ನಲ್ಮೆಯ ಫ್ಯಾನ್ಸ್ ಗೆ ಡಿಬಾಸ್ ಗೌರವಾರ್ಪಣೆ ಸಲ್ಲಿಸಿದ್ದು ಹೇಗೆ ಗೊತ್ತಾ?

ಮೂಲಗಳ ಪ್ರಕಾರ, ಕಮರ್ಷಿಯಲ್ ಎಂಟರ್‌ಟೈನರ್ ಅಧಿಕೃತವಾಗಿ 100 ಕೋಟಿ ಒಟ್ಟು ಸಂಗ್ರಹವನ್ನು ದಾಟಿದೆ, ಇದರಲ್ಲಿ ಸ್ಯಾಟಲೈಟ್ ಮತ್ತು ಡಿಜಿಟಲ್ ಹಕ್ಕುಗಳು ಸೇರಿವೆ, ಅವುಗಳು ಭಾರಿ ಬೆಲೆಗೆ ಮಾರಾಟವಾಗಿವೆ ಮತ್ತು ಥಿಯೇಟರ್ ವ್ಯವಹಾರದಿಂದ ಗಳಿಸಿವೆ ಎನ್ನಲಾಗಿದೆ.

Written by - Zee Kannada News Desk | Last Updated : Feb 10, 2023, 08:10 PM IST
  • ಮೂಲಗಳ ಪ್ರಕಾರ, ಕಮರ್ಷಿಯಲ್ ಎಂಟರ್‌ಟೈನರ್ ಅಧಿಕೃತವಾಗಿ 100 ಕೋಟಿ ಒಟ್ಟು ಸಂಗ್ರಹವನ್ನು ದಾಟಿದೆ
  • ಇದರಲ್ಲಿ ಸ್ಯಾಟಲೈಟ್ ಮತ್ತು ಡಿಜಿಟಲ್ ಹಕ್ಕುಗಳು ಸೇರಿವೆ
  • ಅವುಗಳು ಭಾರಿ ಬೆಲೆಗೆ ಮಾರಾಟವಾಗಿವೆ ಮತ್ತು ಥಿಯೇಟರ್ ವ್ಯವಹಾರದಿಂದ ಗಳಿಸಿವೆ ಎನ್ನಲಾಗಿದೆ
ನಲ್ಮೆಯ ಫ್ಯಾನ್ಸ್ ಗೆ ಡಿಬಾಸ್ ಗೌರವಾರ್ಪಣೆ ಸಲ್ಲಿಸಿದ್ದು ಹೇಗೆ ಗೊತ್ತಾ? title=

ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಕ್ರಾಂತಿ ದೇಶಾದ್ಯಂತ ಬಿಡುಗಡೆಯಾಗಿ ಬಾಕ್ಸ್ ಆಫೀಸ್ ನಲ್ಲಿ ಧೂಳೆಬ್ಬಿಸಿದೆ.ಈಗಾಗಲೇ ಈ ಮಾಸ್ ಕಮರ್ಷಿಯಲ್ ಎಂಟರ್‌ಟೈನರ್ 100 ಕೋಟಿ ಕ್ಲಬ್ ಪಟ್ಟಿಗೆ ಸೇರಿದೆ ಎಂದು ವರದಿಯಾಗಿದೆ.

ಮೂಲಗಳ ಪ್ರಕಾರ, ಕಮರ್ಷಿಯಲ್ ಎಂಟರ್‌ಟೈನರ್ ಅಧಿಕೃತವಾಗಿ 100 ಕೋಟಿ ಒಟ್ಟು ಸಂಗ್ರಹವನ್ನು ದಾಟಿದೆ, ಇದರಲ್ಲಿ ಸ್ಯಾಟಲೈಟ್ ಮತ್ತು ಡಿಜಿಟಲ್ ಹಕ್ಕುಗಳು ಸೇರಿವೆ, ಅವುಗಳು ಭಾರಿ ಬೆಲೆಗೆ ಮಾರಾಟವಾಗಿವೆ ಮತ್ತು ಥಿಯೇಟರ್ ವ್ಯವಹಾರದಿಂದ ಗಳಿಸಿವೆ ಎನ್ನಲಾಗಿದೆ.

