Govinde Gowda - Divyashree :'ಅಪ್ಪು'ಗೆ ವಿಶೇಷವಾಗಿ ಗೌರವ ಸಲ್ಲಿಸಿದ 'ಕಾಮಿಡಿ ಕಿಲಾಡಿಗಳು' ಖ್ಯಾತಿ ದಂಪತಿಗಳು

'ಕಾಮಿಡಿ ಕಿಲಾಡಿಗಳು' ಷೋ ಖ್ಯಾತಿಯ ಗೋವಿಂದೇಗೌಡರ  ಪತ್ನಿ ದಿವ್ಯಶ್ರೀ(Govinde Gowda and Divyashree)ಯವರ ಸೀಮಂತ ಕಾರ್ಯಕ್ರಮ ಸರಳವಾಗಿ ನಡೆಯಿತು. ಆದರೆ ಈ ಕಾರ್ಯಕ್ರಮದಲ್ಲಿ ಆಯೋಜಿಸಿದ್ದ ಶಿಬಿರವೊಂದು ಎಲ್ಲರ ಗಮನ ಸೆಳೆಯಿತು. ನಟನ ಸಮಾಜಮುಖಿ ಕಾರ್ಯಕ್ಕೆ ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಯಿತು.

Written by - Malathesha M | Last Updated : Feb 20, 2022, 02:42 PM IST
  • ಕೋಟಿ ಕೋಟಿ ಕನ್ನಡಿಗರ ಹೃದಯದಲ್ಲಿ ಅಪ್ಪು ಅಜರಾಮರ
  • ಕಾಮಿಡಿ ಕಿಲಾಡಿಗಳು' ಷೋ ಖ್ಯಾತಿಯ ದಂಪತಿ ತಮ್ಮ ಸೀಮಂತ ಕಾರ್ಯಕ್ರಮ
  • ಸೀಮಂತ ಕಾರ್ಯಕ್ರಮದಲ್ಲಿ ನೇತ್ರದಾನ ಶಿಬಿರ ಆಯೋಜನೆ
Govinde Gowda - Divyashree :'ಅಪ್ಪು'ಗೆ ವಿಶೇಷವಾಗಿ ಗೌರವ ಸಲ್ಲಿಸಿದ 'ಕಾಮಿಡಿ ಕಿಲಾಡಿಗಳು' ಖ್ಯಾತಿ ದಂಪತಿಗಳು title=

ಬೆಂಗಳೂರು : ಕೋಟಿ ಕೋಟಿ ಕನ್ನಡಿಗರ ಹೃದಯದಲ್ಲಿ ಅಪ್ಪು ಅಜರಾಮರ. ಪವರ್‌ ಸ್ಟಾರ್‌ ಪುನೀತ್‌ ರಾಜ್‌ಕುಮಾರ್‌ ನೇತ್ರದಾನದ ಬಗ್ಗೆ ಕನ್ನಡಿಗರಲ್ಲಿ ಮೂಡಿಸಿರುವ ಜಾಗೃತಿ ಎಂದೆಂದಿಗೂ ಜೀವಂತ. ಹೀಗೆ ಕನ್ನಡದ ಪ್ರತಿಷ್ಠಿತ ಝೀ ವಾಹಿನಿಯಲ್ಲಿ ಪ್ರಸಾರವಾಗುವ 'ಕಾಮಿಡಿ ಕಿಲಾಡಿಗಳು' ಷೋ ಖ್ಯಾತಿಯ ದಂಪತಿ ತಮ್ಮ ಸೀಮಂತ ಕಾರ್ಯಕ್ರಮದಲ್ಲಿ ನೇತ್ರದಾನ ಶಿಬಿರ ಆಯೋಜಿಸಿ ಎಲ್ಲರಿಗೂ ಮಾದರಿಯಾಗಿದ್ದಾರೆ.

