ಜೋಗಿ ಪ್ರೇಮ್‌(Prem) ಚಿತ್ರ ಕೂಡ ರಿಲೀಸ್‌ ಆಗಿದೆ. ಪ್ರೇಮ್‌ ನಿರ್ದೇಶನದ ಬಹು ನಿರೀಕ್ಷಿತ ಸಿನಿಮಾ ‘ಏಕ್‌ ಲವ್‌ ಯಾ’ ಬಿಡುಗಡೆಯಾಗಿ ಭರ್ಜರಿ ಪ್ರದರ್ಶನ ಕಾಣುತ್ತಿದೆ.

ಈ ಸಿನಿಮಾದ ಮುಖ್ಯ ಪಾತ್ರದಲ್ಲಿ ರಾಣಾ, ರಚಿತಾ ರಾಮ್‌(Rachita Ram) ಹಾಗೂ ರೀಷ್ಮಾ ಕಾಣಿಸಿಕೊಂಡಿದ್ದಾರೆ. ಹಾಗೇ ಚಿತ್ರದ ಮ್ಯೂಸಿಕ್‌ ಸಿನಿಮಾದ ಮೇಲಿನ ನಿರೀಕ್ಷೆ ಭಾರ ಹೆಚ್ಚಿಸಿತ್ತು. ಎಲ್ಲವನ್ನೂ ಸರಿದೂಗಿಸಿಕೊಂಡು ಹೋಗಿದೆ ಸಿನಿಮಾ. ಇನ್ನು ನೂರಾರು ಥಿಯೇಟರ್‌ಗಳಲ್ಲಿ ಸಿನಿಮಾ ಭರ್ಜರಿ ಪ್ರದರ್ಶನ ಕಾಣುತ್ತಿದ್ದು, ಪ್ರೇಕ್ಷಕರ ಪ್ರತಿಕ್ರಿಯೆಗೆ ಪ್ರೇಮ್‌ ಫುಲ್‌ ಖುಷ್‌ ಆಗಿದ್ದಾರೆ.

ಇದನ್ನೂ ಓದಿ : 'ಮೆಜೆಸ್ಟಿಕ್' ಮುಹೂರ್ತದಲ್ಲೇ 'ಕರಿಯ' ಡೀಲ್‌ ಕುದುರಿಸಿದ್ದ ಜೋಗಿ ಪ್ರೇಮ್..!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News