ಈಗ ಮಾಧ್ಯಮಗಳ ಬಹಿಷ್ಕಾರದ ನಡುವೆಯೂ ಅಭಿಮಾನಿಗಳು ಅವರಿಗೆ ಬೆಂಬಲವಾಗಿ ನಿಂತಿರುವುದಕ್ಕೆ ದರ್ಶನ್ ಫುಲ್ ಫಿದಾ ಆಗಿದ್ದಾರೆ.ಈಗ ಅವರ ಅಭಿಮಾನಕ್ಕಾಗಿ ಅವರು ತಮ್ಮ ಎದೆಯ ಮೇಲೆ ಹಚ್ಚೆಯೊಂದನ್ನು ಹಾಕಿಕೊಂಡಿದ್ದಾರೆ.ಈಗ ಈ ವಿಡಿಯೋವೊಂದನ್ನು ಅವರು ತಮ್ಮ ಸಾಮಾಜಿಕ ಮಾಧ್ಯಮದ ವೇದಿಕೆಯಲ್ಲಿ ಹಂಚಿಕೊಂಡು “ನನ್ನ ನಲ್ಮೆಯ ಸೆಲೆಬ್ರಿಟಿಗಳಿಗೆ ಒಂದು ಸಣ್ಣ ಗೌರವಾರ್ಪಣೆ ❤️A small tribute to all my loyal and royal celebrities 🙏 ನಿಮ್ಮ ದಾಸ ದರ್ಶನ್” ಎಂದು ಅವರು ಬರೆದುಕೊಂಡಿದ್ದಾರೆ.

ದರ್ಶನ್ ಅವರ ನಡೆಗೆ ಅಭಿಮಾನಿಗಳಂತೂ ಫುಲ್ ಫಿದಾ ಆಗಿದ್ದು ಚಿತ್ರರಂಗ ಇತಿಹಾಸದಲ್ಲಿ ಒಬ್ಬ ಸ್ಟಾರ್ ನಟ ಕನ್ನಡದಲ್ಲಿ ಟ್ಯಾಟು ಹಾಕಿಸಿ ಅಭಿಮಾನಿಗಳಿಗೆ ಗೌರವ ನೀಡಿದ ಏಕೈಕ ವ್ಯಕ್ತಿ ನಮ್ಮ ಡಿ ಬಾಸ್❤️ ನಿವು ನಮ್ಮ ಮೇಲೆ ಎಷ್ಟು ಪ್ರೀತಿ ಇಟ್ಟಿದ್ದೀರಾ ಎಂಬುದಕ್ಕೆ ಇದೇ ಸಾಕ್ಷಿ ಎಂದೆಲ್ಲಾ ಸಾಮಾಜಿಕ ಮಾಧ್ಯಮಗಳಲ್ಲಿ ಬರೆದುಕೊಂಡಿದ್ದಾರೆ.

ವಿ ಹರಿಕೃಷ್ಣ ಬರೆದು ನಿರ್ದೇಶಿಸಿರುವ ಕ್ರಾಂತಿಯು ಫ್ಯಾಮಿಲಿ ಎಂಟರ್‌ಟೈನರ್ ಮತ್ತು ಸರ್ಕಾರಿ ಶಾಲೆಗಳನ್ನು ರಕ್ಷಿಸುವ ಬಲವಾದ ಸಂದೇಶವನ್ನು ಹೊಂದಿರುವ ಮಾಸ್ ಚಲನಚಿತ್ರವಾಗಿದೆ. ಚಿತ್ರದ ಯಶಸ್ಸಿನ ಬಗ್ಗೆ ಇತ್ತೀಚಿಗೆ ನಿರ್ಮಾಪಕಿ ಶೈಲಜಾ ನಾಗ್ ಸಂತಸ ವ್ಯಕ್ತಪಡಿಸುತ್ತಾ. "ದರ್ಶನ್ ಸಿಂಗಲ್ ಸ್ಕ್ರೀನ್‌ಗಳಲ್ಲಿ ಪ್ರಮುಖ ಕ್ರೌಡ್ ಪುಲ್ಲರ್ ಆಗಿರುವುದರಿಂದ, ಆನ್‌ಲೈನ್ ಬುಕಿಂಗ್ ಅನ್ನು ಆಯ್ಕೆ ಮಾಡುವ ಬದಲು ಫಿಸಿಕಲ್ ಟಿಕೆಟ್‌ಗಳನ್ನು ಖರೀದಿಸಲು ಜನರು ಸಾಲಿನಲ್ಲಿ ನಿಂತಿರುವುದು ಆಸಕ್ತಿದಾಯಕವಾಗಿದೆ" ಎಂದು ಸಂತಸ ವ್ಯಕ್ತಪಡಿಸಿದ್ದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

 

 

Trending News