Belagavi Winter Session: ಅಗಲಿದ ಗಣ್ಯರಿಗೆ ಸಂತಾಪ, ‘ಅಪ್ಪು’ಗೆ ಪದ್ಮಶ್ರೀ ಪ್ರಶಸ್ತಿಗೆ ಶಿಫಾರಸು

ದಿ. ನಟ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರಿಗೆ ಮುಂದಿನ ದಿನಗಳಲ್ಲಿ ಪದ್ಮಶ್ರೀ ಪ್ರಶಸ್ತಿ ನೀಡುವಂತೆ ಕೆಂದ್ರ ಸರ್ಕಾರಕ್ಕೆ ಶಿಫಾರಸು ಮಾಡ್ತೇವೆ ಎಂದು ವಿಧಾನಸಭೆಯಲ್ಲಿ ಸಂತಾಪ ಸೂಚನೆ ವೇಳೆ ಸಿಎಂ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.

Written by - Zee Kannada News Desk | Last Updated : Dec 13, 2021, 06:25 PM IST
  • ಪ್ರತಿಭೆ ಮತ್ತು ಸಾಧನೆಗೆ ಅಲ್ಪಾಯುಷ್ಯವೆಂದು ಬೇಸರ ವ್ಯಕ್ತಪಡಿಸಿದ ಸಿಎಂ ಬಸವರಾಜ್ ಬೊಮ್ಮಾಯಿ
  • ಪುನೀತ್ ರಾಜ್​​ಕುಮಾರ್​​ಗೆ ಮರಣೋತ್ತರ ಕರ್ನಾಟಕ ರತ್ನ ಪ್ರಶಸ್ತಿ ನೀಡುವ ದಿನಾಂಕ ಶೀಘ್ರವೇ ಪ್ರಕಟ
  • ಸ್ಯಾಂಡಲ್‍ವುಡ್‍ನ ‘ಅಪ್ಪು’ಗೆ ಪದ್ಮಶ್ರೀ ಪ್ರಶಸ್ತಿ ನೀಡುವಂತೆ ಕೇಂದ್ರಕ್ಕೆ ಶಿಫಾರಸು ಮಾಡುವುದಾಗಿ ಸಿಎಂ ಘೋಷಣೆ
Belagavi Winter Session: ಅಗಲಿದ ಗಣ್ಯರಿಗೆ ಸಂತಾಪ, ‘ಅಪ್ಪು’ಗೆ ಪದ್ಮಶ್ರೀ ಪ್ರಶಸ್ತಿಗೆ ಶಿಫಾರಸು   title=
‘ಅಪ್ಪು’ಗೆ ಪದ್ಮಶ್ರಿ ಪ್ರಶಸ್ತಿ ಶಿಫಾರಸು

ಬೆಳಗಾವಿ: ವಿಪಕ್ಷ ನಾಯಕ ಸಿದ್ದರಾಮಯ್ಯನವರು ಹೇಳಿದಂತೆ ದಿ. ನಟ ಪವರ್ ಸ್ಟಾರ್ ಪುನೀತ್ ರಾಜ್​​ಕುಮಾರ್(Puneeth Rajkumar)​​ ಅವರಿಗೆ ಪದ್ಮಶ್ರೀ ಪ್ರಶಸ್ತಿ ನೀಡುವಂತೆ ಕೇಂದ್ರಕ್ಕೆ ಶಿಫಾರಸು ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಘೋಷಿಸಿದ್ದಾರೆ. ಬೆಳಗಾವಿಯ ಚಳಿಗಾಲ ಅಧಿವೇಶನ(Belagavi Winter Session)ದ ಮೊದಲ ದಿನದ ಕಲಾಪ ಆರಂಭವಾಗುತ್ತಿದ್ದಂತೆ ಸ್ಪೀಕರ್ ಕಾಗೇರಿಗೆ ಸದನದ ಸಂಪ್ರದಾಯದಂತೆ ಪ್ರಪ್ರಥಮವಾಗಿ ಇತ್ತೀಚೆಗೆ ಅಗಲಿದ ಗಣ್ಯರಿಗೆ ಸಂತಾಪ ಸೂಚನೆ ಕೈಗೆತ್ತಿಕೊಂಡರು.

ಸಂತಾಪ ಸೂಚನೆ ವೇಳೆ ಮಾತನಾಡಿದ ಸಿಎಂ ಬೊಮ್ಮಾಯಿ, ‘ಪ್ರತಿಭೆ ಮತ್ತು ಸಾಧನೆಗೆ ಅಲ್ಪಾಯುಷ್ಯ’ವೆಂದು ಬೇಸರ ವ್ಯಕ್ತಪಡಿಸಿದರು. ನಟ ಪುನೀತ್ ರಾಜ್​​ಕುಮಾರ್​​ಗೆ ರಾಜ್ಯ ಸರ್ಕಾರದಿಂದ ಮರಣೋತ್ತರ ‘ಕರ್ನಾಟಕ ರತ್ನ’ ಪ್ರಶಸ್ತಿ ನೀಡುವುದಾಗಿ ಈಗಾಗಲೇ ಘೋಷಿಸಲಾಗಿದೆ. ‘ಕರ್ನಾಟಕ ರತ್ನ’ ಪ್ರಶಸ್ತಿ ನೀಡುವ ದಿನಾಂಕವನ್ನು ಶೀಘ್ರವೇ ಪ್ರಕಟಿಸಲಾಗುವುದು ಅಂತಾ ಹೇಳಿದರು.  