'ನೇತ್ರದಾನ ಮಹಾದಾನ'(Eye Donation) ಎಂಬ ಮಾತಿದೆ. ಈ ಮಾತಿಗೆ ಮತ್ತಷ್ಟು ಮಹತ್ವ ತಂದುಕೊಟ್ಟವರೇ ವರನಟ ಡಾ.ರಾಜ್‌ಕುಮಾರ್‌(Dr.Rajkumar). ವರನಟ ರಾಜ್‌ಕುಮಾರ್‌ ಅವರು ನೇತ್ರದಾನ ಮಾಡುವ ಮೂಲಕ ಕೋಟ್ಯಂತರ ಅಭಿಮಾನಿಗಳಿಗೆ ಮಾದರಿಯಾಗಿದ್ದರು. ಹಾಗೇ ದಿವಂಗತ ಪವರ್‌ ಸ್ಟಾರ್‌ ಪುನೀತ್‌ ರಾಜ್‌ಕುಮಾರ್‌ ಕೂಡ ತಮ್ಮ ನೇತ್ರದಾನ ಮಾಡಿ ಕನ್ನಡಿಗರಲ್ಲಿ ನೇತ್ರದಾನದ ಬಗ್ಗೆ ಅರಿವು ಮೂಡಿಸಿದ್ದಾರೆ. ಹೀಗೆ ಮಹಾನ್‌ ನಟರು ಮೂಡಿಸಿರುವ ನೇತ್ರದಾನದ ಅರಿವು ಇಂದು ದೊಡ್ಡ ಜ್ಯೋತಿಯಾಗಿ ಕನ್ನಡಿಗರ ಹೃದಯದಲ್ಲಿ ಬೆಳಗುತ್ತಿದೆ.

No description available.

ಇದನ್ನೂ ಓದಿ : Deepika Padukone: ದೀಪಿಕಾ ಕಿಸ್ಸಿಂಗ್ ಸೀನ್ ನೋಡಿ ಮಾಜಿ ಕಮಿಷನರ್ ಭಾಸ್ಕರ್ ರಾವ್ ಏನ್ ಹೇಳಿದ್ರು ಗೊತ್ತಾ!

ಜನಮೆಚ್ಚಿದ ಶಿಬಿರ

ಅಂದಹಾಗೆ 'ಕಾಮಿಡಿ ಕಿಲಾಡಿಗಳು' ಷೋ ಖ್ಯಾತಿಯ ಗೋವಿಂದೇಗೌಡರ  ಪತ್ನಿ ದಿವ್ಯಶ್ರೀ(Govinde Gowda and Divyashree)ಯವರ ಸೀಮಂತ ಕಾರ್ಯಕ್ರಮ ಸರಳವಾಗಿ ನಡೆಯಿತು. ಆದರೆ ಈ ಕಾರ್ಯಕ್ರಮದಲ್ಲಿ ಆಯೋಜಿಸಿದ್ದ ಶಿಬಿರವೊಂದು ಎಲ್ಲರ ಗಮನ ಸೆಳೆಯಿತು. ನಟನ ಸಮಾಜಮುಖಿ ಕಾರ್ಯಕ್ಕೆ ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಯಿತು.

No description available.

ಪವರ್‌ ಸ್ಟಾರ್‌ಗೆ ಗೌರವ

ಅಂದಹಾಗೆ ಕಾರ್ಯಕ್ರಮದಲ್ಲಿ ನೇತ್ರದಾನ ಶಿಬಿರ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಡಾ. ರಾಜಕುಮಾರ್ ಐ ಬ್ಯಾಂಕ್(Dr.Rajkumar Eye Bank) ನ ಚೇರ್ಮನ ಡಾ. ಭುಜಂಗ ಶೆಟ್ಟಿ ಅವರು ಭಾಗವಹಿಸಿದ್ದರು. ಸೀಮಂತ ಕಾರ್ಯಕ್ರಮದಲ್ಲಿ ನೇತ್ರದಾನ ಶಿಬಿರ ಆಯೋಜಿಸಿದ್ದಕ್ಕೆ ಶ್ಲಾಘನೆ ವ್ಯಕ್ತವಾಯಿತು. ಈ ಪ್ರಯತ್ನಕ್ಕೆ ಹಲವು ಗಣ್ಯರು ಖುಷ್‌ ಆಗಿದ್ದಾರೆ ಕೂಡ.

No description available.

ಇನ್ನು ಈ ಶಿಬಿರದಲ್ಲಿ 30 ಕ್ಕೂ ಹೆಚ್ಚು ಜನ ನೇತ್ರದಾನ(Eye Donation) ಮಾಡಿದ್ದು, ಶಿಬಿರ ಯಶಸ್ವಿಯಾಯಿತು. ಈ ಮೂಲಕ 'ಕಾಮಿಡಿ ಕಿಲಾಡಿಗಳು' ಷೋ ಖ್ಯಾತಿಯ ದಂಪತಿ ಸೀಮಂತ ಕಾರ್ಯಕ್ರಮದಲ್ಲಿ ಪವರ್‌ ಸ್ಟಾರ್‌ ಪುನೀತ್‌ ರಾಜ್‌ಕುಮಾರ್‌(Puneeth Rajkumar) ಅವರಿಗೆ ವಿಶಿಷ್ಟವಾಗಿ ಗೌರವ ಸಲ್ಲಿಸಿದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News