ಹೆಣ್ಣು ಮಗುವಿಗೆ ತಾಯಿಯಾದ ನಯನ : ಖುಷಿ ಹಂಚಿಕೊಂಡ ಹಾಸ್ಯನಟಿ.!

Comedy Actress Nayana: ಕಾಮಿಡಿ ಕಿಲಾಡಿಗಳು ಶೋ ಖ್ಯಾತಿಯ ನಟಿ ನಯನ ಸದ್ಯ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ಈ ಖುಷಿಯ ವಿಚಾರವನ್ನು ಈ ನಟಿ ಸೊಷಿಯಲ್‌ ಮಿಡಿಯಾದಲ್ಲಿ ಹಂಚಿಕೊಂಡಿದ್ದಾರೆ. 

Written by - Zee Kannada News Desk | Last Updated : Nov 2, 2023, 05:08 PM IST
  • ಕನ್ನಡ ರಾಜ್ಯೋತ್ಸವದ ದಿನದಂದು ಹೆಣ್ಣು ಮಗುವನ್ನು ಮನೆಗೆ ಬರಮಾಡಿಕೊಂಡ ನಟಿ ನಯನ.
  • ಹಾಸ್ಯ ಕಲಾವಿದೆ ನಯನ ಕಳೆದ ಮೂರು ವರ್ಷಗಳ ಹಿಂದೆ ಶರತ್ ಎಂಬುವವರ ಜೊತೆ ಸರಳವಾಗಿ ಮದುವೆಯಾದರು.
  • ನಯನ ಪತಿ ಮಗುವನ್ನು ಎತ್ತಿಕೊಂಡಿರುವ ಫೋಟೋವನ್ನು ಸೋಷಿಯಲ್‌ ಮಿಡಿಯಾದಲ್ಲಿ ಶೇರ್ ಮಾಡಿದ್ದಾರೆ.
ಹೆಣ್ಣು ಮಗುವಿಗೆ ತಾಯಿಯಾದ ನಯನ : ಖುಷಿ ಹಂಚಿಕೊಂಡ ಹಾಸ್ಯನಟಿ.! title=

Comedy Kiladigalu Fame Nayana: ಹಾಸ್ಯನಟಿ ನಯನ ಯಾವುದೇ ಬ್ಯಾಕ್‌ಗ್ರೌಂಡ್ ಇಲ್ಲದೇ ಕಿರುತೆರೆಯ ಜನಪ್ರಿಯ ಕಾಮಿಡಿ ಕಿಲಾಡಿಗಳು ಶೋ ಎಂಟ್ರಿ ಕೊಟ್ಟ ಪ್ರತಿಭಾನ್ವಿತ ಕಲಾವಿದೆ ಎಂದು ತೋರಿಸಿದರ ಜೊತೆಗೆ ಸಾಕಷ್ಟು ಸಿನಿಮಾಗಳಲ್ಲಿ ಪೋಷಕ ಪಾತ್ರಗಳ ಮೂಲಕ ರಂಜಿಸಿದ್ದಾರೆ. ಕಾಮಿಡಿ ಮಾತ್ರವಲ್ಲ ಎಂತಹ ಪಾತ್ರಕ್ಕೂ ತಾನು ಸೈ ಅನ್ನೋದನ್ನ ನಯನ ತಮ್‌ ಪಾತ್ರಗಲನ್ನು ನಿರ್ವಹಿಸುವುದರ ಮೂಲಕ ಪ್ರೂವ್ ಮಾಡಿದ್ದಾರೆ.