ಸ್ಯಾಂಡಲ್‍ವುಡ್‍ನ ‘ಅಪ್ಪು’ಗೆ ಪದ್ಮಶ್ರೀ ಪ್ರಶಸ್ತಿ ಶಿಫಾರಸು

ಪುನೀತ್ ರಾಜ್‍ಕುಮಾರ್ ನಿಧನಕ್ಕೆ ಸದನದಲ್ಲಿ ಗಣ್ಯರು ಸಂತಾಪ ಸೂಚಿಸಿ ಮೌನಾಚರಣೆ ಮಾಡಿದರು. ಚಿತ್ರರಂಗ ಸೇರಿದಂತೆ ಸಹಸ್ರಾರು ಅಭಿಮಾನಿಗಳನ್ನು ಅಗಲಿರುವ ಸ್ಯಾಂಡಲ್‍ವುಡ್‍ನ ‘ಅಪ್ಪು’ಗೆ ಪದ್ಮಶ್ರೀ ಪ್ರಶಸ್ತಿ(Padma Shri Award) ನೀಡುವಂತೆ ಕೇಂದ್ರಕ್ಕೆ ಶಿಫಾರಸು ಮಾಡುವುದಾಗಿ ಸಿಎಂ ಬೊಮ್ಮಾಯಿ ಇದೇ ವೇಳೆ ಕೆಳಮನೆಯ ಸದನಕ್ಕೆ ಭರವಸೆ ನೀಡಿದರು. ‘ಶೀಘ್ರವೇ ಪದ್ಮಶ್ರೀ ಪ್ರಶಸ್ತಿಗೆ ಶಿಫಾರಸ್ಸು ಮಾಡುತ್ತೇವೆ. ವಿರೋಧ ಪಕ್ಷದವರು ಕೂಡ ಪದ್ಮಶ್ರೀ ಪ್ರಶಸ್ತಿಗೆ ಶಿಫಾರಸ್ಸು ಮಾಡುವಂತೆ ಪತ್ರ ಬರೆದಿದ್ದರು. ಪ್ರತಿಭೆ ಮತ್ತು ಸಾಧನೆಗೆ ಅಲ್ಪಾಯುಷ್ಯ ಇದೆ ಅನಿಸುತ್ತಿದೆ. ಪುನೀತ್ ರಾಜಕುಮಾರ್ ವಿಚಾರದಲ್ಲೂ ಹಾಗೆಯೇ ಆಗಿದೆ. ಪುನೀತ್ ಮರಣದಿಂದ ಅಘಾತವಾಗಿದೆ. ಯಾರೂ ಹೀಗೆ ಸಾವನ್ನು ನಿರೀಕ್ಷೆ ಮಾಡಿರಲಿಲ್ಲ. ಕಾನೂನು ಸುವ್ಯವಸ್ಥೆ ದೊಡ್ಡ ಸವಾಲಾಗಿತ್ತು. ಡಾ.ರಾಜಕುಮಾರ್(Dr. Rajkumar) ನಿಧನದ ವೇಳೆ ಆದಂತಹ ಕಹಿ ಘಟನೆಗಳು ನಡೆಯಬಾರದು ಎಂದು ಮುನ್ನೆಚ್ಚರಿಕೆಯಿಂದ ಜನರ ಸಹಕಾರ, ಪೊಲೀಸರ ಸಹಕಾರದಿಂದ ಎಲ್ಲವೂ ವ್ಯವಸ್ಥಿತವಾಗಿ ನಡೆಯಿತು’ ಎಂದು ಸಿಎಂ ಬೊಮ್ಮಾಯಿ(Basavaraj Bommai) ಹೇಳಿದರು.   

ಇದನ್ನೂ ಓದಿ: ಮಿಸ್ಟರ್ ಸಿದ್ದಸೂತ್ರದಾರ, ಮಿಸ್ಟರ್ ಟರ್ಮಿನೇಟರ್, ಮಿಸ್ಟರ್ ಸಿದ್ದಕಲಾನಿಪುಣಪ್ಪಾ!: ಸಿದ್ದರಾಮಯ್ಯಗೆ ಎಚ್​ಡಿಕೆ ಡಿಚ್ಚಿ

