ತ್ರಿಶಾ ಬಗ್ಗೆ ಅಶ್ಲೀಲ ಕಮೆಂಟ್‌: ಮನ್ಸೂರ್ ಅಲಿ ಖಾನ್ ವಿರುದ್ಧ ಕೇಸ್‌ ದಾಖಲು!

Mansoor Ali Khan: ತಮಿಳು ನಟ ಮನ್ಸೂರ್ ಅಲಿ ಖಾನ್‌ ನಟಿ ತ್ರಿಶಾ ಬಗೆ ಸಶ್ಲೀಲ ಕಮೆಂಟ್‌ ಮಾಡಿ, ಕ್ಷಮೆ ಕೇಳಲು ನಿರಾಕರಿಸಿದಕ್ಕೆ ತಮಿಳುನಾಡು ಪೊಲೀಸರು ಈ ನಟನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

Written by - Zee Kannada News Desk | Last Updated : Nov 22, 2023, 01:54 PM IST
  • ನಟ ಮನ್ಸೂರ್ ಅಲಿ ಖಾನ್ ತ್ರಿಶಾ ಬಗ್ಗೆ ಅಶ್ಲೀಲ ಹೇಳಿಕೆ ನೀಡಿದ ಬೆನ್ನಲ್ಲೇ ಚಿತ್ರರಂಗದ ಗಣ್ಯರಿಂದ ಹಿಡಿದು ಸೋಶಿಯಲ್ ಮೀಡಿಯಾದಲ್ಲಿ ಮನ್ಸೂರ್ ಅಲಿ ಖಾನ್ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದೆ.
  • ಮನ್ಸೂರ್ ಅಲಿ ಖಾನ್ "ನಾನೇ ತಪ್ಪು ಹೇಳಿಕೆ ನೀಡಿಲ್ಲ. ತ್ರಿಶಾ ಬಗ್ಗೆ ಹೇಳಿದ ವಿಡಿಯೋವನ್ನು ಕಟ್ ಮಾಡಿ ತಪ್ಪಾಗಿ ತೋರಿಸಲಾಗಿದೆ ಎಂದು ಹೇಳಿದ್ದಾರೆ.
  • ಮನ್ಸೂರ್ ಅಲಿ ಖಾನ್ ವಿರುದ್ಧ ಐಪಿಸಿ ಸೆಕ್ಷನ್ 354-A, 509 ಅಡಿಯಲ್ಲಿ ಎಲ್ಲಾ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ತ್ರಿಶಾ ಬಗ್ಗೆ ಅಶ್ಲೀಲ ಕಮೆಂಟ್‌: ಮನ್ಸೂರ್ ಅಲಿ ಖಾನ್ ವಿರುದ್ಧ ಕೇಸ್‌ ದಾಖಲು! title=

Case Filed Against Mansoor Ali Khan: ತಮಿಳುನಾಡಿನಲ್ಲಿ ನಟ ಮನ್ಸೂರ್ ಅಲಿ ಖಾನ್ ತಮಿಳುನಾಡಿನ ಜನಪ್ರಿಯ ನಟನಾಗಿದ್ದರು, ಒಂದಿಷ್ಟು ದಿನ ಚಿತ್ರರಂಗದಿಂದ ದೂರ ಉಳಿದಿದ್ದು, ಇದೀಗ ಮತ್ತೆ ಸಿನಿಮಾಗಳಲ್ಲಿ ಆಕ್ಟಿವ್ ಆಗಿದ್ದಾರೆ. ಇತ್ತೀಚೆಗೆ ತೆರೆಕಂಡ 'ಲಿಯೋ' ಸಿನಿಮಾದಲ್ಲಿ ದಳಪತಿ ವಿಜಯ್ ಹಾಗೂ ತ್ರಿಶಾ ಜೊತೆ ಖಳನಾಯಕನಾಗಿ ಕಾಣಿಸಿಕೊಂಡಿವರು, ತ್ರಿಶಾ ಬಗ್ಗೆ ಅಶ್ಲೀಲ ಹೇಳಿಕೆ ನೀಡಿದ ಬೆನ್ನಲ್ಲೇ ಚಿತ್ರರಂಗದ ಗಣ್ಯರಿಂದ ಹಿಡಿದು ಸೋಶಿಯಲ್ ಮೀಡಿಯಾದಲ್ಲಿ ಮನ್ಸೂರ್ ಅಲಿ ಖಾನ್ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದ್ದು, ಇದರ ಬೆನ್ನಲ್ಲೇ ವಿವಾದಿತ ನಟನ ವಿರುದ್ಧ ದೂರು ದಾಖಲಿಸಲಾಗಿದೆ.  

ಪತ್ರಿಕಾಗೋಷ್ಠಿಯೊಂದರಲ್ಲಿ ಇದೇ 'ಲಿಯೋ' ಸಿನಿಮಾ ಬಗ್ಗೆ ಮಾತಾಡುವಾಗ ತ್ರಿಶಾ ಬಗ್ಗೆ "ಲಿಯೋ ಸಿನಿಮಾದಲ್ಲಿ ತ್ರಿಶಾ ಜೊತೆ ಬೆಡ್‌ ರೂಮ್ ಸೀನ್‌ಗಳು ಇರುತ್ತವೆ. ಆಕೆಯನ್ನು ಎತ್ತಿಕೊಂಡು ಬೆಡ್‌ರೂಮ್‌ಗೆ ಹೋಗುವಂತಹ ದೃಶ್ಯಗಳಿರುತ್ತೆಂದು ಭಾವಿಸಿದ್ದೆ. ಆದರೆ, ಈ ಸಿನಿಮಾದಲ್ಲಿ ತ್ರಿಶಾ ಮುಖವನ್ನೂ ನನಗೆ ತೋರಿಸಿಲ್ಲ." ಎಂದು ಮನ್ಸೂರ್ ಅಲಿ ಖಾನ್ ಅಶ್ಲೀಲ ಕಮೆಂಟ್‌ಗಳನ್ನು ಮಾಡಿದ್ದರು. ಈತನಿಗೆ ದಿಗ್ಗಜರೆಲ್ಲ ಉಗಿದರೂ ಡೋಂಟ್ ಕೇರ್: "ಮತ್ತೆ ತ್ರಿಶಾ ಜೊತೆ ನಟಿಸುತ್ತೇನೆ" ಎಂದ ಖಳನಟ.