ನಟಿ ನಯನ ಕನ್ನಡ ರಾಜ್ಯೋತ್ಸವದ ದಿನದಂದು ಹೆಣ್ಣು ಮಗುವನ್ನು ಮನೆಗೆ ಬರಮಾಡಿಕೊಂಡಿದ್ದು, ಈ ನಟಿಯ ಪತಿ ಮಗುವನ್ನು ಎತ್ತಿಕೊಂಡಿರುವ ಫೋಟೋವನ್ನು ಸೋಷಿಯಲ್‌ ಮಿಡಿಯಾದಲ್ಲಿ ಶೇರ್ ಮಾಡಿರುವುದರ ಜೊತೆಗೆ ʼನನ್ನ ಜೀವನದ ಇಬ್ಬರು ಮುಖ್ಯ ಭಾಗಗಳು ಒಂದೇ ಫ್ರೇಮ್‌ನಲ್ಲಿ ಇದ್ದಾರೆ. ಮುದ್ದಾದ ಲಕ್ಷ್ಮಿಗೆ ಸ್ವಾಗತʼ ಎಂದು ಕ್ಯಾಪ್ಶನ್‌ ಹಾಕಿದ್ದಾರೆ. ಹಲವಾರು ಮಂದಿ ಸೊಷಿಯಲ್‌ ಮಿಡಿಯಾದ ಕಮೆಂಟ್‌ ವಿಭಾಗದಲ್ಲಿ  ಮಗುವಿಗೆ  ಆಶೀರ್ವಾದ ನೀಡಿದ್ದಾರೆ.

ಇದನ್ನು ಓದಿ: ಮಗಳ ವಯಸ್ಸಿನ ಈ ಖ್ಯಾತ ನಟಿಯ ಜೊತೆ ಲವ್ವಲ್ಲಿ ಬಿದ್ದ ಬಾಲಿವುಡ್ ನಟ ಆಮೀರ್ ಖಾನ್!

ನಟಿ ನಯನ ತೆರೆ ಮೇಲೆ  ಪಾತ್ರಗಳಾಗಿ ಕಾಣುವ ಮೂಲಕ ನಮ್ಮನ್ನು ನಗಿಸುವ ,ಮನರಂಜನೆ ನೀಡಿ ಸಂತೋಷ ಪಡಿಸುತ್ತಾರೆ. ಆದರೆ ಹಲವು ಕಲಾವಿದನಾಗಿ ಸಿನಿಮಾಗಳಲ್ಲಿಯೋ ಅಥವಾ ಕಿರುತೆರೆಯಲ್ಲಿಯೋ ಒಂದು ಹಂತಕ್ಕೆ ಬಂದು ನಿಲ್ಲೋವಾಗ ನಿಜಕ್ಕೂ ಅದೆಷ್ಟೋ ಜನ ಅರ್ಧ ಪಯಣದಲ್ಲಿಯೇ ತಮ್ಮ ಜರ್ನಿಯನ್ನು ಮುಗಿಸಿ ಹೋಗಿಬಿಟ್ಟಿರುತ್ತಾರೆ. ಇನ್ನೂ ಕೆಲವರು ಎಲ್ಲಾ ಅಡೆತಡೆಗಳನ್ನು ದಾಟಿ ಯಶಸ್ಸನ್ನು ಕಾಣುತ್ತಾರೆ.ಇಂತವರ ಸಾಲಿಗೆ ನಟಿ ನಯನಾ ಸೇರುತ್ತಾರೆ.

ಹಾಸ್ಯ ಕಲಾವಿದೆ ನಯನ ಕಳೆದ ಮೂರು ವರ್ಷಗಳ ಹಿಂದೆ ಶರತ್ ಎಂಬುವವರ ಜೊತೆ  ಸರಳವಾಗಿ ಮದುವೆಯಾಗಿದ್ದು, ಸದ್ಯ ತಮ್ಮ ಮೊದಲ ಮಗುವಿನ ಬರಮಾಡಿಕೊಂಡಿದ್ದಾರೆ. ಮನೆಗೆ ಹೊಸ ಅತಿಥಿಯ ಆಗಮನದ ಖುಷಿಯಲ್ಲಿದ್ದು, ಅಭಿಮಾನಿಗಳು ಸಹ ಈ ನಟಿಯಗೆ ಶುಭಹಾರೈಸಿದ್ದಾರೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News