 ‘ನೀವು ನಿಮ್ಮ ತಂದೆಯವರ ಎದುರು ನಟಿಸಲು ಏನಾದರೂ ಮುಜುಗರ ಅಥವಾ ಭಯ ಇತ್ತಾ ಅಂತಾ ನಾನು ಪುನೀತ್(Puneeth Rajkumar)ರನ್ನು ಕೇಳಿದ್ದೆ. ನನಗೆ ಆ ರೀತಿ ಯಾವುದೇ ಮುಜುಗರ ಅಥವಾ ಭಯವಿರಲಿಲ್ಲ. ನಟಿಸಬೇಕಾದ ಸಂದರ್ಭದಲ್ಲಿ ನಾನು ಮುಕ್ತವಾಗಿ ಅಭಿನಯಿಸುತ್ತಿದ್ದೆ. ನನ್ನ ತಂದೆಯವರ ಕೂಡ ಅದಕ್ಕೆ ಪ್ರೋತ್ಸಾಹಿಸುತ್ತಿದ್ದರು. ತಂದೆಯವರ ಎದುರು ನಟಿಸುತ್ತಿದ್ದೇನೆ ಎನ್ನುವುದಕ್ಕಿಂತ ಆ ಪಾತ್ರಕ್ಕೆ ನ್ಯಾಯ ಒದಗಿಸಬೇಕೆಂದು ನಾನು ಅಭಿನಯಿಸಿದ್ದೆ ಅಂತಾ ‘ಅಪ್ಪು’ ನನ್ನ ಬಳಿ ಹೇಳಿದ್ದರು. ಇಂತಹ ಟ್ಯಾಲೆಂಟ್ ಹೊಂದಿದ್ದ ಪ್ರತಿಭಾವಂತ ನಟನನ್ನು ನಾವು ಇಂದು ಕಳೆದುಕೊಂಡಿದ್ದೇವೆ. ಪುನೀತ್ ಅಗಲಿಕೆಯಿಂದ ಕನ್ನಡದ ಕಲಾ ಕ್ಷೇತ್ರ, ಶಿಕ್ಷಣ ಕ್ಷೇತ್ರ ಬಡವಾಗಿದೆ’ ಅಂತಾ ಸಿಎಂ ನೆನೆದರು.

ನಿಧನರಾದ ಗಣ್ಯರಿಗೆ ಸಂತಾಪ

ವಿಧಾನಸಭೆಯ ಮೊದಲ ದಿನದ ಕಲಾಪ(Belagavi Assembly Session)ದ ಆರಂಭದಲ್ಲಿ ನಿಧನರಾದ ವಿವಿಧ ಕ್ಷೇತ್ರದ ಗಣ್ಯರಿಗೆ ಸಂತಾಪ ಸೂಚಿಸಲಾಯಿತು. ಮಾಜಿ ರಾಜ್ಯಪಾಲರಾಗಿದ್ದ ಕೆ.ರೋಸಯ್ಯ, ಮಾಜಿ ಸಂಸದ ವಿರುಪಾಕ್ಷಪ್ಪ ಅಗಡಿ, ಮಾಜಿ ಸಚಿವ ಎಸ್.ಆರ್.ಮೋರೆ, ಸ್ಯಾಂಡಲ್‍ವುಡ್‍ನ ಹಿರಿಯ ನಟರಾದ ಶಿವರಾಂ, ಯುವ ನಟ ಪುನೀತ್ ರಾಜ್ ಕುಮಾರ್, ಸ್ವಾತಂತ್ರ್ಯ ಹೋರಾಟಗಾರ ಪಿ.ಭೋಜರಾಜ ಹೆಗ್ಡೆ, ಹಿರಿಯ ವಿದ್ವಾಂಸ ಕೆ.ಎಸ್.ನಾರಾಯಣಾಚಾರ್ಯ, ಹಿರಿಯ ಬಯಲಾಟ ಕಲಾವಿದೆ ನಾಡೋಜ ಹರಿಜನ ಪದ್ಮಮ್ಮ, CDS ಜನರಲ್ ಬಿಪಿನ್ ರಾವತ್ ಅವರ ನಿಧನಕ್ಕೆ  ಸಂತಾಪ ಸೂಚಿಸಲಾಯಿತು.

ಇದನ್ನೂ ಓದಿ: "ಈ ಸಮಯಕ್ಕಾಗಿ 21 ವರ್ಷಗಳಿಂದ ಕಾಯುತ್ತಿದ್ದೆವು, ಶತಕೋಟಿ ಕನಸುಗಳು ನನಸಾಗಿವೆ": ಲಾರಾ ದತ್ತಾ

ಸಿಎಂ ಬಸವರಾಜ್ ಬೊಮ್ಮಾಯಿ(Basavarja Bommai), ವಿಪಕ್ಷ ನಾಯಕ ಸಿದ್ದರಾಮಯ್ಯ, ಸಚಿವ ಕೆ.ಎಸ್.ಈಶ್ವರಪ್ಪ ಹಾಗೂ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಸೇರಿ ಅನೇಕ ನಾಯಕರು ಸದನದಲ್ಲಿ ಮೃತರ ಕೊಡುಗೆಯನ್ನು ಸ್ಮರಿಸಿದರು. ಮೃತರ ಗೌರವಾರ್ಥ ಎಲ್ಲಾ ಸದಸ್ಯರು ಎದ್ದು ನಿಂತು 1 ನಿಮಿಷ ಮೌನಾಚರಣೆ ನಡೆಸಿದರು.   

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News