ಇದನ್ನೂ ಓದಿ: Janhvi – Khushi Kapoor: ತಮಿಳಿಗೆ ಎಂಟ್ರಿ ಕೊಟ್ಟ ಜಾನ್ವಿ ಸಹೋದರಿ..! ಸೌತ್‌ ಸಿನಿರಂಗವನ್ನೇ ಆಳ್ತಾರಾ ಶ್ರೀದೇವಿ ಪುತ್ರಿಯರು?

ಮನ್ಸೂರ್ ಅಲಿ ಖಾನ್ ಮನ್ಸೂರ್ ಅಲಿ ಖಾನ್ ಇದೇ ಹೇಳಿಕೆ ವಿರುದ್ಧ ಮೆಗಾಸ್ಟಾರ್ ಚಿರಂಜೀವಿ, ಖುಷ್ಬೂ, ರೋಜಾ ಸೇರಿದಂತೆ ಹಲವರು ಆಕ್ರೋಶ ಹೊರಹಾಕಿದ್ದು, ಮನ್ಸೂರ್ ಅಲಿ ಖಾನ್ ಕ್ಷಮೆ ಕೇಳುವಂತೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಯಾಗಿತ್ತು. ವಿವಾದಾತ್ಮಕ ಹೇಳಿಕೆ ಗದ್ದಲಕ್ಕೆ ತಿರುಗಿದಾಗ ಮನ್ಸೂರ್ ಅಲಿ ಖಾನ್ "ನಾನೇ ತಪ್ಪು ಹೇಳಿಕೆ ನೀಡಿಲ್ಲ. ತ್ರಿಶಾ ಬಗ್ಗೆ ಹೇಳಿದ ವಿಡಿಯೋವನ್ನು ಕಟ್ ಮಾಡಿ ತಪ್ಪಾಗಿ ತೋರಿಸಲಾಗಿದೆ. ದೇಶದಲ್ಲಿ ಹಲವು ಸಮಸ್ಯೆಗಳಿವೆ ಅವುಗಳನ್ನು ನೋಡಿ" ಎಂದಿದ್ದರು. 

ಖಳನಟ ಮನ್ನೂರ್‌ ಅಲಿ ಕ್ಷಮೆ ಹೇಳಲು ನಿರಾಕರಿಸಿ, ಈ ರೀತಿ ಹೇಳಿಕೆ ನೀಡಿದ ಬಳಿಕ ಮತ್ತಷ್ಟು ಮಂದಿ ರೊಚ್ಚಿಗೆದ್ದರು. ಮನ್ಸೂರ್ ಅಲಿ ಖಾನ್ ವಿರುದ್ಧ ಕ್ರಮ ಕೈಗೊಳ್ಳಬೇಕು ಅಂತ ಕಿಡಿಕಾರಿದ್ದರು. ತ್ರಿಶಾ ಬಗ್ಗೆ ಮನ್ಸೂರ್ ಅಲಿ ಖಾನ್ ಆಡಿದ ಮಾತುಗಳು ಖಂಡನೀಯ ಎಂದು ರಾಷ್ಟ್ರೀಯ ಮಹಿಳಾ ಆಯೋಗ ಹೇಳಿದೆ. ಇಷ್ಟೇ ಅಲ್ಲದೆ ಮನ್ಸೂರ್ ಅಲಿ ಖಾನ್ ವಿರುದ್ಧ ಪ್ರಕರಣ ದಾಖಲಿಸುವಂತೆ ಡಿಜಿಪಿಗೆ ಸೂಚಿಸಿತ್ತು. 

ಇದನ್ನೂ ಓದಿ: ಮದುವೆ ಬಗ್ಗೆ ಗಟ್ಟಿ ನಿರ್ಧಾರ ತೆಗೆದುಕೊಂಡ ಸಮಂತಾ...! ತಾಯಿಯಾಗುವ ಆಸೆ ಈಡೇರುತ್ತಾ?

ಈ ಸಂಬಂಧ ಮನ್ಸೂರ್ ಅಲಿ ಖಾನ್ ವಿರುದ್ಧ ತಮಿಳುನಾಡು ಪೊಲೀಸರು ದೂರು ದಾಖಲಿಸಿದ್ದಾರೆ. ಸದ್ಯಕ್ಕೀಗ ತಮಿಳುನಾಡು ಪೊಲೀಸರು ಮನ್ಸೂರ್ ಅಲಿ ಖಾನ್ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಐಪಿಸಿ ಸೆಕ್ಷನ್ 354-A, 509 ಅಡಿಯಲ್ಲಿ ಎಲ್ಲಾ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಅಲ್ಲದೆ ಅತೀ ಶೀಘ್ರದಲ್ಲಿಯೇ ಮನ್ಸೂರ್ ಅಲಿ ಖಾನ್‌ರನ್ನು ವಿಚಾರಣೆಗೆ ಒಳಪಡಿಸುವ ಸಾಧ್ಯತೆಯಿದೆ ಎಂದು ತಮಿಳು ಮಾಧ್ಯಮಗಳು ಸುದ್ದಿ ಮಾಡಿವೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News